ಜಿಎಸ್ಟಿ ಮಸೂದೆ: ಉದ್ಯೋಗ ಸೃಷ್ಟಿ, ಉತ್ಪನ್ನ ಅಗ್ಗ

ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಜಾರಿಯಾದಲ್ಲಿ ಗ್ರಾಹಕ ಉತ್ಪನ್ನಗಳು ಅಗ್ಗವಾಗಲಿದ್ದು, ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರಿಯ ಅಬಕಾರಿ ಮತ್ತು ಸುಂಕ ಮಂಡಳಿ(ಸಿಬಿಇಸಿ) ಭವಿಷ್ಯ ನುಡಿದಿದೆ.

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಅನುಷ್ಠಾನಗೊಳ್ಳುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಲಿವೆ ಹಾಗೂ ವಿದೇಶಿ ಬಂಡವಾಳ ಹರಿದು ಬರಲಿದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.

ಜಿಎಸ್ಟಿ ಮಸೂದೆ: ಉದ್ಯೋಗ ಸೃಷ್ಟಿ, ಉತ್ಪನ್ನ ಅಗ್ಗ

ಜಿಎಸ್ಟಿ ಅಂಗೀಕಾರದಿಂದ ಗ್ರಾಹಕರು, ವ್ಯವಹಾರಸ್ಥರಿಗೆ ಆಗುವ ಲಾಭಗಳ ಬಗ್ಗೆ ಮಂಡಳಿ ಮಾದ್ಯಮಗಳಲ್ಲಿ ಜಾಹೀರಾತು ಕೂಡ ನೀಡುತ್ತಿದೆ. ಜಿಎಸ್ಟಿ ಜಾರಿಯಾದರೆ ಸೇವಾ ತೆರಿಗೆ, ಅಬಕಾರಿ ಸುಂಕ, ಮೌಲ್ಯ ವರ್ಧಿತ ತೆರಿಗೆ(ವ್ಯಾಟ್) ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 12ಕ್ಕೂ ಹೆಚ್ಚು ತೆರಿಗೆಗಳು ರದ್ದಾಗಲಿವೆ.

ಜಿಎಸ್ಟಿ ಜಾರಿಗೆಯಿಂದ ರಾಜ್ಯಗಳ ನಡುವೆ ಅಡೆತಡೆ ಇಲ್ಲದೆ ಸುಲಭ ವ್ಯಾಪಾರ ಮತ್ತು ವಹಿವಾಟು ನಡೆಯಲಿದೆ. ಜತೆಗೆ ಅನೇಕ ಬಾರಿ ತೆರಿಗೆ ಕಟ್ಟುವ ಹೊರೆ ತಪ್ಪಲಿದೆ. ತಂತ್ರಜ್ಞಾನ ಬಳಕೆಯಿಂದ ತೆರಿಗೆ ಇಲಾಖೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ. ಇಡಿ ತೆರಿಗೆ ವ್ಯವಸ್ಥೆ ಅತ್ಯಂತ ಸರಳಗೊಳ್ಳಲಿದ್ದು ಗ್ರಾಹಕರ ಅನುಭೋಗ ಪ್ರಮಾಣ ಹೆಚ್ಚಲಿದೆ ಎಂದು ಸಿಬಿಇಸಿ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+