ಒಡಿಶಾದ ರಾಯಗಡದಲ್ಲಿ ಜನಿಸಿದ ರಿತೇಶ್ ಅಗರ್ವಾಲ್, ತಮ್ಮ ಸ್ವಂತ ಪರಿಶ್ರಮದಿಂದಲೇ ಯಶಸ್ಸಿನ ಉತ್ತುಂಗಕ್ಕೇರಿದ ಯುವ ಉದ್ಯಮಿ. ಒಯೋ ರೂಮ್ಸ್‌ನ ಸಂಸ್ಥಾಪಕರಾದ ಅವರು, ಹೋಟೆಲ್ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡಿದ್ದಾರೆ. ಕೇವಲ 20ನೇ ವಯಸ್ಸಿನಲ್ಲಿಯೇ ಅವರು ಓಯೋ ರೂಮ್ಸ್ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಪಾವಧಿಯಲ್ಲಿಯೇ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾದರು.
ಇವರು ಕೇವಲ 26ರ ವಯಸ್ಸಿಗೆ ಬಿಲಿಯನೇರ್ ಪಟ್ಟಕ್ಕೇರಿದ ಅವರು ವಿಶ್ವದ ಅತ್ಯಂತ ಕಿರಿಯ ಬಿಲಿಯನೇರ್ ಎನ್ನುವ ದಾಖಲೆಯನ್ನು ಬರೆದಿದ್ದಾರೆ. ಈಗ ಅವರ ವಯಸ್ಸು 31 ವರ್ಷ. ಬಡತನದಲ್ಲಿ ಬೆಳೆದು ಕಷ್ಟಪಟ್ಟು ದೊಡ್ಡ ಮಟ್ಟಕ್ಕೆ ಬೆಳೆದುಬಂದ ರಿತೇಶ್ ಅವರು 2023 ರಲ್ಲಿ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಗೀತಾಂಶ ಸೂದ್ ಅವರನ್ನು ವಿವಾಹವಾದರು.ವಿಶೇಷ ಅಂದ್ರೆ ಈ ವಿವಾಹ ಸಮಾರಂಭದಲ್ಲಿ ಅವರ ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರವಲ್ಲದೇ ಪೇಟಿಎಂನ ವಿಜಯ್ ಶೇಖರ್ ಶರ್ಮಾ, ಲೆನ್ಸ್‌ಕಾರ್ಟ್‌ನ ಪಿಯೂಷ್ ಬನ್ಸಾಲ್ ಮತ್ತು ಸಾಫ್ಟ್‌ಬ್ಯಾಂಕ್‌ನ ಮಸಯೋಶಿ ಸನ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಭಾಗವಹಿಸಿದ್ದರು.

ರಿತೇಶ್ ಅಗರ್ವಾಲ್ ಒಡಿಶಾದ ಬಿಸ್ಸಮ್ ಕಟಕ್‌ನಲ್ಲಿ 1993ರ ನವೆಂಬರ್ 16ರಂದು ಮಾರ್ವಾಡಿ ಕುಟುಂಬದಲ್ಲಿ ಜನಿಸಿದ್ದು ಅವರು ತಿತಿಲಗಢದಲ್ಲಿ ಬೆಳೆದರು. ಅವರ ಕುಟುಂಬ ರಾಯಗಡದಲ್ಲಿ ಒಂದು ಸಣ್ಣ ಅಂಗಡಿ ನಡೆಸುತ್ತಿತ್ತು. ಅವರು ಸೇಕ್ರೆಡ್ ಹಾರ್ಟ್ ಶಾಲೆಯಿಂದ ಮತ್ತು ನಂತರ ಸೇಂಟ್ ಜಾನ್ಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, 2011ರಲ್ಲಿ ಕಾಲೇಜು ವ್ಯಾಸಂಗಕ್ಕಾಗಿ ದೆಹಲಿಗೆ ತೆರಳಿದರು. ಇದಾದ ಬಳಿಕ ರಿತೇಶ್ ಅವರು 2013ರಲ್ಲಿ ಓಯೋ ರೂಮ್ಸ್ ಆರಂಭಿಸಿದ್ದು, ಗುರ್ಗಾಂವ್‌ನಲ್ಲಿ ಅದು ಕೇವಲ 5 ಹೊಟೇಲ್‌ಗಳ ಸಹಭಾಗಿತ್ವದೊಂದಿಗೆ ಆಗ ಅವರು ತಮ್ಮ ಈ ಸ್ಟಾರ್ಟ್‌ಅಪ್ ಉದ್ಯಮಕ್ಕೆ ಹಾಕಿದ ಬಂಡವಾಳ ಕೇವಲ 82 ಲಕ್ಷ, ಆದರೆ ಮುಂದೆ ಆಗಿದ್ದೆಲ್ಲವೂ ಇತಿಹಾಸ ಎಂದರೆ ತಪ್ಪಾಗಲಾರದು.
ರಿತೇಶ್ ಮತ್ತು ಅವರ ಪತ್ನಿ ಗೀತಾಂಶ 2012 ರಿಂದ ಪರಿಚಯಸ್ಥರಾಗಿದ್ದರು. ಅಂದಿನಿಂದಲೇ ಜೊತೆಯಾಗಿ ಇದ್ದ ಗೀತಾಂಶಾ, ರಿತೇಶ್ ಅವರು ಉದ್ಯಮಿಯಾಗಲು ಅನೇಕ ಹೋರಾಟಗಳನ್ನು ಎದುರಿಸುತ್ತಿದ್ದಾಗಲೂ ಸಾಥ್ ನೀಡಿದ್ದರು. ವರದಿಗಳ ಪ್ರಕಾರ ಅವರ ಬ್ಯಾಂಕ್ ಖಾತೆಯಲ್ಲಿ ಒಮ್ಮೆ ಕೇವಲ 30 ರೂ. ಮಾತ್ರ ಇದ್ದು, . ಇದರ ಹೊರತಾಗಿಯೂ, ಗೀತಾಂಶ ಪ್ರತಿ ಸವಾಲಿನಲ್ಲೂ ಅವರಿಗೆ ಬೆಂಬಲ ನೀಡಿದ್ದರು. ಇದೇ ಮುಂದೆ OYO ನಿರ್ಮಿಸುವ ಅವರ ಕನಸಿನ ಮೇಲೆ ಗಮನಹರಿಸಲು ಸಹಾಯ ಮಾಡಿತು.
ಮದುವೆ ಆಗುವ ಮೊದಲು ಈ ಜೋಡಿ 11 ವರ್ಷಗಳ ಕಾಲ ಡೇಟಿಂಗ್ ಮಾಡಿತ್ತು. ಜನಮನದಿಂದ ದೂರವಿರಲು ಇಷ್ಟಪಡುವ ಗೀತಾಂಶ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನೋಂದಾಯಿತ ಖಾಸಗಿ ಸಂಸ್ಥೆಯಾದ ಫಾರ್ಮೇಷನ್ ವೆಂಚರ್ಸ್ ಲಿಮಿಟೆಡ್‌ನಲ್ಲಿ ನಿರ್ದೇಶಕಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಅಗರ್ವಾಲ್ ಮತ್ತು ಅವರ ಪತ್ನಿ ಗೀತಾಂಶಿ ಸೂದ್ ದಂಪತಿಗಳಿಗೆ ೨೦೨೩ ರಲ್ಲಿ ಗಂಡು ಮಗು ಜನಿಸಿದ್ದು ಆರ್ಯನ್ ಎಂದು ಹೆಸರಿಸಿದ್ದಾರೆ. ಏಷ್ಯಾದ ಫೋರ್ಬ್ಸ್ 30 ವರ್ಷದೊಳಗಿನವರ 30 ಪಟ್ಟಿಯಲ್ಲಿ ಕಾಣಿಸಿಕೊಂಡರು. ಇದಲ್ಲದೇ ೨೦೨೩ ರಲ್ಲಿ, ಅಗರ್ವಾಲ್ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ 'ಶಾರ್ಕ್' ಆಗಿ ಹೊರಹೊಮ್ಮಿದರು.
ರಿತೇಶ್ ಅಗರ್ವಾಲ್, 1.1ತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅತಿಥ್ಯ ಉದ್ಯಮದ ಮುಂಚೂಣಿಯಲ್ಲಿದ್ದಾರೆ. ಅವರ ಯಶಸ್ಸಿನ ಪಯಣವು ಅವರ ಅಚಲ ನಿರ್ಧಾರ ಮತ್ತು ಉದ್ಯಮಶೀಲತೆಯ ಮನೋಭಾವದ ಪ್ರತಿಬಿಂಬವಾಗಿದೆ.


Click it and Unblock the Notifications