ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ನೀತಾ ಅಂಬಾನಿ ಅಂದ್ರೆ ಯಾರಿಗೆ ತಿಳಿದಿಲ್ಲ ಹೇಳಿ? ಜನಸಾಮಾನ್ಯರಿಗೆ ಅಂಬಾನಿ ಕುಟುಂಬವೆಂದರೆ ಕುತೂಹಲದ ಆಗರ. ಅಂಬಾನಿ ಅವರು ಭಾರತದ ಮಾತ್ರವಲ್ಲ ವಿಶ್ವದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾಗಿ, ಅವರು ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಮೂಲಕ ಕ್ರಾಂತಿಯನ್ನುಂಟು ಮಾಡಿದ ಖ್ಯಾತಿ ಗಳಿಸಿದ್ದಾರೆ. ಅಂಬಾನಿ ಅವರು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಐಷಾರಾಮಿ ಮಹಲು 'ಅಂಟಿಲಿಯಾ' ವಿಶ್ವದ ಅತ್ಯಂತ ದುಬಾರಿ ಮತ್ತು ವಿಸ್ತಾರವಾದ ಮನೆಗಳಲ್ಲಿ ಒಂದಾಗಿದೆ. 27 ಅಂತಸ್ತಿನ ಈ ಭವ್ಯವಾದ ರಚನೆಯು ಸುಮಾರು 4 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

ಇಂತಹ ಅಂಬಾನಿ ಕುಟುಂಬದಲ್ಲಿ ದುಬಾರಿ ವಸ್ತುಗಳ ಬೃಹತ್ ಸಂಗ್ರಹವೇ ಇದೆ. ಬೆಂಟ್ಲಿ, ಲಂಬೋರ್ಗಿನಿ, ರೋಲ್ಸ್-ರಾಯ್ಸ್ ಮುಂತಾದ ಬ್ರಾಂಡ್ ಗಳ ವ್ಯಾಪಕವಾದ ಕಾರು ಸಂಗ್ರಹ ಒಂದೆಡೆಯಾದ್ರೆ, ದುಬಾರಿ ಕಲಾಕೃತಿ, ಪ್ರೈವೆಟ್ ಜೆಟ್, ಆಭರಣಗಳು, ರಿಚರ್ಡ್ ಮಿಲ್ಲೆ , ಪ್ಯಾಟೆಕ್ ಫಿಲಿಪ್ಪೆ ಕಂಪನಿಗಳ ದುನಾರಿ ವಾಚ್ ಗಳು ಬಹು ದೊಡ್ಡ ಸಂಗ್ರಹವೇ ಇವರಲ್ಲಿದೆ. ಹಾಗಿದೆ ಅಂಬಾನಿ ಕುಟುಂಬದ ಒಡೆತನದ ಐಷಾರಾಮಿ ಸಂಗ್ರಹದ ಆಭರಣಗಳು ಕೆಲ ಝಲಕ್ ಗಳನ್ನು ಇಲ್ಲಿ ನೋಡೋಣ
"ಎಲ್'ಇನ್‌ಕಂಪೇರಬಲ್" ವಜ್ರದ ನೆಕ್ಲೇಸ್
ನೀತಾ ಅಂಬಾನಿ ಅವರು ತಮ್ಮ ಸೊಸೆ ಶ್ಲೋಕಾ ಮೆಹ್ತಾ ಅವರಿಗೆ ಉಡುಗೊರೆಯಾಗಿ ನೀಡಿದ ಈ ಅದ್ಭುತ ಅಭರಣ ಕಲಾಕೃತಿಯನ್ನು ಲೆಬನಾನಿನ ಆಭರಣ ವ್ಯಾಪಾರಿ ಮೊವಾದ್ ರಚಿಸಿದ್ದಾರೆ. ಇದರಲ್ಲಿ 407.48 ಕ್ಯಾರೆಟ್ ತೂಕದ ಹಳದಿ ವಜ್ರವಿದೆ, ಇದು ವಿಶ್ವದ ಅತಿದೊಡ್ಡ ಆಂತರಿಕವಾಗಿ ದೋಷರಹಿತ ವಜ್ರ ಎಂದು ಹೇಳಲಾಗುತ್ತದೆ. ವಜ್ರವನ್ನು 18 ಕ್ಯಾರೆಟ್ ಗುಲಾಬಿ ಬಣ್ಣದ ಚಿನ್ನದ (rose gold) ಸರಪಳಿಯಲ್ಲಿ ಜೋಡಿಸಲಾಗಿದೆ. ಈ ಸರಪಳಿಯಲ್ಲಿ 229.52 ಕ್ಯಾರೆಟ್‌ಗಳಷ್ಟು ತೂಕದ 91 ಬಿಳಿ ವಜ್ರಗಳಿವೆ. ಇವುಗಳಲ್ಲಿ 35 ಪೇರ್-ಆಕಾರದ (pear-shaped) ವಜ್ರಗಳು ಮತ್ತು 56 ಬ್ರಿಲಿಯಂಟ್ ಕಟ್ (brilliant-cut) ವಜ್ರಗಳು ಸೇರಿವೆ. ಇದರ ಬೆಲೆ 451 ಕೋಟಿ ಎಂದು ಹೇಳಲಾಗಿದೆ.
ಪಚ್ಚೆ-ವಜ್ರದ ಹಾರ
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮದಲ್ಲಿ, ನೀತಾ ಅಂಬಾನಿ ಪಚ್ಚೆಯಿಂದ ಕೂಡಿದ ವಜ್ರದ ಹಾರವನ್ನು ಧರಿಸಿದ್ದರು, ಅದಕ್ಕೆ ಹೊಂದಿಕೆಯಾಗುವ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರಗಳು ಪೂರಕವಾಗಿದ್ದವು. ಈ ಸೊಗಸಾದ ಆಭರಣದ ಬೆಲೆ 500 ಕೋಟಿ ರೂ.ಗಳಾಗಿದ್ದು, ಅಪರೂಪದ ರತ್ನಗಳ ಮೇಲಿನ ಅವರ ಒಲವನ್ನು ಪ್ರದರ್ಶಿಸುತ್ತದೆ.
ಬಾಜು ಬಂದ್/ವಂಕಿ
2024ರ ವಿಶ್ವ ಸುಂದರಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ನೀತಾ ಅಂಬಾನಿ ಅವರು ಮೊಘಲ್ ಕಾಲದ ಬಾಜುಬಂಧವನ್ನು ಧರಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಚಕ್ರವರ್ತಿ ಷಹಜಹಾನ್ ಅವರು ಧರಿಸಿದ್ದ ಈ ಐತಿಹಾಸಿಕ ಆಭರಣವನ್ನು ಪಚ್ಚಿಕಾಕಾಮ್ ತಂತ್ರವನ್ನು ಬಳಸಿ ತಯಾರಿಸಲಾಗಿದ್ದು, ರೂಬಿ, ವಜ್ರ ಮತ್ತು ಸ್ಪಿನೆಲ್‌ಗಳಿಂದ ಅಲಂಕರಿಸಲಾಗಿದೆ. ಇದರ ಮೌಲ್ಯ ೨೦೦ ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ.
ಮಿರರ್ ಆಫ್ ಪ್ಯಾರಡೈಸ್' ಉಂಗುರ
ನೀತಾ ಅಂಬಾನಿ ಅವರ 'ಮಿರರ್ ಆಫ್ ಪ್ಯಾರಡೈಸ್' ಉಂಗುರವು 52.58 ಕ್ಯಾರೆಟ್‌ನ ಡಿ-ಬಣ್ಣದ ವಜ್ರವನ್ನು ಹೊಂದಿದ್ದು, ಗೋಲ್ಕೊಂಡ ಗಣಿಯಿಂದ ಬಂದಿದೆ. ಉದ್ದವಾದ ಆಕಾರದ ಈ ವಜ್ರವು, ಚೂಪಾದ ಬಾಗೆಟ್ಟ್ ಕಟ್ ಕಲ್ಲುಗಳನ್ನು ಒಳಗೊಂಡಿದೆ. ಇದನ್ನು 2019 ರಲ್ಲಿ ಕ್ರಿಸ್ಟೀಸ್ ಹರಾಜಿನಲ್ಲಿ6.5 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಲಾಯಿತು.
ಅನಂತ್ ಅಂಬಾನಿಯವರ ಸಿಂಹದ ವಿನ್ಯಾಸದ ಬ್ರೋಚ್
ಲೋರೆನ್ ಶ್ವಾರ್ಟ್ಜ್ ವಿನ್ಯಾಸಗೊಳಿಸಿದ ಅನಂತ್ ಅಂಬಾನಿಯವರ ಸಿಂಹದ ಬ್ರೋಚ್, ಸಿಂಹದ ದೇಹ ಕೇಸರಕ್ಕಾಗಿ ಸಂಕೀರ್ಣವಾದ ಹಳದಿ ವಜ್ರಗಳನ್ನು ಹೊಂದಿದೆ, ಮತ್ತು ಕಣ್ಣುಗಳಿಗಾಗಿ ಪಚ್ಚೆಗಳನ್ನು ಬಳಸಲಾಗಿದೆ. 50 ಕ್ಯಾರೆಟ್‌ನ ಈ ವಜ್ರದ ಬ್ರೋಚ್‌ನ ಬಾಯಿಯಿಂದ ನೇತಾಡುವ ವಜ್ರವೂ ಇದೆ. ಸಿಂಹವು ಆಶ್ಷರ್ ಕಟ್ ಬಿಳಿ ವಜ್ರಗಳ ತಳದ ಮೇಲೆ ಕುಳಿತಿದ್ದು, ಇದು ಶಕ್ತಿ ಮತ್ತು ವಿನಯವನ್ನು ಸಂಕೇತಿಸುತ್ತದೆ


Click it and Unblock the Notifications