For Quick Alerts
ALLOW NOTIFICATIONS  
For Daily Alerts

ಎಟಿಎಂ ಬಳಕೆ ಮುನ್ನ ಈ 10 ಅಂಶ ತಿಳಿದಿರಲಿ

|

ಎಟಿಎಂ ಯಂತ್ರ ದಿನದ 24 ಗಂಟೆಯಲ್ಲಿ ನಮಗೆ ಯಾವಾಗ ಅಗತ್ಯ ಬಿದ್ದರೂ ಹಣ ನೀಡುತ್ತದೆ. ಪಿನ್ ಆಧಾರಲ್ಲಿ ಕೆಲಸ ಮಾಡುವ ಎಟಿಎಂ ಕಾರ್ಡ್ ನ್ನು ಹೇಗೆ ಬಳಸಬೇಕೆಂಬ ತಿಳಿವಳಿಕೆ ಎಲ್ಲರಿಗೂ ಇರುತ್ತದೆ. ಆದರೆ ಸುರಕ್ಷಾ ಕ್ರಮಗಳೇನು? ಎಂಬುದರ ಬಗ್ಗೆ ಒಮ್ಮೆ ಗಮನಹರಿಸಬೇಕಾದ್ದು ಅಗತ್ಯ.

ಗ್ರಾಹಕರು ಆಗಿಂದಾಗ್ಗೆ ತಮ್ಮ ಎಟಿಎಂ ಪಿನ್ ಬದಲಾವಣೆ ಮಾಡಿಕೊಳ್ಳುತ್ತಿರುವುದು ಉತ್ತಮ. ಅಲ್ಲದೇ ನಿಮ್ಮ ಪಿನ್ ನಂಬರ್ ನ್ನು ಉಲ್ಟಾ ನಮೂದಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕು.[ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವ 6 ಕೆಟ್ಟ ವಿಧಾನ]

ಎಟಿಎಂ ಬಳಕೆ ಮುನ್ನ ಈ 10 ಅಂಶ ತಿಳಿದಿರಲಿ

ಈ ಕೆಳಗಿನ ಸುರಕ್ಷಾ ಕ್ರಮ ಅನುಸರಿಸಲು ಮರೆಯಬೇಡಿ
1.ಎಟಿಎಂ ಯಂತ್ರದ ಬಳಿ ನೀವೊಬ್ಬರೇ ಇದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಕೆಲವೊಂದು ಬ್ಯಾಂಕ್ ಗಳು ಒಂದೇ ಕೋಣೆಯಲ್ಲಿ 3-4 ಎಟಿಎಂ ಯಂತ್ರಗಳನ್ನು ಇಟ್ಟಿರುತ್ತವೆ ಆಗ ಎಚ್ಚರಿಕೆಯಿಂದ ಇರಬೇಕು.
2. ಯಾವ ಕಾರಣಕ್ಕೂ ನಿಮ್ಮ ಕಾರ್ಡ್ ಬೇರೆಯವರಿಗೆ ನೀಡಬೇಡಿ. ಅನುಮಾನ ಉಂಟಾದರೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡುವುದು ಒಳಿತು.
3. ನಿಮ್ಮ ಪಿನ್ ಬರೆದಿಟ್ಟುಕೊಳ್ಳುವುದು ಸರಿಯಲ್ಲ. ಪಿನ್ ನೆನಪಿಟ್ಟುಕೊಳ್ಳುವುದೇ ಉತ್ತಮ ಮಾರ್ಗ.
4. ಬೇರೆಯವರಿಗೆ ಹಣ ನೀಡುವ ಸಂದರ್ಭ ಬಂದಾಗಲೂ ಕಾರ್ಡ್ ನೀಡುವುದು, ಅವರಿಗೆ ಪಿನ್ ಹೇಳುವುದನ್ನು ಮಾಡಬೇಡಿ.
5. ನೀವು ಎಟಿಎಂ ಯಂತ್ರಕ್ಕೆ ಪಿನ್ ದಾಖಲು ಮಾಡುತ್ತಿರುವುದನ್ನು ಯಾರೂ ಗಮನಿಸದಂತೆ ನೋಡಿಕೊಳ್ಳಿ[ಪ್ಯಾನ್ ಕಾರ್ಡ್ ಕಳೆದುಕೊಂಡರೆ ಏನು ಮಾಡಬೇಕು?]
6.ಬೇರೆಯವರು ಸುಲಭವಾಗಿ ಊಹಿಸುವಂಥ ಪಿನ್ ಬಳಸಬೇಡಿ. ನಿಮ್ಮ ವಾಹನದ ಸಂಖ್ಯೆ, ಜನ್ಮದಿನ, ಪೋನ್ ನಂಬರ್ ಇವುಗಳನ್ನು ಇಟ್ಟುಕೊಳ್ಳುವುದು ಒಳಿತಲ್ಲ.
7. ಹಣ ಡ್ರಾ ಮಾಡಿದ ನಂತರ ಮತ್ತೊಮ್ಮೆ ಯಂತ್ರವನ್ನು ಪರಿಶೀಲಿಸಿ ಹೊರಡುವುದನ್ನು ರೂಢಿ ಮಾಡಿಕೊಳ್ಳಿ
8. ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಫೋನ್ ನಂಬರ್ ಲಿಂಕ್ ಮಾಡಿಸಿಟ್ಟುಕೊಳ್ಳುವುದು ಒಳ್ಳೆಯದು. ಬೇರೆ ಯಾರಾದರೂ ನಿಮ್ಮ ಹೆಸರಿನಲ್ಲಿ ಹಣ ಡ್ರಾ ಮಾಡಿದರೆ ಮೆಸೇಜ್ ಬರುವುದರಿಂದ ಕೂಡಲೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
9. ಎಟಿಯಂ ಸಮೀಪ ಬೇರೆ ಯಾವುದೇ ರೀತಿಯ ಯಂತ್ರಗಳಿವೆಯೇ ಎಂಬುದನ್ನು ಗಮನಿಸಿ. ಅಂಥವೇನಾದರೂ ಕಂಡುಬಂದರೆ ಬ್ಯಾಂಕ್ ಮತ್ತು ಸೆಕ್ಯೂರಿಟಿ ಗಾರ್ಡ್ ಗೆ ಮಾಹಿತಿ ನೀಡಲು ಮರೆಯಬೇಡಿ.
10. ಹೊರಗೆ ಓಡಾಡುತ್ತಿರುವ ಜನರ ಮೇಲೆ ಒಂದು ಕಣ್ಣು ಇರಿಸುವುದು ಉತ್ತಮ. ನಿಮಗೆ ಸಹಾಯ ಮಾಡುವ ನೆಪದಲ್ಲಿ ಮೋಸ ಮಾಡುವ ಸಾಧ್ಯತೆಗಳಿರುತ್ತವೆ.

ಕೊನೆ ಮಾತು: ನೆನಪಿರಲಿ, ಬ್ಯಾಂಕ್ ಅಧಿಕಾರಿಗಳು ನಿಮಗೆ ಕರೆ ಮಾಡಿ ನಿಮ್ಮ ಎಟಿಎಂ ಪಿನ್ ಮತ್ತು ಖಾತೆ ವಿವರವನ್ನು ಯಾವತ್ತೂ ಕೇಳುವುದಿಲ್ಲ. ಅಲ್ಲದೇ ನಿಮ್ಮ ಇ ಮೇಲ್ ಖಾತೆಗೆ ಬರುವ ಕೆಲ ಮೇಲ್ ಗಳಿಗೆ ಉತ್ತರಿಸುವ ಗೋಜಿಗೆ ಹೋಗಬೇಡಿ.(ಗುಡ್ ರಿಟರ್ನ್ಸ್.ಇನ್)

English summary

10 Must Know Things When Using ATM

Automated Teller Machine known as ATM which despenses cash 24/7 and can be operated within minutes. With the help of PIN which is the numeric password one can withdraw an amount from the ATM. Here are new safety measures
Story first published: Friday, March 6, 2015, 17:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X