For Quick Alerts
ALLOW NOTIFICATIONS  
For Daily Alerts

'ಆಫರ್ ಫಾರ್ ಸೇಲ್' ಹೂಡಿಕೆದಾರ ಸ್ನೇಹಿ ಯೋಜನೆ ಹೇಗೆ?

ದೇಶದ ಉದ್ಯಮಗಳ ಮೇಲೆ ಹಣದ ಅಗತ್ಯತೆ ಹೆಚ್ಚುವಂತಾಗಿ, ಸ್ಪರ್ಧಾತ್ಮಕವಾದ ಸಂಪನ್ಮೂಲ ಸಂಗ್ರಹಣೆಗೆ ದಾರಿಯಾಯಿತು. ಇದು ದೇಶದ ಆರ್ಥಿಕ ವಲಯದಲ್ಲಿ ಮಿಂಚು ಸಂಚರಿಸುವಂತಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ಚುರುಕು ಮೂಡಿಸಿತು.

By K G Krupal
|

ಜಾಗತೀಕರಣದ ನಂತರ ದೇಶದ ಪ್ರಗತಿಯನ್ನು ವಿದೇಶಗಳು ಗಮನಹರಿಸಿದ ಕಾರಣ ಇಲ್ಲಿನ ಮಾರ್ಕೆಟ್ ಸೈಜ್ ಅತಿ ದೊಡ್ಡದಾದ ಕಾರಣ ವ್ಯಾವಹಾರಿಕ ದೃಷ್ಟಿಯಿಂದ ವಿಶ್ವದ ಬೃಹತ್ ಕಂಪನಿಗಳು ಸಹ ನಮ್ಮ ದೇಶದಲ್ಲಿ ಉದ್ಯಮಗಳನ್ನು ನಡೆಸಲು ಆಸಕ್ತಿ ತೋರಿದವು. ಇದು ದೇಶದ ಉದ್ಯಮಗಳ ಮೇಲೆ ಹಣದ ಅಗತ್ಯತೆ ಹೆಚ್ಚುವಂತಾಗಿ, ಸ್ಪರ್ಧಾತ್ಮಕವಾದ ಸಂಪನ್ಮೂಲ ಸಂಗ್ರಹಣೆಗೆ ದಾರಿಯಾಯಿತು. ಇದು ದೇಶದ ಆರ್ಥಿಕ ವಲಯದಲ್ಲಿ ಮಿಂಚು ಸಂಚರಿಸುವಂತಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ಚುರುಕು ಮೂಡಿಸಿತು.

ಇವುಗಳ ಮಧ್ಯೆ ಕೇಂದ್ರ ಸರ್ಕಾರದ ಡಿಸ್ ಇನ್ವೆಸ್ಟ್ ಮೆಂಟ್ ಸಹ ಪೇಟೆಯಲ್ಲಿ ಚೇತರಿಕೆ ಮೂಡಿಸಿತು. ಪಬ್ಲಿಕ್ ಸೆಕ್ಟರ್ ಕಂಪೆನಿಗಳಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಸ್ಟೇಕ್ ನ್ನು ಸಾರ್ವಜನಿಕವಾಗಿ ಮಾರಾಟ ಮಾಡಿ ಅದರ ಮೂಲಕ ತನ್ನ ಬಂಡವಾಳ ಹಿಂತೆಗೆತದ ಗುರಿಯನ್ನು ತಲುಪುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲಿದೆ. ಸರ್ಕಾರ ತನ್ನ ಬಂಡವಾಳ ಹಿಂತೆಗೆತ ಯೋಜನೆಯಡಿ ಪವರ್ ಫೈನಾನ್ಸ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸೇಲ್, ಎನ್ ಹೆಚ್ ಪಿ ಸಿ, ಎನ್ ಟಿ ಪಿ ಸಿ ಷೇರುಗಳನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡ ಕಾರಣ ಸಾರ್ವಜನಿಕ ವಲಯದ ಪವರ್ ಫೈನಾನ್ಸ್, ರೂರಲ್ ಎಲೆಕ್ಟ್ರಿ ಫಿಕೇಷನ್ ಕಾರ್ಪೊರೇಷನ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗಳು ತ್ವರಿತವಾದ ಇಳಿಕೆಯನ್ನು ದಿನದ ಮಧ್ಯಂತರದಲ್ಲಿ ಕಂಡವು.

ಈ ಹಿಂತೆಗೆತ ಮತ್ತು ಸೆಬಿ ನಿಯಮಗಳ ಪ್ರಕಾರ ಪ್ರಮೋಟರ್ ಸ್ಟೇಕ್ ಸೆಲ್ ಗಳನ್ನೂ ತ್ವರಿತವಾಗಿ ಜಾರಿಗೊಳಿಸಲು ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ವಿಶೇಷವಾದ ಕೌಂಟರ್ 'ಒಎಫ್ಎಸ್ ವಿಂಡೋ' ಮೂಲಕ ನಡೆಸಲಾಗುವುದು. ಇದು ವಿತರಣೆಯನ್ನು ತ್ವರಿತ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ವಹಿಸಲು ಸಾಧ್ಯವಾಗುವಂತೆ ಮಾಡಿದೆ.

ಏನಿದು ಆಫರ್ ಫಾರ್ ಸೇಲ್ ?

ಏನಿದು ಆಫರ್ ಫಾರ್ ಸೇಲ್ ?

ಆಫರ್ ಫಾರ್ ಸೇಲ್ ವ್ಯವಸ್ಥೆಯು ಅತ್ಯಂತ ಸರಳವಾದ ಪ್ರಕ್ರಿಯೆಯಾಗಿದ್ದು, ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸುತ್ತಿರುವ ಹೂಡಿಕೆದಾರರು ವಿತರಣೆಯಾಗುವ ಮುನ್ನವೇ ತಮ್ಮಬ್ರೋಕರ್/ಸಬ್-ಬ್ರೋಕರ್ /ಫ಼್ರಾಂಚೈಸೀ/ಯಲ್ಲಿನ ತಮ್ಮ ಟ್ರೇಡಿಂಗ್ ಅಕೌಂಟ್ ನಲ್ಲಿ ಹಣ ಜಮೆ (ಕ್ರೆಡಿಟ್ ಬ್ಯಾಲನ್ಸ್) ಹೊಂದಿರಬೇಕು. ಕ್ರೆಡಿಟ್ ಬ್ಯಾಲನ್ಸ್ ಅನುಗುಣವಾಗಿ ಅಪ್ಪ್ಲೈ ಮಾಡಬೇಕೆಂದಿರುವಷ್ಟು ಷೇರುಗಳನ್ನು ತಮ್ಮ ಬ್ರೋಕರ್ ರವರಿಗೆ ತಿಳಿಸಿದಲ್ಲಿ ಅವರು ಅದರಂತೆ ಅಪ್ಲೈ ಮಾಡುವರು. ಇಲ್ಲಿ ಮೊದಲು ಅಪ್ಲೈ ಮಾಡಿದವರಿಗೆ ಮೊದಲ ಆಧ್ಯತೆ ಎಂಬುದಿಲ್ಲ. ಇಲ್ಲಿರುವುದು ಪ್ರೈಸ್ ಪ್ರೈಯಾರಿಟಿ ಅಂದರೆ ಹೆಚ್ಚು ಬೆಲೆಯಲ್ಲಿ ಬಿಡ್ ಮಾಡಿದವರಿಗೆ ಮೊದಲ ಆಧ್ಯತೆಯಿರುತ್ತದೆ. ಈ ಮೂಲಕ ಬಿಡ್ ಮಾಡಿದವರಿಗೆ ಟಿ+2 ಆಧಾರದ ಮೇಲೆ, ಸೆಕಂಡರಿ ಮಾರ್ಕೆಟ್ ನಂತೆ ಪೇ ಇನ್ ಮತ್ತು ಪೇ ಔಟ್ ಮಾಡಲಾಗುವುದು. ಈ ಷೇರುಗಳಿಗೆ ಯಾವುದೇ ಲಾಕ್ ಇನ್ ಇರುವುದಿಲ್ಲ. ಈ ಕಾರಣದಿಂದಾಗಿ ಹಿಂದಿನ ವರ್ಷಗಳಲ್ಲಿ ವಿತರಣೆಯಾದ ಹಿಂದ್.ಕಾಪರ್, ಎಂ.ಎಂ.ಟಿ.ಸಿ. ಮುಂತಾದವುಗಳು ಪೇಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ವಿತರಿಸಿದ ಕಾರಣ ಮಾರಾಟದ ಒತ್ತಡದಿಂದ ಹೆಚ್ಚಿನ ಕುಸಿತಕ್ಕೊಳಗಾದವು. ಆದರೆ ಈಗ ವಿತರಿಸಲಾಗುತ್ತಿರುವ ಆಫರ್ ಫಾರ್ ಸೇಲ್ ಗಳು ಪೇಟೆಯ ದರಕ್ಕೆ ಸಮೀಪದಲ್ಲಿ ಆಗುತ್ತಿರುವುದರಿಂದ ಸೆಕಂಡರಿ ಮಾರ್ಕೆಟ್ ನಲ್ಲಿ ಹೆಚ್ಚು ಏರಿಳಿತಕ್ಕೆ ಆಸ್ಪದವಾಗಿಲ್ಲ. ಈ ರೀತಿಯ ವಿತರಣೆಯಲ್ಲಿ ಪಬ್ಲಿಕ್ ಸೆಕ್ಟರ್ ಕಂಪನಿಗಳ ಬಂಡವಾಳ ಹಿಂತೆಗೆತದ ವಿತರಣೆಯಾಗಿದ್ದಲ್ಲಿ ಸಾಮಾನ್ಯವಾಗಿ ಸಣ್ಣ ಹೂಡಿಕೆದಾರರಿಗೆ ಶೇ. 5ರಷ್ಟು ರಿಯಾಯಿತಿಯೂ ಲಭ್ಯವಾಗುವ ಸಾಧ್ಯತೆ ಇದೆ. ಈ ಅಂಶವನ್ನು ಪ್ರತಿ ವಿತರಣೆಯಲ್ಲಿ ಗಮನಿಸಿ ನಿರ್ಧರಿಸಬೇಕು. ಈ ವಿಧದ ವಿತರಣೆಯಲ್ಲಿ ಹೂಡಿಕೆದಾರರಿಗೆ ತಮ್ಮ ಹಣವನ್ನು ಹೆಚ್ಚು ದಿನ ಬ್ಲಾಕ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲಾಟ್ ಆದ ಷೇರುಗಳನ್ನು ಅಗತ್ಯ ಬಿದ್ದಲ್ಲಿ ಅವಕಾಶವಿದ್ದಲ್ಲಿ, ಬೇಕಾದಾಗ ಮಾರಾಟಕ್ಕೆ ಅವಕಾಶವಿದ್ದು, ಷೇರುಪೇಟೆಯ ಲಿಕ್ವಿಡಿಟಿ ಸೌಲಭ್ಯವನ್ನುಎತ್ತಿ ಹಿಡಿದಿದೆ. ಒಟ್ಟಿನಲ್ಲಿ ಆಫರ್ ಫಾರ್ ಹೂಡಿಕೆದಾರ ಸ್ನೇಹಿಯಾಗಿದೆ.

ವ್ಯಾವಹಾರಿಕ/ಲಾಭದಾಯಕ ದೃಷ್ಟಿ

ವ್ಯಾವಹಾರಿಕ/ಲಾಭದಾಯಕ ದೃಷ್ಟಿ

ಎಲ್ಲಾ ಆಫರ್ ಫಾರ್ ಸೇಲ್ ವಿತರಣೆಗಳು ಲಾಭದಾಯಕವೆಂದೇನಿಲ್ಲ. ಕಂಪನಿಗಳು ವಿತರಿಸುವ ಷೇರಿನ ಬೆಲೆಯು ಕನಿಷ್ಟದಲ್ಲಿದೆಯೇ ಅಥವಾ ಗರಿಷ್ಟದಲ್ಲಿದೆಯೇ ಎಂಬುದು ಮುಖ್ಯ. ಕಾರಣ ಎಲ್ಲವು ವ್ಯಾವಹಾರಿಕ ದೃಷ್ಟಿಯಿಂದ ನಡೆಸುವ ಕ್ರಿಯೆಗಳಾದ್ದರಿಂದ ಕಂಪನಿಗಳು ಒಳ್ಳೆಯವು, ಸದೃಢವು ಆಗಿದ್ದರು ಸಹ ವಿತರಣೆ ಬೆಲೆ ಹೆಚ್ಚಾಗಿದ್ದಲ್ಲಿ ಹೂಡಿಕೆಯನ್ನು ಅಲ್ಪಾವಧಿಗೆ ಎಂದು ಮಾಡಿದ್ದರೂ, ಲಾಭ ಗಳಿಸಲು ಒತ್ತಾಯ ಪೂರ್ವಕವಾಗಿ ದೀರ್ಘಕಾಲೀನವಾಗಿಸಬಹುದು. 2015ರ ಏಪ್ರಿಲ್ ನಲ್ಲಿ ರೂರಲ್ ಎಲೆಕ್ಟ್ರಿ ಫಿಕೇಷನ್ ಕಾರ್ಪೊರೇಷನ್ ಕಂಪನಿಯ 4.93 ಕೋಟಿ ಷೇರುಗಳು, ಪ್ರತಿ ಷೇರಿಗೆ ರೂ.315ರಂತೆ ವಿತರಿಸಲಾಯಿತು. ಈ ಬೆಲೆಯನ್ನು ಷೇರಿನ ಬೆಲೆ ತಲುಪಿದಾಯಿತಾದರೂ, ಕಂಪನಿ ವಿತರಿಸಿದ 1:1 ರ ಅನುಪಾತದ ಬೋನಸ್ ಷೇರಿನ ಕಾರಣ ಹೂಡಿಕೆ ಹೆಚ್ಚಿನ ಸಮಯದ ನಂತರ ಲಾಭದಾಯಕವಾಗಿದೆ. ಅದೇ ರೀತಿ ಈ ವರ್ಷದ ಆರಂಭದಲ್ಲಿ ಪ್ರತಿ ಷೇರಿಗೆ ರೂ. 365ರಂತೆ ಷೇರು ವಿತರಣೆಯಾದ ಮೊಯಿಲ್ ಲಿಮಿಟೆಡ್ ಕಂಪನಿಯ ಷೇರು ಈಗ ರೂ. 318ರ ಸಮೀಪವಿದೆ.

ಷೇರು ಮಾರಾಟ ಯಾವಾಗ ಉತ್ತಮ?

ಷೇರು ಮಾರಾಟ ಯಾವಾಗ ಉತ್ತಮ?

ಕಂಪೆನಿಗಳಾಗಲಿ, ಸರ್ಕಾರಗಳಾಗಲಿ ಷೇರುಗಳನ್ನು ಮಾರಾಟ ಮಾಡುವುದು ಪೇಟೆಯ ದರಗಳು ಉತ್ತುಂಗದಲ್ಲಿದ್ದಾಗ ಮಾತ್ರ ಎಂಬುದು ಸದಾ ನೆನಪಿರಲಿ. ಹೂಡಿಕೆ ಮಾಡುವ ಕಂಪನಿಯ ಷೇರಿನ ಏರಿಳಿತಗಳ ಬಗ್ಗೆ ಅರಿತು, ಯೋಗ್ಯವೆನಿಸಿದಲ್ಲಿ ಮಾತ್ರ ಆಯ್ಕೆ ಮಾಡಿಕೊಳ್ಳಿರಿ. ನಿರ್ಧಾರಗಳು ಭಾವನಾತ್ಮಕವಾಗಿರದೆ ವಾಸ್ತವಾಂಶಗಳ ಆಧಾರದ ಮೇಲಾದರೆ ಫಲಿತಾಂಶ ಉತ್ತಮ.

Read more about: stock share sensex ಷೇರು
English summary

What is Offer for sale? how it is Investor friendly?

OFFER FOR SALE is special facility extended by the Stock Exchanges to help managements of the Companies to reduce their stake in the company, in accordance with sebi guidelines. Central Government disinvest process is done through this OFS route. This is more cost effective & time saving process, without blocking the investors funds.
Story first published: Tuesday, April 25, 2017, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X