Englishहिन्दी മലയാളം தமிழ் తెలుగు

ವಿಮಾ ಸಂಸ್ಥೆಯ ವಿರುದ್ಧ ದೂರು ದಾಖಲಿಸುವುದು ಹೇಗೆ?

Posted By: Ravi kumar N
Subscribe to GoodReturns Kannada

ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ವಿಮೆ ಹೊಂದಿರಬೇಕಾದುದರ ಅಗತ್ಯದ್ ಕುರಿತು ಅರಿವು ಮತ್ತು ಜಾಗೃತಿ ಮೂಡತೊಡಗಿದೆ. ಜೀವ ವಿಮೆ, ವಾಹನ ವಿಮೆ, ಆರೋಗ್ಯ ವಿಮೆ ಇತ್ಯಾದಿ.. ವಿಮೆಗಳ ಪೈಕಿ ಬಹುತೇಕ ಮಂದಿ ಒಂದಲ್ಲಾ ಒಂದು ಬಗೆಯ ವಿಮಾ ಪಾಲಿಸಿ ಹೊಂದಿರುವುದು ಇಂದಿನ ದಿನಮಾನದಲ್ಲಿ ಅತ್ಯಂತ ಸಹಜ.

ವಿಮಾ ಸಂಸ್ಥೆಯ ವಿರುದ್ಧ ದೂರು ದಾಖಲಿಸುವುದು ಹೇಗೆ?
ಬಹಳಷ್ಟು ಸಂದರ್ಭಗಳಲ್ಲಿ ಈ ವಿಮಾ ಸಂಸ್ಥೆಗಳೊಂದಿಗೆ ಯಾವುದಾದರೂ ವಿಷಯದಲ್ಲಿ ತಗಾದೆ ಅಥವಾ ಅಸಮಾಧಾನ ಮೂಡಿದರೆ ಅದನ್ನು ಬಗೆಹರಿಸಿಕೊಳ್ಳುವ ಬಗೆ ಹೇಗೆ ಎಂಬುದರ ಕುರಿತಾಗಿ ಹೆಚ್ಚಿನ ಮಾಹಿತಿ ನಮಗೆ ತಿಳಿಯದು. ಅದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿ ಒದಗಿಸುವ ಪ್ರಯತ್ನವನ್ನು ಇಲ್ಲಿ ಮಾಡುತ್ತಿದ್ದೀವಿ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ದೇಶದ ವಿಮಾ ಕ್ಷೇತ್ರವನ್ನು ನಿಯಂತ್ರಿಸುವ ಸಲುವಾಗಿ ಸ್ಥಾಪಿಸಲಾಗಿದೆ. “ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ೧೯೯೯” ರ ಅಡಿಯಲ್ಲಿ ಈ ಸಂಸ್ಥೆಯನ್ನು ರಚಿಸಲಾಗಿದ್ದು, ಇದರಲ್ಲಿ ಚೇರ್ಮನ್‍ರನ್ನು ಒಳಗೊಂಡಂತೆ ಒಟ್ಟು ೧೦ ಸದಸ್ಯರಿರುತ್ತಾರೆ. ಸಂಸ್ಥೆಯ ಮುಖ್ಯ ಕಚೇರಿ ಹೈದರಾಬಾದಿನಲ್ಲಿದೆ.

ಕುಂದುಕೊರತೆಗಳ ವಿಚಾರಣೆ ಮತ್ತು ನಿವಾರಣೆ ಇದರ ಒಂದು ಪ್ರಮುಖ ಕಾರ್ಯ
೧. ಏಕೀಕೃತ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ (ಐ.ಜಿ.ಎಮ್.ಎಸ್)

ಪಾಲಿಸಿದಾರರಿಗೆ ವಿಮಾ ಸಂಸ್ಥೆಗಳ ಮೇಲೆ ಏನಾದರೂ ತಕರಾರಿದ್ದರೆ ಅವರು ಅದರ ವಿರುದ್ಧ ಮೊದಲಿಗೆ ದೂರು ದಾಖಲಿಸಬೇಕಾಗುತ್ತದೆ. ಇದಕ್ಕಾಗಿ ಅವರು ಸರಕಾರದ ವಿವಿಧ ಇಲಾಖೆಗಳನ್ನು ಹಲವಾರು ಸುತ್ತಬೇಕಾದ ಅಗತ್ಯವಿಲ್ಲ ಐ.ಜಿ.ಎಮ್.ಎಸ್. ವ್ಯವಸ್ಥೆ ಪಾಲಿಸಿದಾರರ ಹಿತಕ್ಕಾಗಿ ರೂಪಿಸಲಾಗಿರುವ ಸರಳೀಕೃತ ಏಕಗವಾಕ್ಷಿ ವ್ಯವಸ್ಥೆಯಾಗಿದ್ದು ಪಾಲಿಸಿದಾರರು ವಿಮಾ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಲು ಲಭ್ಯವಿರುವ ಗೇಟ್‍ವೇಯಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ದಾಖಲಿಸಲಾದ ದೂರನ್ನು ಅಗತ್ಯವೆನಿಸಿದರೆ ಐ.ಆರ್.ಡಿ.ಎ.ಐ ಗೆ ರವಾನಿಸಲಾಗುತ್ತದೆ. ಐ.ಜಿ.ಎಮ್.ಎಸ್ ನ ಕೇಂದ್ರೀಕೃತ ಆನ್‍ಲೈನ್ ಸಂಪರ್ಕ ವ್ಯವಸ್ಥೆಯ ಮೂಲಕ ದೂರನ್ನು ಮಿಂಚಂಚೆ, ಪತ್ರ ಅಥವಾ ಧ್ವನಿ ಕರೆಯ ಮೂಲಕ ಸಲ್ಲಿಸಲು ನೆರವು ದೊರಕುತ್ತದೆ.

೨. ಕುಂದುಕೊರತೆ ನಿವಾರಣಾ ಅಧಿಕಾರಿ (ಜಿ.ಆರ್.ಓ)

ದೂರನ್ನು ಸಲ್ಲಿಸುವ ಮೊದಲ ಹೆಜ್ಜೆಯಾಗಿ ನಿಮ್ಮ ವಿಮಾ ಸಂಸ್ಥೆಯ ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ಸಂಪರ್ಕಿಸಿ ಅಹವಾಲು ಸಲ್ಲಿಸಬೇಕು. ಸದರಿ ಅಧಿಕಾರಿಯು ದೂರು ಸಲ್ಲಿಕೆಯಾದ ೧೫ ದಿನದೊಳಗೆ ಉತ್ತರ ಒದಗಿಸಬೇಕು ಮತ್ತು ಸೂಕ್ತ ಕಾಲಾವಕಾಶದೊಳಗೆ ನಿಮ್ಮ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು. ಅವರ ಉತ್ತರ ಅಥವಾ ಪರಿಹಾರ ಸಮಾಧಾನ ತರದಿದ್ದಲ್ಲಿ ಐ.ಆರ್.ಡಿ.ಎ.ಐ ಗೆ ಈ ದೂರನ್ನು ಕೊಂಡೊಯ್ಯಬಹುದು.
೩. ಐ.ಆರ್.ಡಿ.ಎ.ಐ ಗೆ ದೂರು ಸಲ್ಲಿಸುವ ವಿಧಾನ

igms.irda.gov.in ಗೆ ಲಾಗಿನ್ ಆಗಿ ನಿಮ್ಮ ಪ್ರೊಫ಼ೈಲ್ ಸೃಜಿಸಿಕೊಳ್ಳಿ. ಆ ಬಳಿಕ ನಿಮ್ಮ ಪ್ರೊಫ಼ೈಲ್ ಮೂಲಕ ದೂರು ದಾಖಲಿಸಬಹುದು. ನೀವು ಒಂದಕ್ಕಿಂತ ಹೆಚ್ಚು ದೂರುಗಳನ್ನು ಸಹ ಸಲ್ಲಿಸಬಹುದು. ವಿಮಾ ಸಂಸ್ಥೆಯ ಶಾಖೆಯ ವಿಳಾಸವನ್ನು ದೂರು ನೀಡುವ ಸಂದರ್ಭದಲ್ಲಿ ದಾಖಲಿಸಿಕೊಳ್ಳಲಾಗುವುದು. ದೂರು ಸಲ್ಲಿಕೆಯಾದ ಬಗ್ಗೆ ನಿಮಗೆ ಇ-ಮೈಲ್ ದೃಢೀಕರಣ ದೊರಕುತ್ತದೆ, ಇದರೊಂದಿಗೆ ದೂರಿಗೆ ಸಂಬಂಧಿಸಿ ಒಂದು ಟೋಕನ್ ಸಂಖ್ಯೆಯನ್ನು ಸಹ ನೀಡಲಾಗುತ್ತದೆ. ಈ ಟೊಕನ್ ಸಂಖ್ಯೆಯ ಮೂಲಕ ನಿಮ್ಮ ದೂರನ್ನು ಟ್ರ್ಯಾಕ್ ಮಾಡಬಹುದು. ದೂರಿನ ಕುರಿತಾದ ಬೆಳವಣಿಗೆಗಳು, ಪ್ರಗತಿ ಮೊದಲಾದವುಗಳು ವಿಮಾ ಸಂಸ್ಥೆಯ ಸಿಸ್ಟಂ ಹಾಗು ಐ.ಆರ್.ಡಿ.ಎ.ಐ ರೆಪಾಸಿಟರಿ ಎರಡರಲ್ಲೂ ದಾಖಲಾಗುತ್ತವೆ.

ಸಂಪರ್ಕ ವಿವರಗಳು

ಐ.ಆರ್.ಡಿ.ಎ.ಐ ನ ಸಂಪರ್ಕ ವಿವರಗಳು ಹೀಗಿವೆ

ಐ.ಆರ್.ಡಿ.ಎ ಕುಂದುಕೊರತೆ ಕಾಲ್ ಸೆಂಟರ್: ೧೮೦೦ ೪೨೫೪ ೭೩೨

ಮಿಂಚಂಚೆ: complaints@irda.gov.in

ಪತ್ರ ಮುಖೇನ ಅಥವಾ ಫ಼್ಯಾಕ್ಸ್ ಮೂಲಕ ಈ ಕೆಳಕಂಡ ವಿಳಾಸಕ್ಕೆ ದೂರು ಸಲ್ಲಿಸಬೇಕಾಗುತ್ತದೆ.

Insurance Regulatory and Development Authority of India, Consumer Affairs Department - Grievance Redressal Cell, Sy.No.115/1, Financial District, Nanakramguda, Gachibowli, Hyderabad - 500 032.

ಗಮನಿಸಿ
ಜಿ.ಆರ್.ಓ ಮತ್ತು ಐ.ಆರ್.ಡಿ.ಎ.ಐ ಗೆ ಸಲ್ಲಿಸಲಾಗಿರುವ ದೂರುಗಳಿಗೆ ನೀಡಲಾಗುವ ಟೋಕನ್ ವಿವರಗಳನ್ನು ಜತನಗೊಳಿಸಿ. ಇದರಿಂದ ದೂರಿನ ಸ್ಥಿತಿಗತಿಗಳನ್ನು ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ. ಐ.ಜಿ.ಎಮ್.ಎಸ್ ಮೂಲಕ ದೂರು ಸಲ್ಲಿಸಿದ್ದರೆ ಮಾತ್ರವೇ ಆ ದೂರುಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಸಾದ್ಯ

Read more about: insurance, finance news, money
English summary

ವಿಮಾ ಸಂಸ್ಥೆಯ ವಿರುದ್ಧ ದೂರು ದಾಖಲಿಸುವುದು ಹೇಗೆ?

We have now explained in the article, the manner in which you can raise a complain,if you have any issues with regards to your insurance.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns