ನವದೆಹಲಿ, ಆಗಸ್ಟ್ 7: ದೇಶದ ಅತಿದೊಡ್ಡ ಜೀವ ವಿಮಾ ಕಂಪನಿ ಎಲ್‌ಐಸಿ ತನ್ನ ಗ್ರಾಹಕರಿಗೆ ವಿಶೇಷ್ ಟರ್ಮ್ ಇನ್ಶೂರೆನ್ಸ್ ಬಿಡುಗಡೆ ಮಾಡಿದೆ. ಯುವಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೊಸ ವಿಮೆಗಳನ್ನು ಪರಿಚಯಿಸಲಾಗಿದೆ. ವಿಮೆ ಸೌಲಭ್ಯದ ಜತೆಗೆ ಮತ್ತು ಸಾಲ ಮರುಪಾವತಿ ರಕ್ಷಣೆ ಸಹ ಏಕಕಾಲದಲ್ಲಿ ಸಿಗಲಿದೆ.
ಎಲ್ ಐಸಿ ನಾಲ್ಕು ಹೊಸ ಟರ್ಮ್ ಇನ್ಶೂರೆನ್ಸ್ ಪ್ಲಾನ್ ಗಳನ್ನು ಪರಿಚಯಿಸಿದೆ. ಗ್ರಾಹಕರು ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು ಎಂದು ತಿಳಿಸಿದೆ.

LIC ಪರಿಚಯಿಸಿರುವ 4 ಹೊಸ ಯೋಜನೆಗಳು:
1. ಎಲ್‌ಐಸಿ ಯುವ ಟರ್ಮ್ ಇನ್ಶೂರೆನ್ಸ್ (LIC's Yuva Term)
2. ಎಲ್ಐಸಿ ಡಿಜಿ ಟರ್ಮ್ ಇನ್ಶೂರೆನ್ಸ್ (LIC's Digi Term)
3. LIC ಯ ಯುವ ಕ್ರೆಡಿಟ್ ಲೈಫ್ ಟರ್ಮ್ ಇನ್ಶೂರೆನ್ಸ್ (LIC's Yuva Credit Life)
4. ಎಲ್ಐಸಿಯ ಡಿಜಿ ಕ್ರೆಡಿಟ್ ಲೈಫ್ ಟರ್ಮ್ ಇನ್ಶೂರೆನ್ಸ್ (LIC's Digi Credit Life)
ಇದರಲ್ಲಿ ಎಲ್‌ಐಸಿ ಯುವ ಅವಧಿ ಟರ್ಮ್ ಇನ್ಶೂರೆನ್ಸ್ (LIC's Yuva Term) ಆಫ್‌ಲೈನ್ ಮೂಲಕ, ಏಜೆಂಟ್‌ಗಳ ಮೂಲಕ ಮಾತ್ರ ಪಡೆಯಬಹುದು. ಎಲ್‌ಐಸಿಯ ಡಿಜಿ ಟರ್ಮ್ ಇನ್ಶೂರೆನ್ಸ್ ಪಾಲಿಸಿ ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ಎಲ್‌ಐಸಿ ಹೇಳಿದೆ. ಈ ಎರಡೂ ವಿಮಾ ಪಾಲಿಸಿಗಳನ್ನು ಆರಂಭಿಕ ಹಂತದಲ್ಲಿಯೇ ಟರ್ಮ್ ವಿಮೆ ಮಾಡಿಸಿಕೊಳ್ಳಲು ಬಯಸುವ ಯುವಕರಿಗೆಂದು ವಿಶೇಷವಾಗಿ ಹೊರತರಲಾಗಿದೆ. ಸೋಮವಾರ ಎಲ್ ಐಸಿ ಸಿಇಒ ಮತ್ತು ಎಂಡಿ ಸಿದ್ಧಾರ್ಥ್ ಮೊಹಾಂತಿ ವಿಮೆ ಪರಿಚಯಿಸಿದರು.
ಸಾಲದ ಹೊಣೆಗಾರಿಕೆಗಳನ್ನು ಕವರ್ ಮಾಡಲು ಎರಡು ವಿಮೆ ಬಿಡುಗಡೆ ಮಾಡಿದೆ. LICಯ ಯುವ ಕ್ರೆಡಿಟ್ ಲೈಫ್ ಮತ್ತು LICಯ ಡಿಜಿ ಕ್ರೆಡಿಟ್ ಲೈಫ್ ಎಂಬ ಎರಡು ಪಾಲಿಸಿಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ, LIC ಯುವ ಕ್ರೆಡಿಟ್ ಪಾಲಿಸಿ ಆಫ್‌ಲೈನ್ ಮೋಡ್‌ನಲ್ಲಿ ಲಭ್ಯವಿದ್ದರೆ LIC ಡಿಜಿ ಕ್ರೆಡಿಟ್ ಲೈಫ್ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿದೆ.
ಇಂದು ಜನರು ವಿವಿಧ ಅಗತ್ಯ ಪೂರೈಕೆಗೆ ಸಾಲದ ಮೊರೆ ಹೋಗುತ್ತಲೇ ಇದ್ದಾರೆ. ಸಾಲ ಮರುಪಾವತಿ ಸಂದರ್ಭ ಅಪಾಯ ಎದುರಾದರೆ ರಕ್ಷಣೆಗೆ ಈ ವಿಮೆ ನಿಮ್ಮ ನೆರವಿಗೆ ಬರಲಿದೆ. ವಸತಿ/ಶಿಕ್ಷಣ/ವಾಹನ ಮುಂತಾದ ಸಾಲದ ಹೊಣೆಗಾರಿಕೆಯನ್ನು ಈ ವಿಮೆ ಒಳಗೊಂಡಿದೆ.
LIC ಯ ಯುವ ಅರ್ಮ್ ಮತ್ತು ಎಲ್ ಐಸಿ ಡಿಜಿ ಟರ್ಮ್ ಇನ್ಶೂರೆನ್ಸ್ ಒಂದು ನಾನ್-ಪಾರ್, ನಾನ್-ಲಿಂಕ್ಡ್, ಲೈಫ್, ಇಂಡಿವಿಜುವಲ್, ಪ್ಯೂರ್ ರಿಸ್ಕ್ ಪ್ಲಾನ್ ಆಗಿದೆ. ಪಾಲಿಸಿ ಅವಧಿಯಲ್ಲಿ ಪಾಲಿಸಿದಾರನ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ವಿಮಾದಾರನ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುತ್ತದೆ. ಆದರೆ ಇದೊಂದು ನಾನ್ -ಪಾರ್ ಇನ್ಶೂರೆನ್ಸ್ ಆಗಿರುವುದರಿಂದ ಉಳಿದ ನಿಯಮಾವಳಿಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಈ ಪಾಲಿಸಿಗಳ ವಿಶೇಷತೆ-ನಿಯಮಗಳು:
• 18 ರಿಂದ 45 ವರ್ಷದ ನಡುವಿನವರು ಮಾತ್ರ ಪಾಲಿಸಿ ತೆಗೆದುಕೊಳ್ಳಬಹುದುಪಾಲಿಸಿ.
• ಮೆಚ್ಯೂರಿಟಿಯ ಕನಿಷ್ಠ ವಯಸ್ಸು 33 ವರ್ಷ, ಗರಿಷ್ಠ ವಯಸ್ಸು 75 ವರ್ಷ
• ಕನಿಷ್ಠ ಮೂಲ ವಿಮಾ ಮೊತ್ತ 50,00,000 ರೂ. ಮತ್ತು ಗರಿಷ್ಠ ಮೂಲ ವಿಮಾ ಮೊತ್ತ 5,00,00,000 ರೂ.( 5 ಕೋಟಿ ಪಾಲಿಸಿ ಬೋರ್ಡ್ ನಿಯಮಗಳಿಗೆ ಬದ್ಧವಾಗಿರಬೇಕು)
• ಹೈ ಸಮ್ ಅಶೂರ್ಡ್ ಲಾಭ ಇಲ್ಲಿದೆ
• ಮಹಿಳೆಯರಿಗೆ ಪ್ರೀಮಿಯಂ ದರಗಳಲ್ಲಿ ವಿಶೇಷ ರಿಯಾಯಿತಿ.
• ಪಾಲಿಸಿದಾರರಿಗೆ ಮೊದಲೆ ಸೂಕ್ತ ಬಡ್ಡಿದರದ ಆಯ್ಕೆ
• ಪಾಲಿಸಿದಾರ ಆಕಸ್ಮಿಕ ಸಾವಿಗೀಡಾದರೆ ಟರ್ಮ್ ಇನ್ಶೂರೆನ್ಸ್ ನಿಯಮಗಳಿಗೆ ಅನುಗುಣವಾಗಿ ಹಣ ಪಾವತಿಯಾಗುತ್ತದೆ.


Click it and Unblock the Notifications