For Quick Alerts
ALLOW NOTIFICATIONS  
For Daily Alerts

ಕಾಲ್ಗೇಟ್ ಷೇರು - ಮುನ್ನಡೆಸಿದೆ ಉಳಿತಾಯದ ತೇರು

ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಉತ್ತಮ ಗುಣಮಟ್ಟದ, ಸಾಧನೆ ಆಧಾರಿತ, ಹೂಡಿಕೆದಾರ ಸ್ನೇಹಿಯಾಗಿದ್ದರೆ ಎಷ್ಟರ ಮಟ್ಟಿಗೆ ಲಾಭ ಗಳಿಸಿಕೊಡುತ್ತದೆ ಎನ್ನುವುದಕ್ಕೆ ಕಾಲ್ಗೇಟ್ ಪಾಲ್ಮೊಲೀವ್ ಲಿಮಿಟೆಡ್ ಉತ್ತಮ ಉದಾಹರಣೆಯಾಗಿದೆ.

By Krupal
|

ಷೇರುಪೇಟೆಯಲ್ಲಿ ಹೂಡಿಕೆ ಮಾಡಿದಲ್ಲಿ ಯಾವ ಮಟ್ಟದ ಲಾಭವನ್ನು ಗಳಿಸಬಹುದು? ಹೂಡಿಕೆಗೆ ಆಯ್ಕೆ ಮಾಡಿಕೊಂಡ ಕಂಪನಿಯು ಉತ್ತಮ ಗುಣಮಟ್ಟದ, ಸಾಧನೆ ಆಧಾರಿತ, ಹೂಡಿಕೆದಾರ ಸ್ನೇಹಿಯಾಗಿದ್ದರೆ ಎಷ್ಟರ ಮಟ್ಟಿಗೆ ಲಾಭ ಗಳಿಸಿಕೊಡುತ್ತದೆ ಎನ್ನುವುದಕ್ಕೆ ಕಾಲ್ಗೇಟ್ ಪಾಲ್ಮೊಲೀವ್ ಲಿಮಿಟೆಡ್ ಉತ್ತಮ ಉದಾಹರಣೆಯಾಗಿದೆ. ಕಾಲ್ಗೇಟ್ ಪಾಲ್ಮೊಲಿವ್ ಕಂಪನಿಯು ಸೆಪ್ಟೆಂಬರ್ 2015 ರಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆಯು ಒಂದು ಸಾವಿರದ ಮೇಲಿದ್ದು, ನಂತರ ಷೇರಿನ ಬೆಲೆಯು ಕುಸಿಯುತ್ತಾ ರೂ. 800ರ ಗಡಿ ಒಳಗೆ ಕುಸಿಯಿತು.

ವ್ಯಾಲ್ಯೂ ಪಿಕ್

ವ್ಯಾಲ್ಯೂ ಪಿಕ್

2015ರಲ್ಲಿ ಹೂಡಿಕೆ ಮಾಡಿದವರಲ್ಲಿ ಷೇರಿನ ಚಟುವಟಿಕೆ ಚುರುಕಾಗಲಿಲ್ಲವೇಕೆ? ಎಂಬ ಪ್ರಶ್ನೆ ಸಹಜವಾಗಿದ್ದರೆ ಮತ್ತೆ ಕೆಲವರು ಕೇವಲ ರೂ. 1ರ ಮುಖಬೆಲೆಯ ಷೇರಿಗೆ ಒಂದು ಸಾವಿರ ತೆರಬೇಕೆ? ಕಂಪನಿಯು ಮುಂದೆ ಪ್ರಗತಿಕಾಣಬಹುದೇ? ಮುಂತಾದ ಪ್ರಶ್ನಾರ್ಥಕ ಚಿಂತನೆಗೊಳಗಾದರು. ವಿಶ್ಲೇಷಣೆಗಳು ಸಣ್ಣ ಹೂಡಿಕೆದಾರರಲ್ಲಿ, ಪೇಟೆಗಳು ಗರಿಷ್ಟ ಮಟ್ಟದಲ್ಲಿದ್ದಾಗ ಆ ಷೇರನ್ನು ಕೊಳ್ಳುವ ಶಿಫಾರಸುಗಳು ಹೆಚ್ಚಾಗಿ, ಆಸಕ್ತಿಯಿಲ್ಲದಿದ್ದರು ಕೊಳ್ಳಲು ಮುಂದಾಗುವಂತೆ ಮಾಡುತ್ತದೆ. ಅದೇ ಷೇರಿನ ಬೆಲೆಯು ಕನಿಷ್ಟಕ್ಕೆ ಕುಸಿದಿರುವಾಗ ಷೇರು ಕೊಳ್ಳಲು ಎಲ್ಲಾ ಕಡೆಯಿಂದಲೂ ನಕಾರಾತ್ಮಕವಾದ ಅಭಿಪ್ರಾಯ ಬರುವುದರಿಂದ ಕೊಳ್ಳುವ ನಿರ್ಧಾರದಿಂದ ದೂರವಿರುವಂತೆ ಮಾಡುತ್ತದೆ. ಆದರೆ ಷೇರುಪೇಟೆಯಲ್ಲಿ ಯಶಸ್ಸು ಕಾಣಬೇಕಾದರೆ 'ವ್ಯಾಲ್ಯೂ ಪಿಕ್' ರೀತಿಯ ಚಟುವಟಿಕೆ ಅಳವಡಿಕೆಯೇ ಮೂಲವಾಗಿರುತ್ತದೆ, ಅವಶ್ಯಕವೂ ಆಗಿರುತ್ತದೆ.

ಕಾಲ್ಗೇಟ್ ಷೇರು ಗೌರವಕ್ಕೆ ಪಾತ್ರ

ಕಾಲ್ಗೇಟ್ ಷೇರು ಗೌರವಕ್ಕೆ ಪಾತ್ರ

ಕಾಲ್ಗೇಟ್ ಕಂಪನಿಯ ಇತಿಹಾಸವನ್ನರಿತಾಗ ಸಮಾಧಾನದ ಉತ್ತರ ಸಿಗಬಹುದು. ಈ ಕಂಪನಿಯು ಭಾರತದಲ್ಲಿ 1978ರಲ್ಲಿ ಅಂದಿನ ಫೆರಾ ನಿಯಮದಡಿ 11.79 ಷೇರುಗಳನ್ನು ಪ್ರತಿ ಷೇರಿಗೆ ರೂ. 15 ರಂತೆ ವಿತರಿಸಿತು. ನಂತರದಲ್ಲಿ
ಕಂಪನಿಯು 1982 ರಲ್ಲಿ, 1985ರಲ್ಲಿ, 1987ರಲ್ಲಿ, 1989ರಲ್ಲಿ, 1994ರಲ್ಲಿ 1:1ರ ಅನುಪಾತದ ಬೋನಸ್ ಷೇರು ವಿತರಿಸಿ ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಯಿತು. 1991ರಲ್ಲಿ 3:5
ಅನುಪಾತದ ಬೋನಸ್ ಷೇರು ವಿತರಿಸಿತು. ಅಂದರೆ ಮೊದಲ ವಿತರಣೆಯಲ್ಲಿ 1978ರಲ್ಲಿ 100 ಷೇರು ಪಡೆದವರ
ಹೂಡಿಕೆ 1994ರವರೆಗೆ ಐವತ್ತು ಪಟ್ಟು ಬೆಳೆದಿದೆ. ಇದರೊಂದಿಗೆ ಅಧಿಕ ಲಾಭಾಂಶವನ್ನು ನೀಡಿದೆ. ಈ ಕಂಪನಿಯ ಷೇರು ಬಂಡವಾಳವು ಆರಂಭದ ಎರಡು ಕೋಟಿಯಿಂದ ರೂ. 136 ಕೋಟಿಗೆ ಈ ಅವಧಿಯಲ್ಲಿ ತಲುಪಿದ್ದು, ಇದರಲ್ಲಿ ಸಿಂಹ ಪಾಲು ಬೋನಸ್ ಷೇರುಗಳದ್ದಾಗಿದೆ. ಹಾಗಾಗಿ ಸಣ್ಣ ಹೂಡಿಕೆದಾರರ ಅಭಿಮಾನಿ ಷೇರಾಗಿದೆ. ಈ ಕಾರಣದಿಂದ ಇಂದಿಗೂ ಓಲ್ಡ್ ಜನರೇಷನ್ ಹೂಡಿಕೆದಾರರಲ್ಲಿ ಕಾಲ್ಗೇಟ್ ಷೇರು ಹೆಚ್ಚಿನ ಗೌರವಕ್ಕೆ ಪಾತ್ರವಾಗಿದೆ. ಕಂಪನಿಯ ಷೇರು ಬಂಡವಾಳವು ಗಜಗಾತ್ರಕ್ಕೆ ಬೆಳೆದ ಕಾರಣ ಮತ್ತು ಕಂಪನಿಯ ಹೊಂದಿರುವ ಮೀಸಲು ನಿಧಿಯನ್ನು ಸದುಪಯೋಗ ಪಡಿಸಲು ಈ ಕಂಪನಿಯು 2007ರಲ್ಲಿ ತನ್ನ ಷೇರುದಾರರ ಹೂಡಿಕೆಯಾದ ಪ್ರತಿ ಷೇರಿನ ರೂ. 10ರಲ್ಲಿ ರೂ. 9ನ್ನು ಹಿಂದಿರುಗಿಸಿತು. ಈ ಮೂಲಕ ರೂ. 122 ಕೋಟಿ ಹಣವನ್ನು ಹೂಡಿಕೆದಾರರಿಗೆ ಹಿಂದಿರುಗಿಸಿದೆ. ಇಂತಹ ಕ್ರಮ ಕೈಗೊಂಡ ಪ್ರಥಮ ಕಂಪನಿಯಾಯಿತು. ಈ ರೀತಿ ಬಂಡವಾಳ ಇಳಿಸಿಕೊಂಡ ನಂತರ 2015ರಲ್ಲಿ ಮೀಸಲು ನಿಧಿಯಿಂದ ಮತ್ತೊಮ್ಮೆ 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿ ವಿತರಿಸಿದೆ. ಈಗ ರೂ. 27.20 ಕೋಟಿ ಬಂಡವಾಳ ಹೊಂದಿರುವ ಕಂಪನಿಯಲ್ಲಿ ಸಧ್ಯ ರೂ. 992 ಮೀಸಲು ನಿಧಿ ಸಂಗ್ರಹವಾಗಿದೆ.

ಬೋನಸ್ ಷೇರು, ಡಿವಿಡೆಂಡ್ ಲಭ್ಯ

ಬೋನಸ್ ಷೇರು, ಡಿವಿಡೆಂಡ್ ಲಭ್ಯ

ಕಳೆದ ತ್ರೈಮಾಸಿಕದ ಫಲಿತಾಂಶವು ಪ್ರೋತ್ಸಾಹದಾಯಿಕವಾಗಿರದ ಕಾರಣ ಷೇರಿನ ಬೆಲೆಯಲ್ಲಿ ಕುಸಿತ ಕಂಡು ನಂತರ ಚೇತರಿಕೆ ಹಾದಿಯಲ್ಲಿದೆ. ಕೇವಲ ಆರು ಕೋಟಿಯಷ್ಟು ಷೇರು ಮಾತ್ರ ಸಾರ್ವಜನಿಕರಲ್ಲಿದ್ದು, ಉಳಿದಂತೆ ಎಲ್ಐಸಿ ಆಫ್ ಇಂಡಿಯಾ, ಇತರೆ ವಿಮಾ ಕಂಪನಿಗಳು, ಮ್ಯುಚುಯಲ್ ಫಂಡ್ ಗಳು, ಫೈನಾನ್ಷಿಯಲ್ ಇನ್ಸ್ಟಿಟ್ಯುಟ್ಸ್, ಯುಟಿಐ ಮುಂತಾದ ವಿತ್ತೀಯ ಸಂಸ್ಥೆಗಳು ಈ ಕಂಪನಿಯ ಷೇರನ್ನು ಹೊಂದಿವೆ. ಹಾಗಾಗಿ ಚಲಾವಣೆಗೆ ಲಭ್ಯವಿರುವ ಷೇರುಗಳ ಸಂಖ್ಯೆ ಕಡಿಮೆ ಇರುವುದರಿಂದ ರೂ. 1ರ ಮುಖಬೆಲೆಯ ಷೇರು ಈಗಲೂ ಒಂದು ಸಾವಿರದ ಸಮೀಪವಿದೆ. ಈ ಕಂಪನಿಯು ತನ್ನ ಷೇರುದಾರರಿಗೆ ಉತ್ತಮ ಕಾರ್ಪೊರೇಟ್ ಫಲಗಳನ್ನು ಬೋನಸ್ ಷೇರು, ಡಿವಿಡೆಂಡ್ ಮೂಲಕ ನೀಡುವ ಚಾರಿತ್ರ್ಯವನ್ನು ಹೊಂದಿರುವುದು ಹೂಡಿಕೆದಾರರ ಆಸಕ್ತಿಗೆ ಕಾರಣವಾಗಿದೆ.

ದೀರ್ಘಕಾಲೀನ ಚಿಂತನೆ

ದೀರ್ಘಕಾಲೀನ ಚಿಂತನೆ

ಈಗಿನ ದಿನಗಳಲ್ಲಿ ಎಲ್ಲವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದರಿಂದ ಪೇಟೆಯಲ್ಲಿ ಕಂಪನಿಗಳ ಸಾಧನೆಗಿಂತ ತಾನು ಹೂಡಿಕೆ ಮಾಡಿದ ಹಣಕ್ಕೆ ಬರುವ ಲಾಭದತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಇದು ಪೇಟೆಯಲ್ಲಿ ರಭಸದ, ಅನಿರೀಕ್ಷಿತ ಏರಿಳಿತಗಳನ್ನು ಪ್ರದರ್ಶಿಸುವಂತೆ ಮಾಡುತ್ತದೆ. ಷೇರಿನ ಬೆಲೆಗಳು ಕುಸಿತದಲ್ಲಿದ್ದಾಗ ಮಾತ್ರ ದೀರ್ಘಕಾಲೀನ ಚಿಂತನೆಯಿಂದ ಇಂತಹ ಉತ್ತಮ ಕಂಪೆನಿಗಳಲ್ಲಿ ಹೂಡಿಕೆ ಮಾಡಿದಲ್ಲಿ ಮಾತ್ರ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆಯಿಂದ ಬೆಳೆಯಲು ಸಾಧ್ಯ.

Read more about: share stock sensex
English summary

Colgate share: Steered More Savings

The company has chosen to invest in high-quality, performance-based, investor will earn a profit on the extent Colgate palmoliv Ltd is a good example.
Story first published: Monday, April 17, 2017, 10:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X