ಬೆಂಗಳೂರು, ಜನವರಿ 15: ವಿಶ್ವದ ಯಶಸ್ವಿ ಹಾಗೂ ಶ್ರೀಮಂತ ಕೈಗಾರಿಕೋದ್ಯಮಿಗಳ ಪೈಕಿ ಭಾರತದ ಮುಕೇಶ್ ಅಂಬಾನಿ ಮುಂಚೂಣಿಯಲ್ಲಿದ್ದಾರೆ. ಏಕೆಂದರೆ ರಿಲಯನ್ಸ್ 1,79,000 ಕೋಟಿ ರೂ. ಗಿಂತಲೂ ಅಧಿಕ ಮಾರುಕಟ್ಟೆ ಕ್ಯಾಪ್ ಹೊಂದಿರುವ ದೇಶದ ಅತ್ಯಂತ ಮೌಲ್ಯಯುತವಾದ ಕಂಪನಿ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್.
ಮುಕೇಶ್ ಅವರು ಪ್ರಸ್ತುತ 8,29,514 ಕೋಟಿ ರೂ. ನಿವ್ವಳ ಲಾಭದೊಂದಿಗೆ ಭಾರತದ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹೀಗಿರುವಾಗ, ಮುಕೇಶ್ ಅಂಬಾನಿ ಹಾಗೂ ಅವರ ಕುಟುಂಬಸ್ಥರು ವೀರೇನ್ ಮರ್ಚೆಂಟ್, ರಸೆಲ್ ಮೆಹ್ತಾ ಹಾಗೂ ಇತರರೊಂದಿಗೆ ಸಂಬಂಧವನ್ನು ಹೊಂದಿದ್ದಾರೆ. ಆ ಪೈಕಿ ಮುಕೇಶ್ ಅಂಬಾನಿ ಕುಟುಂಬದೊಂದಿಗೆ ಬಹಳ ಹತ್ತಿರದ ಸಂಬಂಧ ಹೊಂದಿರುವ ಶ್ರೀಮಂತ ಕುಟುಂಬ ಅರವಿಂದ್ ಪೋದಾರ್. 29126 ಕೋಟಿ ರೂ. ನಿವ್ವಳ ಆಸ್ತಿ ಮೌಲ್ಯದೊಂದಿಗೆ ಪೋದಾರ್ ಅವರು ಭಾರತ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

ಅರವಿಂದ ಪೋದಾರ್ ಅವರು ಜನಪ್ರಿಯ ಬಾಲಕೃಷ್ಣ ಇಂಡಸ್ಟ್ರೀಸ್ ಅನ್ನು ಸ್ಥಾಪಿಸಿರುವ ಮಹಾಬೀರಪ್ರಸಾದ್ ಪೋದಾರ್ ಅವರ ಮಗ. ಬಿಕೆಟಿ ಎಂದು ಹೆಸರುವಾಸಿಯಾಗಿರುವ ಬಾಲಕೃಷ್ಣ ಇಂಡಸ್ಟ್ರೀಸ್ 49654 ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಈ ಕಂಪನಿಯು ಕೃಷಿ, ಗಣಿಗಾರಿಕೆ ಹಾಗೂ ನಿರ್ಮಾಣ ಕ್ಷೇತ್ರದ ವಾಹನಗಳಿಗೆ ಬಿಡಿಭಾಗಗಳು ಹಾಗೂ ಆಫ್‌ರೋಡ್ ಟೈರ್‌ಗಳನ್ನು ತಯಾರಿಸುತ್ತಿದೆ. ಈ ಕಂಪನಿಯನ್ನು ಪ್ರಸ್ತುತ ಅರವಿಂದ್ ಪೋದಾರ್ ಅವರು ಮುನ್ನಡೆಸುತ್ತಿದ್ದಾರೆ. ಹಾಗಾದರೆ, ಅರವಿಂದ್ ಕುಟುಂಬ ಅಂಬಾನಿ ಅವರ ಕುಟುಂಬದೊಂದಿಗೆ ಹೇಗೆ ಸಂಬಂಧ ಹೊಂದಿದೆ ಎನ್ನುವುದು ನಿಮಗೆ ಆಶ್ಚರ್ಯವಾಗಬಹುದು.
ಅರವಿಂದ್ ಪೋದಾರ್ ಅವರ ಮಗ ರಾಜೀವ್ ಪೋದಾರ್ ಅವರು ಮನೋಜ್ ಮೋದಿ ಅವರ ಮಗಳನ್ನು ಮದುವೆಯಾಗಿದ್ದಾರೆ. ಮನೋಜ್ ಮೋದಿ ಅವರು ಅಂಬಾನಿ ಅವರ ಬಹಳ ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು, ರಿಲಯನ್ಸ್ ಕಂಪನಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ವ್ಯಕ್ತಿಯಾಗಿದ್ದಾರೆ. ಮೋದಿ ಅವರಿಗೆ ಅಂಬಾನಿ ಅವರು ಅಂಟಿಲಾದಲ್ಲಿ 1500 ಕೋಟಿ ರೂ. ಮೌಲ್ಯದ ಮನೆಯನ್ನು ಗಿಫ್ಟ್ ಮಾಡಿದ್ದಾರೆ.
ಅರವಿಂದ್ ಪೋದಾರ್ ಅವರು ಫೋರ್ಬ್ಸ್ ಪಟ್ಟಿಯ ಪ್ರಕಾರ ಭಾರತದ 59ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೃಷಿ ಹಾಗೂ ಕೈಗಾರಿಕಾ ವಲಯದ ವಾಹನಗಳಿಗೆ ಪೂರಕವಾಗುವ ಟೈರ್ ತಯಾರಿಸುವ ಘಟಕವನ್ನು ಮಹಾರಾಷ್ಟ್ರದಲ್ಲಿ 2021ರಲ್ಲಿ ಸ್ಥಾಪಿಸಿದ್ದಾರೆ. ಹಲವು ಬಿಲಿಯನೇರ್‌ಗಳಂತೆ ಅರವಿಂದ್ ಪೋದಾರ್ ಹಾಗೂ ಅವರ ಕುಟುಂಬವು ಸಾರ್ವಜನಿಕ ಬದುಕಿನಲ್ಲಿ ಹೆಚ್ಚು ಗುರುತಿಸಿಕೊಳ್ಳದೆ ಪ್ರಚಾರಗಳಿಂದ ದೂರ ಉಳಿದಿದ್ದಾರೆ.
ಅರವಿಂದ್ ಪೋದಾರ್ ಅವರು ತಮ್ಮ ಕಂಪನಿಯಲ್ಲಿ ಅಧ್ಯಕ್ಷರಾಗಿದ್ದು, ಮಗ ರಾಜೀವ್ ಪೋದಾರ್ ಅವರು ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರಾಜೀವ್ ಪೋದಾರ್ ಅವರ ಪತ್ನಿ, ಮನೋಜ್ ಮೋದಿ ಅವರ ಮಗಳು ಖುಷ್ಬೂ ಪೋದಾರ್ ಕಂಪನಿಯಲ್ಲಿ ಜಂಟಿ ವ್ಯವಸ್ಥಾಪಕರಾಗಿದ್ದಾರೆ. ಬಾಲಕೃಷ್ಣ ಇಂಡಸ್ಟ್ರೀಸ್ ಕಂಪನಿಯು 1951ರಲ್ಲೇ ಟೈರ್ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಪ್ರಸ್ತುತ ಅಮೆರಿಕಾ, ಯುರೋಪ್ ದೇಶಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications