For Quick Alerts
ALLOW NOTIFICATIONS  
For Daily Alerts

ಇಂದು ದೇಶದಾದ್ಯಂತ ಬ್ಯಾಂಕು ಮುಷ್ಕರ: ಈ 5 ಸಂಗತಿ ನೆನಪಿರಲಿ..

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳು ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಮುಷ್ಕರ ನಡೆಸಲಿವೆ. ಯಾವ ಬ್ಯಾಂಕ್ ಸೇವೆಗಳು ಲಭ್ಯ, ಅಲಭ್ಯ, ಇಂದಿನ ಮುಷ್ಕರದ ಉದ್ದೇಶ ಹಾಗೂ ಪರಿಣಾಮ ಒಳಗೊಂಡಂತೆ ಪ್ರಮುಖ ವಿಷಯಗಳು ಇಲ್ಲಿವೆ.

By Siddu
|

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಉದ್ಯೋಗಿಗಳು ಅನೇಕ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ಮುಷ್ಕರ ನಡೆಸಲಿವೆ.

 

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ವೇದಿಕೆಯಲ್ಲಿ ಒಂಬತ್ತು ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಇದು ಬ್ಯಾಂಕು ವಹಿವಾಟುಗಳಿಗೆ ಧಕ್ಕೆ ಉಂಟುಮಾಡಲಿದೆ ಎನ್ನಲಾಗಿದೆ.

ಯುಎಫ್‌ಬಿಯು ಸಂಘಟನೆಯಲ್ಲಿ 10 ಲಕ್ಷ ಉದ್ಯೋಗಿಗಳು ಸದಸ್ಯರಿದ್ದಾರೆ. ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಒತ್ತಾಯಿಸಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಯಾವ ಬ್ಯಾಂಕ್ ಸೇವೆಗಳು ಲಭ್ಯ, ಅಲಭ್ಯ, ಇಂದಿನ ಮುಷ್ಕರದ ಉದ್ದೇಶ ಹಾಗೂ ಪರಿಣಾಮ ಒಳಗೊಂಡಂತೆ ಪ್ರಮುಖ ವಿಷಯಗಳು ಇಲ್ಲಿವೆ.

ಮುಷ್ಕರ ಪರಿಣಾಮಗಳೇನು?

ಮುಷ್ಕರ ಪರಿಣಾಮಗಳೇನು?

ಇಂದಿನ ಬ್ಯಾಂಕ್ ಮುಷ್ಕರ ಸಾರ್ವಜನಿಕ ವಲಯದ ಬ್ಯಾಂಕುಗಳ ಶಾಖೆಗಳಲ್ಲಿ ಚೆಕ್ ಕ್ಲಿಯರೆನ್ಸ್, NEFT/RTGS ವಹಿವಾಟು, ಡಿಪಾಸಿಟ್ಸ್/ಠೇವಣಿಗಳ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಆನ್ಲೈನ್ ಬ್ಯಾಂಕಿಂಗ್ ವಹಿವಾಟುಗಳ ಮೇಲೆ ಮುಷ್ಕರ ಪರಿಣಾಮ ಬೀರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಖಾಸಗಿ ಬ್ಯಾಂಕುಗಳ ಸೇವೆ

ಖಾಸಗಿ ಬ್ಯಾಂಕುಗಳ ಸೇವೆ

ಐಸಿಐಸಿಐ, ಎಚ್ಡಿಎಫ್ಸಿ, ಆಕ್ಸಿಸ್ ಮತ್ತು ಕೊಟಾಕ್ ಮಹೀಂದ್ರಾ ಬ್ಯಾಂಕ್ ಮುಂತಾದ ಖಾಸಗಿ ವಲಯದ ಬ್ಯಾಂಕುಗಳ ಕಾರ್ಯಾಚರಣೆಗಳು ಎಂದಿನಂತೆ ನಡೆಯಲಿವೆ. ಚೆಕ್ ಕ್ಲಿಯರೆನ್ಸ್ ವಿಳಂಬ ಹೊರತುಪಡಿಸಿ ಬೇರೆ ಯಾವುದೇ ಸಮಸ್ಯೆಗಳು ಇರಲಾರವು ಎಂದು ನಿರೀಕ್ಷಿಸಲಾಗಿದೆ.

ಮುಷ್ಕರ ಯಾಕೆ?
 

ಮುಷ್ಕರ ಯಾಕೆ?

ಸರ್ಕಾರದ ಬಲವರ್ಧನೆ ನಡೆಯನ್ನು ವಿರೋಧಿಸುವುದರ ಜೊತೆಗೆ, ಕಾರ್ಪೋರೇಟ್ ಸಾಲಕ್ಕೆ ಸಂಬಂಧಿಸಿದ ಎನ್ಪಿಎ(NPA) ನೀತಿ, ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

ಕಾರ್ಪೊರೇಟ್ NPA ಹೊರೆ

ಕಾರ್ಪೊರೇಟ್ NPA ಹೊರೆ

ಅನಾಣ್ಯೀಕರಣದ ಸಮಯದಲ್ಲಿ ಹೆಚ್ಚುವರಿ ಕೆಲಸಕ್ಕಾಗಿ ಸರ್ಕಾರವು ಹೆಚ್ಚಿನ ಸಮಯವನ್ನು ಒದಗಿಸಬೇಕೆಂದು ಯೂನಿಯನ್ ನಾಯಕರು ಹೇಳಿದ್ದಾರೆ. ಬ್ಯಾಂಕುಗಳು ಶುಲ್ಕಗಳನ್ನು ಹೆಚ್ಚಿಸುವುದರ ಮೂಲಕ ಕಾರ್ಪೊರೇಟ್ ಎನ್ಪಿಎಗಳ ಹೊರೆಯನ್ನು ಬ್ಯಾಂಕ್ ಗ್ರಾಹಕರ ಮೇಲೆ ವಿಧಿಸಬಾರದು ಎಂದು ಅಗ್ರಹಿಸಿದ್ದಾರೆ.

ಡೇಟಾ ಸೆಂಟರ್ ಸೇವೆ

ಡೇಟಾ ಸೆಂಟರ್ ಸೇವೆ

ಮುಷ್ಕರದ ನಡುವೆಯೂ ಸಾರ್ವಜನಿಕ ವಲಯದ ಬ್ಯಾಂಕುಗಳ ಡೇಟಾ ಸೆಂಟರ್ (ಮಾಹಿತಿ ಕೇಂದ್ರಗಳು) ಮೂಲಕ ಆನ್ಲೈನ್ ವಹಿವಾಟುಗಳಿಗೆ ಅನುಕೂಲವಾಗುವಂತೆ ಮುಕ್ತವಾಗಿರುತ್ತವೆ ಎಂದು ಬ್ಯಾಂಕಿಂಗ್ ಕಾರ್ಯನಿರ್ವಾಹಕರು ತಿಳಿಸಿದ್ದಾರೆ.

English summary

Bank Strike today: 5 Things To Know

Normal banking operations have been hit as public sector bank employees went on a one-day nationwide strike today to protest against the government's proposed consolidation move, besides raising other demands.
Story first published: Tuesday, August 22, 2017, 12:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X