For Quick Alerts
ALLOW NOTIFICATIONS  
For Daily Alerts

ಕಡಿಮೆ ಅವಧಿ ಹೂಡಿಕೆ, ಹೆಚ್ಚು ರಿಟರ್ನ್ಸ್ ನೀಡುವ ವಿಧಾನಗಳು

By Mahesh
|

ಒಂದು ವರ್ಷದ ಕಡಿಮೆ ಅವಧಿಯ ಹೂಡಿಕೆ ಮಾಡಲು ಬಯಸುವ ಗ್ರಾಹಕರಿಗೆ ಅನೇಕ ಅವಕಾಶಗಳು ಈಗ ಲಭ್ಯವಿದೆ. ಈಗ ನಿಶ್ಚಿತ ಠೇವಣಿ ಅಲ್ಲದೆ ಈಕ್ವಿಟಿ ಐಚ್ಛಿಕ ಸೌಲಭ್ಯವೂ ಒದಗಿ ಬಂದಿದೆ. ಆದರೆ, ಹೂಡಿಕೆ ನಿಮ್ಮಿಷ್ಟದ ವಿಷಯವಾಗಿದ್ದು, ಮಾರುಕಟ್ಟೆ ಬಗ್ಗೆ ಕೊಂಚವಾದರೂ ಪರಿಜ್ಞಾನ ಇರಬೇಕಾದ್ದು ಅವಶ್ಯವಾಗಿದೆ. ಕಡಿಮೆ ಅವಧಿಯ ಹೂಡಿಕೆ ಮಾಡಿ ಕೂಡಾ ಒಳ್ಳೆಯ ರಿಟರ್ನ್ಸ್ ಪಡೆಯುವ ಅವಕಾಶಗಳು ಯಾವುದಿವೆ? 1 ವರ್ಷದ ಅವಧಿಗೆ ಲಭ್ಯವಿರುವ ಹೂಡಿಕೆ ವಿಧಾನಗಳ ಬಗ್ಗೆ ವಿವರಣೆ ಮುಂದಿದೆ.

ಆರ್ ಬಿಎಲ್ ಬ್ಯಾಂಕ್ ಎಫ್ ಡಿ

ಆರ್ ಬಿಎಲ್ ಬ್ಯಾಂಕ್ ಎಫ್ ಡಿ

ಆರ್ ಬಿಎಲ್ ಬ್ಯಾಂಕ್ ಎಫ್ ಡಿ ಒಳ್ಳೆ ಬಡ್ಡಿ ದರ ನೀಡುತ್ತದೆ. 1 ವರ್ಷದ ಅವಧಿಗೆ ಶೇ 8.5ರಷ್ಟು ನಿರೀಕ್ಷಿಸಬಹುದು. ಖಾಸಗಿ ಬ್ಯಾಂಕ್ ಕ್ಷೇತ್ರದಲ್ಲಿ ಇದು ಒಳ್ಳೆ ದರ ಎನ್ನಬಹುದು.

ಈಗ ಆರ್ ಬಿಎಲ್ ಬ್ಯಾಂಕ್ ಐಪಿಒ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಹೀಗಾಗಿ ಹೂಡಿಕೆಗೆ ಸಕಾಲ. ಹೂಡಿಕೆದಾರರು ಶೇ 0.75ರಷ್ಟು ಹಿಂಪಡೆಯುತ್ತಿದ್ದು ಇದು ಉತ್ತಮ ದರವಾಗಿದೆ.

 

ಬಂಧನ್ ಬ್ಯಾಂಕ್ ಎಫ್ ಡಿ

ಬಂಧನ್ ಬ್ಯಾಂಕ್ ಎಫ್ ಡಿ

ದೇಶದ ಹೊಚ್ಚ ಹೊಸ ವಾಣಿಜ್ಯ ಬ್ಯಾಂಕ್ ಬಂಧನ್ ಬ್ಯಾಂಕ್ ನಿಶ್ಚಿತ ಠೇವಣಿ ಹೂಡಿಕೆ ಒಂದು ವರ್ಷಕ್ಕೆ ಶೇ 8.5ರಷ್ಟು ಬಡ್ಡಿ ದರ ನೀಡಲಿದೆ. ಆರ್ ಬಿಐ ಲೈಸನ್ಸ್ ಕಳೆದ ವರ್ಷವಷ್ಟೇ ಪಡೆದಿರುವ ಈ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುತ್ತಿದೆ.

ಎನ್ ಎಂ ಡಿಸಿ ಷೇರುಗಳ ಮೇಲೆ ಹೂಡಿಕೆ

ಎನ್ ಎಂ ಡಿಸಿ ಷೇರುಗಳ ಮೇಲೆ ಹೂಡಿಕೆ

ಎನ್ ಎಂ ಡಿಸಿ ಷೇರುಗಳ ಮೇಲೆ ಹೂಡಿಕೆ ಮಾಡುವುದು ಕೆಟ್ಟ ನಿರ್ಣಯವೇನಲ್ಲ. ಶೇ 9ರ ಡಿವೆಂಡೆಡ್ ನಿರೀಕ್ಷಿಸಬಹುದು. ಅದರೆ, ಮಾರುಕಟ್ಟೆಯಲ್ಲಿ ಏನಾದರೂ ಪರಿಸ್ಥಿತಿ ವ್ಯತಿರಿಕ್ತವಾಗಿ ಷೇರುಗಳು ಕುಸಿತ ಕಂಡರೆ ಕಷ್ಟ.

ಕೆಟಿಡಿಎಫ್ ಸಿ ನಿಶ್ಚಿತ ಠೇವಣಿ

ಕೆಟಿಡಿಎಫ್ ಸಿ ನಿಶ್ಚಿತ ಠೇವಣಿ

ಕೆಟಿಡಿಎಫ್ ಸಿ ಆರ್ಥಿಕ ಸಂಸ್ಥೆಯಲ್ಲಿ ನಿಶ್ಚಿತ ಠೇವಣಿ ದರ ಶೇ 8.5ರಷ್ಟಿದೆ. ಕೇರಳ ಸರ್ಕಾರದಿಂದ ಮಾನ್ಯತೆ ಹೊಂದಿದ್ದು, ಇಲ್ಲಿ ಮಾಡುವ ಹೂಡಿಕೆಯ ಅಸಲು ಹಾಗೂ ಬಡ್ಡಿ ಮೊತ್ತಕ್ಕೆ ಗ್ಯಾರಂಟಿ ಸಿಗುತ್ತದೆ.

ಮಹೀಂದ್ರಾ ಫೈನಾನ್ಸ್ ನಲ್ಲಿ ನಿಶ್ಚಿತ ಠೇವಣಿ

ಮಹೀಂದ್ರಾ ಫೈನಾನ್ಸ್ ನಲ್ಲಿ ನಿಶ್ಚಿತ ಠೇವಣಿ

ಮಹೀಂದ್ರಾ ಫೈನಾನ್ಸ್ ನಲ್ಲಿ ನಿಶ್ಚಿತ ಠೇವಣಿ ಮಾಡಿದರೆ ಶೆ 8.45ರಷ್ಟು ಬಡ್ಡಿದರ ಸಿಗಲಿದೆ. ಒಳ್ಳೆ ರಿಟರ್ನ್ಸ್ ನಿರೀಕ್ಷೆಯಲ್ಲಿರುವವರಿಗೆ ಇದು ಉತ್ತಮ ಹಾಗೂ ಸುರಕ್ಷಿತ ಹೂಡಿಕೆ ವಿಧಾನವಾಗಿದೆ.

ಒ ಎನ್ ಜಿಸಿ ಷೇರುಗಳ ಖರೀದಿ

ಒ ಎನ್ ಜಿಸಿ ಷೇರುಗಳ ಖರೀದಿ

ಒ ಎನ್ ಜಿಸಿ ಷೇರುಗಳ ಖರೀದಿ ಹೂಡಿಕೆ ಮೂಲಕ ಶೇ 4ರಷ್ಟು ಡಿವಿಡೆಂಡ್ ಸಿಗಲಿದೆ. ಇಂಧನ ದರ ಏರಿಳಿತದ ನಡುವೆಯೂ ಕಂಪನಿಯಿಂದ ಉತ್ತಮ ಬಡ್ಡಿದರ ನಿರೀಕ್ಷಿಸಬಹುದು.

ಪಿಎನ್ ಬಿ ಹೌಸಿಂಗ್ ಫೈನಾನ್ಸ್

ಪಿಎನ್ ಬಿ ಹೌಸಿಂಗ್ ಫೈನಾನ್ಸ್

ಪಿಎನ್ ಬಿ ಹೌಸಿಂಗ್ ಫೈನಾನ್ಸ್ ನಲ್ಲಿ ಶೇ 8ರಷ್ಟು ಈ ಹಿಂದಿನ ಅವಕಾಶಗಳಿಗೆ ಹೋಲಿಸಿದರೆ ಇದು ಕಡಿಮೆ ಬಡ್ಡಿದರ ಎನಿಸಿದರೂ ಒಳ್ಳೆ ಹೂಡಿಕೆ ಎನ್ನಬಹುದು.

English summary

7 Some Short Term Investment Ideas Of Up To 1 Year For Best Returns

If you are looking at investment options of up to one year, there are plenty of choices. You can go for fixed as well as equity options, depending on your risk taking ability. Take a look at some of the choices that you can make for short term investment of 1 year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X