ನವೆಂಬರ್ 2026: ಬ್ಯಾಂಕ್ ರಜೆಗಳ ಪಟ್ಟಿ ಇಲ್ಲಿದೆ, ನಿಮ್ಮ ಹಣಕಾಸಿನ ಕೆಲಸಗಳನ್ನು ಈಗಲೇ ಪ್ಲಾನ್ ಮಾಡಿ!

ನವೆಂಬರ್ ತಿಂಗಳು ಸಾಲು ಸಾಲು ಬ್ಯಾಂಕ್ ರಜೆಗಳೊಂದಿಗೆ ಆರಂಭವಾಗುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ದಿನಗಳಂದು ಬ್ಯಾಂಕ್‌ಗಳು ಮುಚ್ಚಲಿವೆ. ಆನ್‌ಲೈನ್ ಬ್ಯಾಂಕಿಂಗ್ ಸದಾ ಚಾಲ್ತಿಯಲ್ಲಿರುತ್ತದೆಯಾದರೂ, ಬ್ಯಾಂಕ್ ಶಾಖೆಗಳು ಮತ್ತು ಚೆಕ್ ಕ್ಲಿಯರೆನ್ಸ್ ಕಾರ್ಯಗಳು ಸ್ಥಗಿತಗೊಳ್ಳಲಿವೆ. ಯುಪಿಐ (UPI), ಐಎಮ್‌ಪಿಎಸ್‌ (IMPS), ಎನ್‌ಇಎಫ್‌ಟಿ (NEFT) ಹಾಗೂ ಆರ್‌ಟಿಜಿಎಸ್‌ (RTGS) ಸೇವೆಗಳು ರಜಾ ದಿನಗಳಲ್ಲೂ 24x7 ಲಭ್ಯವಿರಲಿವೆ. ಹೀಗಾಗಿ, ಎಸ್‌ಐಪಿ, ಇಎಂಐ ಪಾವತಿ ಹಾಗೂ ಚೆಕ್ ವಿಳಂಬದಿಂದ ಉಂಟಾಗುವ ತೊಂದರೆ ತಪ್ಪಿಸಲು ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಈಗಲೇ ಯೋಜಿಸಿಕೊಳ್ಳಿ.

ಈ ಮುಖ್ಯ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ. ನವೆಂಬರ್ 8 ಭಾನುವಾರ ದೀಪಾವಳಿ ಹಬ್ಬವಿರುವುದರಿಂದ ಎಂದಿನಂತೆ ಬ್ಯಾಂಕ್‌ಗಳು ಬಂದ್ ಇರುತ್ತವೆ. ದೇಶಾದ್ಯಂತ ನವೆಂಬರ್ 14 ರಂದು ಎರಡನೇ ಶನಿವಾರ ಮತ್ತು ನವೆಂಬರ್ 28 ರಂದು ನಾಲ್ಕನೇ ಶನಿವಾರದ ರಜೆ ಇರಲಿದೆ. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ನವೆಂಬರ್ 16 ಸೋಮವಾರದಂದು ಛತ್ ಪೂಜೆ ರಜೆ ಇರುತ್ತದೆ. ನವೆಂಬರ್ 24 ಮಂಗಳವಾರ ಗುರುನಾನಕ್ ಜಯಂತಿ ಆಚರಿಸಲಾಗುತ್ತದೆ. ಇನ್ನು ಕರ್ನಾಟಕದಲ್ಲಿ ನವೆಂಬರ್ 27 ಶುಕ್ರವಾರದಂದು ಕನಕದಾಸ ಜಯಂತಿ ನಿಮಿತ್ತ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ನವೆಂಬರ್ 2026: ಬ್ಯಾಂಕ್ ರಜೆಗಳ ಸಂಪೂರ್ಣ ಪಟ್ಟಿ

ನವೆಂಬರ್ ಬ್ಯಾಂಕ್ ರಜಾದಿನಗಳು 2026: ಯಾವುದು ಬಂದ್, ಯಾವುದಕ್ಕೆ ಇರುತ್ತೆ ವಿನಾಯಿತಿ?

ರಜಾದಿನಗಳು ಮತ್ತು ವಾರಾಂತ್ಯಗಳಲ್ಲಿ ಬ್ಯಾಂಕ್ ಶಾಖೆಯ ಕೌಂಟರ್ ಸೇವೆಗಳು, ಲಾಕರ್, ಡಿಡಿ ಮತ್ತು ನಗದು ಠೇವಣಿ ಸ್ಥಗಿತಗೊಳ್ಳಲಿವೆ. ಸಿಟಿಎಸ್ (CTS) ಚೆಕ್ ಕ್ಲಿಯರೆನ್ಸ್ ಕೇವಲ ಕೆಲಸದ ದಿನಗಳಲ್ಲಿ ನಡೆಯುವುದರಿಂದ, ರಜೆ ದಿನಗಳ ಸಮೀಪದಲ್ಲಿ ನೀಡಿದ ಚೆಕ್‌ಗಳು ಕ್ಲಿಯರ್ ಆಗಲು T+1 ಅಥವಾ T+2 ದಿನಗಳು ಬೇಕಾಗಬಹುದು. ಆದರೆ, ಡಿಜಿಟಲ್ ಹಣ ವರ್ಗಾವಣೆ ತಕ್ಷಣವೇ ತಲುಪಲಿದ್ದು, ಬ್ಯಾಂಕ್ ಕೆಲಸದ ಸಮಯಕ್ಕೆ ಅನುಗುಣವಾಗಿ ಖಾತೆಗೆ ಜಮೆಯಾಗಲಿದೆ.

ನವೆಂಬರ್ ಬ್ಯಾಂಕ್ ರಜಾದಿನಗಳು 2026: ರಾಜ್ಯವಾರು ರಜಾದಿನಗಳ ಪಟ್ಟಿ

ದಿನಾಂಕಸಂದರ್ಭರಜೆ ಇರುವ ರಾಜ್ಯಗಳು
14 ನವೆಂಬರ್, ಶನಿಎರಡನೇ ಶನಿವಾರದೇಶಾದ್ಯಂತ
16 ನವೆಂಬರ್, ಸೋಮಛತ್ ಪೂಜೆಬಿಹಾರ, ಜಾರ್ಖಂಡ್; ಉತ್ತರ ಪ್ರದೇಶದ ಕೆಲವು ಭಾಗಗಳು
24 ನವೆಂಬರ್, ಮಂಗಗುರುನಾನಕ್ ಜಯಂತಿಪಂಜಾಬ್, ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ
27 ನವೆಂಬರ್, ಶುಕ್ರಕನಕದಾಸ ಜಯಂತಿಕರ್ನಾಟಕ
28 ನವೆಂಬರ್, ಶನಿನಾಲ್ಕನೇ ಶನಿವಾರದೇಶಾದ್ಯಂತ

ನವೆಂಬರ್ ಬ್ಯಾಂಕ್ ರಜೆ 2026: ಎಸ್‌ಐಪಿ, ಇಎಂಐ, ಸಂಬಳ ಮತ್ತು ಬಾಡಿಗೆ ಪಾವತಿಗೆ ಪ್ರಮುಖ ಸಲಹೆಗಳು

ನವೆಂಬರ್ 14, 16, 24, 27 ಅಥವಾ 28 ರಂದು ನಿಮ್ಮ ಎಸ್‌ಐಪಿ (SIP) ಮತ್ತು ಇಎಂಐ (EMI) ದಿನಾಂಕಗಳಿದ್ದರೆ, ಎರಡು ದಿನ ಮುಂಚಿತವಾಗಿಯೇ ಕೆಲಸದ ದಿನದಂದು ಪಾವತಿಯಾಗುವಂತೆ ಹೊಂದಿಸಿಕೊಳ್ಳಿ. ಬಿಹಾರ ಮತ್ತು ಜಾರ್ಖಂಡ್‌ನ ಗ್ರಾಹಕರು ನವೆಂಬರ್ 12 ರೊಳಗೆ ಸ್ಥಳೀಯ ಚೆಕ್‌ಗಳನ್ನು ಡೆಪಾಸಿಟ್ ಮಾಡಿ. ದೆಹಲಿ-ಎನ್‌ಸಿಆರ್ ವ್ಯಾಪ್ತಿಯವರು ನವೆಂಬರ್ 23 ರೊಳಗೆ ಬ್ಯಾಂಕ್ ಕೆಲಸಗಳನ್ನು ಮುಗಿಸಿಕೊಳ್ಳಿ. ಇನ್ನು ಕರ್ನಾಟಕದ ಗ್ರಾಹಕರು ನವೆಂಬರ್ 27 ಕ್ಕಿಂತ ಮುಂಚಿತವಾಗಿಯೇ ಲಾಕರ್ ಹಾಗೂ ಹೆಚ್ಚಿನ ಮೊತ್ತದ ಹಣ ರವಾನೆ ಕಾರ್ಯಗಳನ್ನು ಪೂರ್ಣಗೊಳಿಸುವುದು ಉತ್ತಮ.

ಸ್ಥಳೀಯ ಸರ್ಕಾರಗಳ ಅಧಿಕೃತ ಸೂಚನೆಯಂತೆ ಕೆಲವು ರಾಜ್ಯಗಳಲ್ಲಿ ದೀಪಾವಳಿ ರಜೆಯನ್ನು ನವೆಂಬರ್ 7 ಶನಿವಾರದಂದು (ನರಕ ಚತುರ್ದಶಿ) ನೀಡುವ ಸಾಧ್ಯತೆಯಿದೆ. ಆದ್ದರಿಂದ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮುನ್ನ ಸ್ಥಳೀಯ ಸುತ್ತೋಲೆಯನ್ನು ಪರಿಶೀಲಿಸಿ. ತುರ್ತು ಅಗತ್ಯಕ್ಕಾಗಿ ಕನಿಷ್ಠ ನಗದನ್ನು ಕೈಯಲ್ಲಿಟ್ಟುಕೊಳ್ಳಿ ಮತ್ತು ಲಾಕರ್ ಸ್ಲಾಟ್‌ಗಳನ್ನು ಮುಂಚಿತವಾಗಿ ಕಾಯ್ದಿರಿಸಿ. ಡಿಜಿಟಲ್ ಸೇವೆಗಳು 24/7 ಲಭ್ಯವಿದ್ದರೂ, ಬ್ಯಾಂಕ್ ಕೌಂಟರ್ ಕೆಲಸಗಳು ಮತ್ತು ಚೆಕ್ ಕ್ಲಿಯರೆನ್ಸ್‌ಗೆ ರಜೆಗಳು ಅಡ್ಡಿಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+