ಇತ್ತೀಚೆಗೆ ಆನ್‌ಲೈನ್ ವಂಚನೆ (Online Fraud), ಅಮಾಯಕರ ಮೊಬೈಲ್ ಹ್ಯಾಕ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ಹೊಸ ಕಳ್ಳ ದಾರಿಗಳನ್ನು ಹುಡುಕುತ್ತಾ ಸೈಬರ್ ವಂಚಕರು (Cyber Crime) ಮೊಬೈಲ್, ಲ್ಯಾಪ್‌ಟಾಪ್ ಮೂಲಕ ವಂಚನೆ ಮಾಡುವ ಸುದ್ದಿಗಳು ಕೇಳುತ್ತಲೇ ಇದೆ. ಆದ್ರೆ ಇತ್ತೀಚೆಗೆ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಲ್ಲಿ, AePS ಟ್ರಾನ್ಸಾಕ್ಷನ್‌ಗಳು ಮತ್ತು ಇತರ ಸೇವೆಗಳಲ್ಲಿ ಬಯೋಮೆಟ್ರಿಕ್ ಮೋಸದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದ್ದರಿಂದ ಆಧಾರ್ ಕಾರ್ಡ್‌ನಲ್ಲಿ (Aadhaar Card) ಫಿಂಗರ್‌ಪ್ರಿಂಟ್ ಹಾಗೂ ಐಸ್ ಬಯೋಮೆಟ್ರಿಕ್ ಮೂಲಕ ವಂಚನೆ ಮಾಡುವ ಘಟನೆಗಳು ಸಾಮಾನ್ಯವಾಗಿದೆ. ಇದೀಗ ಈ ಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ನೀಡಿರುವ ಬಯೋಮೆಟ್ರಿಕ್ ಲಾಕ್ (Biometrics Lock) ಸೌಲಭ್ಯ ಬಹಳ ಉಪಯುಕ್ತವಾಗಿದೆ.

ಈ ಸೌಲಭ್ಯದ ಮೂಲಕ ನಿಮ್ಮ ಆಧಾರ್‌ನ ಬಯೋಮೆಟ್ರಿಕ್ ಡೇಟಾವನ್ನು (ಫಿಂಗರ್‌ಪ್ರಿಂಟ್, ಐಸ್, ಫೇಸ್) ತಾತ್ಕಾಲಿಕ ಲಾಕ್ ಮಾಡಬಹುದು. ಲಾಕ್ ಮಾಡಿದ ನಂತರ ಯಾರೂ ಬಯೋಮೆಟ್ರಿಕ್ ಮೂಲಕ ನಿಮ್ಮ ಆಧಾರ್ ಅನ್ನು ದುರುಪಯೋಗ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮಗೆ ಬೇಕಾದಲ್ಲಿ ಓಟಿಪಿ ಮೂಲಕ ಬಳಸಬಹುದು.
ಏನಿದು ಆಧಾರ್ ಬಯೋಮೆಟ್ರಿಕ್ ಲಾಕ್?
ಆಧಾರ್ ಬಯೋಮೆಟ್ರಿಕ್ ಲಾಕ್ ವೈಶಿಷ್ಟ್ಯವು ಅನಧಿಕೃತ ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಪ್ರವೇಶವನ್ನು ತಡೆಯುತ್ತದೆ. ಈ ಲಾಕ್ ಯುಪಿಐ, ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ವಹಿವಾಟುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಬ್ಯಾಂಕ್, ಪ್ಯಾನ್, ಮೊಬೈಲ್, EPF, LPG ಸಬ್ಸಿಡಿಯಂತಹ ಅನೇಕ ಪ್ರಮುಖ ಸೇವೆಗಳಿಗೆ ಸಾಮಾನ್ಯವಾಗಿ ಆಧಾರ್ ಲಿಂಕ್ ಆಗಿರುತ್ತದೆ. ಆದರೆ ಇತ್ತೀಚೆಗೆ ಈ ಸೌಲಭ್ಯಗಳಲ್ಲಿ ದುರುಪಯೋಗಗಳೇ ಹೆಚ್ಚಾಗಿದೆ. ಆದ್ದರಿಂದ ಯುಐಡಿಎಐ ಹೊಸ ಬಯೋಮೆಟ್ರಿಕ್ ಲಾಕ್ ಫೀಚರ್ ಪರಿಚಯಿಸಿದೆ.
ಬಯೋಮೆಟ್ರಿಕ್ ಲಾಕ್ ಮಾಡುವುದರಿಂದ ಏನು ಪ್ರಯೋಜನ?
- ಫಿಂಗರ್‌ಪ್ರಿಂಟ್, ಐರಿಸ್ ಮತ್ತು ಫೇಸ್ ಸ್ಕ್ಯಾನ್ ಮೂಲಕ ಯಾವುದೇ ಆಧಾರ್ ಅಥೆಂಟಿಕೇಶನ್ ಸಾಧ್ಯವಿಲ್ಲ.
- ಬ್ಯಾಂಕ್‌ನಲ್ಲಿ AePS, ಮೊಬೈಲ್ ರೀಚಾರ್ಜ್, ಸರ್ಕಾರಿ ಸೇವೆಗಳಲ್ಲಿ ಬಯೋಮೆಟ್ರಿಕ್ ದುರುಪಯೋಗ ತಡೆಗಟ್ಟುತ್ತದೆ.
- ಆನ್‌ಲೈನ್ ವಂಚನೆಗಳು ಕಡಿಮೆಯಾಗಲಿದೆ.
- ಅಗತ್ಯವಿದ್ದಾಗ ತಾತ್ಕಾಲಿಕ ಅನ್‌ಲಾಕ್ ಮಾಡಿ, ಮತ್ತೆ ಲಾಕ್ ಮಾಡಬಹುದು.
ಬಯೋಮೆಟ್ರಿಕ್ ಲಾಕ್ ಮಾಡುವುದು ಹೇಗೆ?
- ವೆಬ್‌ಸೈಟ್ ಮೂಲಕ
- ಮೈಆಧಾರ್ ವೆಬ್‌ಸೈಟ್‌ಗೆ ಮೊದಲು ಭೇಟಿ ನೀಡಿ.
- ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಆಯ್ಕೆ ಮಾಡಿ
- ನಿಮ್ಮ 12 ಡಿಜಿಟ್ ಆಧಾರ್ ನಂರ್ ಆಡ್ ಮಾಡಿ
- ಕ್ಯಾಪ್ಚಾ ಕೋಡ್ ಭರ್ತಿ ಮಾಡಿ. ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
- ಮೊಬೈಲ್‌ಗೆ ಬರುವ ಒಟಿಪಿ ಭರ್ತಿ ಮಾಡಿ.
- ಬಯೋಮೆಟ್ರಿಕ್ ಲಾಕ್ ಆಯ್ಕೆಯನ್ನು ಆನ್‌ಮಾಡಿ, ಸಬ್‌ಮಿಟ್ ಕೊಡಿ.
ಅನ್‌ಲಾಕ್ ಮಾಡುವುದು ಹೇಗೆ?
- ಬಯೋಮೆಟ್ರಿಕ್ ಬೇಕಾದಾಗ ಅಂದರೆ ಬ್ಯಾಮಕ್, ಸರ್ಕಾರಿ ಕೆಲಸಕ್ಕಾಗಿ ಬೇಕಾದಾಗ, ಅದೇ ವೆಬ್‌ಸೈಟ್ ಓಪನ್ ಮಾಡಿ ಅನ್‌ಲಾಕ್ ಬಯೋಮೆಟ್ರಿಕ್ಸ್ ಮೇಲೆ ಕ್ಲಿಕ್ ಕೊಡಿ.
- ಓಟಿಪಿ ಮೂಲಕ ದೃಢೀಕರಣ ಮಾಡಿ. ನಂತರ ತಾತ್ಕಾಲಿಕ ಅನ್‌ಲಾಕ್ ಆಗುತ್ತದೆ.
- ಕೆಲಸ ಮುಗಿದ ನಂತರ ಮತ್ತೆ ಲಾಕ್ ಮಾಡಬೇಕು.


Click it and Unblock the Notifications