ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್‌ಎಲ್) ಭಾರತದ ಅತಿ ಉದ್ದದ ಸಮುದ್ರ ಸೇತುವೆಯನ್ನು ಉದ್ಘಾಟಿಸಲು ಸಿದ್ಧರಾಗಿದ್ದಾರೆ. ಅಧಿಕೃತವಾಗಿ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಎಂದು ಕರೆಯಲ್ಪಡುವ ಸೇತುವೆಗೆ ಶುಕ್ರವಾರ ಮಧ್ಯಾಹ್ನ 3:30 ಕ್ಕೆ ಮುಂಬೈನಲ್ಲಿ ಪ್ರಧಾನಿ ಮೋದಿಯವರು ಚಾಲನೆ ನೀಡಲಿದ್ದಾರೆ.
ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತು ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಅಂತರವನ್ನು 2 ಗಂಟೆಗಳಿಂದ ಕೇವಲ 20 ನಿಮಿಷಗಳಿಗೆ ಕಡಿಮೆ ಮಾಡಿದೆ. ಸೇತುವೆಯ ಶಂಕುಸ್ಥಾಪನೆಯನ್ನು ಪ್ರಧಾನಿ ಮೋದಿ ಅವರು ಡಿಸೆಂಬರ್ 2016 ರಲ್ಲಿ ಮಾಡಿದ್ದಾರೆ.

ಸೇತುವೆಯ ನಿರ್ಮಾಣವು ಮುಂಬೈ ನಿವಾಸಿಗಳಿಗೆ ಸಹಾಯವಾಗುವ ನಿರೀಕ್ಷೆಯಿದೆ. ಸಂಚಾರ ದಟ್ಟಣೆ ಸಮಸ್ಯೆಯಿಂದ ಜನರನ್ನು ಮುಕ್ತಗೊಳಿಸುವ ಸಾಧ್ಯತೆಯಿದೆ. ಸೇತುವೆಯು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿಮೀ ಉದ್ದ ಮತ್ತು ಭೂಮಿಯ ಮೇಲೆ ಸುಮಾರು 5.5 ಕಿಮೀ ಉದ್ದವಿದೆ.
ಅಟಾಲ್ ಸೇತುವೆಯ ಕುತೂಹಲಕಾರಿ ಮಾಹಿತಿ
1. ಅಟಲ್ ಸೇತುವನ್ನು ಒಟ್ಟು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.
2. ಮುಂಬೈ ಪೊಲೀಸರು ಸೇತುವೆಯ ಮೇಲಿನ ನಾಲ್ಕು ಚಕ್ರಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 100 ಕಿಮೀ ಎಂದು ನಿಗದಿಪಡಿಸಿದ್ದಾರೆ. ಮೋಟಾರ್ ಬೈಕ್, ಆಟೋರಿಕ್ಷಾ ಮತ್ತು ಟ್ರ್ಯಾಕ್ಟರ್‌ಗಳನ್ನು ಇಲ್ಲಿ ಓಡಿಸಲು ಅವಕಾಶವಿಲ್ಲ.
3. ಸೇತುವೆಯು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗವಾಗಿ ಸಂಪರ್ಕವನ್ನು ಒದಗಿಸುವ ನಿರೀಕ್ಷೆಯಿದೆ. ಇದು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಮುಂಬೈ ಬಂದರು ಮತ್ತು ಜವಾಹರಲಾಲ್ ನೆಹರು ಬಂದರು ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
4. ಸೇತುವೆಯ ನಿರ್ಮಾಣವು ಭಾರತದಲ್ಲಿ ಮೊದಲ ಬಾರಿಗೆ ಬಳಸಲಾದ ಹಲವಾರು ತಂತ್ರಜ್ಞಾನಗಳನ್ನು ಒಳಗೊಂಡಿದೆ. ಇಂಜಿನಿಯರಿಂಗ್‌ನ ಅದ್ಭುತ, ಅದರ ನಿರ್ಮಾಣಕ್ಕೆ ಬಳಸಲಾದ ಉಕ್ಕಿನ ಪ್ರಮಾಣವು 500 ಬೋಯಿಂಗ್ ವಿಮಾನಗಳ ತೂಕಕ್ಕೆ ಸಮನಾಗಿರುತ್ತದೆ.ಐಫೆಲ್ ಟವರ್‌ನ ತೂಕಕ್ಕಿಂತ 17 ಪಟ್ಟು ಹೆಚ್ಚಾಗಿದೆ.
5. ವರದಿಗಳ ಪ್ರಕಾರ, ಮುಂಬೈ ಟ್ರಾನ್ಸ್ ಹಾರ್ಬರ್ ಸೀಲಿಂಕ್ (ಎಂಟಿಎಚ್‌ಎಲ್) ನಿರ್ಮಿಸಲು ಸುಮಾರು 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.
6. ಎಂಎಂಆರ್‌ಡಿಎ ಅಧಿಕಾರಿಯನ್ನು ಉಲ್ಲೇಖಿಸಿ ಎಎನ್‌ಐ ಮಾಡಿದ ವರದಿ ಪ್ರಕಾರ "ಈ ಸೇತುವೆಯ ಪ್ರಮುಖ ಫೀಚರ್ ಅದರ ಪರಿಸರ ಸುಸ್ಥಿರತೆ ಆಗಿದೆ. ಪರಿಸರಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾದ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಈ ಹೆಗ್ಗುರುತುಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ಸಹ ನೀಡಿದೆ.
ಅಟಲ್ ಸೇತು: ಟೋಲ್ ಬೆಲೆ ವಿವರ
ಸೇವ್ರಿ-ಶಿವಾಜಿ ನಗರ (ಉಲ್ವೆ) ಮಾರ್ಗದ ಟೋಲ್ ದರವನ್ನು 200 ರೂಪಾಯಿ ಮತ್ತು 2.5 ಕಿಮೀ ಶಿವೈ ನಗರ-ಗವ್ಹಾನ್ ಮಾರ್ಗಕ್ಕೆ 50 ರೂಪಾಯಿ ಟೋಲ್ ದರವನ್ನು ನಿಗದಿಪಡಿಸಲಾಗಿದೆ. ಹಿಂದಿರುಗುವಾಗ ಟೋಲ್ ಏಕಮುಖ ಶುಲ್ಕಕ್ಕಿಂತ 1.5 ಪಟ್ಟು ಇರುತ್ತದೆ. ಪ್ರಯಾಣಿಕರು ಶನಿವಾರ ಬೆಳಿಗ್ಗೆಯಿಂದ ಅಟಲ್ ಸೇತು ಅಥವಾ ಎಎಂಟಿಎಚ್‌ಎಲ್ ಸೇತುವೆಯನ್ನು ಬಳಸಲು ಪ್ರಾರಂಭಿಸಬಹುದು.


Click it and Unblock the Notifications