ಹಬ್ಬದ ಸೀಸನ್ ಆರಂಭವಾದಂತೆ ಚಿನ್ನಾಭರಣ ಕೊಳ್ಳುವವವರ ಭರಾಟೆಯೂ ಹೆಚ್ಚಾಗುತ್ತದೆ. ಭಾರತದಲ್ಲಿ ಆಭರಣ ಕೊಳ್ಳುವುದು ಸಂಪ್ರದಾಯವಾಗಿಯೇ ಬೆಳೆದು ಬಂದಿದೆ.
ಚಿನ್ನಾಭರಣ ಕೊಳ್ಳುವ ಮೊದಲು ಅನೇಕ ಬಾರಿ ಯೋಚನೆ ಮಾಡಬೇಕಾಗುತ್ತದೆ. ಚಿನ್ನಕ್ಕೆ ಕೈ ಹಾಕುವ ಮೊದಲು ಯಾವುದಕ್ಕೂ ಕೆಳಗಿನ 7 ಅಂಶಗಳನ್ನು ತಿಳಿದಿಟ್ಟುಕೊಳ್ಳುವುದು ಉತ್ತಮ.

ಹಾಲ್ ಮಾರ್ಕ್ ಮೊದಲು ಪರೀಕ್ಷಿಸಿ
ಆಭರಣವೊಂದರ ಸುರಕ್ಷತೆ ಮತ್ತು ಕ್ವಾಲಿಟಿಯನ್ನು ಹೇಳುವುದು ಹಾಲ್ ಮಾರ್ಕ್ . ಇದು ಗುಣಮಟ್ಟದ ತಿಳಿವಳಿಕೆ, ಯಾವ ವರ್ಷದಲ್ಲಿ ಆಭರಣ ತಯಾರಾಯಿತು? ಆಭರಣ ತಯಾರಕರ ಮುದ್ರೆ, ಮಾರುಕಟ್ಟೆಗೆ ಪ್ರವೇಶ ಮಾಡಿದ ದಿನಾಂಕ, ಬಿಐಎಸ್ ಲೋಗೊ ಮತ್ತು ಕೋಡ್ ಲೆಟರ್ ಗಮನಿಸಬೇಕಾಗುತ್ತದೆ.[ಶಿಕ್ಷಣ ಸಾಲ ಪಡೆಯುವ ಮುನ್ನ ಈ 5 ಅಂಶ ತಲೆಯಲ್ಲಿರಲಿ]
ಕರಗಿಸಲು ಕೊಡುವಾಗ ಎಚ್ಚರವಿರಲಿ
ಚಿನ್ನ ಕರಗಿಸಿ ಹೊಸ ಆಭರಣ ತಯಾರಿಕೆಗೆ ಮುಂದಾಗುವುದಿದ್ದರೆ ತೀವ್ರ ಎಚ್ಚರಿಕೆ ಅಗತ್ಯ. ಸ್ನೇಹಿತರು ಮತ್ತು ಕುಟುಂಬದವಬರೊಂದಿಗೆ ಚರ್ಚಿಸಿ ಬಂಗಾರವನ್ನು ಅಂಗಡಿಯಾತನಿಗೆ ನೀಡಿ. ತೂಕವನ್ನು ಎರಡೆರಡು ಬಾರಿ ಪರೀಕ್ಷಿಸುವುದು ಉತ್ತಮ
ಕ್ಯಾರೆಟ್ ಪರಿಶೀಲನೆ
ಚಿನ್ನದ ಆಭರಣ ತಯಾರು ಮಾಡುವ ಮೊದಲು ಅದಕ್ಕೆ ಬೆಳ್ಳಿ, ಜಿಂಕ್ ನಂಥ ಲೋಹಗಳನ್ನು ಸೇರ್ಪಡೆಮಾಡಲಾಗುತ್ತದೆ. ಕ್ಯಾರೆಟ್ ಎಂದರೆ ಅಂದು ಬಂಗಾರದ ಪರಿಶುದ್ಧತೆಯ ಪ್ರಮಾಣವನ್ನು ತಿಳಿಸಿಕೊಡುತ್ತದೆ. ಹಾಗಾಗಿ ಕ್ಯಾರೆಟ್ ಪ್ರಮಾಣ ಅರಿಯದೇ ಆಭರಣ ಖರೀದಿ ಮಾಡಬೇಡಿ. 18, 22 ಮತ್ತು 24 ಕ್ಯಾರೆಟ್ ಎಂದು ವಿಧಗಳಿವೆ. 24 ಕ್ಯಾರೆಟ್ ಎಂದರೆ ಶೇ. 99.9 ರಷ್ಟು ಶುದ್ಧ ಬಂಗಾರ.[ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು]
ಹಾಲ್ ಮಾರ್ಕಿಂಗ್
ಸರ್ಕಾರದಿಂದ ಮಾನ್ಯತೆ ಪಡೆದಿರುವ ಬಂಗಾರದ ಆಭರಣಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಹಾಲ್ ಮಾರ್ಕ್ ಮೂಲಕ ಶ್ರೇಯ ನೀಡುತ್ತದೆ. ಬಿಐಎಸ್ ನಿಂದ ದೃಢೀಕರಣ ಗೊಂಡಿರುವ ಹಾಲ್ ಮಾರ್ಕ್ ಆಭರಣ ಪರೀಕ್ಷೆಗೆ ಅತ್ಯುತ್ತಮ ವಿಧಾನ.
ಅಲರ್ಜಿಗೆ ಕಾರಣವಾಗುವ ಬಿಳಿ ಚಿನ್ನ
ಬಿಳಿ ಚಿನ್ನದ ಕಣಗಳು ಚರ್ಮದ ಅಲರ್ಜಿಗೆ ಕಾರಣವಾಗಬಹುದು. ಇದನ್ನು ಎಲ್ಲಾ ಸಮಯದಲ್ಲೂ ಸತ್ಯ ಎಂದು ಹೇಳಲು ಸಾಧ್ಯವಿಲ್ಲ, ಬಿಳಿ ಚಿನ್ನದಲ್ಲಿರುವ ನಿಖೆಲ್ ಮತ್ತು ಮೆಟಲ್ ಅಂಶಗಳು ಚರ್ಮಕ್ಕೆ ಅಲರ್ಜಿ ಉಂಟುಮಾಡಬಲ್ಲವು. ಹಾಗಾಗಿ ಹಳದಿ ಚಿನ್ನ ಖರೀದಿಯೇ ಸರಿಯಾದ ಆಯ್ಕೆ.
ರಸೀದಿ ಪಡೆದುಕೊಳ್ಳಿ
ಚಿನ್ನ ಖರೀದಿ ನಂತರ ರಸೀದಿ ಪಡೆದುಕೊಳ್ಳಿ. ಇದರಲ್ಲಿ ಆಭರಣ, ಕ್ಯಾರೆಟ್, ಅಳವಡಿಸಿರುವುದು ವಜ್ರವೋ? ಅಅತವಾ ಬೇರೆ ಹರಳುಗಳೋ? ಎಂಬುದನ್ನು ದೃಢಪಡಿಸಿಕೊಳ್ಳಬೇಕಾಘುತ್ತದೆ. ನೀವು ಒಂದು ವೇಳೆ ಆಭರಣ ಮಾರಲು ಮುಂದಾದರೆ ರಸೀದಿ ಮುಖ್ಯವಾಗುತ್ತದೆ.
ನಿರ್ಧಾರ ಮಾಡಿ ಖರೀದಿಗೆ ಹೊರಡಿ
ನಿಮಗೆ ಯಾವ ವಸ್ತು ಬೇಕು ಎಂಬುದನ್ನು ನಿರ್ಧರಿಸಿಕೊಂಡೇ ಚಿನ್ನದ ಅಂಗಡಿಗೆ ಕಾಲಿಡುವುದು ಉತ್ತಮ. ಇದರಿಂದ ಸಮಯದ ಉಳಿತಾಯ ಆಗುವುದರ ಜತೆಗೆ ಕೊನೆಯಲ್ಲಿ ಖರೀದಿ ಮಾಡಿದ ವಸ್ತು ಬೇಡವಾಗಿತ್ತು ಎಂಬ ಮನೋಭಾವನೆ ನಿರ್ಮಾಣವಾಗದಂತೆ ಆಗುತ್ತದೆ.
ಆರಾಮಾಗಿ ಖರೀದಿಸಿ
ಚಿನ್ನದ ಆಭರಣ ಖರೀದಿಸುವ ವೇಳೆ ಯಾವ ಕಾರಣಕ್ಕೂ ಗಡಿಬಿಡಿ ಬೇಡ. ಅಂಗಡಿಯಾತನೊಂದಿಗೆ ಆಭರಣದ ಸಮಗ್ರ ವಿವರ ಪಡೆದು ನಂತರವೇ ಖರೀದಿಗೆ ಮುಂದಾಗಿ.
ಕೊನೆ ಮಾತು: ಕಳೆದ ಆರೇಳು ವರ್ಷದಲ್ಲಿ ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಇಂಥ ಅಮೂಲ್ಯ ಲೋಹವನ್ನು ಖರೀದಿ ಮಾಡುವ ಮುನ್ನ ಮೇಲಿನ ಅಂಶಗಳನ್ನು ತಲೆಯಲ್ಲಿಟ್ಟುಕೊಳ್ಳುವುದು ಉತ್ತಮ. ಹಣವಿದ್ದರೆ ಚಿನ್ನದ ಆಭರಣ ಖರೀದಿ ಮಾಡುವುದಕ್ಕಿಂತ ಇಟಿಎಫ್ ಮಾದರಿಯ ಶುದ್ಧ ಬಂಗಾರ ಖರೀದಿಸುವುದೇ ಉತ್ತಮ.


Click it and Unblock the Notifications