ಭಾರತವು ಅಕ್ರಮ ಹೂಡಿಕೆ ಆರ್ಥಿಕ ಅಪರಾಧಗಳ ಕಾರಣವನ್ನು ನೀಡಿ 100 ಕ್ಕೂ ಹೆಚ್ಚು ಚೀನೀ ವೆಬ್‌ಸೈಟ್‌ಗಳನ್ನು ನಿಷೇಧಿಸಿದೆ. ಈಗಾಗಲೇ "ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಕ್ಷಣೆ ಮತ್ತು ಭದ್ರತೆಗೆ ಅಪಾಯ" ಎಂದು ಹೇಳಿ ಭಾರತ ಸರ್ಕಾರವು 250 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಿದೆ. ಈ ನಡುವೆ ಭಾರತದಲ್ಲಿ ಮೇಡ್ ಇನ್ ಚೀನಾ ವಸ್ತುಗಳ ಬಳಕೆಯು ಕಡಿಮೆಯಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.
ಚೀನೀ ಆ್ಯಪ್‌ಗಳ ಬಳಕೆ ವಿರುದ್ಧವಾಗಿ ಮೇಕ್ ಇನ್ ಇಂಡಿಯಾ ಮತ್ತು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳಂತಹ ಹಲವು ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. ಸಮೀಕ್ಷೆಯ ಪ್ರಕಾರ ಈ ಯೋಜನೆಗಳು ಚೀನೀ ಉತ್ಪನ್ನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ.

ಸಮೀಕ್ಷೆಯ ಬಗ್ಗೆ ತಿಳಿಯಿರಿ
ಸಮೀಕ್ಷೆಯು ಭಾರತದ 334 ಜಿಲ್ಲೆಗಳಲ್ಲಿ ನೆಲೆಗೊಂಡಿರುವ ನಾಗರಿಕರ ಪೈಕಿ 37,000 ಕ್ಕೂ ಹೆಚ್ಚು ಪ್ರತಿಕ್ರಿಯೆಯ ಆಧಾರದಲ್ಲಿ ಮಾಡಲಾಗಿದೆ. ಈ ಪೈಕಿ ಶೇಕಡ 63 ಪ್ರತಿಕ್ರಿಯಿಸಿದವರು ಪುರುಷರು ಮತ್ತು ಶೇಕಡ 37 ರಷ್ಟು ಪ್ರತಿಕ್ರಿಯಿಸಿದವರು ಮಹಿಳೆಯರು ಆಗಿದ್ದಾರೆ. ಪ್ರತಿಕ್ರಿಯಿಸಿದವರ ಪೈಕಿ ಶೇಕಡ 41 ರಷ್ಟು ಶ್ರೇಣಿ 1 ರಿಂದ, ಶೇಕಡ 31 ರಷ್ಟು ಶ್ರೇಣಿ 2 ರಿಂದ ಮತ್ತು ಶೇಕಡ 28 ರಷ್ಟು ಶ್ರೇಣಿ 3, 4 ಮತ್ತು ಗ್ರಾಮೀಣ ಜಿಲ್ಲೆಯವರು ಆಗಿದ್ದಾರೆ.
ಚೀನಾ ವಸ್ತು ಬಳಸದವರು, ಬಳಸುವವರು
ಲೋಕಲ್ ಸರ್ಕಲ್‌ನ ಇತ್ತೀಚಿಗೆ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯಲ್ಲಿ ಶೇಕಡ 45 ರಷ್ಟು ಪ್ರತಿಕ್ರಿಯೆ ನೀಡಿದವರು ಕಳೆದ 12 ತಿಂಗಳುಗಳಲ್ಲಿ ಚೀನೀ ಉತ್ಪನ್ನಗಳನ್ನು ಖರೀದಿಸಿಲ್ಲ ಎಂದು ಹೇಳಿದ್ದಾರೆ. ಇನ್ನು ಶೇಕಡ 55 ಕ್ಕೂ ಅಧಿಕ ಮಂದಿ ಮೇಡ್ ಇನ್ ಚೀನಾ ಉತ್ಪನ್ನಗಳನ್ನು ಬಳಸಿದ್ದಾರೆ, ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಗ್ರಾಹಕರು ಖರೀದಿಸಿದ ಮೇಡ್ ಇನ್ ಚೀನಾ ಉತ್ಪನ್ನಗಳ ವಿವಿಧ ವಿಭಾಗಗಳು ಯಾವುವು ಎಂದು ಸಮೀಕ್ಷೆಯಲ್ಲಿ ಕೇಳಲಾಗಿದೆ. ಪ್ರತಿಕ್ರಿಯಿಸಿದ 7,022 ಜನರಲ್ಲಿ ಶೇಕಡ 56 ಮಂದಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಪವರ್ ಬ್ಯಾಂಕ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಅಥವಾ ಮೊಬೈಲ್ ಪರಿಕರಗಳು ಎಂದು ತಿಳಿಸಿದ್ದಾರೆ.
ಇನ್ನು ಶೇಕಡ 49 ರಷ್ಟು ಮಂದಿ ಹಬ್ಬದ ದೀಪಗಳು, ದೀಪಗಳು, ಮೇಣದಬತ್ತಿಗಳು ಮತ್ತು ವಾಟರ್ ಗನ್‌ಗಳನ್ನು ಖರೀದಿಸಿರುವುದಾಗಿ ತಿಳಿಸಿದರು. ಶೇಕಡ 33 ರಷ್ಟು ಮಂದಿ ಆಟಿಕೆಗಳು ಮತ್ತು ಲೇಖನ ಸಾಮಗ್ರಿಗಳೆಂದಿದ್ದಾರೆ. ಶೇಕಡ 29 ರಷ್ಟು ಮಂದಿ ಉಡುಗೊರೆ ವಸ್ತುಗಳನ್ನು ಖರೀದಿಸಿದ್ದಾರೆ.
ಶೇಕಡ 26 ರಷ್ಟು ಜನರು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳು (ದೂರದರ್ಶನ, ಏರ್ ಪ್ಯೂರಿಫೈಯರ್, ಕೆಟಲ್) ಖರೀದಿಸಿದ್ದಾರೆ. ಇನ್ನು ಶೇಕಡ 26 ರಷ್ಟು ಮಂದಿ "ಬೆಳಕು ಮುಂತಾದ ಗೃಹ ಉತ್ಪನ್ನಗಳನ್ನು ಖರೀದಿಸಿದ್ದಾರೆ" ಮತ್ತು ಶೇಖಡ 15 ರಷ್ಟು ಮಂದಿ ಫ್ಯಾಷನ್ ಉತ್ಪನ್ನಗಳಾದ ಉಡುಪುಗಳು, ಚೀಲಗಳು ಮತ್ತು ಪರಿಕರಗಳನ್ನು ಖರೀದಿಸಿರುವುದಾಗಿ ಹೇಳಿದ್ದಾರೆ.
ಜನರು ನೀಡಿದ ಕಾರಣಗಳೇನು?
ಕಳೆದ 12 ತಿಂಗಳುಗಳಲ್ಲಿ ಮೇಡ್ ಇನ್ ಚೈನಾ ಉತ್ಪನ್ನಗಳ ಖರೀದಿಯ ಮೊತ್ತವನ್ನು ಕಡಿತಗೊಳಿಸುವುದರ ಹಿಂದಿನ ಕಾರಣಗಳನ್ನು ಸಹ ಕೇಳಲಾಗಿದೆ. 12,350 ಪ್ರತಿಕ್ರಿಯಿಸಿದವರಲ್ಲಿ, ಶೇಕಡ 63 ರಷ್ಟು ಜನರು "ಭಾರತ-ಚೀನಾ ಭೌಗೋಳಿಕ ರಾಜಕೀಯ ಅಭಿವೃದ್ಧಿಯಿಂದಾಗಿ ಹೆಚ್ಚು ತಯಾರಿಸಿದ ಭಾರತದಲ್ಲಿ ಉತ್ಪನ್ನಗಳನ್ನು ಖರೀದಿಸಿದ್ದಾರೆ" ಎಂದು ಹೇಳಿದರು. ಶೇಕಡ 16 ರಷ್ಟು ಜನರು "ಭಾರತೀಯ ಪರ್ಯಾಯವು ಉತ್ತಮ ಬೆಲೆ-ಗುಣಮಟ್ಟದ ಲಭ್ಯವಿದೆ" ಎಂದು ಹೇಳಿದ್ದಾರೆ.
ಶೇಕಡ 16 ರಷ್ಟು ಜನರು "ಮೇಡ್ ಇನ್ ಇಂಡಿಯಾ ಉತ್ಪನ್ನಗಳೊಂದಿಗೆ ಉತ್ತಮ ಗ್ರಾಹಕ ಸೇವೆ ಲಭ್ಯವಿದೆ" ಎಂಬ ಕಾರಣವನ್ನು ನೀಡಿದ್ದಾರೆ. ಇನ್ನು ಶೇಕಡ 13 ರಷ್ಟು ಜನರು "ಚೀನೀ ಅಲ್ಲದ ಆದರೆ ವಿದೇಶಿ (ಭಾರತೀಯವಲ್ಲದ) ಉತ್ಪನ್ನವು ಲಭ್ಯವಿದೆ, ಇದು ಉತ್ತಮ ಬೆಲೆ, ಗುಣಮಟ್ಟ ಮತ್ತು ಗ್ರಾಹಕ ಸೇವೆಯನ್ನು ಹೊಂದಿದೆ" ಎಂದು ಹೇಳಿಕೊಂಡಿದ್ದಾರೆ. ಶೇಕಡ 7 ರಷ್ಟು ಜನರು "ಮಾರುಕಟ್ಟೆಯಲ್ಲಿ ಮೇಡ್ ಇನ್ ಚೀನಾ ಉತ್ಪನ್ನಗಳು ಈಗ ಹೆಚ್ಚಾಗಿ ಸಿಗಲ್ಲ" ಎಂದು ಕಾರಣ ನೀಡಿದ್ದಾರೆ.


Click it and Unblock the Notifications