ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಹೇಗೆ?
ಆಧಾರ್ ಕಾರ್ಡ್ ಅನ್ನು ಕೇಂದ್ರ ಸರ್ಕಾರ ಹಲವಾರು ಸೌಲಭ್ಯ ಪಡೆಯಲು ಬಳಸಿಕೊಳ್ಳಬಹುದು ಎಂದು ತಿಳಿಸಿದೆ. ಆದಾಯ ತೆರಿಗೆ ಪಾವತಿಯಲ್ಲೂ ಇದಕ್ಕೆ ಪ್ರಮುಖ ಸ್ಥಾನ ನೀಡಲಾಗಿದ್ದು ಪ್ಯಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಕೊಳ್ಳುವುದು ಉತ್ತಮ.
ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಜತೆ ಲಿಂಕ್ ಆಗಿದ್ದರೆ ಐಟಿಆರ್ ವಿ ಅಕ್ನೊಲೆಜ್ ಮೆಂಟ್ ಅನ್ನು ಕಳುಹಿಸಿಕೊಡಬೇಕಾದ ಅಗತ್ಯ ಇರುವುದಿಲ್ಲ. ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನೋಂದಣಿಯಾಗಿದ್ದರೆ ಅರ್ಧ ಸಮಸ್ಯೆ ಬಗೆಹರಿದಂತೆಯೆ. ಮೊಬೈಲ್ ಗೆ ಅಪ್ ಡೇಟ್ ಮೆಸೇಜ್ ಗಳು ಬರುತ್ತವೆ. ಹಾಗಾದರೆ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಉತ್ತರ...[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]
ಹಂತ 1
* ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫಿಲ್ಲಿಂಗ್ ಪೋರ್ಟಲ್ ಗೆ ಲಾಗ್ ಇನ್ ಆಗಿ
* ನಿಮಗೆ ಒಂದು ಪಾಪ್ ಅಪ್ ಸ್ಕ್ರೀನ್ ಕಂಡುಬರಲಿದ್ದು ಆಧಾರ್ ಕಾರ್ಡ್ ಲಿಂಕ್ ಮಾಡುವ ಆಯ್ಕೆ ದೊರೆಯುತ್ತದೆ.
* ಅದು ಕಾಣದಿದ್ದರೆ ಪ್ರೊಫೈಲ್ ಸೆಟ್ಟಿಂಗ್ಸ್ ಗೆ ತೆರಳಿ ಮೇನ್ ಮೆನುಗೆ ಹೋಗಿ
* ಅಲ್ಲಿ ಆಧಾರ್ ಲಿಂಕ್ಡ್ ಟು ಪ್ಯಾನ್ ಆಯ್ಕೆ ಆರಿಸಿಕೊಳ್ಳಿ[ರಿಟರ್ನ್ಸ್ ಪಾವತಿ ವಿಳಂಬವಾದರೆ ಏನಾಗುತ್ತದೆ?]
ಹಂತ 2
ಆಧಾರ್ ಸಂಖ್ಯೆ ದಾಖಲಿಸುವ ಮುನ್ನ
* ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಲಿಂಗ ಎಲ್ಲ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಖಚಿತ ಮಾಡಿಕೊಳ್ಳಿ
* ಆದಾಯ ತೆರಿಗೆ ಇಲಾಖೆ ನೀವು ನೀಡಿದ ಮಾಹಿತಿಯನ್ನು ಮೌಲ್ಯಮಾಪನ ಮಾಡುತ್ತದೆ ಎಂಬುದು ನೆನಪಿರಲಿ
* ನಿಮ್ಮ ಎಲ್ಲ ಮಾಹಿತಿಯನ್ನು ಕ್ಯಾಪಿಟಲ್ ಅಕ್ಷರಗಳಲ್ಲಿ ಭರ್ತಿ ಮಾಡಬೇಕು
* ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ
* ಕ್ಲಿಕ್ ಮಾಡಿ ಮುಂದಿನ ಆಯ್ಕೆಗೆ ತೆರಳಿ[ತೆರಿಗೆ ಪಾವತಿ ವೇಳೆ ತಪ್ಪಾದರೆ ಮತ್ತೆ ರಿಟರ್ನ್ಸ್ ಸಾಧ್ಯವೇ?]
ಹಂತ 3
* ಮೌಲ್ಯಮಾಪನ ಮುಗಿದ ಮೇಲೆ ನಿಮ್ಮ ಆಧಾರ್ ಸಂಖ್ಯೆ ಪ್ಯಾನ್ ಕಾರ್ಡ್ ಗೆ ಲಿಂಕ್ ಆಗುತ್ತದೆ
* ಎಲ್ಲ ಮಾಹಿತಿಗಳು ಹೊಂದಾಣಿಕೆ ಆಗಿದ್ದರೆ ಮಾತ್ರ ಆಧಾರ್ ಕಾರ್ಡ್ ಲಿಂಕ್ ಆಗುತ್ತದೆ
ಆದಾಯ ತೆರಿಗೆ ಇಲಾಖೆ ತಾಣದಿಂದ ಎಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇವಿಸಿ) ಪಡೆದುಕೊಳ್ಳುವುದು ಹೇಗೆ?
* ಇ ಫೈಲ್ ನಲ್ಲಿ ತೆರಳಿ ಜನರೇಟ್ ಇವಿಸಿ ಆಯ್ಕೆಯನ್ನು ಒತ್ತಿ
* ನೀವು ಕ್ಲಿಕ್ ಮಾಡಿದ ನಂತರ ನೋಂದಣಿಯಾಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಮತ್ತು ಇ ಮೇಲ್ ಐಡಿಗೆ ಇವಿಸಿಯನ್ನು ಕಳುಹಿಸಿಕೊಡಲಾಗುತ್ತದೆ. ಇದು 72 ಗಂಟೆಗಳ ಕಾಲ ಅಸ್ತಿತ್ವ ಹೊಂದಿದ್ದು ಅಷ್ಟರೊಳಗೆ ವೆರಿಫಿಕೇಶನ್ ಮುಗಿಸಬೇಕಾಗುತ್ತದೆ.
ಕೊನೆ ಮಾತು:
ನಿಮ್ಮ ವಾರ್ಷಿಕ ಆದಾಯ 5 ಲಕ್ಷ ರು. ಗಿಂತ ಕಡಿಮೆ ಇದ್ದಲ್ಲಿ ಮಾತ್ರ ಇವಿಸಿ ಕೆಲಸ ಮಾಡುತ್ತದೆ. ಇಲ್ಲಿ ಯಾವುದೇ ಬಗೆಯ ರೀಫಂಡ್ ಗಳನ್ನು ತಕ್ಷಣಕ್ಕೆ ಕೊಡಮಾಡಲಾಗುವುದಿಲ್ಲ. (ಗುಡ್ ರಿಟರ್ನ್ಸ್. ಇನ್)