ಯಾವುದೇ ಪ್ರಾಪರ್ಟಿ ಅಥವಾ ಆಸ್ತಿ ಖರೀದಿಸುವ ಮುನ್ನ ನೂರು ಸಲ ಯೋಚನೆ ಹಾಗೂ ಯೋಜನೆ ಮಾಡಬೇಕಾಗುತ್ತದೆ. ಖಂಡಿತ ಇದು ಸುಲಭದ ಕೆಲಸ ಅಲ್ಲ. ಸ್ನೇಹಿತರ ಸಲಹೆ, ಕಾನೂನು ತಜ್ಞರೋ ಅಥವಾ ನಿಮ್ಮ ವಕೀಲರ ಸಹಕಾರ ಪಡೆದು ಆಸ್ತಿ ಖರೀದಿ ಮಾಡಬೇಕಾಗುತ್ತದೆ.
ಯಾವುದೇ ಪ್ರಾಪರ್ಟಿ ಅಥವಾ ಆಸ್ತಿ ಖರೀದಿಸುವ ಮುನ್ನ ನೂರು ಸಲ ಯೋಚನೆ ಹಾಗೂ ಯೋಜನೆ ಮಾಡಬೇಕಾಗುತ್ತದೆ. ಖಂಡಿತ ಇದು ಸುಲಭದ ಕೆಲಸ ಅಲ್ಲ. ಸ್ನೇಹಿತರ ಸಲಹೆ, ಕಾನೂನು ತಜ್ಞರೋ ಅಥವಾ ನಿಮ್ಮ ವಕೀಲರ ಸಹಕಾರ ಪಡೆದು ಆಸ್ತಿ ಖರೀದಿ ಮಾಡಬೇಕಾಗುತ್ತದೆ. ಕೊಂಚ ಎಚ್ಚರ ತಪ್ಪಿದರೂ ವಂಚನೆಗೆ ಒಳಗಾಗಬೇಕಾಗುತ್ತದೆ.
ಯಾವ ಬಗೆಯ ಆಸ್ತಿ ಖರೀದಿಸಬೇಕು, ಯಾವುದು ಉತ್ತಮ, ಇಲ್ಲ ಯಾವುದು ಭವಿಷ್ಯತ್ತಿನ ದೃಷ್ಟಿಯಿಂದ ಒಳ್ಳೆಯದು ಎಂಬುದನ್ನು ಹಲವು ಬಾರಿ ಚಿಂತಿಸಿ, ಚರ್ಚಿಸಿ ನಿರ್ಧಾರಕ್ಕೆ ಬರಬೇಕು.
ಆಸ್ತಿ ಅಥವಾ ಪ್ರಾಪರ್ಟಿ ಕೊಳ್ಳಲು ಮುಂದಾಗಿದ್ದರೆ ಅಥವಾ ಖರೀದಿ ಯೋಚನೆ ಮಾಡುತ್ತಿದ್ದರೆ ಈ ಅಂಶಗಳನ್ನು ಹಾಗೂ ಡಾಕ್ಯುಮೆಂಟ್‌ಗಳನ್ನು ಕಡ್ಡಾಯವಾಗಿ ನಿಮ್ಮ ಬಳಿ ಇರಿಸಿಕೊಳ್ಳಿ...
1. ಮದರ್ ಡೀಡ್
ಯಾವುದೇ ಆಸ್ತಿ ದಶಕಗಳಿಂದ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಬದಲಾಗುತ್ತ ಹೋಗುತ್ತಿರುತ್ತದೆ. ಮದರ್ ಡೀಡ್ ಎನ್ನುವುದು ಇಲ್ಲಿಯವರೆಗೆ ಆಸ್ತಿ ಒಡೆತನ ಹೊಂದಿದ್ದವರ ಸಂಪೂರ್ಣ ಮಾಹಿತಿಯನ್ನ ಒಳಗೊಂಡಿರುತ್ತದೆ. ಯಾವುದೇ ಆಸ್ತಿ ಕೊಳ್ಳುವ ಮೊದಲು ಈ ದಾಖಲೆ ಪರೀಕ್ಷಿಸಿಕೊಂಡು ಪಡೆದುಕೊಳ್ಳಿ.
2. ನಿರ್ದಿಷ್ಟ ಸಂಸ್ಥೆಯಿಂದ ಅನುಮತಿ ಪತ್ರ
ಪ್ರಾಪರ್ಟಿ ಅಥವಾ ಅಪಾರ್ಟ್‌ಮೆಂಟ್ ಕೊಳ್ಳುವ ಮುನ್ನ ಅದು ಸಂಬಂಧಿಸಿದ ಸಂಸ್ಥೆಯಿಂದ ಅನುಮತಿ ಪಡೆದ ಜಾಗದಲ್ಲಿ ಕಟ್ಟಲಾಗಿದೆಯೇ ಎಂಬುದನ್ನು ಪರೀಕ್ಷಿಸಲೇಬೇಕು. ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್ ಖರೀದಿಸುವ ಮುನ್ನ ಬಿಬಿಎಂಪಿ ಅನುಮತಿ ಪಡೆದಿದ್ದಾರೆಯೇ ಎಂದು ಪರೀಕ್ಷಿಸುದು ಕಡ್ಡಾಯ.
3. ತಕರಾರು ಇಲ್ಲ(ಎನ್‌ಒಸಿ) ಎಂಬುದು ಅಷ್ಟೇ ಮುಖ್ಯ
ಆಸ್ತಿ ವಿವಾದಗಳಿಂದ ಎಷ್ಟೊಂದು ಅನಾಹುತಗಳು ಆಗುತ್ತಿವೆ ಎಂಬುದನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಮರು ಮಾರಾಟದಲ್ಲಿ ಪ್ರಾಪರ್ಟಿ ಖರೀದಿಸುತ್ತಿದ್ದರೆ ಹಿಂದಿನ ಮಾಲೀಕರಿಂದ ತಕರಾರು ಇಲ್ಲ ಎಂಬ ಪ್ರಮಾಣ ಪತ್ರ ಪಡೆಯುವುದು ಅಷ್ಟೇ ಮುಖ್ಯ.
4. ಎನ್‌ಕಂಬರೆನ್ಸ್ ಪ್ರಮಾಣ ಪತ್ರ
ಇದು ಕೂಡ ತುಂಬಾ ಪ್ರಮುಖ ದಾಖಲೆಯಾಗಿದ್ದು, ರಿಜಿಸ್ಟರ್ ಕಚೇರಿಯಿಂದ ಪಡೆದಿರಬೇಕಾಗುತ್ತದೆ. ನೀವು ಖರೀದಿಸುತ್ತಿರುವ ಪ್ರಾಪರ್ಟಿ ಮೇಲೆ ಬೇರೆ ಯಾರಿಗೂ ಯಾವುದೇ ರೀತಿಯ ಹಕ್ಕುಗಳಿಲ್ಲ ಎಂಬುದನ್ನು ಈ ಪ್ರಮಾಣ ಪತ್ರ ದೃಢಪಡಿಸುತ್ತದೆ.
5. ಟೈಟಲ್ ಡೀಡ್
ಇದು ಯಾರಿಂದ ನೀವು ಪ್ರಾಪರ್ಟಿ ಖರೀದಿಸುತ್ತಿದ್ದೀರಿ ಎಂಬುದನ್ನು ಸೂಚಿಸುವ ಪ್ರಮಾಣ ಪತ್ರ. ಹಿಂದಿನ ಮಾಲೀಕರ ಹೆಸರನ್ನು ಸ್ಪಷ್ಟವಾಗಿ ಇದು ಸೂಚಿಸುತ್ತದೆ. ಮೂಲ ಪ್ರತಿಯನ್ನು ಪರಿಶೀಲಿಸುವಂತೆ ಇದನ್ನು ಪರಿಶೀಲಿಸುವುದು ಅಷ್ಟೇ ಮುಖ್ಯ.
6. ತೆರಿಗೆ ಕಟ್ಟಿದ ಪಾವತಿಗಳು
ತೆರಿಗೆ ಕಟ್ಟಿದ ಪಾವತಿಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಮನೆ ಕೊಳ್ಳುವಾಗಲಂತೂ ಇದನ್ನು ಗಮನಿಸಲೇಬೇಕು. ತೆರಿಗೆ ಕಟ್ಟದ ಆಸ್ತಿ ಖರೀದಿಸಿದರೆ ಅಪಾಯ ತಪ್ಪಿದ್ದಲ್ಲ ಎಂಬುದನ್ನು ಗಮನಿಸಿ.
7. ನೋ ಆನ್‌ಬ್‌ಜೆಕ್ಷನ್ ಸರ್ಟಿಫೀಕೇಟ್
ಆಸ್ತಿ ಖರೀದಿಸುವಾಗ ಸಮಾಜ ಅಥವಾ ನೆರೆಹೊರೆಯವರಿಂದ ಪ್ರಾಪರ್ಟಿ ವಿಷಯದಲ್ಲಿ ಯಾವುದೇ ತಕರಾರು ಇಲ್ಲ ಎಂಬ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗುತ್ತದೆ.
8. ಉತ್ತಮ ವಕೀಲರನ್ನು ಜತೆ ಇರಿಸಿಕೊಳ್ಳಿ
ಪ್ರಾಪರ್ಟಿ ಖರೀದಿ ಸಂದರ್ಭದಲ್ಲಿ ಕಾನೂನು ಬದ್ದವಾದ ನಡೆ ತುಂಬಾ ಮುಖ್ಯ. ಹೀಗಾಗಿ ಉತ್ತಮ ವಕೀಲರೊಬ್ಬರ ಮೂಲಕ ಹೆಜ್ಜೆ ಇಡಿ. ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವಾಗ ಕಾನೂನು ಮಾರ್ಗಗಳ ಕುರಿತು ಚರ್ಚಿಸಿ ಮುಂದುವರಿಯಿರಿ.


Click it and Unblock the Notifications