ವಿಶ್ವದ ಸಿರಿವಂತ ಮಹಿಳೆ ಯಾರಿರಬಹುದು? ಆಕೆಯ ಬಳಿ ಸಂಪತ್ತು ಎಷ್ಟಿರಬಹುದು? ಎಂಬ ಪ್ರಶ್ನೆಗೆ ಉತ್ತರವೇ ಆಲಿಸ್ ವಾಲ್ಟನ್. ಹೌದು ವಾಲ್ಮಾರ್ಟ್‌ನ ಉತ್ತರಾಧಿಕಾರಿ ಆಲಿಸ್ ವಾಲ್ಟನ್ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025 ರ ಪ್ರಕಾರ ಆಲಿಸ್ ವಾಲ್ಟನ್ ಅವರು, 102 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ಬೆರಗುಗೊಳಿಸುವಂತ ಸಂಪತ್ತು ಹಾಗೂ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆಲಿಸ್ ವಾಲ್ಟನ್ ಅಮೆರಿಕಾದ ಪ್ರಸಿದ್ಧ ಉದ್ಯಮಿ ಮತ್ತು ಲೋಕೋಪಕಾರಿಯಾಗಿದ್ದು, ವಾಲ್‌ಮಾರ್ಟ್‌ನ ಸಂಸ್ಥಾಪಕರಾದ ಸ್ಯಾಮ್ ವಾಲ್ಟನ್ ಅವರ ಪುತ್ರಿಯಾಗಿದ್ದಾರೆ. ಇವರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 46 ರಷ್ಟು ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ವಾಲ್ಮಾರ್ಟ್‌ನ ಷೇರು ಬೆಲೆಯಲ್ಲಿನ ಗಮನಾರ್ಹ ಏರಿಕೆಯಾಗಿರುವುದು.
ಅಂದಹಾಗೆ 75 ವರ್ಷದ ಆಲಿಸ್ ವಾಲ್ಟನ್ ವಾಲ್ಮಾರ್ಟ್‌ನ ನೇರವಾಗಿ ಅಥವಾ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಎಂದೂ ತೊಡಗಿಸಿಕೊಂಡಿಲ್ಲ. ಆದರೆ ಅದರ ಬದಲು ಕಲೆ ಮತ್ತು ಕುದುರೆ ಸಾಕಣೆಯ ಮೇಲಿನ ಬಹಳ ಪ್ರೀತಿ ಇದ್ದು, ಜೊತೆಗೆ ತಮ್ಮ ವೈಯಕ್ತಿಕ ಉದ್ಯಮಗಳ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡಿದ್ದಾರೆ.
ಕಲಾ ಆರಾಧಕಿ ಆಲಿಸ್ ವಾಲ್ಟನ್
ಆಲಿಸ್ ವಾಲ್ಟನ್ ಅವರ ಚಿತ್ರಕಲೆಯ ಮೇಲಿನ ಪ್ರೀತಿ ಚಿಕ್ಕ ವಯಸ್ಸಿನಲ್ಲೇ ಆರಂಭವಾಯಿತು. ಅವರಿಗೆ ಕೇವಲ 10 ವರ್ಷದವಳಿದ್ದಾಗ ಪಿಕಾಸೊ ವರ್ಣಚಿತ್ರದ ಪ್ರತಿಕೃತಿಯಾದ ತಮ್ಮ ಮೊದಲ ಕಲಾಕೃತಿಯನ್ನು $2 ಗೆ ಖರೀದಿಸಿದ್ದರು. ಇದಾದ ಬಳಿಕ ವರ್ಷಗಳು ಕಳೆದಂತೆ ಅನೇಕ ಚಿತ್ರಕೃತಿಗಳ ಸಂಗ್ರಹವನ್ನೇ ಹೊಂದಿದ್ದಾರೆ. ಆಂಡಿ ವಾರ್ಹೋಲ್, ನಾರ್ಮನ್ ರಾಕ್‌ವೆಲ್ ಮತ್ತು ಜಾರ್ಜಿಯಾ ಓ'ಕೀಫ್‌ನಂತಹ ಪ್ರಸಿದ್ಧ ಅಮೇರಿಕನ್ ಕಲಾವಿದರಿಂದ ಮೂಲ ಕೃತಿಗಳನ್ನು ಪಡೆದುಕೊಂಡಿದ್ದಾರೆ. ವಾಲ್ಟನ್ ಅವರ ಕಲಾ ಸಂಗ್ರಹವು ಈಗ ಸುಮಾರು USD 500 ಮಿಲಿಯನ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಕಲಾ ಸಂಗ್ರಹಕಾರರಾಗಿರುವ ಆಲಿಸ್ ವಾಲ್ಟನ್ 2011 ರಲ್ಲಿ, ಅವರು ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಯಲ್ಲಿ ಕ್ರಿಸ್ಟಲ್ ಬ್ರಿಡ್ಜಸ್ ಮ್ಯೂಸಿಯಂ ಆಫ್ ಅಮೇರಿಕನ್ ಆರ್ಟ್ ಅನ್ನು ತೆರೆದಿದ್ದು, ಇದು ಅವರ ಸಂಗ್ರಹವನ್ನು ಪ್ರದರ್ಶಿಸಲು ಮೀಸಲಾಗಿರುವ USD 50 ಮಿಲಿಯನ್ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯವು ಒಂದು ಮಹತ್ವದ ಸಾಂಸ್ಕೃತಿಕ ಸಂಸ್ಥೆಯಾಗಿದೆ ಮತ್ತು ಅಮೇರಿಕನ್ ಕಲೆಯನ್ನು ಉತ್ತೇಜಿಸಲು ವಾಲ್ಟನ್ ಅವರ ಸಮರ್ಪಣೆಯ ಪ್ರತಿಬಿಂಬವಾಗಿದೆ.
ಕುದುರೆ ಸಾಕಾಣಿಕೆ ಉದ್ಯಮದಲ್ಲೂ ಮುಂಚೂಣಿ
ಆಲಿಸ್ ವಾಲ್ಟನ್‌ರವರ ಕಲಾ ಪ್ರೀತಿಯ ಜೊತೆಗೆ, ಅವರು ಟೆಕ್ಸಾಸ್‌ನಲ್ಲಿ ಕುದುರೆ ಸಾಕಾಣಿಕೆ ಉದ್ಯಮದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇದಕ್ಕಾಗಿಯೇ ವಾಲ್ಟನ್ ಟೆಕ್ಸಾಸ್ ಕುದುರೆ ಸಂತಾನೋತ್ಪತ್ತಿ ಕ್ಷೇತ್ರದಲ್ಲಿಯೂ ಹೂಡಿಕೆ ಮಾಡಿದ್ದಾರೆ. 2017ರಲ್ಲಿ, ಟೆಕ್ಸಾಸ್‌ನ ಮಿಲ್ಸ್‌ಪ್ಯಾಪ್‌ನಲ್ಲಿರುವ ಅವರ 250 ಎಕರೆ ವಿಸ್ತೀರ್ಣದ "ರಾಕಿಂಗ್ ಡಬ್ಲ್ಯೂ ರಾಂಚ್" ಅನ್ನು ಮಾರಾಟ ಮಾಡಿದ್ದಾರೆ. ಮೊದಲಿಗೆ 19.75 ಮಿಲಿಯನ್ ಡಾಲರ್‌ಗಳಿಗೆ ಪಟ್ಟಿ ಮಾಡಿದ್ದ ಈ ರಾಂಚ್, ನಂತರ 16.5 ಮಿಲಿಯನ್ ಡಾಲರ್‌ಗಳಿಗೆ ಮಾರಾಟವಾಯಿತು. ಈ ರಾಂಚ್‌ನಲ್ಲಿ ಜಾನುವಾರು ಮತ್ತು ಕುದುರೆಗಳಿಗೆ ಮೇಯಲು ವಿಶಾಲವಾದ ಹುಲ್ಲುಗಾವಲುಗಳು ಮತ್ತು ಹೊರಾಂಗಣ ವ್ಯವಸ್ಥೆಗಳಿದ್ದವು. ಕುದುರೆಗಳ ಸಂತಾನೋತ್ಪತ್ತಿಯ ಜಗತ್ತಿನಲ್ಲಿ ವಾಲ್ಟನ್ ಅವರ ಈ ರಾಂಚ್ ಅಮೂಲ್ಯ ಆಸ್ತಿಗಳಲ್ಲಿ ಒಂದಾಗಿತ್ತು.
ವಾಲ್ಟನ್ ರಾಜಕೀಯ ದೇಣಿಗೆಗಳಲ್ಲಿ ನೀಡುವಲ್ಲಿಯೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಐತಿಹಾಸಿಕವಾಗಿ ರಿಪಬ್ಲಿಕನ್ ಅಭ್ಯರ್ಥಿಗಳು ಮತ್ತು PAC ಗಳನ್ನು ಬೆಂಬಲಿಸುತ್ತಿದ್ದಾರೆ. ಆದರೆ 2016 ರಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಬೆಂಬಲಿಸಿದ್ದು ಜಂಟಿ ನಿಧಿ ಸಂಗ್ರಹ ಸಮಿತಿಯಾದ ಹಿಲರಿ ವಿಕ್ಟರಿ ಫಂಡ್‌ಗೆ USD 353,400 ದೇಣಿಗೆ ನೀಡುವ ಮೂಲಕ ಸುದ್ದಿಯಾಗಿದ್ದರು.
ಜಾಗತಿಕವಾಗಿ ಅತೀ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಆಲಿಸ್ ವಾಲ್ಟನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 67 ಬಿಲಿಯನ್ ಡಾಲರ್. ಲೋರಿಯಲ್ ಸಂಸ್ಥೆಯ ಫ್ರಾಂಕೋಯಿಸ್ ಬೆಟ್ಟೆನ್‌ಕೋರ್ಟ್ ಮೇಯರ್ಸ್, ಇವರ ಆಸ್ತಿ ಮೌಲ್ಯ ಸುಮಾರು 80.5 ಬಿಲಿಯನ್ ಡಾಲರ್ ಇವರು ಮೊದಲ ಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ 64.3 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರುವ ಕೋಚ್ ಇಂಡಸ್ಟ್ರೀಸ್‌ನ ಜೂಲಿಯಾ ಕೋಚ್ ಮತ್ತು ಅವರ ಕುಟುಂಬವಿದೆ. ಮೂರನೇ ಸ್ಥಾನದಲ್ಲಿ 60.1 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೊಂದಿರುವ ಮಾರ್ಸ್ ಸಂಸ್ಥೆಯ ಜಾಕ್ವೆಲಿನ್ ಮಾರ್ಸ್ ಇದ್ದಾರೆ. HCL ನ ರೋಶ್ನಿ ನಾಡರ್ ಮತ್ತು ಕುಟುಂಬವು 40 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಗ್ರ ಐದು ಸ್ಥಾನಗಳಲ್ಲಿ ಸ್ಥಾನ ಪಡೆದಿದೆ.


Click it and Unblock the Notifications