ಆಧಾರ್ ಕಾರ್ಡ್ ಪ್ರತಿ ಭಾರತೀಯ ನಾಗರಿಕನ ಗುರುತು. ಆಧಾರ್ ಅತಿ ಅವಶ್ಯಕವಾದ ದಾಖಲೆ. ಆಧಾರ್ ಕಾರ್ಡ್‌ನ ಕೇವಲ ಗುರುತು ಮಾತ್ರ ಎಂದು ಪರಿಗಣಿಸಲಾಗುವುದಿಲ್ಲ. ಇದು ಬಹುಪಾಲು ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಸೇವೆಗಳು ಸೇರಿ ಸಾಕಷ್ಟು ಕೆಲಸಗಳಿಗೆ ಪ್ರಮಾಣಪತ್ರವಾಗಿ ಕಾರ್ಯ ನಿರ್ವಹಿಸುವ ಗುರುತಿನ ಚೀಟಿ. ಹೀಗಾಗಿ ಆಗಾಗ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಅತ್ಯಗತ್ಯ.

UIDAI ಉಚಿತ ಸೇವೆ ಬಗ್ಗೆ ತಿಳಿದುಕೊಳ್ಳಿ:
ಅಂದಹಾಗೆ ಆಗಲೇ ಹೇಳಿದಂತೆ ಪ್ರತಿ ಭಾರತೀಯನಿಗೂ ಆಧಾರ್ ಎಂಬ ಗುರುತಿನ ಚೀಟಿ ಇರಲೇಬೇಕು. ಇದು ಭಾರತೀಯನ ಗುರುತು. ಈ ಆಧಾರ್ ಕಾರ್ಡ್‌ನ ಆಗಾಗ ನವೀಕರಿಸುವುದು ಅತಿ ಅವಶ್ಯಕವಾದ ಕೆಲಸ. ಅದರ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸ UIDAI ಎಂಬ ಕೇಂದ್ರ ಸರ್ಕಾರದ ಸಂಸ್ಥೆಗೆ ಸೇರಿದ್ದಾಗಿದೆ. ಆಧಾರ್ ಕಾರ್ಡ್ ಅಪ್‌ಡೇಟ್, ಇ-ಆಧಾರ್ ಡೌನ್‌ಲೋಡ್ ನಂತಹ ಕೆಲಸಗಳಿಗೆ ಸಹಾಯಕ. ಇದು 2016ರ ಜುಲೈ 12ರಂದು ಆಧಾರ್ ಕಾಯ್ದೆಯ ಅಡಿಯಲ್ಲಿ ಸ್ಥಾಪಿಸಲಾದ ಈ ಸಂಸ್ಥೆ. ಈಗ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೇಲ್ವಿಚಾರಣೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಆಧಾರ್ ನವೀಕರಣ ಏಕೆ ಅಗತ್ಯ..?
10 ವರ್ಷಗಳ ಹಿಂದೆಯೇ ಆಧಾರ್ ಪಡೆದಿರುವವರು, ವೈಯಕ್ತಿಕ ವಿವರಗಳಲ್ಲಿ ಬದಲಾವಣೆ ನೋಡಿರಬಹುದು. 15 ವರ್ಷ ವಯಸ್ಸಿಗೆ ತಲುಪಿರುವ ಮಕ್ಕಳಿಗೆ ಅವರಿಗೆ ವಯಸ್ಕರ ಬಯೋಮೆಟ್ರಿಕ್ ದಾಖಲೆ ಅಗತ್ಯ. ಹೀಗಾಗಿ ಅಪ್‌ಡೇಟೆಡ್ ಆಧಾರ್ ಇರಲೇಬೇಕು. ಇಲ್ಲವಾದರೆ ಇವುಗಳಿಂದ ಪಡಿಕೊಳ್ಳುವ ಸಬ್ಸಿಡಿ, ಸೇವೆಗಳು, ಹಣಕಾಸು ವ್ಯವಹಾರಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಹೇಗೆ..?
ನಿಮ್ಮ ಆಧಾರ್ ಕಾರ್ಡ್‌ನ ಮಾಹಿತಿ ನವೀಕರಣ ಮಾಡಲು..ಅಂದರೆ, ನಿಮ್ಮ ವಿಳಾಸ ಅಥವಾ ಇತರ ಯಾವುದೇ ಡಾಕ್ಯುಮೆಂಟ್ ವಿವರಗಳನ್ನು ನವೀಕರಣ ಮಾಡಲು ಈ ಕೆಳಗಿನ ಹಂತಗಳನ್ನು ಗಮನಿಸಿ. ಮೊದಲು ನೀವು https://myaadhaar.uidai.gov.in ಪೋರ್ಟಲ್‌ಗೆ ಭೇಟಿ ನೀಡಿ. ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೊಡಿ, ನಂತರ ನೋಂದಾಯಿತ ಮೊಬೈಲ್‌ಗೆ ಬಂದ OTP ಬಳಸಿ ಲಾಗಿನ್ ಆಗಿ. ಆಮೇಲೆ ನೀವು "Document Update" ವಿಭಾಗವನ್ನು ಆಯ್ಕೆಮಾಡಿ. ಅದರಲ್ಲಿ ನಿಮ್ಮ ಇತ್ತೀಚಿನ ವಿವರಗಳನ್ನು ಪರಿಶೀಲಿಸಿ. ಹೊಸ ವಿಳಾಸದ ಅಥವಾ ವಿವರದ ದಾಖಲೆ ಸ್ಕ್ಯಾನ್ ಮಾಡಿ (JPEG/PNG/PDF; ಗರಿಷ್ಠ ಗಾತ್ರ: 2 MB). ಸಲ್ಲಿಸಿದ ನಂತರ, ನಿಮ್ಮನ್ನು URN ನೀಡಲಾಗುತ್ತದೆ. ನಂತರ ಅದನ್ನು ಬಳಸಿ ನವೀಕರಣ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಅನುಮೋದನೆಯಾದ ಬಳಿಕ, ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಬಯೋಮೆಟ್ರಿಕ್ ನವೀಕರಣಕ್ಕೆ ಆನ್‌ಲೈನ್ ಸರಿಯಲ್ಲ..!
ಅಂದಹಾಗೆ ದಾಖಲಾತಿ ನವೀಕರಣ, ಹೆಸರು, ವಿಳಾಸ ಅಂತಹದಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ ಸರಿ. ಆದರೆ ಬೆರಳಚ್ಚು, ಐರಿಸ್ ಸ್ಕ್ಯಾನ್ ಅಥವಾ ಫೋಟೋನಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನವೀಕರಿಸಲು ಸಾಧ್ಯವಿಲ್ಲ. ಈ ನವೀಕರಣಕ್ಕಾಗಿ ನೀವು ಖುದ್ದಾಗಿ ನಿಕಟದ ಆಧಾರ್ ನೊಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಯಾವಾಗ ಬಯೋಮೆಟ್ರಿಕ್ ನವೀಕರಣ ಅಗತ್ಯ..?
ಇನ್ನು 15 ವರ್ಷ ತಲುಪಿದ ನಂತರ ಮೊದಲು ಮಾಡಿರುವ ನೊಂದಣಿಗೆ ಬದಲಾವಣೆಗೆ, ಬಯೋಮೆಟ್ರಿಕ್ ಅಗತ್ಯ. ಹಾಗೆಯೇ ಗಾಯ, ಶಸ್ತ್ರಚಿಕಿತ್ಸೆ ಅಥವಾ ಆರೋಗ್ಯ ಸಮಸ್ಯೆಯಿಂದ ಬಯೋಮೆಟ್ರಿಕ್ ಮಾಹಿತಿ ಬದಲಾಗಿರುವ ಸಂದರ್ಭದಲ್ಲಿ ಇದು ಅಗತ್ಯ.
UIDAI ನೀಡುತ್ತಿರುವ ಈ ಆನ್‌ಲೈನ್ ಡಾಕ್ಯುಮೆಂಟ್ ನವೀಕರಣ ಸೇವೆ ಉಚಿತವಾಗಿ ಲಭ್ಯವಿರುವ ಅವಧಿಯೊಳಗೆ ನಿಮಗೆ ಸಾಧ್ಯವಾದಷ್ಟು ಬೇಗ ನವೀಕರಿಸಿ. ಈ ಸಮಯವಾದ ಬಳಿಕ, ಆಫ್‌ಲೈನ್ ಕೇಂದ್ರಗಳಲ್ಲಿ ನವೀಕರಣ ಮಾಡುವಾಗ ಸಣ್ಣ ಶುಲ್ಕ ವಿಧಿಸಲಾಗುವುದು. ಆಧಾರ್ ನಮಗೆ ಕೇವಲ ಗುರುತು ಪತ್ರವಲ್ಲ, ಅದು ನಮ್ಮ ಎಲ್ಲಾ ಆರ್ಥಿಕ, ಸಾಮಾಜಿಕ ಹಾಗೂ ಸಾರ್ವಜನಿಕ ಸೇವೆಗಳ ಪ್ರವೇಶದ ದ್ವಾರವಾಗಿದೆ. ನೀವು ಈಗಲೂ ಆಧಾರ್ ನವೀಕರಿಸಿಲ್ಲದಿದ್ದರೆ, ತಡಮಾಡದೇ ಇಂದುವೇ myaadhaar.uidai.gov.in ಗೆ ಭೇಟಿ ನೀಡಿ. ನಿಮ್ಮ ವಿವರಗಳನ್ನು ನವೀಕರಿಸಿ, ಭವಿಷ್ಯದ ಅನೇಕ ಅಡಚಣೆಗಳಿಂದ ನಿಮ್ಮನ್ನು ನೀವು ರಕ್ಷಿಸಿ.


Click it and Unblock the Notifications