ಮೊಬೈಲ್ ಸಿಮ್ ಕಾರ್ಡ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್‌ವರೆಗೂ (Bank Account) ಇಂದು ಆಧಾರ್ ಕಾರ್ಡ್ (Aadhaar Card) ಅನ್ನುವಂಥದ್ದು ಮಹತ್ವದ ದಾಖಲೆಯಾಗಿದೆ. ಅಲ್ಲದೇ ರಾಜ್ಯ ಸರ್ಕಾರದ ಶಕ್ತಿಯೋಜನೆ ಸೌಲಭ್ಯ ಅಂದ್ರೆ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬೇಕೆಂದರೂ ಮೊದಲು ಕೇಳೋದು ಆಧಾರ್ ಕಾರ್ಡ್. ಆದ್ದರಿಂದ ನೀವು ಹೊಂದಿರುವ ಆಧಾರ್ ಕಾರ್ಡ್‌ನಲ್ಲಿ ಸಣ್ಣ ತಪ್ಪುಗಳಿದ್ದರು, ದೊಡ್ಡ ಯೋಜನೆಯಿಂದ ವಂಚಿತರಾಗಬಹುದು. ಅದರಲ್ಲೂ ಮುಖ್ಯವಾಗಿ ನಿಮ್ಮ ವಿಳಾಸ ಪುರಾವೆ ಆಧಾರ್ ಕಾರ್ಡ್‌ನಲ್ಲಿ (Update Aadhaar Card Address) ಇರಲೇಬೇಕು.

ಹಾಗಿದ್ರೆ ಸುಲಭದಲ್ಲಿ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಅಪ್ಡೇಟ್ (Address Update in Aadhaar Card) ಮಾಡುವುದು ಹೇಗೆ ಗೊತ್ತಾ? ಈ ಟ್ರಿಕ್ಸ್ ಯೂಸ್ ಮಾಡಿದ್ರೆ ಮನೆಯಲ್ಲೇ ಕೂತು ಅಪ್ಡೇಟ್ ಮಾಡಬಹುದು.
ಆಧಾರ್ ಕಾರ್ಡ್‌ನಲ್ಲಿ ವಿಳಾಸ ಬದಲಾವಣೆ ಮಾಡುವುದು ಅಥವಾ ಅಪ್ಡೇಟ್ ಮಾಡುವುದು ಈಗ ಬಹಳ ಸುಲಭವಾಗಿದೆ. ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಒದಗಿಸಿರುವ ಈ ಆನ್‌ಲೈನ್ ಸೌಲಭ್ಯದಿಂದ ಮನೆಯಲ್ಲೇ ಕೂತು ಅಪ್ಡೇಟ್ ಮಾಡಬಹುದು. ಪ್ರಸ್ತುತ ಆನ್‌ಲೈನ್‌ನಲ್ಲಿ ಆಧಾರ್ ವಿಳಾಸ ಅಪ್ಡೇಟ್ ಮಾಡುವುದು ಉಚಿತವಾಗಿದ್ದು, ಜುಲೈ 14, 2026 ರವರೆಗೆ ಈ ಸೌಲಭ್ಯ ಲಭ್ಯವಿದೆ.
ಆನ್‌ಲೈನ್‌ನಲ್ಲಿ ಹೀಗೆ ಅಡ್ರೆಸ್ ಅಪ್ಡೇಟ್ ಮಾಡಿ:
- ಅಧಿಕೃತ ವೆಬ್‌ಸೈಟ್ myaadhaar.uidai.gov.in ಅಥವಾ ಅಧಿಕೃತ ಆಧಾರ್ ಆಪ್ ಡೌನ್‌ಲೋಡ್ ಮಾಡಬೇಕು.
- ನಿಮ್ಮ ಆಧಾರ್ ನಂಬರ್ ಆಡ್ ಮಾಡಬೇಕು ಮತ್ತು ಕ್ಯಾಪ್ಷಾ ಭರ್ತಿ ಮಾಡಬೇಕು.
- ಆ ಬಳಿಕ ನೋಂದಾಯಿತ ಮೊಬೈಲ್ ನಂಬರ್‌ಗೆ ಬರುವ ಓಟಿಪಿಯನ್ನು ಆಡ್ ಮಾಡಿ, ಲಾಗಿನ್ ಆಗಿ.
- ಅಲ್ಲಿ Update Address ಅಥವಾ Adress Update ಆಯ್ಕೆಯನ್ನು ಸೆಲೆಕ್ಟ್ ಮಾಡಿ
- ಹೊಸ ವಿಳಾಸ ಭರ್ತಿ ಮಾಡಬೇಕು.
- ಅದಕ್ಕಾಗಿ ಸರಿಯಾದ ದಾಖಲೆ, ಫೋಟೋ, ರೇಷನ್ ಕಾರ್ಡ್, ವಿದ್ಯುತ್ ಬಿಲ್ ಅಪ್‌ಲೋಡ್ ಮಾಡಬೇಕು.
- ಎಲ್ಲಾ ಅಪ್‌ಲೋಡ್ ಆದ ನಂತರ ಸಬ್‌ಮಿಟ್ ಕ್ಲಿಕ್ ಕೊಡಿ. ಆ ಬಳಿಕ SRN (Service Request Number) ಸಿಗುತ್ತದೆ.
- ಅದನ್ನು ಬಳಸಿ, myaadhaar.uidai.giv.in/Check AadhaarStatus ಬಳಸಿ ಸ್ಟೇಟಸ್ ಚೆಕ್ ಮಾಡಬಹುದು.
- ನೀವು ಚೇಂಜ್ ಮಾಡಿದ 15-30 ದಿನಗಳಲ್ಲಿ ಅಪ್ಡೇಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಆಫ್‌ಲೈನ್ ಮೂಲಕ ಹೇಗೆ ಅಪ್ಡೇಟ್ ಮಾಡುವುದು?
- ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
- ಅಪ್‌ಡೇಟ್‌ಗಾಗಿ ಫಾರ್ಮ್ ಭರ್ತಿ ಮಾಡಬೇಕು.
- ನಿಮ್ಮ POA (Proof Of Address) ದಾಖಲೆಗಳೊಂದಿಗೆ ಬಯೋಮೆಟ್ರಿಕ್ ಪರಿಶೀಲನೆ ಮಾಡಿಸಬೇಕು.
- ನಂತರ 50 ರೂ. ಶುಲ್ಕ ಪಾವತಿಸಿ. ವಿಳಾಸ ಅಪ್‌ಡೇಟ್ ಮಾಡಬೇಕು.
ಆನ್‌ಲೈನ್‌ನಲ್ಲಿ ನೀವು ಕೇವಲ ವಿಳಾಸವನ್ನು ಅಪ್ಡೇಟ್ ಮಾಡಲು ಮಾತ್ರ ಅವಕಾಶ ನೀಡಲಾಗುತ್ತದೆ. ಆದರೆ ಹೆಸರು, ಡೇಟ್ ಆಫ್ ಬರ್ತ್, ಫೋಟೋ ಮುಂತಾದವುಗಳಿಗೆ ಸೇವಾ ಕೇಂದ್ರಕ್ಕೆ ಕಡ್ಡಾಯವಾಗಿ ಹೋಗಲೇಬೇಕು. ಅಲ್ಲದೇ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕಡ್ಡಾಯ. ಆದ್ದರಿಂದ ಯಾರೆಲ್ಲಾ ಆಧಾರ್ ಕಾರ್ಡ್‌ನಲ್ಲಿ ಇನ್ನೂ ವಿಳಾಸ ಅಪ್ಡೇಟ್ ಮಾಡಿಲ್ಲವೋ, ಈಗಲೇ ಆನ್‌ಲೈನ್ ಮೂಲಕ ಮಾಡಿಕೊಳ್ಳಿ. ಈಸಿಯಾಗಿ ಈ ಟ್ರಿಕ್ಸ್ ಯೂಸ್ ಮಾಡಿಕೊಳ್ಳಿ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications