ವಜ್ರ ಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಜೀವ ವಿಮೆ ನಿಗಮ ತನ್ನ ಅರ್ಹ ಪಾಲಿಸಿದಾರರಿಗೆ ಈ ಪ್ರಯುಕ್ತ ವಿಶೇಷ ಬೋನಸ್ ಘೋಷಿಸಿತ್ತು.
ಈಗ ಮತ್ತೆ ಭಾರತೀಯ ಜೀವ ವಿಮಾ ನಿಗಮ ಪಾಲಿಸಿ ಪ್ರಿಯರಿಗೆ ಇನ್ನೊಂದು ಸಿಹಿಸುದ್ದಿಯನ್ನು ನೀಡಿದ್ದು, "ಎಲ್ಐಸಿ ನ್ಯೂ ಬಿಮಾ ಡೈಮಂಡ್ ಯೋಜನೆ" ಇದಕ್ಕೆ ಹೊಸ ಸೇರ್ಪಡೆಯಾಗಿದೆ. ಇದು ಲಿಂಕ್ ಅಲ್ಲದ ಮನಿ ಬ್ಯಾಕ್ ಯೋಜನೆ ಆಗಿದೆ. ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು
ಮನಿ ಬ್ಯಾಕ್ ಆಯ್ಕೆ
ಎಲ್ಐಸಿ ಬಿಮಾ ಡೈಮಂಡ್ ಪಾಲಿಸಿ ಪ್ರತಿ 4ನೇ ವರ್ಷಕ್ಕೆ ಹಣ ಹಿಂಪಡೆಯುವ ಆಯ್ಕೆ ಹೊಂದಿರುತ್ತದೆ.
ಮನಿ ಬ್ಯಾಕ್ ಪಾಲಿಸಿಯ ಅವಧಿಯಲ್ಲಿ ಜೀವನ ರಕ್ಷಣೆಯನ್ನು ಒದಗಿಸುತ್ತದೆ. ಮೆಚುರಿಟಿ ಪ್ರಯೋಜನಗಳನ್ನು ಸರ್ವೈವಲ್ ಬೆನಿಫಿಟ್ ಮೂಲಕ ಕಂತುಗಳಲ್ಲಿ ನೀಡಲಾಗುತ್ತದೆ.
ವಿಸ್ತ್ರತ ಅವಧಿ
ಪಾಲಿಸಿಯ ಅವಧಿ ಮುಗಿದ ನಂತರವೂ ಅವಧಿಯನ್ನು ವಿಸ್ತರಿಸುವ ಅವಕಾಶವಿರುತ್ತದೆ.
ಸ್ವಯಂ ಹೊಂದಿಕೆ(Auto Cover)
ಕನಿಷ್ಟ 5 ವರ್ಷದ ಪ್ರೀಮಿಯಂ ಪಾವತಿಸಿದ ನಂತರ 2 ವರ್ಷಗಳ ಸ್ವಯಂ ಹೊಂದಿಕೆ(Auto Cover) ಸೌಲಭ್ಯವನ್ನು ಎಲ್ಐಸಿ ಬಿಮಾ ಡೈಮಂಡ್ ಪಾಲಿಸಿ ಒದಗಿಸುತ್ತದೆ.
ಕನಿಷ್ಠ ವಿಮಾ ಮೊತ್ತ
ಈ ಪಾಲಿಸಿಯ ಕನಿಷ್ಠ ಮೊತ್ತ ರೂ. 1,00,000. ಒಂದು ವೇಳೆ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದ್ದಿದಲ್ಲಿ ಫಲಾನುಭವಿಗೆ ಮೊತ್ತ ಸಿಗುತ್ತದೆ.
ಗರಿಷ್ಠ ವಿಮಾ ಮೊತ್ತ
ಎಲ್ಐಸಿ ಬಿಮಾ ಡೈಮಂಡ್ ಅಡಿಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ ರೂ. 5,00,000 ಮೊತ್ತದ ಪಾಲಿಸಿ ಪಡೆಯಬಹುದು. ಈ ಆಯ್ಕೆಯಲ್ಲೂ ಸಹ ಪಾಲಿಸಿಯ ಅವಧಿಯಲ್ಲಿ ಪಾಲಿಸಿದಾರ ಮರಣ ಹೊಂದ್ದಿದಲ್ಲಿ ಫಲಾನುಭವಿಗೆ ಮೊತ್ತ ಸಿಗುತ್ತದೆ.
ಪಾಲಿಸಿ ಅವಧಿ
- 10 ವರ್ಷಗಳ ಪ್ರೀಮಿಯಂ ಪಾವತಿಯೊಂದಿಗೆ 16 ವರ್ಷಗಳ ಪಾಲಿಸಿ ಅವಧಿ ಇರುತ್ತದೆ.
- 12 ವರ್ಷಗಳ ಪ್ರೀಮಿಯಂ ಪಾವತಿಯೊಂದಿಗೆ 20 ವರ್ಷಗಳ ಪಾಲಿಸಿ ಅವಧಿ ಇರುತ್ತದೆ.
- 15 ವರ್ಷಗಳ ಪ್ರೀಮಿಯಂ ಪಾವತಿಯೊಂದಿಗೆ 24 ವರ್ಷಗಳ ಪಾಲಿಸಿ ಅವಧಿ ಇರುತ್ತದೆ.
ಕನಿಷ್ಠ ವಯಸ್ಸು
ಕನಿಷ್ಠ 14 ವರ್ಷಗಳು ತುಂಬಿದ ನಂತರವಷ್ಟೇ ಈ ಪಾಲಿಸಿಯನ್ನು ಪಡೆಯಬಹುದಾಗಿದೆ.


Click it and Unblock the Notifications