ಆದಾಯ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ ಪಡೆಯಲು, ಆದಾಯ ತೆರಿಗೆ ರಿಟರ್ನ್ಸ್ ಪಡೆಯಲು ಮತ್ತಿತರ ಹಣದ ರವಾನೆ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗುತ್ತದೆ.
ಆದಾಯ ತೆರಿಗೆ ಪಾವತಿ, ಟಿಡಿಎಸ್/ಟಿಸಿಎಸ್ ಕ್ರೆಡಿಟ್ ಪಡೆಯಲು, ಆದಾಯ ತೆರಿಗೆ ರಿಟರ್ನ್ಸ್ ಪಡೆಯಲು ಮತ್ತಿತರ ಹಣದ ರವಾನೆ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿ ಬೇಕಾಗುತ್ತದೆ. ಆದಾಯ ತೆರಿಗೆ ಪಾವತಿ ಮಾಡುವರೆಂತೂ ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಬೇಕಾಗುತ್ತದೆ.
ಬ್ಯಾಂಕ್ ಸಾಲ ಪಡೆಯಲು, ಹಣ ಹೂಡಿಕೆ ಮಾಡಲು, ಆಸ್ತಿ ಖರೀದಿ- ಮಾರಾಟ ಹೀಗೆ ಯಾವುದೇ ವಾಣಿಜ್ಯ ಉದ್ದೇಶಿತ ವ್ಯವಹಾರಕ್ಕೆ ಪಾನ್ ಕಾರ್ಡ್ ಬೇಕಾಗುತ್ತದೆ.ಪ್ಯಾನ್ ಕಾರ್ಡ್ ಪಡೆಯಲು 49 ಎ ಅರ್ಜಿಯನ್ನು ಆನ್ ಲೈನ್ ನಲ್ಲಿ ತುಂಬಿ ಸಲ್ಲಿಸಬೇಕಾಗುತ್ತದೆ.
ಅದರೆ, ಇದಕ್ಕೂ ಮುನ್ನ ಪ್ಯಾನ್ ಕಾರ್ಡ್ ಪಡೆಯುವವರು ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ 7 ಅಂಶಗಳು ಇಲ್ಲಿವೆ.
1. ವೈಯಕ್ತಿಕ ಅರ್ಜಿದಾರರರು
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸದ ಮೇಲೆ ಸ್ವೀಕೃತಿ ಪತ್ರಕ್ಕೆ ಸಹಿ ಹಾಕುವುದನ್ನು ಮರೆಯಬೇಡಿ. ಅಪ್ರಾಪ್ತ ವಯಸ್ಕರು/ ಮಾನಸಿಕ ಅಸ್ವಸ್ಥರು/ಅನಾರೋಗ್ಯ ಪೀಡಿತರ ಅರ್ಜಿಯನ್ನು ಅವರ ಪ್ರತಿನಿಧಿಯಾಗಿ ನೇಮಕಗೊಂಡ ಉತ್ತರಾಧಿಕಾರಿಗಳು ಸಹಿ ಹಾಕಬೇಕು.
2. ಹಿಂದೂ ಅವಿಭಕ್ತ ಕುಟುಂಬ
ಅವಿಭಕ್ತ ಕುಟುಂಬದಿಂದ ಅರ್ಜಿಯ ಸ್ವೀಕೃತಿ ಪತ್ರಕ್ಕೆ ಕುಟುಂಬದ ಹಿರಿಯರಿಂದ ಸಹಿ ಹಾಕಿಸಬಹುದು. ಸಂಸ್ಥೆ/ ಸಂಘಟನೆ/ಸಮಿತಿಯಿಂದ ಬಂದ ಅರ್ಜಿಯ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿಸಬಹುದು.
3. ಭಾವಚಿತ್ರ
ಪ್ಯಾನ್ ಕಾರ್ಡ್ ನಲ್ಲಿ ಬಳಸುವ ಭಾವಚಿತ್ರ ಇತ್ತೀಚಿನದ್ದಾಗಿರಬೇಕು ಹಾಗೂ ಅರ್ಜಿದಾರರ ಮುಖ ಚರ್ಯೆ ಸುಲಭವಾಗಿ ಪತ್ತೆಯಾಗಿರುವಂತಿರಬೇಕು. 3.5 ಸೆಂ. ಮೀ X 2.5 ಸೆಂ. ಮೀ ಜಾಗದಲ್ಲಿ ವರ್ಣಮಯ ಭಾವಚಿತ್ರ ಅಂಟಿಸಬೇಕು. ಅಪ್ರಾಪ್ತ ವಯಸ್ಕರ ಚಿತ್ರವನ್ನು ಪ್ಯಾನ್ ಕಾರ್ಡ್ ನಲ್ಲಿ ಮುದ್ರಿಸಲಾಗುವುದಿಲ್ಲ. ಹೀಗಾಗಿ ಅರ್ಜಿ ಸ್ವೀಕೃತಿಯಲ್ಲಿ ಯಾವುದೇ ಭಾವಚಿತ್ರ ಅಂಟಿಸಬೇಕಾಗಿಲ್ಲ.
4.ಸಹಿ ಹಾಗೂ ಬೆರಳಚ್ಚು ಮುದ್ರಣ
ಎಡಗೈ ಹೆಬ್ಬೆರಳಚ್ಚು ಮುದ್ರಣ ಹಾಗೂ ಹಸ್ತಾಕ್ಷರವನ್ನು ಸಂಬಂಧಪಟ್ಟ ಜಾಗದಲ್ಲೇ ಹಾಕಬೇಕು. ಭಾವಚಿತ್ರದ ಮೇಲೆ ಸಹಿ ಹಾಕಬಾರದು. ಹೆಬ್ಬೆರಳಚ್ಚು ಮುದ್ರಣಕ್ಕೆ ಮ್ಯಾಜಿಸ್ಟ್ರೇಟ್ ಅಥವಾ ನೋಟರಿ ಅಥವಾ ಗೆಜೆಟೆಡ್ ಅಧಿಕಾರಿಗಳಿಂದ ಅಟೇಸ್ಟ್ ಮಾಡಿ ಸಹಿ, ಸೀಲ್ ಹಾಕಿಸಬೇಕು.
5. ಶುಲ್ಕ ಪಾವತಿ
ಭಾರತದಲ್ಲಿ ಪ್ಯಾನ್ ಕಾರ್ಡ್ ಅರ್ಜಿ ಶುಲ್ಕ 106 ರು (93 + ಸೇವಾ ಶುಲ್ಕ) , ವಿದೇಶಕ್ಕೆ ರವಾನಿಸಲು 985 ರು (ಸೇವಾ ಶುಲ್ಕ) . ಶುಲ್ಕ ಪಾವತಿಗೆ ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಅಥವಾ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬಹುದು. ಚೆಕ್ ಹಾಗೂ ಡಿಡಿಯಾದರೆ ಹಿಂಬದಿಯಲ್ಲಿ ಸ್ವೀಕೃತಿ ಪತ್ರದ ಸಂಖ್ಯೆ ಬರೆಯಬೇಕು.
6. ವಿಳಾಸ ಖಾತ್ರಿ ಹುಟ್ಟಿದ ದಿನಾಂಕ, ವಿಳಾಸದ ಖಾತ್ರಿ ಪುರಾವೆಗಳನ್ನು ನೀಡಬೇಕಾಗುತ್ತದೆ. ಅರ್ಜಿಯ ಕಲಂ 1ರಲ್ಲಿರುವ ಮಾಹಿತಿಯನ್ನು ತುಂಬಿ.
6. ವಿಳಾಸದ ಖಾತ್ರಿ ಪುರಾವೆ
ವಿಳಾಸ ಖಾತ್ರಿ ಹುಟ್ಟಿದ ದಿನಾಂಕ, ವಿಳಾಸದ ಖಾತ್ರಿ ಪುರಾವೆಗಳನ್ನು ನೀಡಬೇಕಾಗುತ್ತದೆ. ಅರ್ಜಿಯ ಕಲಂ 1ರಲ್ಲಿರುವ ಮಾಹಿತಿಯನ್ನು ತುಂಬಿ.
7. ದಾಖಲಾತಿ ಕಳಿಸಿ
ಮೇಲ್ಕಂಡ ದಾಖಲೆ ಹಾಗೂ ಅದಕ್ಕೆ ತಕ್ಕ ಪುರಾವೆಗಳನ್ನು ಅರ್ಜಿ ಸಮೇತ ಕೆಳಕಂಡ ವಿಳಾಸಕ್ಕೆ ಕಳಿಸಿ. Income Tax PAN Services Unit, NSDL e-Governance Infrastructure Limited, 5th floor, Mantri Sterling, Plot No. 341, Survey No. 997/8, Model Colony, Near Deep Bungalow Chowk, Pune - 411016.(kannada goodreturns.in)
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications