For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡೋದು ಹೇಗೆ?

ಪಿಎಫ್ ಚಂದಾದಾರರು ಇನ್ನುಮುಂದೆ ಮನೆಯಲ್ಲಿ ಕುಳಿತುಕೊಂಡು ಪ್ರಾವಿಡೆಂಟ್ ಫಂಡ್ (ಇಪಿಎಫ್) ವಿತ್ ಡ್ರಾ ಮಾಡಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ.

By Siddu
|

ಪಿಎಫ್ ಚಂದಾದಾರರು ಇನ್ನುಮುಂದೆ ಮನೆಯಲ್ಲಿ ಕುಳಿತುಕೊಂಡು ಪ್ರಾವಿಡೆಂಟ್ ಫಂಡ್ (ಇಪಿಎಫ್) ವಿತ್ ಡ್ರಾ ಮಾಡಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಆನ್ಲೈನ್ ಮೂಲಕ ಪಿಎಫ್ ವಿತ್ ಡ್ರಾ ಮಾಡುವ ಸೌಲಭ್ಯವನ್ನು ಕಲ್ಪಿಸಿದೆ. ಇಪಿಎಫ್ಓ ಆನ್ಲೈನ್ ಸೌಲಭ್ಯವನ್ನು ಬಳಸಿಕೊಂಡು ಸದಸ್ಯರು ಪಿಎಫ್ ಅಂತಿಮ ಪರಿಹಾರ, ಪಿಂಚಣಿ ವಿತ್ ಡ್ರಾವಲ್ ಲಾಭ ಮತ್ತು ಪಿಎಫ್ ವಿತ್ ಡ್ರಾವಲ್ ಪಡೆಯಬಹುದು. ಆದಾಗ್ಯೂ, ಈ ಆನ್ಲೈನ್ ಸೌಕರ್ಯವನ್ನು ಪಡೆಯಲು ಇಪಿಎಫ್ಓ ಚಂದಾದಾರರು ಕೆಲವು ಅವಶ್ಯಕತೆಗಳನ್ನು ಪೂರೈಸಬೇಕು. ಈ ಅವಶ್ಯಕ ವಿಧಾನಗಳ ವಿವರ ಇಲ್ಲಿದೆ.. ಪಿಎಫ್(PF) ವಿತ್ ಡ್ರಾ ಯಾವಾಗ ಮಾಡಬಹುದು?

ಯುಎಎನ್(UAN) ಸಕ್ರಿಯಗೊಳಿಸಿ

ಯುಎಎನ್(UAN) ಸಕ್ರಿಯಗೊಳಿಸಿ

ಚಂದಾದಾರರು ತಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ಸಕ್ರಿಯಗೊಳಿಸಬೇಕಾಗುತ್ತದೆ. ಜತೆಗೆ ಯುಎಎನ್ ಅನ್ನು ಸಕ್ರಿಯಗೊಳಿಸಲು ಬಳಸುವ ಮೊಬೈಲ್ ಸಂಖ್ಯೆ ಯಾವಾಗಲೂ ಕಾರ್ಯನಿರತವಾಗಿರಬೇಕು ಎಂಬುದನ್ನು ಗಮನದಲ್ಲಿರಸಬೇಕು.

ಆಧಾರ್ ವಿವರ

ಆಧಾರ್ ವಿವರ

ಸದಸ್ಯರ ಆಧಾರ್ ವಿವರಗಳನ್ನು ಇಪಿಎಫ್ಒ ದತ್ತಾಂಶದಲ್ಲಿರಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಯುಐಡಿಎಐ ಯಿಂದ ಇಕೆವೈಸಿ ಪರಿಶೀಲಿಸುವುದಕ್ಕಾಗಿ ಒಟಿಪಿ ಆಧಾರಿತ ಸೌಲಭ್ಯವನ್ನು ಹೊಂದಿರಬೇಕು.

ಖಾತೆ ವಿವರ

ಖಾತೆ ವಿವರ

ಇಪಿಎಫ್ಒ ಡೇಟಾಬೇಸ್ ಅನುಗುಣವಾಗಿ ಸದಸ್ಯರ ಬ್ಯಾಂಕ್ ಖಾತೆ ವಿವರ ಐಎಫ್ಎಸ್ಸಿ (IFSC) ಕೋಡ್ ಒಳಗೊಂಡಂತೆ ಮಾಹಿತಿ ನೀಡಬೇಕು.

ಪ್ಯಾನ್ ವಿವರ

ಪ್ಯಾನ್ ವಿವರ

ಚಂದಾದಾರರ (ಅವರ/ಅವಳ) ಸೇವೆ 5 ವರ್ಷಕ್ಕಿಂತ ಕಡಿಮೆಯಿದ್ದರೆ ಪಿಎಫ್ ಫೈನಲ್ ಸೆಟಲ್ಮೆಂಟ್ ಕ್ಲೈಮು ಮಾಡುವುದಕ್ಕಾಗಿ ಪ್ಯಾನ್(PAN) ನಂಬರ್ ನೀಡಬೇಕು.

ಆಯ್ಕೆ ವಿಧಾನ

ಆಯ್ಕೆ ವಿಧಾನ

ಐ ವಾಂಟ್ ಟು ಅಪ್ಲೈ ಫಾರ್ (i want to apply for) ಟ್ಯಾಬ್ ಅಡಿಯಲ್ಲಿ ಪಿಎಫ್ ವಿತ್ ಡ್ರಾವಲ್, ಪಿಎಫ್ ಮುಂಗಡ ಅಥವಾ ಪಿಂಚಣಿ ವಿತ್ ಡ್ರಾವಲ್ ಹೀಗೆ ಅನೇಕ ವಿಧಗಳು ತೆರೆದುಕೊಳ್ಳುತ್ತವೆ. ಇದರಲ್ಲಿ ಯಾವುದನ್ನು ಕ್ಲೈಮ್ ಮಾಡಲು ಬಯಸುವಿರಿ ಅದನ್ನು ಆಯ್ಕೆ ಮಾಡಿ.

ಪಿಎಫ್ ವಿತ್ ಡ್ರಾವಲ್ ಅಥವಾ ಪಿಂಚಣಿ ವಿತ್ ಡ್ರಾವಲ್ ಮುಂತಾದ ಸೇವೆಗಳಿಗೆ ನೀವು ಅರ್ಹತೆ ಹೊಂದಿಲ್ಲದಿದ್ದರೆ, ಆ ಆಯ್ಕೆಯನ್ನು ಡ್ರಾಪ್-ಡೌನ್ ಮೆನುವಿನಲ್ಲಿ ತೋರಿಸಲಾಗುವುದಿಲ್ಲ.

ಸಬ್ಮಿಟ್ ಮಾಡಿ

ಸಬ್ಮಿಟ್ ಮಾಡಿ

ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?ಪಿಎಫ್ ಬ್ಯಾಲೆನ್ಸ್ ತಕ್ಷಣದಲ್ಲಿ ಚೆಕ್ ಮಾಡುವ 5 ವಿಧಾನ ಗೊತ್ತೆ?

English summary

Online EPF Withdrawal: How To Do It In Five Steps

Employees' Provident Fund Organisation (EPFO) has created an online facility through which its members can withdraw their employee provident fund (EPF) sitting at home.
Story first published: Friday, August 4, 2017, 13:15 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X