ಬಡತನದ ಬೇಗೆಯಲ್ಲಿ ಬೆಂದ ಬಾಲಕ ಇಂದು ಯುಎಇಯ ಮಸಾಲೆ ಕಿಂಗ್: ಆದಿಲ್ ಗ್ರೂಪ್ ನ ಒಡೆಯ

ಬೆಂಗಳೂರು, ಮಾರ್ಚ್‌ 13: ಮಸಾಲಾ ಕಿಂಗ್' ಎಂದು ಜನಪ್ರಿಯವಾಗಿ ಕರೆಯಲ್ಪಡುವ ದುಬೈನ ವಾಣಿಜ್ಯೋದ್ಯಮಿ ಮತ್ತು ಪ್ರಮುಖ ಉದ್ಯಮಿ ಡಾ. ಧನಂಜಯ್ ದಾತಾರ್ ಅವರ ಜೀವನದ ನೈಜ ಘಟನೆಗಳು ಸ್ವಾವಲಂಬನೆ, ಮಿತವ್ಯಯ ಮತ್ತು ಕಠಿಣ ಪರಿಶ್ರಮದ ಮೌಲ್ಯವನ್ನು ಸಾರುತ್ತದೆ. ಪರಿಶ್ರಮಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ಸಾರವನ್ನು ಒಳಗೊಂಡಿರುವ ಧನಂಜಯ್ ಅವರ ಬದುಕು ಬಹಳಷ್ಟು ಯುವ ಉದ್ಯಮಿಗಳಿಗೆ ಸ್ಪೂರ್ತಿದಾಯಕವಾಗಿದೆ.

ತಮ್ಮ ತಂದೆಯಿಂದ ದಿನಸಿ ವ್ಯಾಪಾರಕ್ಕೆ ಜೀವ ತುಂಬಿ ಅದನ್ನು ದೊಡ್ಡ ಉದ್ಯಮವಾಗಿ ಪರಿವರ್ತಿಸಿದ ಕೀರ್ತಿ ಧನಂಜಯ್ ಅವರದ್ದು. ಇಂದು ಇವರ ಒಡೆತನದ ಆದಿಲ್ ಗ್ರೂಪ್ ನ ಗಲ್ಫ್ ರಾಷ್ಟ್ರಗಳಾದ್ಯಂತ ಹರಡಿದ್ದು 50 ವಿಶಾಲವಾದ ಸೂಪರ್‌ಸ್ಟೋರ್‌ಗಳು, 2 ಮಸಾಲೆ ಕಾರ್ಖಾನೆಗಳು, ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ 2 ಹಿಟ್ಟಿನ ಗಿರಣಿಗಳು ಮತ್ತು ಆಮದು-ರಫ್ತು ಕಂಪನಿಯನ್ನು ಒಳಗೊಂಡಿದೆ. ಇವರ ಉತ್ಪನ್ನಗಳು ಭಾರತೀಯ ವಲಸಿಗರಲ್ಲಿ ಆರಾಧನಾ ಸ್ಥಾನಮಾನವನ್ನು ಪಡೆದುಕೊಂಡಿದ್ದು, ಮಸಾಲೆಗಳು ಮತ್ತು ಉಪ್ಪಿನಕಾಯಿಗಳು ಸೇರಿದಂತೆ 9000 ಕ್ಕೂ ಹೆಚ್ಚು ವಿಧದ ಭಾರತೀಯ ಅಧಿಕೃತ ಆಹಾರಗಳು ಸೂಪರ್‌ಸ್ಟೋರ್‌ಗಳಲ್ಲಿ ಲಭ್ಯವಿದೆ.

ಆದಿಲ್ ಗ್ರೂಪ್‌ನ ಮಾಲೀಕ ಯುಎಇಯ ಮಸಾಲೆ ಕಿಂಗ್ ಇವರು

ಮಹಾರಾಷ್ಟ್ರದ ವಿದರ್ಭದಲ್ಲಿ ಮಧ್ಯಮ ವರ್ಗದ ಕುಟುಂಬ ಜನಿಸಿದ ಧನಂಜಯ್, ಅವರ ತಂದೆ ಮಹದೇವ್ ದಾತಾರ್ ಭಾರತೀಯ ವಾಯುಪಡೆಯಲ್ಲಿ (IAF) ಸಾರ್ಜೆಂಟ್ ಆಗಿದ್ದು ನಿರಂತರವಾಗಿ ಪ್ರಯಾಣಿಸಬೇಕಾಗಿತ್ತು. ಹೀಗಾಗಿ ಧನಂಜಯ್ 8 ನೇ ವಯಸ್ಸಿನಿಂದ ಅಮರಾವತಿ ನಗರದಲ್ಲಿ ಅವರ ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಆದರೆ ಈ ವೇಳೆ ಬಹಳ ಬಡತನವಿತ್ತು. ಸರಿಯಾದ ಶಾಲಾ ಸಮವಸ್ತ್ರವಿರಲಿಲ್ಲ, ಧರಿಸಲು ಚಪ್ಪಲಿ ಶೂ ಇದ್ಯಾವುದು ಇರಲಿಲ್ಲ, ಇದೀ ದಿನ ಚಾ ಹಾಗೂ ಎರಡು ಭಕ್ರಿ ರೊಟ್ಟಿಯಲ್ಲಿ ದಿನಗಳೆಯಬೇಕಾಗಿತ್ತು. ತಂದೆ ನಿವೃತ್ತಗೊಂಡ ಬಳಿಕ ಧನಂಜಯ್ 1984 ರಲ್ಲಿ 20 ವರ್ಷ ವಯಸ್ಸಿನವನಾಗಿದ್ದಾಗ ತನ್ನ ತಂದೆಯೊಂದಿಗೆ ದುಬೈಗೆ ಬಂದರು. ದುಬೈನಲ್ಲಿ ಅವರ ತಂದೆ 1975 ರಲ್ಲಿ ಭಾರತೀಯ ಮಸಾಲೆಗಳನ್ನು ಮಾರಾಟದ ಸಣ್ಣ ಅಂಗಡಿಯನ್ನು ಸ್ಥಾಪಿಸಿದ್ದರು.

ಆರಂಭಿಕ ಸವಾಲುಗಳನ್ನು ನಿವಾರಿಸಿ, ದಾತಾರ್‌ ಶೀಘ್ರದಲ್ಲೇ ಭಾರತೀಯ ವಲಸಿಗ ಸಮುದಾಯದ ವಿಶ್ವಾಸವನ್ನು ಗಳಿಸಿದರು.ತಮ್ಮ ಗ್ರಾಹಕರ ನಾಡಿಮಿಡಿತದ ಚೆನ್ನಾಗಿ ಅರ್ಥಮಾಡಿಕೊಂಡಿರುವುದು ಅವರ ಯಶಸ್ಸಿನ ಗುಟ್ಟಾಗಿತ್ತು. ಸರಿಯಾದ ಸಮಯದಲ್ಲಿ ಸರಿಯಾದ ಉತ್ಪನ್ನಗಳನ್ನು ನೀಡಿ ಯುಎಇಯಲ್ಲಿ ಭಾರತೀಯರು ಮತ್ತು ಇತರ ವಿದೇಶಿಗರ ಮನೆಮಾತಾದರು. "ನಿರ್ಣಯ-ಪ್ರಾಮಾಣಿಕತೆ-ಗ್ರಾಹಕ ಸೇವೆ-ಸೌಜನ್ಯ" ಇದು ನನ್ನ ವ್ಯವಹಾರ ಮಂತ್ರವಾಗಿದೆ. ಇದೇ ಬದ್ಧತೆಯು ಅವರನ್ನು ದುಬೈನಲ್ಲಿ ಸಣ್ಣ ಅಂಗಡಿಯ ಮಾಲೀಕನಿಂದ ಹಲವು ಸಂಸ್ಥೆಗಳ ಒಡೆಯನಾಗಿರುವ ಕೋಟ್ಯಾಧಿಪತಿಯನ್ನಾಗಿ ಮಾಡಿದೆ ಎನ್ನುತ್ತಾರೆ ಧನಂಜಯ್.

ಕಂಪನಿಯು ದುಬೈನ ಅಲ್ ಕ್ವೋಜ್ ಕೈಗಾರಿಕಾ ಪ್ರದೇಶದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದು,ಅಲ್ಲಿ "ಪೀಕಾಕ್" ಬ್ರಾಂಡ್‌ನ ಅಡಿಯಲ್ಲಿ ಭಾರತೀಯ ಆಹಾರ ಪದಾರ್ಥಗಳನ್ನು ಉತ್ಪಾದಿಸುತ್ತದೆ. ಇದು ಭಾರತೀಯ ಉಪಖಂಡದಲ್ಲಿ ಗುಣಮಟ್ಟದ ಭಾರತೀಯ ದಿನಸಿ ಮತ್ತು ಆಹಾರೇತರ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ರಫ್ತುದಾರರಲ್ಲಿಒಬ್ಬರಾಗಿದ್ದು ಭಾರತದ ಮುಂಬೈನಲ್ಲೂ ಇದರ ಅಂಗವನ್ನು ಹೊಂದಿದೆ.

ಧನಂಜಯ್ ಅವರ ನೇತೃತ್ವದಲ್ಲಿ ಆದಿಲ್ ಗ್ರೂಪ್ ಯುಎಇಗೆ 9000 ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳನ್ನು ಪರಿಚಯಿಸಿದೆ. ಕಳೆದ ನಾಲ್ಕು ದಶಕಗಳಿಂದ ಅವರು ಗಲ್ಫ್ ಪ್ರದೇಶದಲ್ಲಿ ಭಾರತೀಯ ಸಮುದಾಯಕ್ಕೆ ಸುರಕ್ಷಿತ ಭಾರತೀಯ ಆಹಾರ ಪದಾರ್ಥಗಳ ಸೇವೆ ಸಲ್ಲಿಸುತ್ತಿದ್ದಾರೆ. ಈ ಅಮೂಲ್ಯ ಕೊಡುಗೆಗಾಗಿ ಯುಎಇಯ ಸರ್ಕಾರ ಧನಂಜಯ್‌ಗೆ 2001 ರಲ್ಲಿ ಪ್ರತಿಷ್ಠಿತ ಪ್ರಶಸ್ತಿ ಮತ್ತು ಮಸಾಲಾ ಕಿಂಗ್ ಎಂಬ ಬಿರುದನ್ನು ನೀಡಿ ಗೌರವಿಸಿದೆ.

"ನನ್ನ ಪತ್ನಿ ವಂದನಾ ಮತ್ತು ಮಕ್ಕಳಾದ ಹೃಷಿಕೇಶ್ ಮತ್ತು ರೋಹಿತ್ ನಮ್ಮ ಆದಿಲ್ ಗ್ರೂಪ್ ನ ಬೆಳವಣಿಗೆ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ವಂದನಾ ನಮ್ಮ ಸಂಸ್ಥೆಗೆ ಆರ್ಥಿಕ ಶಿಸ್ತು ಮತ್ತು ನಿರ್ವಹಣೆಯನ್ನು ಅಳವಡಿಸಿದರೆ, ಹೃಷಿಕೇಶ್ ಮತ್ತು ರೋಹಿತ್ ಅವರು ಕೃತಕ ಬುದ್ಧಿಮತ್ತೆ, ಇ-ಕಾಮರ್ಸ್, ಆನ್‌ಲೈನ್ ಮಾರ್ಕೆಟಿಂಗ್ ಮುಂತಾದ ಇತ್ತೀಚಿನ ನೂತನ ತಂತ್ರಜ್ಞಾನಗಳನ್ನು ಸಂಸ್ಥೆಯಲ್ಲಿ ಅಳವಡಿಸಿದ್ದಾರೆ. " ಎಂದು ಧನಂಜಯ್ ಹೆಮ್ಮೆಯಿಂದ ಹೇಳುತ್ತಾರೆ.

ಆದಿಲ್ ಗ್ರೂಪ್ ಸಕ್ರಿಯವಾಗಿ ತಮ್ಮ ಸಮೂಹವನ್ನು ವಿಸ್ತರಣಾ ಮಾಡುತ್ತಿದ್ದು ಇತರ ಗಲ್ಫ್ ದೇಶಗಳಲ್ಲಿ ತನ್ನ ಮಳಿಗೆಗಳನ್ನು ಸ್ಥಾಪಿಸುತ್ತಿದೆ. ಮಾತ್ರವಲ್ಲದೇ USA, ಕೆನಡಾ, ಕೀನ್ಯಾ, ಸ್ವಿಟ್ಜರ್ಲೆಂಡ್, ಇಟಲಿ, ಎರಿಟ್ರಿಯಾ, ಕುವೈತ್, ಓಮನ್, ಬಹ್ರೇನ್, ಸೌದಿ ಅರೇಬಿಯಾ ಮತ್ತು UAE ನಲ್ಲಿ ವಿಶೇಷ ವ್ಯಾಪಾರ ಮಾರ್ಗಗಳನ್ನು ಸ್ಥಾಪಿಸಿದೆ. ಧನಂಜಯ್ ಅವರು ಶ್ರೇಷ್ಠತೆ ಮತ್ತು ಗುಣಮಟ್ಟದ ಉಪ್ತನ್ನಗಳಿಗಾಗಿ ಹಲವಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವ್ಯಾಪಾರದ ಹೊರತಾಗಿ, ಧನಂಜಯ್ ಅವರು ಭಾರತದ ಹಲವಾರು ಯುವ ಉದ್ಯಮಿಗಳಿಗೆ ತಮ್ಮ ಗುಣಮಟ್ಟದ ಉತ್ಪನ್ನಗಳನ್ನು ಗಲ್ಫ್ ಮಾರುಕಟ್ಟೆಗಳಿಗೆ ರಫ್ತು ಮಾಡಲು ಸಹಾಯ ಮಾಡಿದ್ದಾರೆ. ಅವರು ತಮ್ಮ ಪರೋಪಕಾರಿ ಕೆಲಸಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಅವರು ಅನಾಥಾಶ್ರಮಗಳು, ಹಿಂದುಳಿದ ಮಕ್ಕಳ ಶಾಲೆಗಳು ಮತ್ತು ಸಮಾಜ ಕಲ್ಯಾಣ ಯೋಜನೆಗಳಿಗೆ ಉದಾರವಾಗಿ ದೇಣಿಗೆ ನೀಡಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+