ಯಾವುದೇ ಅರ್ಜಿ ಸಲ್ಲಿಸಬೇಕಾದರೂ, ಸಿಮ್ ಕಾರ್ಡ್‌ನಿಂದ ಹಿಡಿದು ಬ್ಯಾಂಕ್ ಅಕೌಂಟ್‌ವರೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕೇ ಬೇಕು. ಆದ್ದರಿಂದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾದ ಆಧಾರ್ ಕಾರ್ಡ್ (Aadhaar Card), ವಿಶೇಷ ಕಾರ್ಡ್ ಅಂತಾನೇ ಗುರುತಿಸಿಕೊಂಡಿದೆ. ಇದೀಗ ಯುಐಡಿಎಐ (UIDAI) ತನ್ನ ಗ್ರಾಹಕರಿಗೆ ಉತ್ತಮ ಡಿಜಿಟಲ್ ಸೌಲಭ್ಯ ನೀಡಲು ಮುಂದಾಗಿದೆ.

ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ತನ್ನ ನಾಗರಿಕರಿಗೆ ಉತ್ತಮ ಡಿಜಿಟಲ್ ಸೌಲಭ್ಯನೀಡಲು ಹೊಸ ಆಪ್ ಒಂದನ್ನು ಲಾಂಚ್ ಮಾಡಿದೆ. ಆಧಾರ್ ಕಾರ್ಡ್‌ಗಾಗಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಗ್ರಾಹಕರು ಆಧಾರ್ ಸಂಬಂಧಿತ ಯಾವುದೇ ಕೆಲಸಗಳನ್ನ ಈ ಆಪ್ ಮೂಲಕ ಮಾಡಿ ಮುಗಿಸಬಹುದು.
ಇನ್ನು ಯುಐಡಿಎಐ ಬಿಡುಗಡೆ ಮಾಡಿರುವ ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್, ಆಪಲ್ ಆಪ್ ಸ್ಟೋರ್ ಎರಡರಲ್ಲೂ ಡೌನ್‌ಲೋಡ್ ಮಾಡಬಹುದಾಗಿದೆ. ಹೊಸ ಆಧಾರ್ ಅಪ್ಲಿಕೇಶನ್ ಲಾಂಚ್ ಆಗುತ್ತಿದ್ದಂತೆ, ಜನರಲ್ಲೂ ಪ್ರಶ್ನೆ ಉದ್ಭವಿಸಿದೆ. ಈಗಾಗಲೇ ಎಂ-ಆಧಾರ್ ಅಪ್ಲಿಕೇಶನ್ ಇದೆ, ಮತ್ಯಾಕೆ ಈ ಹೊಸ ಅಪ್ಲಿಕೇಶನ್ ಲಾಂಚ್ ಮಾಡುವ ಅಗತ್ಯ ಇತ್ತು ಎಂಬ ಪ್ರಶ್ನೆ ಮೂಡಿದೆ. ಹಾಗಿದ್ರೆ ಹೊಸ ಆಧಾರ್ ಆಪ್ ಮತ್ತು ಎಂ-ಆಧಾರ್ ಆಪ್ ನಡುವಿನ ವ್ಯತ್ಯಾಸ ಏನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಯುಐಡಿಎಐ, ಆಧಾರ್ ಕಾರ್ಡ್‌ನ ಭದ್ರತೆ, ಡಿಜಿಟಲ್ ಆಗಿ ಮತ್ತಷ್ಟು ಗುರುತಿಸಿಕೊಳ್ಳುವ ಉದ್ದೇಶದಿಂದ ಈ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಚಾಲ್ತಿಯಲ್ಲಿರುವ ಎರಡೂ ಅಪ್ಲಿಕೇಶನ್‌ಗಳು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದಲೇ ಅಭಿವೃದ್ಧಿಪಡಿಸಲಾಗಿದೆ. ಆದರೆ ಎರಡೂ ಅಪ್ಲಿಕೇಶನ್‌ಗಳು ಬೇರೆ ಬೇರೆ ಉದ್ದೇಶಗಳನ್ನು ಹೊಂದಿದೆ.
ಎಂ-ಆಧಾರ್ ಅಪ್ಲಿಕೇಶನ್ ಅನ್ನು ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು, ಅಪ್‌ಡೇಟ್ ಮಾಡಲು, ಪರಿಶೀಲಿಸಲು ಬಳಲಾಗುತ್ತದೆ.
ಆದ್ರೆ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಡಿಜಿಟಲ್ ಗುರುತನ್ನ ಸಂಗ್ರಹ ಮಾಡಲು ಮತ್ತು ಅದನ್ನು ಸುರಕ್ಷಿತವಾಗಿ ಹಂಚಿಕೊಳ್ಳಲು ಪರಿಚಯಿಸಲಾಗಿದೆ. ಈ ಹೊಸ ಅಪ್ಲಿಕೇಶನ್ ಮೂಲಕ ಇನ್ಮೇಲೆ ಒಂದೇ ಮೊಬೈಲ್‌ನಲ್ಲಿ ಕುಟುಂಬದ ಎಲ್ಲಾ ಸದಸ್ಯರ ಪ್ರೊಫೈಲ್‌ಗಳನ್ನು ನಿರ್ವಹಿಸಬಹುದು.
ಆದ್ದರಿಂದ ಇನ್ಮೇಲೆ ಆಧಾರ್ ಕಾರ್ಡ್ ಡಿಜಿಟಲ್ ನಿರ್ವಹಣೆಗಾಗಿ ಯಾವುದೇ ಪ್ರತ್ಯೇಕ ಆಪ್‌ಗಳ ಅಗತ್ಯವಿಲ್ಲ. ಭದ್ರತೆಯ ದೃಷ್ಟಿಯಿಂದ ಯುಐಡಿಎಐ ಈ ಆಪ್ ಅನ್ನು ಬಹಳ ಸುಧಾರಿತ ತಂತ್ರಜ್ಞಾನಗಳೊಂದಿಗೆ ಕಾರ್ಯರೂಪಕ್ಕೆ ತಂದಿದೆ.
ಈ ಆಪ್‌ನ ವಿಶೇಷ ಫೀಚರ್ಸ್!
ಇದರಲ್ಲಿ ಫೇಸ್ ಅಥೆಂಟಿಕೇಶನ್, ಬಯೋಮೆಟ್ರಿಕ್ ಲಾಕ್ ಮತ್ತು ಕ್ಯೂ ಆರ್ ಕೋಡ್ ಶೇರಿಂಗ್‌ನಂತ ಫೀಚರ್ಸ್‌ಗಳನ್ನು ನೀಡಲಾಗಿದೆ. ಆದ್ದರಿಂದ ಈ ಆಪ್ ಯೂಸ್ ಮಾಡುವವರು ಇನ್ಮೇಲೆ ತಮ್ಮ ಫೇಸ್ ಅಥೆಂಟಿಕೇಶನ್ ಮೂಲಕವೇ ಆಧಾರ್ ಅನ್ನು ಚೆಕ್ ಮಾಡಬಹುದು. ಅಲ್ಲದೇ ಯಾರಿಗಾದರೂ ಆಧಾರ್ ಕಾರ್ಡ್ ಶೇರ್ ಮಾಡಿಕೊಳ್ಳಲು ಬಯಸಿದ್ರೆ ಸಂಪೂರ್ಣ ಕಾರ್ಡ್ ಶೇರ್ ಮಾಡುವ ಅಗತ್ವಿಲ್ಲ. ಬದಲಿಗೆ ಕ್ಯೂಆರ್ ಕೋಡ್ ಮೂಲಕ ಶೇರ್ ಮಾಡಬಹುದು. ಬಳಕೆದಾರರು ಈ ಹೊಸ ಆಪ್‌ನಲ್ಲಿ ಯಾವ ಮಾಹಿತಿಯನ್ನು ಶೇರ್ ಮಾಡಬೇಕು ಎಂಬುದನ್ನು ಅವರೇ ನಿರ್ಧರಿಸಬಹುದು.
ಉದಾಹರಣೆಗೆ, ನೀವು ಕೇವಲ ಹೆಸರು ಮತ್ತು ವಿಳಾಸವನ್ನು ಮಾತ್ರ ಮತ್ತೊಬ್ಬರಿಗೆ ಶೇರ್ ಮಾಡಲು ಬಯಸಿದರೆ, ಆಧಾರ್ ನಂಬರ್ ಅನ್ನು ಹೈಡ್ ಮಾಡಿ, ಬೇಕಾದ ಮಾಹಿತಿಯನ್ನು ಮಾತ್ರ ಶೇರ್ ಮಾಡಿಕೊಳ್ಳಬಹುದು. ಇದು ಬಳಕೆದಾರರ ಖಾಸಗಿ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತವಾಗಿರುವಂತೆ ಮಾಡುತ್ತದೆ.


Click it and Unblock the Notifications