ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಆಗಿದ್ದ ಬೆಂಗಳೂರು ಮೂಲದ ಯುವಕ ಇಂದು 2 ಸ್ಟಾರ್ಟ್‌ಅಪ್‌ ಗಳ ಸರದಾರ

ಇತ್ತೀಚಿಗಿನ ವರ್ಷಗಳಲ್ಲಿ ಭಾರತದಲ್ಲಿ ಸ್ಟಾರ್ಟಪ್‌ ಸ್ಥಾಪಿಸುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ದಾಖಲಾಗುತ್ತಿದೆ. ಇದಕ್ಕೆ ಪ್ರಬಲವಾದ ಕಾರಣ ಕೂಡ ಇದೆ. ಭಾರತವು ವಿಶ್ವದಲ್ಲೇ ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿ ಹೊರತರುವ ವಸ್ತುಗಳಿಗೆ ಇಲ್ಲಿಯೇ ಉತ್ತಮ ಮಾರುಕಟ್ಟೆ ಇದೆ. ಉತ್ಪಾದಿಸಿದ ವಸ್ತು ಅಥವಾ ಉತ್ಪನ್ನಗಳ ಬಿಕರಿಗೆ ಹೊರದೇಶಗಳತ್ತ ಮುಖಮಾಡಬೇಕಾದ ಅನಿವಾರ್ಯತೆ ಕೂಡ ಇಲ್ಲ. ಅದೂ ಅಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಟಾರ್ಟಪ್‌ ಆರಂಬಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ಧನಗಳನ್ನು ಕೂಡ ನೀಡುತ್ತಿರುವುದರಿಂದ ಯುವ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರುತ್ತಿದ್ದಾರೆ. ಸದ್ಯ ಇದೇ ಕಾರಣದಲ್ಲಿ ಮುಂದೆ ಬಂದಿರುವ ಹಲವರು ನಮ್ಮ ಕಣ್ಣ ಮುಂದಿದ್ದಾರೆ. ಇದರಲ್ಲಿ ಬೆಂಗಳೂರು ಮೂಲದ ಟೆಕ್‌ ಉದ್ಯಮಿ ಮಹೇಶ್‌ ಗೋಗಿನೇನಿ ಕೂಡ ಒಬ್ಬರಾಗಿದ್ದಾರೆ. ಜಾಗತಿಕ ದೈತ್ಯ ಟೆಕ್‌ ಸಂಸ್ಥೆ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್‌ಶಿಪ್‌ ಮಾಡಿದ್ದ ಮಹೇಶ್‌ ಅವರು, ಬಳಿಕ ಗಿಫ್ಸ್ಕಿ ಮತ್ತು ವೈಶ್ ಮುಂತಾದ ಸ್ಟಾರ್ಟ್‌ಅಪ್‌ಗಳನ್ನು ಸಹ-ಸ್ಥಾಪಕ ಕೂಡ ಆಗಿದ್ದರು. ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂಬ ಮಾತಿಗೆ ಮಹೇಶ್‌ ಗೋಗಿನೇನಿ ಅವರು ಪ್ರತ್ಯಕ್ಷ ಉದಾಹರಣೆಯಾಗಿದ್ದಾರೆ.

ಎರಡು ಸ್ಟಾರ್ಟಪ್‌ಗಳ ಬಗ್ಗೆ ಒಂದಿಷ್ಟು ಮಾತು

ಇನ್ನು ಮಹೇಶ್‌ ಅವರು ಎರಡು ಯಶಸ್ವಿ ಸ್ಟಾರ್ಟಪ್‌ಗಳನ್ನು ಸಹ ಸಂಸ್ಥಾಪಕರಾಗುವ ಮೂಲಕ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ಅವರ ಸಹ ಸಂಸ್ಥಾಪಕತ್ವದ ಅಡಿಯಲ್ಲಿ ಆರಂಭಿಸಲಾಗಿದ್ದ ಎರಡು ಸ್ಟಾರ್ಟಪ್‌ಗಳ ಬಗ್ಗೆ ಹೇಳುವುದಾದರೆ Gifsky ಒಂದು ಮಾಧ್ಯಮ ಮತ್ತು ಮನರಂಜನೆಗೆ ಸಂಬಂಧಿಸಿದ ಸಂಸ್ಥೆಯಾಗಿದೆ. ಅತ್ತ ವೈಶ್‌ ಎಂಬುದು ವೀಡಿಯೊ ವಿನಂತಿಯ ವೇದಿಕೆಯಾಗಿದ್ದು ಅದು ಪ್ರತಿಯೊಬ್ಬರಿಂದ ವೈಯಕ್ತಿಕಗೊಳಿಸಿದ ವೀಡಿಯೊ ಸಂದೇಶಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸೆಲೆಬ್ರಿಟಿ ಎಂಗೇಜ್‌ಮೆಂಟ್ ಮತ್ತು ಹಾರೈಕೆ ವೇದಿಕೆಯಾದ ವೈಶ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ 50 ಕ್ಕೂ ಹೆಚ್ಚು ಸೆಲೆಬ್ರಿಟಿಗಳನ್ನು ಹೊಂದಿದೆ. ವೇದಿಕೆಗಳಲ್ಲಿ ಪಟ್ಟಿ ಮಾಡಲಾದ ಕೆಲವು ಪ್ರಸಿದ್ಧ ವ್ಯಕ್ತಿಗಳಲ್ಲಿ ಟಿವಿ ನಟರಾದ ಅರ್ಜಿತ್ ತನೇಜಾ ಮತ್ತು ಕನಿಕಾ ಮಾನ್ ಕೂಡ ಸೇರಿದ್ದಾರೆ.

ಆಗ ಮೈಕ್ರೋಸಾಫ್ಟ್‌ನಲ್ಲಿ ಇಂಟರ್ನ್ ಈಗ 2 ಸ್ಟಾರ್ಟ್‌ಅಪ್‌ಗಳ ಸರದಾರ

ಬಿಲಿಯನೇರ್‌ ಉದ್ಯಮಿಯ ಅಳಿಯ!

ಮಹೇಶ್‌ ಅವರು ಇಂದು ಕೇವಲ ತನ್ನ ಅಮೋಘ ಸಾಧನೆ ಹಾಗೂ ಕುಟುಂಬದ ಹಿನ್ನೆಲೆಯೊಂದರಿಂದಲೇ ಗುರುತಿಸಿಕೊಂಡಿಲ್ಲ. ಬದಲಾಗಿ ಮಹೇಶ್‌ ಅವರು ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರ ಅಳಿಯ ಕೂಡ ಆಗಿದ್ದಾರೆ. ಶ್ರೀನಿವಾಸನ್‌ ಅವರ ಪುತ್ರಿ ಲಕ್ಷ್ಮಿ ವೇಣು ಅವರನ್ನು 2018ರಲ್ಲಿ ಜೋಧ್‌ಪುರದಲ್ಲಿ ವಿವಾಹವಾಗಿದ್ದರು. ಇನ್ನು ಎಲ್ಲರಿಗೂ ತಿಳಿದಿರುವಂತೆ ಶ್ರೀನಿವಾಸನ್‌ ಅವರು ಭಾರತದ ಪ್ರಸಿದ್ದ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿದ್ದು, ಫೋರ್ಬ್ಸ್ ಪ್ರಕಾರ ಅವರ ನಿವ್ವಳ ಮೌಲ್ಯವು 38,690 ಕೋಟಿ ರೂಪಾಯಿಗಳಾಗಿದೆ.

ಗೋಗಿನೇನಿ ವಿದ್ಯಾಭ್ಯಾಸ ಕುರಿತು...

ಗೋಗಿನೇನಿ ಅವರು BITS ಪಿಲಾನಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ಪದವೀಧರರಾಗಿದ್ದಾರೆ. ಅವರು ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಕೂಡ ಪಡೆದಿದ್ದಾರೆ. ಗೋಗಿನೇನಿ ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಎನ್‌ಜಿ ರಂಗ ಅವರ ಮೊಮ್ಮಗನಾಗಿದ್ದಾರೆ. ಅಲ್ಲದೆ ಸುಗುಣ ಮತ್ತು ಡಾ ಕಮಲೇಂದ್ರ ಗೋಗಿನೇನಿ ಅವರ ಪುತ್ರ. ಮಹೇಶ್ 2008 ರಲ್ಲಿ VANPIC Projects Pvt Ltd ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಕ್ಕೂ ಮೊದಲು ಅವರು ಈಗಾಗಲೇ ತಿಳಿಸಿದಂತೆ ಮೈಕ್ರೋಸಾಫ್ಟ್ ಮತ್ತು HCL ಟೆಕ್ನಾಲಜೀಸ್‌ನಲ್ಲಿ ಇಂಟರ್ನ್‌ಶಿಪ್ ಕೂಡ ಮಾಡಿದರು. ಇನ್ನು ಗೋಗಿನೇನಿ ಅವರ ಪತ್ನಿ ಲಕ್ಷ್ಮಿ ವೇಣು ಅವರು ಟಿವಿಎಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಲಕ್ಷ್ಮಿ ವೇಣು ಅವರು 2022 ರಲ್ಲಿ ಕಂಪನಿಯ ಈ ದೊಡ್ಡ ಮಟ್ಟದ ಹುದ್ದೆಯನ್ನು ಅಲಂಕರಿಸಿದ್ದರು. ಇದಕ್ಕೂ ಮೊದಲು, ಅವರು 2010 ರಿಂದ SCL ನ ಜಂಟಿ MD ಹುದ್ದೆ ಹೊಂದಿದ್ದರು.

ಲಕ್ಷ್ಮೀ ವೇಣು ಅವರ ಬಗ್ಗೆ...

ಇನ್ನು ಲಕ್ಷ್ಮೀ ವೇಣು ಅವರ ಬಗ್ಗೆ ಹೇಳುವುದಾದರೆ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚೆನ್ನೈನ ಶಿಷ್ಯ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಸಲುವಾ US ಗೆ ತೆರಳಿದರು. ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದರು. ನಂತರ ಇಂಗ್ಲೆಂಡ್‌ನ ಕೋವೆಂಟ್ರಿಯಲ್ಲಿರುವ ವಾರ್ವಿಕ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಮ್ಯಾನೇಜ್‌ಮೆಂಟ್‌ನಲ್ಲಿ ಡಾಕ್ಟರೇಟ್ ಪಡೆದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+