ಡಿಜಿಟಲೀಕರಣ ಯುಗದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಭೂತ ಅವಶ್ಯಕತೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಗದು ರಹಿತ ವ್ಯವಹಾರಗಳಿಗಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ.
ಡಿಜಿಟಲೀಕರಣ ಯುಗದಲ್ಲಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಭೂತ ಅವಶ್ಯಕತೆ ಎಂಬ ಸ್ಥಿತಿ ನಿರ್ಮಾಣವಾಗಿದೆ. ನಗದು ರಹಿತ ವ್ಯವಹಾರಗಳಿಗಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆಕಸ್ಮಿಕವಾಗಿ ನೀವು ಡೆಬಿಟ್ ಕಾರ್ಡ್ ಕಳೆದುಕೊಂಡರೆ ತಕ್ಷಣದಲ್ಲಿ ಏನು ಮಾಡಬೇಕು? ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ಎಂಬ ಗೊಂದಲಗಳಿಗೆ ಉತ್ತರ ಇಲ್ಲಿದೆ.
ನೆಟ್ ಬ್ಯಾಂಕಿಂಗ್
ಇದು ತುಂಬಾ ಸುಲಭ ವಿಧಾನ. ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನ್ನು ಕೂಡಲೇ ಬ್ಲಾಕ್ ಮಾಡಲು ಸಾಧ್ಯವಿದೆ. ಮೊದಲು ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಆಗಿ. ನಂತರ ಅಲ್ಲಿ ತಿಳಿಸಿರುವ ಮಾಹಿತಿಯನ್ನು ನಮೂದಿಸಿ. ಇದು ಕೆಲವೇ ಕ್ಷಣದಲ್ಲಿ ನಡೆದು ಹೋಗುವ ಪ್ರಕ್ರಿಯೆ, ಆದರೆ ಇಲ್ಲಿ ನಿಮಗೆ ಇಂಟರ್ ನೆಟ್ ಸೌಲಭ್ಯ ಇರಬೇಕಾಗುತ್ತದೆ. ಎಲ್ಲ ಆಯ್ಕೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡ ನಂತರವೇ ಕಾರ್ಡ್ ಬ್ಲಾಕ್ ಆಗುತ್ತದೆ.
ಫೋನ್ ಬ್ಯಾಂಕಿಂಗ್
ಇಂಟರ್ನೆಟ್ ಸಂಪರ್ಕ ಸಾಧ್ಯವಿಲ್ಲದಿದ್ದಾಗ ಫೋನ್ ಬ್ಯಾಂಕಿಂಗ್ ಬಳಸಿ ಕಾರ್ಡ್ ಬ್ಲಾಕ್ ಮಾಡಬಹುದು. ಕರೆ ಮಾಡಿದಾಗ ಬ್ಯಾಂಕಿನವರು ಕೇಳುವ ಮಾಹಿತಿ ನೀಡಬೇಕಾಗುತ್ತದೆ, ಗುರುತಿನ ಪತ್ರದ ವಿವರ, ಜನ್ಮ ದಿನಾಂಕ ಯಾವುದಾದರೂ ಆಗಬಹುದು. ಎಸ್ಬಿಐ ಕಾರ್ಡ್ ದಾರರು ಐವಿಆರ್ ಮೂಲಕವೂ ಬ್ಲಾಕ್ ಮಾಡಲು ಸಾಧ್ಯವಿದೆ.
ಎಸ್ಎಂಎಸ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಸ್ಎಂಎಸ್ ಸೌಲಭ್ಯ ಕಲ್ಪಿಸಿಕೊಟ್ಟಿದೆ. ಬ್ಯಾಂಕ್ ನಲ್ಲಿ ನೀವು ನೋಂದಣಿಗೆ ನೀಡಿರುವ ಮೊಬೈಲ್ ಸಂಖ್ಯೆಯ ಮೂಲಕವೇ ಸಂದೇಶ ರವಾನೆ ಮಾಡಬೇಕು. ಕಾರ್ಡ್ ಬ್ಲಾಕ್ ಮಾಡಲು BLOCKXXXX to 567676 ಎಂದು ಸಂದೇಶ ರವಾನೆ ಮಾಡಬೇಕು. ನಂತರ ನಿಮಗೆ ಒಂದು ದೃಢೀಕರಣ ಸಂದೇಶ ಸಹ ಬರುತ್ತದೆ.
ಬ್ಯಾಂಕಿಗೆ ಭೇಟಿ ನೀಡಿ
ಕೆಲ ಮೂಲಭೂತ ದಾಖಲಾತಿಗಳನ್ನು ತೆಗೆದುಕೊಂಡು ನೀವು ಖಾತೆ ಹೊಂದಿರುವ ಬ್ಯಾಂಕ್ ಶಾಖೆಗೆ ತೆರಳಿ ಕಾರ್ಡ್ ಬ್ಲಾಕ್ ಮಾಡಿಸಬಹುದು. ನಂತರ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಈ ಅಂಶಗಳು ಗಮನದಲ್ಲಿರಲಿ
1. ಬ್ಯಾಂಕುಗಳು ಹೊಸ ಕಾರ್ಡ್ ನೀಡುವಾಗ ನಿರ್ದಿಷ್ಟ ಶುಲ್ಕ ಪಡೆದುಕೊಳ್ಳಬಹುದು.
2. ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ನಂತರ ಕಾರ್ಡ್ ಸಿಗಲು ನಾಲ್ಕೈದು ಬೇಕಾಗಬಹುದು.
3. ಬ್ಯಾಂಕ್ ನ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಿ ಬ್ಲಾಕ್ ಮಾಡಲು ಸಾಧ್ಯವಿದೆ.
4. ನೆಟ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರುವವರು ಮಾತ್ರ ಆನ್ ಲೈನ್ ಮೂಲಕ ಬ್ಲಾಕ್ ಮಾಡಲು ಸಾಧ್ಯವಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಡ ಕಳೆದು ಹೋದ ಕೂಡಲೇ ಬ್ಲಾಕ್ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಹಣ ಬೇರೆಯವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೇರೆಯವರ ಕೈಗೆ ಕಾರ್ಡ್ ನೀಡದಂತೆ ಜೋಪಾನವಾಗಿ ಇಡಬೇಕಾಗುತ್ತದೆ.


Click it and Unblock the Notifications