ದೇಶಾದ್ಯಂತ ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹಣ ಖರ್ಚು ಮಾಡುವುದು ಮತ್ತು ಸಂಪಾದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ದೇಶಾದ್ಯಂತ ದೀಪಾವಳಿ ಹಬ್ಬದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಹಣ ಖರ್ಚು ಮಾಡುವುದು ಮತ್ತು ಸಂಪಾದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನು ದೃಷ್ಟಿಯಲ್ಲಿಟ್ಟುಕೊಂಡು, ಈ ದಿವಸ ಷೇರು ಮಾರುಕಟ್ಟೆಯಲ್ಲಿ ವಿಶೇಷ ವಹಿವಾಟು ನಡೆಸಲಾಗುತ್ತದೆ. ಇದನ್ನು 'ಮುಹೂರ್ತ ಟ್ರೇಡಿಂಗ್' ಎಂದು ಕರೆಯಲಾಗುತ್ತದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಎಲ್ಪಿಜಿ(LPG) ಕನೆಕ್ಷನ್ ಪಡೆಯುವುದು ಹೇಗೆ?
ಮುಹೂರ್ತ ಟ್ರೇಡಿಂಗ್ ವಿಶೇಷ
ಈ ವಿಶೇಷ ಮುಹೂರ್ತ ಟ್ರೇಡಿಂಗ್ ಸಮಯದಲ್ಲಿ, ಜನರು ದೀರ್ಘಕಾಲಕ್ಕಾಗಿ ಷೇರುಗಳನ್ನು ಖರೀದಿಸುತ್ತಾರೆ. ಈ ಬಾರಿ ಗುರುವಾರ ಸಂಜೆ 6.30 ರಿಂದ 7.30 ರವರೆಗೆ ವಿಶೇಷ ಮುಹೂರ್ತ ಟ್ರೇಡಿಂಗ್ ಗಾಗಿ ಷೇರು ಮಾರುಕಟ್ಟೆ ತೆರೆದುಕೊಳ್ಳಲಿದೆ. ಹಿಂದು ಪಂಚಾಗ ಸಂವತ್ಸರ 2074ಕ್ಕೆ ಅನುಗುಣವಾಗಿ ಮುಹೂರ್ತ ನಿಗದಿಪಡಿಸಲಾಗಿದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಇಡೀ ವರ್ಷ ಉತ್ತಮ ಲಾಭ ಗಳಿಸಬಹುದು ಎಂಬ ನಂಬಿಕೆ ಇದೆ.
ಸಮೃದ್ಧಿ ದಿವಸ
ಹಿಂದೂ ಸಮುದಾಯದ ಬ್ರೋಕರ್ ಗಳು ಮತ್ತು ಹೂಡಿಕೆದಾರರು ಈ ವಿಶೇಷ ದಿನದಂದು ಮೂಹರ್ತ ಟ್ರೇಡಿಂಗ್ ಸಂದರ್ಭದಲ್ಲಿ ವ್ಯಾಪಾರ ಮಾಡಲು ಇಷ್ಟಪಡುತ್ತಾರೆ. ಏಕೆಂದರೆ ಇದರಿಂದ ಸಮೃದ್ಧಿ, ಶ್ರೀಮಂತಿಕೆ ಬರುತ್ತದೆ ಎಂದು ನಂಬಲಾಗಿದೆ.
ಬಿಎಸ್ಇ, ಎನ್ಎಸ್ಇ ನಲ್ಲಿ ವಹಿವಾಟು
ದೀಪಾವಳಿ ದಿನದಂದು ಮಾರುಕಟ್ಟೆಯು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ನಲ್ಲಿ ಒಂದು ಗಂಟೆಯವರೆಗೆ ತೆರೆಯುತ್ತದೆ. ಉತ್ತರ ಭಾರತದ ಉದ್ಯಮಿಗಳು ಹೊಸ ಹಣಕಾಸು ವರ್ಷವನ್ನು ದೀಪಾವಳಿಯಿಂದ ಪ್ರಾರಂಭಿಸುತ್ತಾರೆ.
ಮುಹೂರ್ತ ಟ್ರೇಡಿಂಗ್ ಸಮಯ
ಮುಹೂರ್ಟ್ ಟ್ರೇಡಿಂಗ್ ಗಾಗಿ ಪ್ರಿಓಪನಿಂಗ್ ಸಮಯವನ್ನು ಸಂಜೆ 6.15 ರಿಂದ 6.23 ಕ್ಕೆ ಇಡಲಾಗಿದೆ.ಇಂಟ್ರಾ ಡೇ ಟ್ರೆಡಿಂಗ್ ಸಮಯವನ್ನು ಸಂಜೆ 6.30 ರಿಂದ 7.15 ರವರೆಗೆ ಇರುತ್ತದೆ. ಮುಕ್ತಾಯದ ಸಮಯ ಸಂಜೆ 7.40 ರಿಂದ 7.50 ಕ್ಕೆ ಇರುತ್ತದೆ.


Click it and Unblock the Notifications