ನವದೆಹಲಿ, ಜೂನ್ 9: ಭಾರತದಲ್ಲಿ ಡಿಜಿಟಲ್ ಪಾವತಿ ವಹಿವಾಟು ವ್ಯಾಪಕವಾಗಿ ಏರಿಕೆ ಕಂಡಿದೆ. ಕೋವಿಡ್ ಸಾಂಕ್ರಮಿಕದ ಬಳಿಕ ಡಿಜಿಟಲ್ ಪಾವತಿಯಲ್ಲಿ ವೇಗ ಪಡೆದಿದ್ದು ಭಾರತದ ಹಣಕಾಸು ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಪ್ರಗತಿದಾಯಕವಾಗಿರುವುದನ್ನು ತೋರಿಸುತ್ತದೆ.
ಒಂದೆಡೆ ಡಿಜಿಟಲ್ ಪಾವತಿಗಳ ಏರಿಕೆಯಾಗಿದ್ರೆ ಇನ್ನೊಂದೆಡೆ ವಂಚನೆಯೂ ಹೆಚ್ಚಾಗಿದೆ. ಯುಪಿಐ, ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಹೀಗೆ ಕಷ್ಟಪಟ್ಟು ಗಳಿಸಿದ ಹಣವನ್ನು ಕದಿಯಲು ವಂಚಕರು ನಿರಂತರವಾಗಿ ನವನವೀನ ವಿಧಾನಗಳನ್ನು ಕಂಡುಹುಡುಕಿ ತಮ್ಮ ವಂಚನೆಯ ಬಲೆಗೆ ಮೋಸದಿಂದ ಕೆಡವುತ್ತಾರೆ.

ಆರ್ಥಿಕ ವರ್ಷ ೨೦೨೩- ೨೪ ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ, ೨೦೨೨-೨೩ರ ೯೦೪೬ ವಂಚನೆ ಪ್ರಕರಣ ವರದಿಯಾಗಿದ್ದು, ಇದು ಹಣಕಾಸು ವರ್ಷ ೨೦೨೩-೨೪ರಲ್ಲಿ ೩೬,೦೭೫ಕ್ಕೆ ಏರಿಕೆ ಕಂಡಿದೆ.
ಯುಪಿಐ ಓವರ್ ಪೇಮೆಂಟ್ ಮೋಸ:
ಈಗ ಅತಿ ಹೆಚ್ಚು ಪ್ರಚಲಿತದಲ್ಲಿರುವ ವಂಚನೆ ಅಂದರೆ "ಯುಪಿಐ ಓವರ್ ಪೇಮೆಂಟ್ ವಂಚನೆ". ನೀವು ನಿಮ್ಮ ದಿನ ನಿತ್ಯದ ಕೆಲಸ ಅಥವಾ ಆಫೀಸ್ ಕೆಲಸದ ಒತ್ತಡದಲ್ಲಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನೀವು ಅಪರಿಚಿತ ಸಂಖ್ಯೆಯಿಂದ ಕರೆಯನ್ನು ಸ್ವೀಕರಿಸುತ್ತೀರಿ. ಅತ್ತ ಕಡೆಯಿಂದ ಕರೆ ಮಾಡಿದವರು ಸರ್ ಯಾರಿಗೋ ಮಾಡಬೇಕಾಗಿದ್ದ 20,000 ರೂ. ಪೇಪೆಂಟ್ ತಪ್ಪಿ ಆಕಸ್ಮಿಕವಾಗಿ ನಿಮಗೆ ಕಳುಹಿಸಿದ್ದೇನೆ ಎನ್ನುತ್ತಾರೆ ಮತ್ತು ವೈದ್ಯಕೀಯ ತುರ್ತುಪರಿಸ್ಥಿತಿ ಇರೋ ಕಾರಣ ಅದನ್ನು ತುರ್ತಾಗಿ ಹಿಂದಿರುಗಿಸುವ ಅಗತ್ಯವಿದೆ ಎನ್ನುತ್ತಾರೆ.
ಹೀಗೆ ಅತ್ತ ಕಡೆಯಿಂದ ಕರೆ ಮಾಡಿದವರು ತಕ್ಷಣವೇ ದುಡ್ದು ಹಿಂದಿರುಗಿಸುವಂತೆ ನಿಮ್ಮನ್ನು ಒತ್ತಾಯಿಸುತ್ತಾರೆ. ನೀವು ಒತ್ತಡದಲ್ಲೋ ಪರಾನುಭೂತಿ, ಕನಿಕರದ ಭಾವನೆಯಲ್ಲೋ ನಿಮ್ಮ ಯುಪಿಐ ಖಾತೆ ಪರಿಶೀಲಿಸದೇ ಹಣ ವರ್ಗಾಯಿಸಬಹುದು. ಅಥವಾ ನೀವು ಗಡಿಬಿಡಿಯಲ್ಲಿ ಪರಿಶೀಲಿಸಿ ಅವರಿಗೆ ಹಣ ವರ್ಗಾಯಿಸಿದ ಬಳಿಕ ಅವರು ೨೦,೦೦೦ ರೂ ಬದಲಿಗೆ ಕೇವಲ ೨೦೦ ರೂಪಾಯಿ ವರ್ಗಾಯಿಸಿದ್ದಾರೆ ಎಂದು ಮನವರಿಕೆಯಾಗುವ ವೇಳೆಗೆ ವಂಚನೆ ನಡೆದು ಹೋಗಿರಬಹುದು.
ಯುಪಿಐ ಓವರ್ ಪೇಮೆಂಟ್ ಸ್ಕ್ಯಾಮ್ ಗಳಿಂದ ರಕ್ಷಣೆ ಪಡೆಯುವುದು ಹೇಗೆ?
1. ಪಾವತಿ ವಿನಂತಿ ಎರಡು ಬಾರಿ ಪರಿಶೀಲಿಸಲು ಮರೆಯಬೇಡಿ: ಮೇಲೆ ತಿಳಿಸಿದಂತೆ ಯಾವುದೇ ಯುಪಿಐ ಪೇಮೆಂಟ್ ಮಾಡಿ ಎಂಬ ರಿಕ್ವೆಸ್ಟ್ ಬಂದಾಗ ತಕ್ಷಣ ಅದಕ್ಕೆ ಒಪ್ಪಿ ಹಣ ವರ್ಗಾಯಿಸುವ ಮೊದಲು ಅವರ ರಿಕ್ವೆಸ್ಟ್ ಗಳನ್ನು ಸಮಯ ತೆಗೆದುಕೊಂಡು ಪರಿಶೀಲಿಸಿ. ಅಲ್ಲದೆ ಇಂತಹ ಅನಿರೀಕ್ಷಿತ ಪಾವತಿ ವಿನಂತಿಗಳ ಬಗ್ಗೆ ಜಾಗರೂಕರಾಗಿ.
2. ಕಳುಹಿಸುವವರ ವಿವರಗಳನ್ನು ಪರಿಶೀಲಿಸಿ: ನೀವು ಅಪರಿಚಿತ ಮೂಲದಿಂದ ಅಥವಾ ಅನಿರೀಕ್ಷಿತ ಮೊತ್ತಕ್ಕೆ ಪಾವತಿ ವಿನಂತಿಯನ್ನು ಸ್ವೀಕರಿಸಿದರೆ, ನೀವು ಮುಂದುವರಿಯುವ ಮೊದಲು ಕರೆ ಅಥವಾ ಸಂದೇಶದ ಮೂಲಕ ಕಳುಹಿಸುವವರ ವಿವರಗಳನ್ನು ದೃಢೀಕರಿಸಲು ಮರಿಯಬೇಡಿ
3. ಮೇಸೇಜ್ ಗಳ ಬಗ್ಗೆಯೂ ಜಾಗರೂಕರಾಗಿರಿ: ಸ್ಕ್ಯಾಮರ್ ಗಳು ಸಾಮಾನ್ಯವಾಗಿ ತಪ್ಪು ದಾರಿಗೆಳೆಯುವ ಹಕ್ಕುಗಳೊಂದಿಗೆ ಅಪೇಕ್ಷಿಸದ ಸಂದೇಶಗಳನ್ನು ಕಳುಹಿಸುತ್ತಾರೆ. ಅಂದರೆ ವಹಿವಾಟಿ ನಡೆಸಿದ ವಿವರಗಳಂತೆ ಇರುವ ಸಂದೇಶಗಳು ನಿಮ್ಮ ಮೊಬೈಲ್ ಗೆ ಬರಬಹುದು. ಹೀಗಾಗಿ ಇಂತಹ ರಿಕ್ವೆಸ್ಟ್ ಗಳಿಗೆ ಪ್ರತಿಕ್ರಿಯಿಸುವ ಅಥವಾ ಅನುಮೋದಿಸುವ ಮೊದಲು ಕಳುಹಿಸುವವರ ಗುರುತು ಮತ್ತು ವಹಿವಾಟಿನ ಉದ್ದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿ.
4. ಒತ್ತಡಕ್ಕೆ ಒಳಗಾಗಬೇಡಿ: ಫೋನ್ ಕರೆಗಳನ್ನು ಆಧರಿಸಿ, ಅದರಲ್ಲೂ ವಿಶೇಷವಾಗಿ ಅಪರಿಚಿತ ಸಂಖ್ಯೆ ಗಳಿಂದ ಕರೆ , ಸಂದೇಶ ಬಂದಾಗ ಹಣ ವರ್ಗಾವಣೆಗೆ ಎಂದಿಗೂ ಆತುರಪಡಬೇಡಿ. ಸ್ಕ್ಯಾ ಮರ್ ಗಳು ಆಗಾಗ್ಗೆ ತುರ್ತು ಮತ್ತು ಭಾವನಾತ್ಮಕವಾಗಿ ತಮ್ಮ ಮಾತಿನ ಕೌಶಲ್ಯಗಳನ್ನು ಬಳಸಿಕೊಂಡು ವಂಚನೆ ಎಸಗುತ್ತಾರೆ. ಹೀಗಾಗಿ ಜಾಗರೂಕರಾಗಿರಿ ಮತ್ತು ನಿಮ್ಮ ಹಣವನ್ನು ರಕ್ಷಿಸಿಕೊಳ್ಳಿ


Click it and Unblock the Notifications