For Quick Alerts
ALLOW NOTIFICATIONS  
For Daily Alerts

ಕುಸಿಯುತ್ತಿರುವ ಪೇಟೆ ಹೊಸ ಪೀಳಿಗೆಯ ಹೂಡಿಕೆದಾರರಿಗೆ ಅವಕಾಶ

By ಕೆ.ಜಿ.ಕೃಪಾಲ್
|

ಷೇರುಪೇಟೆಯ ವಹಿವಾಟು ನಡೆಸುವ ಎಲ್ಲಾ ವರ್ಗದವರಿಗೂ ಏಟು ಬೀಳುತ್ತಿದೆ. ಕೆಲವರಿಗೆ ಛಡಿ ಏಟಾದರೆ, ಕೆಲವರಿಗೆ ಚಾಟಿ ಏಟು, ಮತ್ತೆ ಕೆಲವರಿಗೆ ದೊಣ್ಣೆ ಏಟು. ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಏಟುಗಳು ಬೀಳುತ್ತಿವೆ.

ಇದಕ್ಕೆ ವೈವಿಧ್ಯಮಯವಾದ ಕಾರಣಗಳಿರಬಹುದು. ಆದರೆ ಫಲಿತಾಂಶ ಮಾತ್ರ ಸಹಿಸಿಕೊಳ್ಳಲಾಗದ ರೀತಿಯಲ್ಲಿದೆ. ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲು ತಿಳಿಯುವುದಿಲ್ಲ ಎಂದು ಮ್ಯುಚುಯಲ್ ಫಂಡ್ ಸಹಿ ಹೈ ಎಂಬ ಪ್ರಚಾರಕ್ಕೆ ಬಲಿಯಾಗಿ ಹೂಡಿಕೆ ಮಾಡಿದವರಾಗಲಿ, ಡೆಟ್ ಫಂಡ್ ನಲ್ಲಾದರೆ ಹೂಡಿಕೆ ಸುರಕ್ಷಿತವೆಂದು ಭಾವಿಸಿ ಅಲ್ಲಿ ಹೂಡಿಕೆ ಮಾಡಿದರೆ ದಿವಾನ್ ಹೌಸಿಂಗ್ ಫೈನಾನ್ಸ್, ಕಾಫಿ ಡೇ ನಂತಹ ಕಂಪೆನಿಗಳಲ್ಲಿ ತೊಡಗಿಸಿದ್ದರೆ ಅವುಗಳ ಹಾನಿಯ ಕಾರಣ ಮೂಲ ಬಂಡವಾಳದ ಕಡಿತ, ಹೀಗಿರುವಾಗ ಸುರಕ್ಷತೆ ಎಂಬುದು ಈಗಿನ ಪೇಟೆಗಳಲ್ಲಿ ಇಲ್ಲವೇನೋ ಎಂಬಂತಾಗಿದೆ.

 ಅಂಕಣ:'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್' ನಲ್ಲಿ ಉನ್ನತಿ ಕಾಣಬೇಕೇ? ಅಂಕಣ:'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್' ನಲ್ಲಿ ಉನ್ನತಿ ಕಾಣಬೇಕೇ?

ಡಾಲರ್ ಆಧಾರಿತ ಎಂಎಸ್ ಸಿಐ ಇಂಡಿಯಾ ಇಂಡೆಕ್ಸ್ 2019ರಲ್ಲಿ ನೆಗೆಟಿವ್ ರಿಟರ್ನ್ ನೀಡುತ್ತಿದೆ. ಅಂದರೆ ಎಲ್ಲಾ ವಿಶ್ಲೇಷಣೆಗಳನ್ನು ಧಿಕ್ಕರಿಸಿ ಪೇಟೆಯು ಸಾಗುತ್ತಿದೆ. ಆಂತರಿಕವಾಗಿ ಖಾಸಗಿ ಕಂಪನಿಗಳು, ಬ್ಯಾಂಕ್ ಗಳು, ಸಾರ್ವಜನಿಕ ವಲಯದ ಬ್ಯಾಂಕ್ ಗಳು ತಮ್ಮ ವಿವಿಧ ಯೋಜನೆಗಳಿಗಾಗಿ ಫಂಡ್ ರೈಸಿಂಗ್ ಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಜೊತೆಗೆ ಕೇಂದ್ರಸರ್ಕಾರ ತನ್ನ ಬಂಡವಾಳ ಹಿಂತೆಗೆತ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದೆ.

ಪ್ರಮುಖ ಬ್ಯಾಂಕ್ ಗಳು ಸುಮಾರು ರೂ 62 ಸಾವಿರ ಕೋಟಿ ಹಣ ಸಂಗ್ರಹಿಸಲಿವೆ ಎಂಬುದು, ಪವರ್ ಫೈನಾನ್ಸ್ ಕಂಪನಿ ಸುಮಾರು ರೂ 70 ಸಾವಿರ ಕೋಟಿ ಹಣ ಸಂಗ್ರಹಣೆಗೆ ಯೋಚಿಸಿದೆ ಎಂಬುದೆಲ್ಲ ಪರಿಶೀಲಿಸಿದಾಗ ಪೇಟೆಯ ಮೇಲೆ ಬೀಳಬಹುದಾದ ಒತ್ತಡದ ಬಗ್ಗೆ ಅರಿವಾಗುವುದು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟದ ತಡೆಗೆ ಬೇಕಾದ ಕ್ರಮ ಕೈಗೊಂಡಲ್ಲಿ ಮಾತ್ರ ಪೇಟೆಗೆ ಸ್ವಲ್ಪ ಜೀವಕಳೆ ಬರಬಹುದು. ಪೇಟೆಯಲ್ಲಿ ಬೇಡಿಕೆ ಹೆಚ್ಚಿಸುವಂತಹ ಕ್ರಮಗಳ ಅವಶ್ಯಕತೆಯಿದೆ. ಹರಿದಾಡುವ, ಚಲಾವಣೆಯಾಗುವ ಹಣವನ್ನು ಹೆಚ್ಚಿಸಬೇಕಾಗಿದೆ.

ಕುಸಿಯುತ್ತಿರುವ ಪೇಟೆ ಹೊಸ ಪೀಳಿಗೆಯ ಹೂಡಿಕೆದಾರರಿಗೆ ಅವಕಾಶ

ಎಲ್ಲಾ ಕಡೆಯಿಂದಲೂ ನಕಾರಾತ್ಮಕ ವಿಚಾರಗಳು ಚಲನೆಯಲ್ಲಿರುವುದು ಸಹ ಪೇಟೆಯಲ್ಲಿ ಹೂಡಿಕೆದಾರರ ಬೆಂಬಲ ಪಡೆಯಲು ಅಸಮರ್ಥವಾಗಿವೆ. ಮೊಟ್ಟಮೊದಲು ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿವೆ. ಇವುಗಳ ಮಾರಾಟದ ಒತ್ತಡವನ್ನು ಸ್ಥಳೀಯ ವಿತ್ತೀಯ ಸಂಸ್ಥೆಗಳಾಗಲಿ, ರಿಟೇಲ್ ಗ್ರಾಹಕರಾಗಲಿ ತಡೆಯುವ ಶಕ್ತಿ ಹೊಂದಿಲ್ಲ. ಕಳೆದ ಅಕ್ಟೋಬರ್ ತಿಂಗಳಿಗಿಂತ ಹೆಚ್ಚು ಮಾರಾಟಮಾಡಿವೆ. ನಿಫ್ಟಿಯಂತೂ ಎರಡು ತಿಂಗಳಲ್ಲಿ ಸುಮಾರು ಒಂದು ಸಾವಿರ ಪಾಯಿಂಟುಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಹೆಚ್ಚಿನ ಸ್ಥಳೀಯ ವಿತ್ತೀಯ ಸಂಸ್ಥೆಗಳು ಆರ್ಥಿಕ ಒತ್ತಡದಲ್ಲಿರುವುದು ಇದಕ್ಕೆ ಮುಖ್ಯ ಕಾರಣ. ಇದರಲ್ಲಿ ಐ ಎಲ್ ಅಂಡ್ ಎಫ್ ಎಸ್ ಹಗರಣ, ದಿವಾನ್ ಹೌಸಿಂಗ್ ಫೈನಾನ್ಸ್ ಮುಂತಾದ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳಲ್ಲಿ ಸಿಲುಕಿಹಾಕಿಕೊಂಡಿರುವ ಪರಿಸ್ಥಿತಿಯನ್ನು ನಿಭಾಯಿಸುವುದೇ ಕಷ್ಟವಾಗಿದೆ.

ಪೇಟೆಯಲ್ಲಿ ಕಾರ್ಪೊರೇಟ್ ಗಳು ತಮ್ಮ ಸಂಪನ್ಮೂಲ ಸಂಗ್ರಹಣೆಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಆದರೆ ಇದಕ್ಕನುಗುಣವಾಗಿ ಕಾರ್ಪೊರೇಟ್ ಸಾಧನೆಯಾಗುತ್ತಿಲ್ಲ. ಇಂದು ಮಾರುತಿ ಸುಜುಕಿಯು ತನ್ನ ಜುಲೈ ತಿಂಗಳ ಮಾರಾಟವು ಶೇ34ರಷ್ಟು ಕುಸಿದಿದೆ ಎಂದಿದೆ. ಆದರೂ ಷೇರಿನ ಬೆಲೆ ಸ್ವಲ್ಪ ಚೇತರಿಕೆ ಕಂಡಿದೆ.

ಷೇರುಪೇಟೆಯಲ್ಲಿ ಕಾರಣಕ್ಕಿಂತ ಲಾಭ ಮುಖ್ಯಷೇರುಪೇಟೆಯಲ್ಲಿ ಕಾರಣಕ್ಕಿಂತ ಲಾಭ ಮುಖ್ಯ

ಸೆನ್ಸೆಕ್ಸ್ ಅನ್ನು ಕೇವಲ ಬ್ಯಾಂಕಿಂಗ್ ಮತ್ತು ವಿತ್ತೀಯ ವಲಯದ ಕಂಪನಿಗಳ ಏರಿಳಿತಗಳಲ್ಲಿ ನಿಯಂತ್ರಿಸುವ ಕಾರ್ಯ ಪ್ರದರ್ಶಿತವಾಗುತ್ತಿದೆ. ಇಂದು ನಡೆದ ವಹಿವಾಟಿನಲ್ಲಿ ಸೆನ್ಸೆಕ್ಸ್ ನಲ್ಲಿರುವ ಎಲ್ಲಾ ಒಂಬತ್ತು ಬ್ಯಾಂಕಿಂಗ್ ವಲಯದ ಷೇರುಗಳು ಕುಸಿತಕ್ಕೊಳಗಾಗಿದೆಯಲ್ಲದೆ ಒಂದು ಹಂತದಲ್ಲಿ ಇತರೆ ಸೆನ್ಸೆಕ್ಸ್ ಷೇರುಗಳು ಹಾನಿಗೊಳಗಾಗಿ ನಂತರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ, ಬಜಾಜ್ ಆಟೋ ಚೇತರಿಕೆ ಕಂಡ ಕಾರಣ ಸೆನ್ಸೆಕ್ಸ್ 36,694.18ರಿಂದ ಚೇತರಿಕೆ ಕಂಡು 37,018.32 ರಲ್ಲಿ ಕೊನೆಗೊಂಡಿತು. ಬ್ಯಾಂಕಿಂಗ್ ಮತ್ತು ವಿತ್ತೀಯ ವಲಯದ ಈ ಒಂಬತ್ತು ಕಂಪನಿಗಳು ಶೇ.43ರಷ್ಟು ಸೆನ್ಸೆಕ್ಸ್ ನಲ್ಲಿ ವೇಟೇಜ್ ಹೊಂದಿವೆ ಎಂಬುದು ನೆನಪಿನಲ್ಲಿಡಬೇಕಾದ ಅಂಶವಾಗಿದೆ.

ಕೇವಲ ಸೆನ್ಸೆಕ್ಸ್ ನ್ನು ಆಧಾರವಾಗಿಟ್ಟುಕೊಂಡು ಷೇರುಪೇಟೆಯ ಮಾಪನ ಮಾಡುವುದು ಸರಿಯಲ್ಲ. ಮಿಡ್ ಕ್ಯಾಪ್ ಇಂಡೆಕ್ಸ್ ಸೆಪ್ಟೆಂಬರ್ ನಲ್ಲಿ 17,017ರ ವಾರ್ಷಿಕ ಗರಿಷ್ಠದಲ್ಲಿದ್ದುದು ನಿನ್ನೆಯ ದಿನ 13,365ಕ್ಕೆ ಕುಸಿದು ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ. ಅದರಂತೆ ಸ್ಮಾಲ್ ಕ್ಯಾಪ್ ಇಂಡೆಕ್ಸ್ ಸೆಪ್ಟೆಂಬರ್ ನ 17334ರ ವಾರ್ಷಿಕ ಗರಿಷ್ಠದಿಂದ ಇಂದು ವಾರ್ಷಿಕ ಕನಿಷ್ಠ 12,484ಕ್ಕೆ ಕುಸಿದಿದೆ.

ಇಂದಿನ ಈ ಕುಸಿತದಲ್ಲಿ 500ಕ್ಕೂ ಹೆಚ್ಚಿನ ಕಂಪನಿಗಳು ವಾರ್ಷಿಕ ಕನಿಷ್ಠಕ್ಕೆ ಇಳಿದಿವೆ. ಮೇ ತಿಂಗಳ ಮಧ್ಯಂತರದಲ್ಲಿ ಸೆನ್ಸೆಕ್ಸ್ 37 ಸಾವಿರದಲ್ಲಿದ್ದಾಗ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ 145 ಲಕ್ಷ ಕೋಟಿಯಲ್ಲಿತ್ತು. ನಂತರ ಸೆನ್ಸೆಕ್ಸ್ ಜೂನ್ ತಿಂಗಳಲ್ಲಿ 40,312ರ ಸರ್ವಕಾಲೀನ ಗರಿಷ್ಠ ತಲುಪಿದಾಗ ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.156.14 ಲಕ್ಷ ಕೋಟಿಗೆ ತಲುಪಿ ಈಗ ಮತ್ತೆ 37 ಸಾವಿರ ಪಾಯಿಂಟುಗಳಿಗೆ ಹಿಂದಿರುಗಿದಾಗ ಬಂಡವಾಳೀಕರಣ ಮೌಲ್ಯವು ರೂ.139.87 ಲಕ್ಷ ಕೋಟಿಯಲ್ಲಿದೆ. ಅಂದರೆ ಆರು ಲಕ್ಷ ಕೋಟಿಯಷ್ಟು ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳ ಹೊರತಾಗಿ ಬಂಡವಾಳ ಕರಗಿದೆ. ಇದರಲ್ಲಿ ಮುಖ್ಯವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳೇ ಹೆಚ್ಚಾಗಿವೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಚಟುವಟಿಕೆಯು ಮುಂಗಾರು ಮಳೆ ಮತ್ತು ಬಜೆಟ್ ನ ಅಂಶಗಳು ಜಾರಿಗೆ ಬರುವ ಕಾರಣ ಸ್ವಲ್ಪ ಏರಿಕೆ ಕಾಣುವುದು. ಆದರೆ 2002ರ ನಂತರದ ಈ ಸಾಂಪ್ರದಾಯಿಕ ಏರಿಕೆ ಈ ವರ್ಷ ಮುರಿದುಬಿದ್ದಿದೆ. ಅಂದರೆ ಜುಲೈ ತಿಂಗಳಲ್ಲಿ ಷೇರಿನ ಬೆಲೆಗಳು ಕುಸಿಯುವ ಮೂಲಕ ದಾಖಲೆಯಾಗಿದೆ.

ಹಣ ಹೂಡಲು ಯಾವುದು ಸುರಕ್ಷಿತ ವಿಧಾನ? ಈ ಲೇಖನ ಓದಿ, ನಿರ್ಧರಿಸಿಹಣ ಹೂಡಲು ಯಾವುದು ಸುರಕ್ಷಿತ ವಿಧಾನ? ಈ ಲೇಖನ ಓದಿ, ನಿರ್ಧರಿಸಿ

ಪ್ರಮುಖ ಕಂಪನಿಗಳಾದ ಮಹಿಂದ್ರಾ ಅಂಡ್ ಮಹಿಂದ್ರಾ, ವೇದಾಂತ, ಕ್ಯಾಸ್ಟ್ರಾಲ್, ಬಯೋಕಾನ್, ಗೆಲ್ ಇಂಡಿಯಾ, ಟಾಟಾ ಎಲೆಕ್ಸಿ, ಮಾರುತಿ ಸುಜುಕಿ ಮುಂತಾದ ಅಗ್ರಮಾನ್ಯ ಕಂಪನಿಗಳು ವಾರ್ಷಿಕ ಕನಿಷ್ಠದ ಸಮೀಪಕ್ಕೆ ಕುಸಿದಿರುವುದು ಹೊಸ ತಲೆಮಾರಿನ ಹೂಡಿಕೆದಾರರು ಪೇಟೆ ಪ್ರವೇಶಿಸಲು ಅನುವು ಮಾಡಿಕೊಟ್ಟಂತಾಗಿದೆ.

English summary

Declining Market And Opportunity For New Generation Of Investors

The stock market is hitting all classes. It is hitting as per their potential. There may be a variety of reasons for this. But the result is unbearable.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X