ಚಿನ್ನದ ಮೇಲೆ ಹೂಡಿಕೆ ಮಾಡಲು ಹೊರಟಿದ್ದೀರಾ? ಇಲ್ಲೊಮ್ಮೆ ನೋಡಿ...

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಚಿನ್ನದ ದರ ಯಾವಾಗಲೂ ಏರಿಳಿತಕ್ಕೆ ಒಳಗಾಗುತ್ತಿರುತ್ತದೆ. ಭಾರತದಲ್ಲಿ ಚಿನ್ನದ ದರಕ್ಕೂ ಹಬ್ಬಕ್ಕೂ ಸಂಬಂಧವಿದೆ ಎಂಬುದನ್ನು ನಾವು ಒಪ್ಪಿಕೊಂಡಿದ್ದೇವೆ. ಚಿನ್ನಕ್ಕೆ ಹೋಲಿಕೆ ಮಾಡಿದರೆ ಹೆಚ್ಚಿನ ಸಂದರ್ಭಗಳಲ್ಲಿ ಈಕ್ವಿಟಿ, ಫಿಕ್ಸೆಡ್ ಡಿಪಾಸಿಟ್ ಮತ್ತು ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಹೂಡಿಕೆಗಳೇ ಹೆಚ್ಚಿನ ಆದಾಯ ತಂದು ಕೊಡುತ್ತವೆ.

  ವಿಶೇಷವಾಗಿ ದೀಪಾವಳಿ ಸಂದರ್ಭದಲ್ಲಿಯೂ ಬಗೆ ಬಗೆಯ ಹೂಡಿಕೆಗೆ ಅವಕಾಶ ಒದಗಿ ಬರುತ್ತದೆ. ಹಾಗಾದರೆ ಈಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದೆ? ಎಂಬ ಪ್ರಶ್ನೆಯೂ ಮೂಡಬಹುದು. ಬೇಡ, ಅಂಥ ಯಾವ ಮಹತ್ತರವಾದ ರಿಟರ್ನ್ಸ್ ಇದರಿಂದ ಬರಲು ಅಸಾಧ್ಯ ಎಂಬುದನ್ನು ನಿರೂಪಣೆ ಮಾಡಲು ಹಲವಾರು ಕಾರಣಗಳು ನಮಗೆ ಸಿಗುತ್ತವೆ. ಏನಿದು ಗೋಲ್ಡ್ ಮಾನಿಟೈಸೇಶನ್ ಯೋಜನೆ?

  1. ಅಮೆರಿಕದ ಫೆಡರಲ್ ಬ್ಯಾಂಕ್ ಪರಿಣಾಮ

  ಭಾರತದ ಚಿನ್ನದ ಮಾರುಕಟ್ಟೆ ಮೇಲೆ ಅಂತಾರಾಷ್ಟ್ರೀಯ ಮಾರುಕಟ್ಟೆ ಪರಿಣಾಮ ಉಂಟುಮಾಡುತ್ತದೆ. ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿ ದರ ಕೂಡ ಏರಿಳಿತಕ್ಕೆ ಒಳಗಾಗುತ್ತದೆ. ಇದರ ಪರಿಣಾಮ ಜನರು ಆಸ್ತಿಯನ್ನು ಮಾರಾಟ ಮಾಡಲು, ಇಲ್ಲವೇ ಖರೀದಿಸಲು ಮುಂದಾಗುತ್ತಾರೆ. ಅದು ಚಿನ್ನವೂ ಆಗಿರಬಹುದು.

  2. ಭೌಗೋಳಿಕ, ರಾಜಕೀಯ ಬದಲಾವಣೆ ಮತ್ತು ಚಿನ್ನದ ದರ

  ರಾಜಕೀಯ ಮತ್ತು ಪ್ರಮುಖ ಭೌಗೋಳಿಕ ಬದಲಾವಣೆಗಳು ಸಹ ಚಿನ್ನದ ದರದ ಮೇಲೆ ಪರಿಣಾಮ ಉಂಟುಮಾಡುತ್ತದೆ. ಡೊನಾಲ್ಡ್ ಟ್ರಂಪ್ ರಾಜಕೀಯ ಬದಲಾವಣೆಗಳು ಮಾರುಕಟ್ಟೆ ಮೇಲೆ ತೀವ್ರ ಪ್ರಭಾವ ಬೀರಿದ್ದೇ ಇದಕ್ಕೆ ಸಾಕ್ಷಿ.

  3. ರುಪಾಯಿ ಮೌಲ್ಯ ಮತ್ತು ಚಿನ್ನದ ದರ

  ರುಪಾಯಿ ಮೌಲ್ಯ ಕುಸಿದರೆ ಭಾರತದಲ್ಲಿ ಚಿನ್ನ ದುಬಾರಿಯಾಗುತ್ತದೆ. ಯಾಕೆಂದರೆ ಭಾರತ ಬಹುಪಾಲು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇಲ್ಲವನ್ನು ಅವಲೋಕನ ಮಾಡಿದರೆ ಚಿನ್ನ ಹೆಚ್ಚು ಪ್ರಮಾಣದ ರಿಟರ್ನ್ಸ್ ನೀಡುವುದು ಅನುಮಾನವೆನಿಸುತ್ತದೆ. ಹೀಗಾಗಿ ಹೂಡಿಕೆದಾರರು ಷೇರು ಮಾರುಕಟ್ಟೆ ಕಡೆ ಒಲವು ತೋರುತ್ತಿದ್ದಾರೆ.

  Read more about: gold savings finance news
  English summary

  Planning To Invest In Gold?

  Gold has not given any returns as an investment in the last few years. At the same time other asset classes like equities, fixed deposits and even real estate has done much better.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more