For Quick Alerts
ALLOW NOTIFICATIONS  
For Daily Alerts

ಏನಿದು ಆಧಾರ್ ಪಿವಿಸಿ ಕಾರ್ಡ್? ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

By ಅನಿಲ್ ಆಚಾರ್
|

ಈಗ ಆಧಾರ್ ಪಿವಿಸಿ ಕಾರ್ಡ್ ವಿತರಿಸಲಾಗುತ್ತಿದೆ ಎಂಬ ಸಂಗತಿ ನಿಮಗೆ ಗೊತ್ತಿದೆಯಾ? ಏನಿದು ಆಧಾರ್ ಪಿವಿಸಿ ಕಾರ್ಡ್, ಪಡೆಯೋದು ಹೇಗೆ, ಶುಲ್ಕ ಎಷ್ಟು ಇತ್ಯಾದಿ ಮಾಹಿತಿಗಳು ನಿಮಗೆ ಬೇಕಾದಲ್ಲಿ ಈ ಲೇಖನ ಓದಿ. ನಿಮ್ಮ ಬಹುತೇಕ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ದೊರೆಯುತ್ತದೆ.

* "ಆರ್ಡರ್ ಆಧಾರ್ ಕಾರ್ಡ್" ಸೇವೆ ಅಂದರೇನು?
"ಆರ್ಡರ್ ಆಧಾರ್ ಕಾರ್ಡ್" ಎಂಬುದು UIDAIನಿಂದ ಶುರು ಮಾಡಿರುವ ಹೊಸ ಸೇವೆ. ಇದರ ಮೂಲಕವಾಗಿ ಆಧಾರ್ ದಾರರಿಗೆ ತಮ್ಮ ಆಧಾರ್ ಮಾಹಿತಿಯನ್ನು ಪಿವಿಸಿ ಕಾರ್ಡ್ ಮೇಲೆ ಮುದ್ರಿಸಿ ಕೊಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಅಲ್ಪ ಪ್ರಮಾಣದ ಶುಲ್ಕ ವಿಧಿಸಲಾಗುತ್ತದೆ. ಯಾರು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿಲ್ಲವೂ ಅಂಥವರು ತಮ್ಮ ನೋಂದಣಿ ಆಗದ/ಪರ್ಯಾಯ ಮೊಬೈಲ್ ನಂಬರ್ ಬಳಸಿ, ಆರ್ಡರ್ ಮಾಡಬಹುದು.

* ಆಧಾರ್ ಪಿವಿಸಿ ಕಾರ್ಡ್ ಫೀಚರ್ ಗಳೇನು?
- ಸುರಕ್ಷಿತ ಕ್ಯೂಆರ್ ಕೋಡ್

- ಹೋಲೋಗ್ರಾಮ್

- ಮೈಕ್ರೋ ಟೆಕ್ಸ್ಟ್ (ಸೂಕ್ಷ್ಮ ಅಕ್ಷರಗಳು)

- ಘೋಸ್ಟ್ ಇಮೇಜ್

- ವಿತರಣೆ ದಿನಾಂಕ ಮತ್ತು ಮುದ್ರಿತ ದಿನಾಂಕ

- Guilloche Pattern

- ಎಂಬೋಸ್ಡ್ ಆಧಾರ್ ಗುರುತು

ಏನಿದು ಆಧಾರ್ ಪಿವಿಸಿ ಕಾರ್ಡ್? ಪಡೆಯುವುದು ಹೇಗೆ?

* ಆಧಾರ್ ಕಾರ್ಡ್ ಗೆ ಎಷ್ಟು ಶುಲ್ಕ?
ಜಿಎಸ್ ಟಿ ಹಾಗೂ ಸ್ಪೀಡ್ ಪೋಸ್ಟ್ ಶುಲ್ಕ ಸೇರಿ 50 ರುಪಾಯಿ.

* ಆಧಾರ್ ಕಾರ್ಡ್ ಗೆ ಮನವಿ ಸಲ್ಲಿಸುವುದು ಹೇಗೆ?
UIDAI ಅಧಿಕೃತ ವೆಬ್ ಸೈಟ್ ಅಥವಾ ರೆಸಿಡೆಂಟ್ ಪೋರ್ಟಲ್ http://www.uidai.gov.in ಅಥವಾ https://resident.uidai.gov.in ಗೆ ಭೇಟಿ ನೀಡಿ, 12 ಅಂಕೆಯ ಆಧಾರ್ ಸಂಖ್ಯೆ (UID) ಅಥವಾ 16 ಅಂಕಿಯ ವರ್ಚುವಲ್ ಐಡೆಂಟಿಫಿಕೇಷನ್ ಸಂಖ್ಯೆ (VID) ಅಥವಾ 28 ಅಂಕೆಯ ನೋಂದಣಿ ಐಡಿ ನಮೂದಿಸಿ ಮನವಿ ಮಾಡಬಹುದು. ನೋಂದಣಿ ಆದ ಅಥವಾ ನೋಂದಣಿ ಆಗದ ಮೊಬೈಲ್ ಸಂಖ್ಯೆಯಿಂದಲೂ ಮನವಿ ಮಾಡಬಹುದು.

ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಗೆ, OTP/TOTP ಬರುತ್ತದೆ.

ನೋಂದಣಿ ಆಗದ- ಪರ್ಯಾಯ ಮೊಬೈಲ್ ನಂಬರ್ ಇದ್ದಲ್ಲಿ ಅದಕ್ಕೆ OTP ಬರುತ್ತದೆ.

* ಯಾವ ರೀತಿಯಲ್ಲಿ ಹಣ ಪಾವತಿ ಮಾಡಬಹುದು
ಸದ್ಯಕ್ಕೆ ಆನ್ ಲೈನ್ ಮೂಲಕ ಪಾವತಿಸಬಹುದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯುಪಿಐ ಮೂಲಕ ಪಾವತಿಸಬಹುದು.

* SRN ಅಂದರೇನು?
28 ಅಂಕಿಗಳ ಸರ್ವೀಸ್ ಮನವಿಯ ಸಂಖ್ಯೆಯೇ SRN. ವೆಬ್ ಸೈಟ್ ನಲ್ಲಿ ಮನವಿ ಮಾಡಿದ ಮೇಲೆ ಈ ಸಂಖ್ಯೆ ಬರುತ್ತದೆ. ಯಾವಾಗೆಲ್ಲ ಮನವಿ ಮಾಡಲಾಗುತ್ತದೋ ಆಗೆಲ್ಲ ಇದು ಬರುತ್ತದೆ. ಹಣ ಪಾವತಿ ಆಗಿದೆಯೋ ಇಲ್ಲವೋ ಈ ನಂಬರ್ ಜನರೇಟ್ ಆಗುತ್ತದೆ.

* AWB ಸಂಖ್ಯೆ ಅಂದರೇನು?
ಏರ್ ವೇ ಬಿಲ್ ನಂಬರ್. ಇದು ಟ್ರ್ಯಾಕಿಂಗ್ ನಂಬರ್. ಡಿಒಪಿಯಿಂದ ಜನರೇಟ್ ಆಗುತ್ತದೆ. ಇಂಡಿಯಾ ಸ್ಪೀಡ್ ಪೋಸ್ಟ್ ನಿಂದ ಅಸೈನ್ ಮೆಂಟ್/ಪ್ರಾಡಕ್ಟ್ ಗೆ ಆಗುತ್ತದೆ.

* ತಮ್ಮ ಆಧಾರ್ ಮಾಹಿತಿಯಲ್ಲಿ ಬದಲಾವಣೆ ಮಾಡಿ, ಅದು ಕಾರ್ಡ್ ನಲ್ಲಿ ಪ್ರಿಂಟ್ ಆಗಲು ಏನು ಮಾಡಬೇಕು?
ಪರ್ಮನೆಂಟ್ ಎನ್ ರೋಲ್ ಮೆಂಟ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿ ಮೊದಲಿಗೆ ಬದಲಾವಣೆ ಮಾಡಬೇಕು. ಆ ನಂತರ ಪಿವಿಸಿ ಕಾರ್ಡ್ ಗೆ ಮನವಿ ಮಾಡಬೇಕು.

* ಒಂದು ಸಲ ಯಶಸ್ವಿಯಾಗಿ ಮನವಿ ಸಲ್ಲಿಸಿದ ಮೇಲೆ ಆಧಾರ್ ಕಾರ್ಡ್ ಬರುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ?
ಆಧಾರ್ ಕಾರ್ಡ್ ಗೆ ಬೇಡಿಕೆ ಬಂದ ಮೇಲೆ UIDAIನಿಂದ ಆಧಾರ್ ಕಾರ್ಡ್ ಅನ್ನು ಐದು ವರ್ಕಿಂಗ್ ಡೇಸ್ ನಲ್ಲಿ ಡಿಒಪಿಗೆ ನೀಡಲಾಗುತ್ತದೆ. ಸ್ಪೀಡ್ ಪೋಸ್ಟ್ ಬಳಸಿ ಡೆಲಿವರಿ ನೀಡಲಾಗುತ್ತದೆ. ಡಿಒಪಿ ಸ್ಟೇಟಸ್ ಟ್ರ್ಯಾಕ್ ಸರ್ವೀಸ್ ಬಳಸಿ ಅದನ್ನು ತಿಳಿಯಬಹುದು.

English summary

Aadhaar PVC Card: How To Order, Charge More Details

What is Aadhaar PVC card, how to apply, charges and other details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X