For Quick Alerts
ALLOW NOTIFICATIONS  
For Daily Alerts

ಮ್ಯಾಗಿ ಭಾರತದಲ್ಲಿ ಓಕೆ? ನೆಸ್ಲೆ ಷೇರುಗಳು ಚೇತರಿಕೆ

|

ಬುಧವಾರದ ಮಾರುಕಟ್ಟೆ ಅಂತ್ಯಕ್ಕೆ ಸೆನ್ಸೆಕ್ಸ್ 151 ಅಂಕ ಏರಿಕೆ ದಾಖಲಿಸಿದರೆ, ನಿಫ್ಟಿ 51 ಅಂಕಗಳ ಏರಿಕೆಯಲ್ಲಿ ಮುಕ್ತಾಯವಾಯಿತು. ಬುಧವಾರ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಷೇರುಗಳ ವಿವರ ಇಲ್ಲಿದೆ..

ನೆಸ್ಲೆ ಇಂಡಿಯಾ
ಮ್ಯಾಗಿ ಮೇಲಿನ ನಿಷೇಧ ತಣ್ಣಗಾಗುತ್ತದೆ ಎಂದು ಗೊತ್ತಾದ ನಂತರ ನೆಸ್ಲೆ ಕಂಪನಿಯ ಷೇರುಗಳು ಏರಿಕೆ ಕಂಡವು. ಶೇ. 5 ರಷ್ಟು ಏರಿಕೆ ದಾಖಲಿಸಿದ್ದು ನೆಸ್ಲೆಯ ಹೆಗ್ಗಳಿಕೆ. ದಿನದ ಕೊನೆಯಲ್ಲಿ 6931 ರ ಮುಖಬೆಲೆಯಲ್ಲಿ ಅಂತ್ಯವಾಯಿತು.

ಮ್ಯಾಗಿ ಭಾರತದಲ್ಲಿ ಓಕೆ?  ನೆಸ್ಲೆ ಷೇರುಗಳು ಚೇತರಿಕೆ

ಮದರ್‌ ಸನ್ ಸುಮಿ
ಮದರ್‌ ಸನ್ ಸುಮಿ ಷೇರುಗಳು ಶೇ.4 ಏರಿಕೆ ದಾಖಲಿಸಿದವು. ಏಪ್ರಿಲ್ -ಜೂನ್ ತ್ರೈಮಾಸಿಕದ ವರದಿಯನ್ನು ಕಂಪನಿ ಆಗಸ್ಟ್ 6 ರಂದು ಬಿಡುಗಡೆ ಮಾಡಲಿದೆ. ದಿನದ ಅಂತ್ತಕ್ಕೆ 393 ರು. ನಲ್ಲಿ ಅಂತ್ಯವಾಯಿತು.

ಭಾರ್ತಿ ಏರ್ ಟೆಲ್
ಕಂಪನಿ 1554 ಕೋಟಿ ನಿವ್ವಳ ಲಾಭ ಗಳಿಸಿದ್ದು ಹೂಡಿಕೆದಾರರಿಗೆ ಗೊತ್ತಾದ ನಂತರ ಏರಿಕೆ ದಾಖಲಿಸಿತು. 0.77 ಏರಿಕೆಯೊಂದಿಗೆ 416 ರು. ನಲ್ಲಿ ಅಂತ್ಯವಾಯಿತು.

ಆದಾನಿ ಎಂಟರ್ ಪ್ರೈಸಸ್
ಫಾಕ್ಸೋನ್ ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದು ಕಂಪನಿ ಹೇಳಿದ್ದರೂ ಸ್ಪಷ್ಟ ನಿರ್ಧಾರ ಪ್ರಕಟ ಮಾಡಲಿಲ್ಲ. ಭಾರತದಲ್ಲಿ ಕಂಪನಿ 13 798 ಕೋಟಿ ರು. ಆದಾಯವನ್ನು ಹೊಂದಿದೆ. ಶೇ. 4.16 ಏರಿಕೆ ದಾಖಲಿಸಿದ ಕಂಪನಿ ದಿನದ ಅಂತ್ಯಕ್ಕೆ 103 ರು. ನಲ್ಲಿ ಕೊನೆಯಾಯಿತು.

ಹೆಕ್ಸಾವೇರ್ ಟೆಕ್ನಾಲಜೀಸ್
ಜೂನ್ ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿ 86.78 ಕೋಟಿ ರು. ನಿವ್ವಳ ಲಾಭ ಗಳಿಸಿದೆ. 2.44 ಏರಿಕೆ ದಾಖಲಿಸಿದ ಕಂಪನಿ ಷೇರುಗಳು 283 ರು. ನಲ್ಲಿ ಅಂತ್ಯವಾದವು.

ಕೆನರಾ ಬ್ಯಾಂಕ್
ಜೂನ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬ್ಯಾಂಕ್ 478 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಶೇ. 1.89 ಇಳಿಕೆ ಕಂಡ ಕೆನರಾ ಬ್ಯಾಂಕ್ ಷೇರುಗಳು ದಿನದ ಅಂತ್ಯಕ್ಕೆ 303 ರು. ಗಳಿಸಿಕೊಂಡಿದ್ದವು.(ಗುಡ್ ರಿಟರ್ನ್ಸ್.ಇನ್)

English summary

Stocks That Were In News On August 5, 2015

The Sensex ended the day higher by 151 points, while the Nifty closed higher by 51 points. Shares in Nestle surged as much as 5 per cent after reports that Nestle was found to comply with the country's food safety standard in a test done in a government approved lab. Share price of Motherson Sumi Systems rose 4 percent intraday Wednesday as the company was expected to post robust numbers in April-June quarter on August 6.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X