ಭಾರತ ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಜಗತ್ತಿನಲ್ಲಿ ಸುಂದರವಾಗಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ಅನೇಕ ಶ್ರೇಷ್ಠ ಸಾಧಕರು ಜನ್ಮ ತಾಳಿದ್ದಾರೆ. ಕೆಲವರು ಅನೇಕ ಸಾಧನೆಗೆ, ಖ್ಯಾತಿಗೆ ಪಾತ್ರರಾಗಿದ್ದಾರೆ. 2015ರಲ್ಲಿ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆದಿರುವ ಭಾರತೀಯ ಪ್ರಸಿದ್ದ ವ್ಯಕ್ತಿಗಳು ಕೆಲವರಿದ್ದಾರೆ. ಇವರೇಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ.
ಇವರು ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತು ಸಾಮಾಜಿಕ ಕ್ಷೇಮಾಭಿವೃದ್ಧಿಗೆ ಬೆನ್ನೆಲುಬಾಗಿ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಟಾಪ್ 10 ಸಾಧಕರ ವಿವರ ಇಲ್ಲಿದೆ.
ನರೇಂದ್ರ ಮೋದಿ
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿನಲ್ಲಿಯೇ ಅತಿ ಪ್ರಸಿದ್ದಿ ಪಡೆದಿರುವ ಭಾರತೀಯ. 65 ವರ್ಷ ವಯಸ್ಸಿನ ಇವರು ಸೆಪ್ಟಂಬರ್ 17, 1950ರಂದು ಜನಿಸಿದ್ದು, ಭಾರತೀಯ ಜನತಾ ಪಾರ್ಟಿಯ ಮುಂಚೂಣಿಯ ನೇತಾರ.
ದೇಶದ ಆರ್ಥಿಕ ಅಭಿವೃದ್ಧಿ, ನವೋದ್ಯಮ, ತಂತ್ಜ್ಞಾನ, ವಿಜ್ಞಾನ ಮತ್ತು ಸಾಮಾಜಿ ಕ್ಷೇಮಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಇವರು 14ನೇ ಮತ್ತು ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಆಗಿದ್ದಾರೆ. ೨೦೦೧ರಿಂದ 2014ರವರೆಗೆ ಗುಜರಾತಿನ ಮಂತ್ರಿಯಾಗಿದ್ದರು. ಇವರು ಪ್ರಧಾನಿಯಾದ ನಂತರ ಇಡೀ ಜಗತ್ತೆ ಭಾರತದತ್ತ ನೋಡುವಂತಾಗಿದೆ. ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿ ತರುತ್ತಿದ್ದಾರೆ. ಮೋದಿಯವರು CNN-IBN Indian of the Year ಪಾರಿತೋಷಕ ಪಡೆದಿದ್ದಾರೆ.
2014ರಲ್ಲಿ ಪೋರ್ಬ್ಸ್ ನಿಯತಕಾಲಿಕೆಯ ಪ್ರಕಟಿಸಿರುವ ವಿಶ್ವದ 15ನೇ ಶಕ್ತಿಶಾಲಿ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ 2015ರಲ್ಲಿ ವಿಶ್ವದ 9ನೇ ಶಕ್ತಿಶಾಲಿ ವ್ಯಕ್ತಿಯಾಗಿ ಸ್ಥಾನ ಪಡೆದಿದ್ದಾರೆ. 2015ರಲ್ಲಿ ಫಾರ್ಚೂನ್ ನಿಯತಕಾಲಿಕೆ ಪ್ರಕಟಿಸಿರುವ ವಿಶ್ವದ 5ನೇ ಶ್ರೇಷ್ಠ ನಾಯಕ ಎಂಬ ಬಿರುದಿಗೆ ಪಾತ್ರರಾಗಿದ್ದಾರೆ.
ಕೈಲಾಶ್ ಸತ್ಯಾರ್ಥಿ
ಕೈಲಾಶ್ ಸತ್ಯಾರ್ಥಿ ಜನೆವರಿ 11, 1954ಲ್ಲಿ ಭಾರತದ ವಿಧಿಶಾದಲ್ಲಿ ಜನಿಸಿದರು. ಇವರು ಭಾರತೀಯ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣ ಕ್ಷೇತ್ರದ ವಕೀಲರಾಗಿದ್ದಾರೆ. ಬಾಲ ಕಾರ್ಮಿಕರ ವಿರುದ್ಧ ಹೋರಾಡುವ ಸಾಮಾಜಿಕ ಕಾರ್ಯಕರ್ತರು ಕೂಡ. 1980ರಲ್ಲಿ ಬಚ್ಪನ್ ಬಚಾವೋ ಆಂದೋಲನ್ ಸ್ಥಾಪಿಸಿ ಜಗತ್ತಿನ 144 ದೇಶಗಳಲ್ಲಿ 83,000 ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹೋರಾಟ ಮಾಡಿದ್ದಾರೆ.
ಕೈಲಾಶ್ ಸತ್ಯಾರ್ಥಿ ನೋಬೆಲ್ ಶಾಂತಿ ಮತ್ತು CNN-IBN Indian of the Year ಪಾರಿತೋಷಕಗಳನ್ನು ಪಡೆದಿದ್ದಾರೆ. ಅಲ್ಲದೇ 2015ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ನೀಡುವ ವರ್ಷದ ಮಾನವ ಪ್ರಶಸ್ತಿ ಪಡೆದಿದ್ದಾರೆ.
ಕೆ. ರಾಧಾಕೃಷ್ಣನ್
ಕೆ. ರಾಧಾಕೃಷ್ಣನ್ ರವರು ಆಗಸ್ಟ್ 29, 1949ರಂದು ಜನಿಸಿದರು. ಇವರು ಭಾರತೀಯ ಬಾಹ್ಯಾಕಾಶ ಸಂಶೋಧನೆ ಮತ್ತು ಎಲೆಕ್ಟ್ರಾನಿಕ್ ಇಂಜಿನೀಯರಿಂಗ್ ನಲ್ಲಿ ಪ್ರಸಿದ್ದಿ ಪಡೆದಿದ್ದು, ಭಾರತದ ವಿಜ್ಞಾನಿ ಆಗಿದ್ದಾರೆ.
2014ರ ಡಿಸೆಂಬರ್ ನಿಂದ ಇಂಡಿಯನ್ ಇನ್ಟಿಟ್ಯೂಟ್ ಆಫ್ ಇಂಜಿನೀಯರಿಂಗ್ ಸೈನ್ಸ್ ಮತ್ತು ಟೆಕ್ನೊಲಜಿಯ ಅಧ್ಯಕ್ಷರಾಗಿದ್ದಾರೆ.
ಜತೆಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
2014 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಅಮಿತ್ ಷಾ
ಪ್ರಸ್ತುತ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಷಾ ಭಾರತದ ಪ್ರಸಿದ್ದ ರಾಜಾಕಾರಣಿ.
ಇವರು ಅಕ್ಟೋಬರ್ 22, 1964ರಲ್ಲಿ ಮುಂಬಯಿಯಲ್ಲಿ ಜನಿಸಿದ್ದಾರೆ. ಅಮಿತ್ ಷಾ ಸತತ ನಾಲ್ಕು ಬಾರಿ (1997, 1998, 2002 ಮತ್ತು 2007) ಸಾರ್ಖೆಜ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ.
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್ ಭಾರತೀಯ ರಾಜಕೀಯ ರಂಗದಲ್ಲಿ ಸಂಚಲನ ಉಂಟು ಮಾಡಿದ ರಾಜಕಾರಣಿ. ಆಮ್ ಆದ್ಮಿ ಪಾರ್ಟಿಯ ಸಂಸ್ಥಾಪಕರಾದ ಇವರು ರಾಜಕೀಯಕ್ಕೆ ಬಂದು ಕಡಿಮೆ ಅವಧಿಯಲ್ಲಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಪಡೆದಿದ್ದಾರೆ. 2014 ಫೆಬ್ರವರಿಯಿಂದ ದೆಹಲಿಯ 7ನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.
1995ರಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ವೃತ್ತಿ ಜೀವನ ಆರಂಭಿಸಿದ್ದರು.
2013ರರಲ್ಲಿ NDTV Indian of the Year ಹಾಗೂ 2006ರ ರಲ್ಲಿ Ramon Magsaysay Award for Emergent Leadership, CNN-IBN Indian of the Year in Public Service ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಕಪಿಲ್ ಶರ್ಮಾ
ಕಪಿಲ್ ಶರ್ಮಾ ಏಪ್ರಿಲ್ 2, 1981 ರಲ್ಲಿ ಪಂಜಾಬಿನ ಅಮೃತಸರದಲ್ಲಿ ಜನಿಸಿದರು. ಸ್ವಂತ ಬುದ್ದಿ ಸಾಮರ್ಥ್ಯದಿಂದ ಜಗತ್ತಿನಾದ್ಯಂತ ಪ್ರಸಿದ್ದಿಯನ್ನು ಪಡೆದಿದ್ದಾರೆ.
ಕಪಿಲ್ ಶರ್ಮಾ ಭಾರತೀಯ ಸ್ಟಾಂಡ್-ಅಪ್ ಹಾಸ್ಯಗಾರ, ನಟ, ಟಿವಿ ನಿರೂಪಕ ಮತ್ತು ನಿರ್ಮಾಪಕ. 2013ರಿಂದ 2016ರವರೆಗೆ ಬಹು ಜನಪ್ರಿಯತೆ ಪಡೆದಿರುವ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎಂಬ ದೂರದರ್ಶನ ಕಾಮಿಡಿ ಶೋ ನಡೆಸಿಕೊಂಡು ಬರುತ್ತಿದ್ದಾರೆ.
2014ರಲ್ಲಿ ಐಟಿಎ ಕಿಂಗ್ ಕಾಮಿಡಿ ಅವಾರ್ಡ್, 2002, 2003ರಲ್ಲಿ ಐಟಿಎ ಅವಾರ್ಡ್ ಫಾರ್ ಬೆಸ್ಟ್ ಆಕ್ಟರ್-ಕಾಮಿಡಿ, 2014ರಲ್ಲಿ ಇಂಡಿಯನ್ ಟೆಲಿ ಅವಾರ್ಡ್ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಶಾರುಖ್ ಖಾನ್
ಶಾರುಖ್ ಖಾನ್ ನವೆಂಬರ್ 2, 1965ರಲ್ಲಿ ಹೊಸ ದೆಹಲಿಯಲ್ಲಿ ಜನಿಸಿದರು. SRK ಎಂದೇ ಖ್ಯಾತಿ ಪಡೆದಿರುವ ಶಾರುಖ್ ಬಾರತೀಯ ಚಿತ್ರರಂಗದ ಪ್ರಸಿದ್ದ ನಟ, ನಿರ್ಮಾಪಕ ಮತ್ತು ಕಿರುತೆರೆಯ ವ್ಯಕ್ತಿ. ಬಾರತೀಯ ಮಾದ್ಯಮದಲ್ಲಿ ಬಾದಷಾ ಆಫ್ ಬಾಲಿವುಡ್, ಕಿಂಗ್ ಆಫ್ ಬಾಲಿವುಡ್ ಅಥವಾ ಕಿಂಗ್ ಖಾನ್ ಎಂಬುದಾಗಿ ಜನಪ್ರಿಯತೆ ಗಳಿಸಿದ್ದಾರೆ.
ಶಾರುಖ್ 14 ಫಿಲ್ಮ್ ಫೇರ್ ಅವಾರ್ಡ್ ಗಳನ್ನು ಪಡೆದಿದ್ದಾರೆ. ಬಾಜಿಗರ್, ದಿಲ್ವಾಲೆ ದುಲ್ಹನೀಯಾ ಲೇ ಜಾಯೆಂಗೆ, ದೇವದಾಸ್, ಚಕ್ ದೇ ಇಂಡಿಯಾ, ಸ್ವದೇಶ್, ದಿಲ್ ತೋ ಪಾಗಲ್ ಹೈ, ದೇವದಾಸ್, ವೀರ್ ಝಾರಾ ಮುಂತಾದ ಪ್ರಸಿದ್ದ ಚಿತ್ರಗಳಾಗಿವೆ.
2005ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಮೀರ್ ಖಾನ್
ಅಮೀರ್ ಖಾನ್ ಭಾರತದ ಪ್ರಸಿದ್ದ ನಟ, ನಿರ್ಮಾಪಕ, ಸಮಾಜಸೇವಕ ಮತ್ತು ಚಿತ್ರಕಥೆ ಬರಹಗಾರ. ಇವರು ಮಾರ್ಚ್ 14, 1965ರಲ್ಲಿ ಮುಂಬೈನಲ್ಲಿ ಜನಿಸಿದರು.
ಭಾರತೀಯ ಚಿತ್ರರಂಗದ ಪ್ರಭಾವಶಾಲಿ ನಟನಾಗಿದ್ದು, ನಟನೆಯಿಂದಾಗಿ ಮಿ. ಫರ್ಪೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿದ್ದಾರೆ.
ಬಾಬಾ ರಾಮದೇವ್
ಬಾಬಾ ರಾಮದೇವ್ ಯೋಗ, ಕೃಷಿ, ಆಯುರ್ವೇದ ಮತ್ತು ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಮಹತ್ವಪೂರ್ಣವಾದ ಕಾಣಿಕೆಯನ್ನು ನೀಡಿದ್ದಾರೆ. ಇವರು ಭಾರತದ ಆಧ್ಯಾತ್ಮಿಕ ಗುರು ಎಂದೇ ಪ್ರಸಿದ್ದರಾಗಿದ್ದಾರೆ.
ಇವರು ಪ್ರಾಣಾಯಾಮ ರಹಸ್ಯ, ಔಷಧ ದರ್ಶನ, ಯೋಗ ದರ್ಶನ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ಸಚಿನ್ ತೆಂಡೂಲ್ಕರ್
ಸಚಿನ್ ತೆಂಡೂಲ್ಕರ್ ಏಪ್ರಿಲ್ 24, 1973ರಲ್ಲಿ ಜನಿಸಿದರು. ಸಚಿನ್ ಜಗತ್ತಿನ ಪ್ರಸಿದ್ದ ವ್ಯಕ್ತಿಗಳ ಸಾಲಿನಲ್ಲಿ ಭಾರತದ ಹತ್ತನೇ ವ್ಯಕ್ತಿಯಾಗಿದ್ದಾರೆ. ಕ್ರಿಕೆಟ್ ರಂಗದ ದಂತಕಥೆ ಹಾಗೂ ಕ್ರಿಕೆಟ್ ದೇವರು ಎಂದೇ ಪ್ರಸಿದ್ದಿ ಪಡೆದಿದ್ದು, ಜಗತ್ತಿನ ಶ್ರೇಷ್ಠ ಬ್ಯಾಟ್ಸ್‍ಮನ್ ಆಗಿದ್ದಾರೆ.
ಇವರು ಪದ್ಮಶ್ರೀ, ಪದ್ಮವಿಭೂಷಣ ಮತ್ತು ಭಾರತ ರತ್ನ ಪ್ರಶಸ್ತಿ ಪಡೆದಿದ್ದಾರೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications