ನರೇಂದ್ರ ಮೋದಿಯವರ ಪ್ರಧಾನ ಮಂತ್ರಿ ಜನ ಧನ ಯೋಜನೆ ಯಶಸ್ವಿಯಾದ್ದು ದೇಶದ ಲಕ್ಷಾಂತರ ಜನ ಖಾತೆ ತೆರೆದುಕೊಂಡಿದ್ದಾರೆ. ಈ ಯೋಜನೆ ಅನೇಕ ಲಾಭಗಳನ್ನು ಒದಗಿಸಿಕೊಡುತ್ತಿದ್ದು ಅವುಗಳಲ್ಲಿ ಪ್ರಮುಖವಾದ 8 ನ್ನು ಪಟ್ಟಿ ಮಾಡಲಾಗಿದೆ.
ಗ್ರಾಮೀಣ ಮತ್ತು ಮಧ್ಯಮ ವರ್ಗದವರಿಗೆ ಜನಧನ ಯೋಜನೆ ವರದಾನವಾಗಿ ಪರಿಣಮಿಸಿದೆ. 'ಮೇರಾ ಕಥಾ- ಭಾಗ್ಯ ವಿಧಾತಾ' ಎಂಬ ಘೋಷಣೆಯಡಿ ಆರಂಭವಾಗಿರುವ ಯೋಜನೆ ರಾಷ್ಟ್ರದ ಪ್ರತಿಯೊಬ್ಬ ನಾಗರಿಕನಿಗೂ ಎಲ್ಲ ರೀತಿಯ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]

ಅಪಘಾತ ವಿಮೆ(ಸಾವು ಸಂಭವಿಸಿದರೆ)
ಯೋಜನೆಯಡಿ ಖಾತೆ ತೆರೆದ ಪ್ರತಿಯೊಬ್ಬನಿಗೂ ಅಪಘಾತ ವಿಮೆ ದೊರೆಯುತ್ತದೆ. ಅವಘಡ ಸಂಭವಿಸಿ ವ್ಯಕ್ತಿ ಮೃತನಾದರೆ 1 ಲಕ್ಷ ರೂ. ಅಪಘಾತ ವಿಮೆಯನ್ನು ಯೋಜನೆ ಅನ್ವಯ ಕೂಡಲೇ ಪಾವತಿ ಮಾಡಲಾಗುವುದು.
ಇಂತಿಷ್ಟೇ ಹಣ ಇಡಬೇಕೆಂಬ ಒತ್ತಾಯವಿಲ್ಲ
ಸಾಮಾನ್ಯವಾಗಿ ಎಲ್ಲಾ ಬಗೆಯ ಉಳಿತಾಯ ಖಾತೆಗಳಲ್ಲೂ ಇಂತಿಷ್ಟು ಮೊತ್ತದ ಹಣ ಇರಬೇಕು ಎಂಬ ನಿಯಮವಿದೆ. ಆದರೆ ಈ ಯೋಜನೆಯಲ್ಲಿ ಇಂತಿಷ್ಟು ಹಣ ಇಡಲೇಬೇಕು ಎಂದು ಯಾರೂ ಒತ್ತಾಯ ಮಾಡಲ್ಲ.
30 ಸಾವಿರ ರೂ. ಅಪಘಾತ ಪರಿಹಾರ ವಿಮೆ
ಮೊದಲೇ ಹೇಳಿದಂತೆ ಯೋಜನೆ ಬಡ ಮತ್ತು ಮಧ್ಯಮ ವರ್ಗಕ್ಕೆ ನೆರವಾಗಲಿದ್ದು, ಅಪಘಾತ ಪರಿಹಾರ ವಿಮೆಯಾಗಿ 30 ಸಾವಿರ ರೂ. ಪಡೆದುಕೊಳ್ಳಬಹುದು.
ಸಬ್ಸಿಡಿ ಮತ್ತಿತರ ಲಾಭ ಸರಳ
ಸರ್ಕಾರದ ವಿವಿಧ ಯೋಜನೆಗಳ ಮುಖಾಂತರ ಪಡೆಯುವ ಸಬ್ಸಿಡಿ ಜನಧನ ಖಾತೆಯೊಂದಿಗೆ ನೇರ ಸಂಪರ್ಕ ಪಡೆದುಕೊಳ್ಳುತ್ತದೆ. ಎಲ್ ಪಿಜಿ ಸಬ್ಸಿಡಿ ಮತ್ತಿತರ ಯೋಜನೆಗಳ ಲಾಭ ಪಡೆದುಕೊಳ್ಳಬಹುದು.
ಹಣದ ರವಾನೆ ಸುಲಭ
ಒಂದು ಖಾತೆಯಿಂದ ಇನ್ನೊಂದು ಹಣ ರವಾನಿಸಿಸುವುದು ಜನಧನ ಯೋಜನೆಯಲ್ಲಿ ಅತ್ಯಂತ ಸುಲಭ. ಗ್ರಾಮೀಣ ಜನರಿಗೆ ಇದು ಬಹು ಮುಖ್ಯ ಉಪಯೋಗವಾಗಿ ಪರಿಣಮಿಸಿದೆ.
ಸಾಲ ಸೌಲಭ್ಯ
ನಿಮ್ಮ ಜನಧನ ಖಾತೆಯ ಮೇಲೆ ಓವರ್ ಡ್ರಾಫ್ಟ್ ಸವಲತ್ತನ್ನು ಪಡೆದುಕೊಳ್ಳಬಹುದು,. ಹಣದ ಅತಿ ಅಗತ್ಯ ಬಿದ್ದಾಗ ಇದನ್ನು ಪಡೆದುಕೊಳ್ಳಬಹುದು. ಆದರೆ ನಿಮ್ಮ ಖಾತೆ ತೆರದು ವ್ಯವಹಾರ ಆರಂಭಿಸಿ ಕನಿಷ್ಠ 6 ತಿಂಗಳು ಕಳೆದಿದ್ದರೆ ಮಾತ್ರ ಸಾಲ ಸೌಲಭ್ಯ ಸಾಧ್ಯ.
ಇನ್ನಿತರ ಹಣಕಾಸು ಲಾಭಗಳು
ಜನಧನ ಯೋಜನೆ ಖಾತೆದಾರರು ಪೆನ್ಶನ್ ಮತ್ತು ಇನ್ನು ಕೆಲವು ವಿಮಾ ಸೌಲಭ್ಯದ ವ್ಯವಹಾರವನ್ನು ನಿಭಾಯಿಸಬಹುದು.[ಗುಡ್ ರಿಟರ್ನ್ಸ್. ಇನ್]


Click it and Unblock the Notifications