ಆಧಾರ್ ಬಯೊಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡುವುದು ಹೇಗೆ?

ಬೆಂಗಳೂರು, ಜನವರಿ 23: ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವೂ ಸರ್ಕಾರದ ವಿವಿಧ ಯೋಜನೆಗಳಲ್ಲಿ, ವ್ಯವಹಾರಗಳಲ್ಲಿ ಆಧಾರ್ ಕಡ್ಡಾಯ ಎಂಬಂತೆಯೇ ಬಳಕೆಯಲ್ಲಿದೆ.

ಹೀಗೆ ಆಧಾರ್ ವ್ಯಾಪಕವಾಗಿ ಬಳಕೆಯಾಗುತ್ತಿರುವುದರಿಂದ ಅದರಲ್ಲಿನ ಮಾಹಿತಿಯನ್ನು ಸಂರಕ್ಷಿಸುವುದು ಕೂಡ ಮಹತ್ವದ್ದಾಗಿದೆ. ಆಧಾರ್‌ನಲ್ಲಿ ನಿರ್ಮಿಸಿರುವ ಸುರಕ್ಷೆಗಳಲ್ಲಿ ಬಯೊಮೆಟ್ರಿಕ್ ಅಥೆಂಟಿಕೇಷನ್ ಸಹ ಒಂದು.

'ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಜೋಡಣೆ ಶೀಘ್ರದಲ್ಲೇ ಕಡ್ಡಾಯ'

ವ್ಯವಹಾರ ಅಥವಾ ದೃಢೀಕರಣ ಪ್ರಕ್ರಿಯೆಯು ಬಯೊಮೆಟ್ರಿಕ್ ದೃಢೀಕರಣವಿಲ್ಲದೆ ಸಾಧ್ಯವಾಗಲಾರದು. ಆದರೆ, ಅಗತ್ಯವಿದ್ದಾಗ ಮಾತ್ರ ಬಯೊಮೆಟ್ರಿಕ್ ದೃಢೀಕರಣವನ್ನು ತೆರೆಯಲು ಸಲಹೆ ನೀಡಲಾಗಿದೆ.

ಹೀಗೆ ನಿಮ್ಮ ಆಧಾರ್‌ಅನ್ನು ಲಾಕ್ ಅಥವಾ ಅನ್‌ಲಾಕ್ ಮೂಲಕ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ನೋಡಿ...

ಯುಐಡಿಎಐ ಎಂ ಆಧಾರ್ ಆಪ್

ಯುಐಡಿಎಐ ಎಂ ಆಧಾರ್ ಆಪ್

ಎಂ ಆಧಾರ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಲಾಗಿನ್ ಆಗಿ. ಅದರಲ್ಲಿ ಆಧಾರ್ ಬಯೊಮೆಟ್ರಿಕ್‌ಗಳನ್ನು ಲಾಕ್ ಮತ್ತು ಅನ್‌ಲಾಕ್ ಮಾಡಲು ಎರಡು ಮಾರ್ಗಗಳಿವೆ.

1. ಆಪ್‌ನ ಕೆಳಭಾಗದಲ್ಲಿರುವ ಬಯೊಮೆಟ್ರಿಕ್ಸ್ ಅನ್‌ಲಾಕ್ಡ್ ನೋಟಿಫಿಕೇಷನ್ ಮೇಲೆ ಕ್ಲಿಕ್ ಮಾಡಿ.

2. ಎಂ ಆಧಾರ್ ಪಾಸ್‌ವರ್ಡ್ ನಮೂದಿಸಲು ಸೂಚಿಸಲಾಗುತ್ತದೆ.

3. ಓಟಿಪಿ ರವಾನೆಯಾಗಿ, ಸ್ವಯಂಚಾಲಿತವಾಗಿ ಅದನ್ನು ಆಪ್ ಸ್ವೀಕರಿಸುತ್ತದೆ. ದೃಢೀಕರಣಗೊಂಡ ಬಳಿಕ ನಿಮ್ಮ ಬಯೊಮೆಟ್ರಿಕ್ಸ್ ವಿವರಗಳು ಲಾಕ್ ಆಗುತ್ತವೆ. ಆಗ ನೀವು ಯಾವುದೇ ವ್ಯವಹಾರಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ.

ಅನ್‌ಲಾಕ್ ಮಾಡುವುದು ಹೇಗೆ

ಅನ್‌ಲಾಕ್ ಮಾಡುವುದು ಹೇಗೆ

ಬಯೊಮೆಟ್ರಿಕ್ ದೃಢೀಕರಣ ಬಳಸಿಕೊಂಡು ವ್ಯವಹಾರ ನಡೆಸುವ ಅಗತ್ಯ ಬಿದ್ದಾಗ ಇದೇ ಪ್ರಕ್ರಿಯೆಯನ್ನು ಅನುಸರಿಸಬೇಕು. ಎಂ ಅಧಾರ್ ಆಪ್ ಲಾಗಿನ್ ಆಗಿ ಬಯೊಮೆಟ್ರಿಕ್ ಲಾಕ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ನೋಟಿಫಿಕೇಷನ್ಅನ್ನು ಅನ್‌ಲಾಕ್ ಮಾಡಬೇಕು. ನೀವು ಪಾಸ್‌ವರ್ಡ್ ನಮೂದಿಸಿದ ಬಳಿಕ ಅದು ಅನ್‌ಲಾಕ್ ಆಗುತ್ತದೆ. ಈ ಆಪ್ ಅನ್‌ಲಾಕ್ ಮಾಡುವ ಸಂದರ್ಭದಲ್ಲಿ ಓಟಿಪಿ ಕೂಡ ಕಳುಹಿಸಬಹುದು.

ಬ್ಯಾಂಕ್ ಖಾತೆ, ಮೊಬೈಲ್ ಸಂಪರ್ಕಕ್ಕೆ ಇನ್ನು ಆಧಾರ್ ಬೇಕಿಲ್ಲ

ಟಾಗಲ್ ಬಟನ್ ಬಳಸಿ

ಟಾಗಲ್ ಬಟನ್ ಬಳಸಿ

ಎಂ ಆಧಾರ್ ಆಪ್‌ನ ಮೇಲ್ತುದಿಯ ಬಲಭಾಗದಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿಯೂ ಬಯೊಮೆಟ್ರಿಕ್ ಲಾಕ್ ಮತ್ತು ಅನ್‌ಲಾಕ್ ಮಾಡಬಹುದು.

ಎನೇಬಲ್ ಬಯೊಮೆಟ್ರಿಕ್ ಲಾಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಪ್ ನಿಮ್ಮ ನೋಂದಾಯಿತ ಮೊಬೈಲ್‌ಗೆ ಓಟಿಪಿ ರವಾನಿಸುತ್ತದೆ. ಅದನ್ನು ಸ್ವಯಂಚಾಲಿತವಾಗಿ ಪರಿಗಣಿಸುತ್ತದೆ.

ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ

ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ

ಯುಐಡಿಎಐ ವೆಬ್‌ಸೈಟ್ ಮೂಲಕ ಸಹ ಬಯೊಮೆಟ್ರಿಕ್ ಲಾಕ್ ಅಥವಾ ಅನ್‌ಲಾಕ್ ಮಾಡಲು ಅವಕಾಶವಿದೆ.

ವೆಬ್‌ಸೈಟ್‌ ತೆರೆದು ಅದರಲ್ಲಿ ನಿಮ್ಮ ಆಧಾರ್ ನಂಬರ್ ಮತ್ತು ಭದ್ರತಾ ಕೋಡ್ ನಮೂದಿಸಿದರೆ ಓಟಿಪಿ ರವಾನೆಯಾಗುತ್ತದೆ.

ಓಟಿಪಿ ಅಥವಾ ಎಂ ಆಧಾರ್ ಆಪ್‌ನಿಂದ ಸೃಷ್ಟಿಯಾಗುವ ಟಿಓಟಿಪಿಯನ್ನು ನಮೂದಿಸಿ.

ಬಳಿಕ ನಿಮ್ಮ ಆಧಾರ್ ಲಾಕ್ ಅಥವಾ ಅನ್‌ಲಾಕ್ ಆಗಿದೆಯೇ ಎಂಬುದನ್ನು ತೋರಿಸುವ ಪುಟಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಈ ಪುಟದಲ್ಲಿ ನಿಮಗೆ ಅಗತ್ಯವಿರುವಂತೆ ಲಾಕ್ ಅಥವಾ ಅನ್‌ಲಾಕ್ ಮಾಡಬಹುದು. ಒಮ್ಮೆ ಅನ್‌ಲಾಕ್ ಮಾಡಿದ ಬಳಿಕ ಅದು ಹತ್ತು ನಿಮಿಷಗಳವರೆಗೆ ಅನ್‌ಲಾಕ್ ಆಗಿರುತ್ತದೆ. ಹತ್ತು ನಿಮಿಷಗಳ ಬಳಿಕ ಸ್ವಯಂಚಾಲಿತವಾಗಿ ಲಾಕ್ ಆಗುತ್ತದೆ.

ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+