ನವದೆಹಲಿ, ಆಗಸ್ಟ್ 28: ವ್ಯವಹಾರಿಕ ಬದುಕಿನಲ್ಲಿ ನಮ್ಮನ್ನು ತೊಡಗಿಸಿಕೊಂಡಿರುವ ಕಾರಣ ಪ್ರತಿ ತಿಂಗಳಿನ ಬ್ಯಾಂಕ್ ರಜೆಗಳು ಪ್ರಮುಖವಾಗುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ಬರೋಬ್ಬರಿ 15 ದಿನ ಬ್ಯಾಂಕ್ ರಜೆ ಇರಲಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಸಾಲು ಸಾಲು ರಜೆಯಿದೆ. ಗಣೇಶ ಚತುರ್ಥಿ, ಈದ್ ಮಿಲಾದ್ ಸೇರಿದಂತೆ ಒಟ್ಟು 15 ದಿನಗಳ ದಿನಗಳ ಕಾಲ ಬ್ಯಾಂಕ್ ಮುಚ್ಚಿರುತ್ತದೆ. ಆ ರಜೆಗಳು ಇರೋದು ಯಾವಾಗ ಎಂಬುದನ್ನು ತಿಳಿದುಕೊಳ್ಳೋಣ.

ಸೆಪ್ಟೆಂಬರ್ 2024ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ
ಸೆಪ್ಟೆಂಬರ್ 1- ಭಾನುವಾರ-ಭಾರತದಾದ್ಯಂತ
ಸೆಪ್ಟೆಂಬರ್ 5- ಶ್ರೀಮಂತ ಶಂಕರದೇವ ಮತ್ತು ಹರತಾಳಿಕ ತೀಜ್ ಅವರ ತಿಥಿ (ಅಸ್ಸಾಂ, ಛತ್ತೀಸ್ ಘಡ, ಸಿಕ್ಕೀಂ)
ಸೆಪ್ಟೆಂಬರ್ 7- ವಿನಾಯಕ ಚತುರ್ಥಿ- ಭಾರತದಾದ್ಯಂತ
ಸೆಪ್ಟೆಂಬರ್ 8- ಭಾನುವಾರ-ಭಾರತದಾದ್ಯಂತ
ಸೆಪ್ಟೆಂಬರ್ 13- ರಾಮದೇವ್ ಜಯಂತಿ/ ತೇಜ ದಶ್ಮಿ (ಶುಕ್ರವಾರ - ರಾಜಸ್ಥಾನ)
ಸೆಪ್ಟೆಂಬರ್ 14- ಎರಡನೇ ಶನಿವಾರ/ ಓಣಂ
ಸೆಪ್ಟೆಂಬರ್ 15- ಭಾನುವಾರ/ತಿರುವೋಣಂ-ಇಡೀ ಭಾರತ/ ಕೇರಳ
ಸೆಪ್ಟೆಂಬರ್ 16- ಈದ್ ಇ ಮಿಲಾದ್ (ಸೋಮವಾರ)- ಭಾರತದಾದ್ಯಂತ
ಸೆಪ್ಟೆಂಬರ್ 17- ಇಂದ್ರ ಜಾತ್ರೆ (ಮಂಗಳವಾರ)- ಸಿಕ್ಕಿಂ
ಸೆಪ್ಟೆಂಬರ್ 18- ಶ್ರೀ ನಾರಾಯಣ ಗುರು ಜಯಂತಿ (ಬುಧವಾರ)- ಕೇರಳ
ಸೆಪ್ಟೆಂಬರ್ 21- ಶ್ರೀ ನಾರಾಯಣ ಗುರು ಸಮಾಧಿ (ಶನಿವಾರ)- ಕೇರಳ
ಸೆಪ್ಟೆಂಬರ್ 22- ಭಾನುವಾರ- ಭಾರತದಾದ್ಯಂತ
ಸೆಪ್ಟೆಂಬರ್ 23- ಹುತಾತ್ಮರ ದಿನ (ಸೋಮವಾರ)- ಹರಿಯಾಣ
ಸೆಪ್ಟೆಂಬರ್ 28- ನಾಲ್ಕನೇ ಶನಿವಾರ- ಭಾರತದಾದ್ಯಂತ
ಸೆಪ್ಟೆಂಬರ್ 29- ಭಾನುವಾರ- ಭಾರತದಾದ್ಯಂತ
ನಿಮ್ಮ ಚಿಂತೆ ದೂರ ಮಾಡಿಕೊಳ್ಳಿ:
ಬ್ಯಾಂಕುಗಳ ಹಲವು ದಿನಗಳ ಕಾಲ ಮುಚ್ಚಿದರೂ ಡಿಜಿಟಲ್ ಬ್ಯಾಂಕಿಂಗ್‌ಗಳು ಸಕ್ರಿಯವಾಗಿರುತ್ತವೆ. ಆನ್‌ಲೈನ್ (Online), ಮೊಬೈಲ್ (Mobile) ಮತ್ತು ಇತರ ಡಿಜಿಟಲ್ ಮಾಧ್ಯಮಗಳ ಮೂಲಕ ನಗದು ವ್ಯವಹಾರವನ್ನು ನಡೆಸಬಹುದು. ಎಲ್ಲಾ ಬ್ಯಾಂಕುಗಳ ಆನ್‌ಲೈನ್ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳ ಅಪ್ಲಿಕೇಶನ್‌ಗಳನ್ನು ವಾರಾಂತ್ಯ ಅಥವಾ ಇತರ ರಜೆಗಳನ್ನು ಲೆಕ್ಕಿಸದೆ ನಿರ್ವಹಿಸುತ್ತವೆ. ಆನ್‌ಲೈನ್ ಮೂಲಕ ಖಾತೆಗಳಿಗೆ ಹಣ ತುಂಬುವುದು, ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು, ಯುಪಿಐ ಪೇಮೆಂಟ್ ನಡೆಸಲು ಯಾವುದೇ ರೀತಿಯ ತೊಂದರೆ ಇರುವುದಿಲ್ಲ.
ಭಾರತದಲ್ಲಿನ ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಕೆಲವು ರಾಜ್ಯದಲ್ಲಿರುವ ಹಬ್ಬಗಳ ರಜೆ ಇನ್ನೊಂದು ರಾಜ್ಯದಲ್ಲಿ ಇರುವುದಿಲ್ಲ. ಹೀಗಾಗಿ ಯಾವುದೇ ರೀತಿಯ ಗೊಂದಲವನ್ನು ತಪ್ಪಿಸಲು ಸಮಯಕ್ಕಿಂತ ನಿಮಗೆ ಸಂಬಂಧಿಸಿದ ಬ್ಯಾಂಕ್ ರಜಾ ವೇಳಾಪಟ್ಟಿ ನೋಡುವುದು ಉತ್ತಮ.


Click it and Unblock the Notifications