ಬೆಂಗಳೂರು, ಮೇ 28: ಐಐಟಿಯಲ್ಲಿ ಓದುವುದು ಭಾರತೀಯರಿಗೆ ಪ್ರತಿಷ್ಠೆಯ ವಿಷಯ. ಐಐಟಿಯಲ್ಲಿ ಅಭ್ಯಾಸಿಸಿ ನಂತರ ಹೆಸರಾಂತ ಕಂಪನಿಯಲ್ಲಿ ಅಧಿಕ ವೇತನದ ಕೆಲಸವನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇಂತಹ ಅನೇಕ ಮಂದಿ ಕೊನೆಗೆ ತಮ್ಮದೇ ಆದ ಉದ್ಯಮ ಸ್ಥಾಪಿಸಲು ಕೆಲಸ ತೊರೆಯುವುದು ಸಾಮಾನ್ಯ. ಇಂತಹ ಸ್ಪೂರ್ತಿದಾಯಕ ಕಥೆಗಳಲ್ಲಿ ಬಿಹಾರ ಮೂಲದ ಅರುಣಾಭ್ ಸಿನ್ಹಾ ಮತ್ತು ಅವರ ಪತ್ನಿ ಗುಂಜನ್ ಸಿನ್ಹಾ ಅವರ ಕಥೆ ಕೂಡಾ ಒಂದು.
ಅರುಣಾಭ್ ಸಿನ್ಹಾ ಐಐಟಿ ಪದವೀಧರರಾಗಿದ್ದು, ತಮ್ಮ ಸ್ವಂತ ಉದ್ಯಮ ಆರಂಭಿಸುವ ಮುನ್ನ ವಾರ್ಷಿಕ ಪ್ಯಾಕೇಜ್ 84 ಲಕ್ಷ ರೂ.ಗಳನ್ನು ಪಡೆಯುತ್ತಿದ್ದ ಉದ್ಯೋಗವನ್ನು ತ್ಯಜಿಸಲು ನಿರ್ಧರಿಸಿದರು.

ಭಾಗಲ್ಪುರದ ಬಡ ಕುಟಂಬದ ಪುಟ್ಟ ಮನೆಯಲ್ಲಿ ಬೆಳೆದ ಅರುಣಾಭ್ ಬಾಲ್ಯದಿಂದಲೂ ಜಾಣ ವಿದ್ಯಾರ್ಥಿಯಾಗಿದ್ದರು. ಬಾಲ್ಯದಿಂದಲೇ ಸಾಧನೆಯ ಕನಸು ಕಂಡಿದ್ದ ಅವರು 8 ನೇ ತರಗತಿಯಲ್ಲಿ IIT ಗಾಗಿ ತಯಾರಿ ಆರಂಭಿಸಿದರು. 12 ನೇ ತರಗತಿಯ ನಂತರ, ಅವರು IIT ಬಾಂಬೆಗೆ ಸೇರ್ಪಡೆಗೊಂಡರು. ಅನುರಭ್ ಪ್ರತಿಬ್ಭಾವಂತ ವಿದ್ಯಾರ್ಥಿಯಾಗಿದ್ದರು, ಅವರ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಅವರ ಕುಟುಂಬ ಕಷ್ಟಪಡುತ್ತಿತ್ತು.
ಅರುಣಾಭ್ ಅವರು ಐಐಟಿ ಮುಂಬೈನ ಮೆಟಲರ್ಜಿ ಮತ್ತು ಮೆಟೀರಿಯಲ್ ಸೈನ್ಸ್‌ನಲ್ಲಿ ಐದು ವರ್ಷಗಳ ಇಂಟಿಗ್ರೇಟೆಡ್ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಪ್ರೋಗ್ರಾಂಗೆ ಸೇರಿಕೊಂಡು 2008 ರಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ ವಿದೇಶಕ್ಕೆ ತೆರಳಿ ವಿವಿಧ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದರು.
2011 ರಲ್ಲಿ, ಅರುಣಾಭ್ ಅವರು ಫ್ರಾಂಗ್ಲೋಬಲ್ ಎಂಬ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಿದರು, ಇದು ವಿದೇಶಿ ವ್ಯವಹಾರಗಳಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಸಹಾಯ ಮಾಡುವುದರ ಮೇಲೆ ಕೇಂದ್ರೀಕರಿಸಿತ್ತು.ಅರುಣಾಭ್ 2015 ರಲ್ಲಿ ಫ್ರಾಂಚೈಸ್ ಇಂಡಿಯಾಗೆ ಫ್ರಾಂಚೈಸ್ ಇಂಡಿಯಾಗೆ ಮಾರಾಟ ಮಾಡಿದರು. ಇದೇ ವೇಳೆ ಅವರು ಗುಂಜನ್ ತನೇಜಾ ಅವರನ್ನು ವಿವಾಹವಾದರು. ಅದೇ ವರ್ಷ ಅವರು 1 ಕೋಟಿ ರೂಪಾಯಿಗಳ ವಾರ್ಷಿಕ ಪ್ಯಾಕೇಜ್‌ನಲ್ಲಿ ಬಜೆಟ್ ಹೋಟೆಲ್ ಸರಪಳಿಯಾದ ಟ್ರೀಬೋಗೆ ಸೇರಿದರು. ಅಲ್ಲಿ ಕೆಲಸ ಮಾಡುವಾಗ, ಲಾಂಡ್ರಿ ಗ್ರಾಹಕರ ಅಸಮಾಧಾನದ ಪ್ರಮುಖ ಮೂಲ ಎಂದು ಅರ್ಥಮಾಡಿಕೊಂಡರು.
ಇದಕ್ಕೆ ಪರಿಹಾರ ಕಂಡುಕೊಳ್ಳಲು ಅರುಣಾಭ್ ಸಿನ್ಹಾ ಹೊರಟಾಗ UClean ಸಂಸ್ಥೆ ಹುಟ್ಟಿಕೊಂಡಿತು. ಲಾಂಡ್ರಿ ಭಾರತದಲ್ಲಿ ಹೆಚ್ಚಾಗಿ ಅಸಂಘಟಿತ ವಲಯವಾಗಿದೆ. ಈ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಶೋಧನೆ ಮಾಡಿದ ನಂತರ, ಅರುಣಾಭ್ ಸಿನ್ಹಾ ದಂಪತಿ ಅವರು ಜನವರಿ 2017 ರಲ್ಲಿ ದೆಹಲಿ ಎನ್ಸಿಆರ್ ನಲ್ಲಿ UClean ಅನ್ನು ಪ್ರಾರಂಭಿಸಿದರು.
ಮೊದಲ ಮಳಿಗೆಯನ್ನು ಹೊರತರುವುದು ಅರುಣಾಭ್ ಬಹಳಷ್ಟು ಸವಾಲುಗಳನ್ನು ಎದುರಿಸಿದರು. ಅಂಗಡಿಯಲ್ಲಿ ಇಲಿಗಳ ಕಾಟ ಬಹುದೊಡ್ಡ ಸಮಸ್ಯೆಯಾಗಿತ್ತು. ಇದಲ್ಲದೇ ಅಗ್ನಿ ಅನಾಹುತ ನಡೆದು ಮೆಷಿನ್ ಗಳೆಲ್ಲಾ ಸುಟ್ಟುಹೋಗಿತ್ತು. ಅದರ್ ಎದೆಗುಂದದೇ ಮತ್ತೆ ಹೊಸ ಪ್ರಯತ್ನವನ್ನು ಹುಟ್ಟುಹಾಕಿ UClean ಆರಂಭಿಸಿದರು.
2017 ರ ಹೊತ್ತಿಗೆ, UClean ಹೈದರಾಬಾದ್ ಮತ್ತು ಪುಣೆಯಲ್ಲಿ ತನ್ನ ಫ್ರಾಂಚೈಸಿಗಳನ್ನು ವಿಸ್ತರಿಸಿತು. ಇಂದು UClean ಈಗ ಭಾರತದಾದ್ಯಂತ 104 ನಗರಗಳಲ್ಲಿ 350 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. UClean ಈಗಾಗಲೇ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ವಿಸ್ತರಿಸಿದೆ. ಸದ್ಯ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ಸಾಹಸೋದ್ಯಮಕ್ಕೆ ಸಿನ್ಹಾ ದಂಪತಿಗಳು ಸಿದ್ಧವಾಗಿದೆ.


Click it and Unblock the Notifications