ರೇಷನ್ ಕಾರ್ಡ್, ಓಟರ್ ಐಡಿ ಹೇಗೆ ಮುಖ್ಯವೋ, ಅದೇ ರೀತಿ ಇಂದು ಆಧಾರ್ ಕಾರ್ಡ್ ಕೂಡಾ ಬಹಳ ಮುಖ್ಯ ದಾಖಲೆಯಾಗಿದೆ. ಪಾಸ್‌ಪೋರ್ಟ್‌ನಿಂದ (Passport) ಹಿಡಿದು ಮೊಬೈಲ್ ಸಿಮ್ ಕಾರ್ಡ್ ಖರೀದಿಸುವವರೆಗೂ ಆಧಾರ್ ಕಾರ್ಡ್ ಇರಲೇಬೇಕು. ಇನ್ನು ಸರ್ಕಾರದಿಂದ ಜಾರಿಗೆ ಬರುವ ಯಾವುದೇ ಯೋಜನೆಗಳ ಸೌಲಭ್ಯ ಪಡೆಯಬೇಕೆಂದರೆ ಆಧಾರ್ ಕಾರ್ಡ್ (Aadhaar Card) ಒದಗಿಸಲೇಬೇಕು. ಆದ್ರೆ ಕೆಲವೊಮ್ಮೆ ಆಧಾರ್ ಕಾರ್ಡ್‌ನಲ್ಲಾದ ಸಮಸ್ಯೆಗಳಿಂದ ಹಲವು ಯೋಜನೆಯ ಸೌಲಭ್ಯಗಳು ಕೈತಪ್ಪುತ್ತದೆ.

ಅದರಲ್ಲೂ ಮುಖ್ಯವಾಗಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ಹೆಸರನ್ನು ಸರಿಯಾಗಿ ನೀಡಬೇಕು. ಇಲ್ಲದಿದ್ರೆ ಸಮಸ್ಯೆ ಆಗೋದು ಪಕ್ಕಾ. ಹಾಗಾಗಿ ಆಧಾರ್ ಕಾರ್ಡ್‌ನಲ್ಲಿ ಹೆಸರು ಸರಿಯಿರದಿದ್ದರೆ ಇದನ್ನು ಮನೆಯಿಂದಲೇ ಅಥವಾ ಅಧಿಕೃತ ಕೇಂದ್ರಗಳಲ್ಲಿ ಸುಲಭವಾಗಿ ಸರಿಮಾಡಬಹುದು. ಅದಕ್ಕಾಗಿ ಹಂತ ಹಂತದ ಟಿಪ್ಸ್ ಇಲ್ಲಿದೆ..
ಆಧಾರ್‌ನಲ್ಲಿ ಆನ್‌ಲೈನ್ ಹೆಸರು ತಿದ್ದುಪಡಿ ಮಾಡುವುದು ಸುಲಭ ಮತ್ತು ಅನುಕೂಲಕರವಾಗಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
ಹಂತ 1: UIDAI ಅಧಿಕೃತ ವೆಬ್‌ಸೈಟ್ https://uidai.gov.in ಅನ್ನು ಓಪನ್ ಮಾಡಬೇಕು. ನಂತರ ಅಲ್ಲಿ "Update Demographics Data Online" ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 2: ನಿಮ್ಮ 12-ಅಂಕಿಯ ಆಧಾರ್ ನಂಬರ್ ಆಡ್ ಮಾಡಿ, ಲಾಗಿನ್ ಮಾಡಿಕೊಳ್ಳಿ. ಆ ನಂತರ ನೀವು ಲಿಂಕ್ ಮಾಡಲಾದ ಮೊಬೈಲ್ ನಂಬರ್‌ಗೆ ಬರುವ ಓಟಿಪಿ ಮೂಲಕ ಲಾಗಿನ್ ಪೂರ್ಣಗೊಳಿಸಿ.
ಹಂತ 3: 'ಹೆಸರು' ತಿದ್ದುಪಡಿ ಆಯ್ಕೆಮಾಡಿ: ಅಲ್ಲಿ ನೀವು ನಿಮ್ಮ ಚೇಂಜ್ ಮಾಡಲು ಬಯಸುವ ಹೆಸರನ್ನು ನಮೂದಿಸಿ.
ಹಂತ 4: ಅಲ್ಲಿ ನಿಮಗೆ ಡಾಕ್ಯುಮೆಂಟ್ ಆಡ್ ಮಾಡಬೇಕಾಗುತ್ತದೆ, ಅದಕ್ಕಾಗಿ ನೀವು ವೋಟರ್ ಐಡಿ, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮ್ಯಾರೇಜ್ ಸರ್ಟಿಫಿಕೇಟ್‌ನಂತಹ ದಾಖಲೆಗಳನ್ನು ಸಬ್ಮಿಟ್ ಮಾಡಬೇಕು.
ಹಂತ 5: ಈ ಎಲ್ಲಾ ದಾಖಲೆಗಳನ್ನು ಆಡ್ ಮಾಡಿದ ನಂತರ, ನೀಡಿದ ವಿವರವನ್ನು ಸರಿಯಾಗಿ ಚೆಕ್ ಮಾಡಿ. ನಂತರ, ಅಪ್ಡೇಟ್ ಆಗಿದ್ಯಾ? ಇಲ್ವಾ? ಎಂದು ಟ್ರ್ಯಾಕ್ ಮಾಡಲು ನಿಮಗೆ ಅಪ್‌ಡೇಟ್ ರಿಕ್ವೆಸ್ಟ್ ನಂಬರ್ (URN) ದೊರೆಯುತ್ತದೆ. ಈ ಮೂಲಕ ಚೆಕ್ ಮಾಡಬಹುದು.
ಹಂತ 6: ಒಂದು ವೇಳೆ ಚೆಕ್ ಮಾಡಿದ ನಂತರ, ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ದರೆ, ಯುಐಡಿಎಐ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್‌ನ ಯಾವುದೇ ಅಪ್ಡೇಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾಡಬೇಕೆಂದರೆ ಒಟಿಪಿ ದೃಢೀಕರಣ ಅಗತ್ಯ. ಅದ್ದರಿಂದ ಮೊದಲು ಆಧಾರ್ ಕಾರ್ಡ್‌ಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ಯಾ ಎಂದು ಚೆಕ್ ಮಾಡಿಕೊಳ್ಳಿ.
ಆಫ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
ಒಂದು ವೇಳೆ ಆನ್‌ಲೈನ್‌ನಲ್ಲಿ ಆಗದೇ ಇದ್ದರೆ, ನೀವು ಆಧಾರ್ ನೋಂದಣಿ ಕೇಂದ್ರದಲ್ಲಿ ಹೆಸರು ತಿದ್ದುಪಡಿ ಮಾಡಬಹುದು. ನಿಮ್ಮ ಸ್ಥಳೀಯ ಆಧಾರ್ ಸೇವಾ ಕೇಂದ್ರ ಅಥವಾ ಅಧಿಕೃತ ಸರ್ಕಾರಿ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಕೆಲಸ ಮಾಡಿಮುಗಿಸಬಹುದು.
ಹಂತ 1: ಸ್ಥಳೀಯ ಕೇಂದ್ರಕ್ಕೆ ತೆರಳಿ, ಆಧಾರ್ ಅಪ್‌ಡೇಟ್/ತಿದ್ದುಪಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅದರಲ್ಲಿ ನಿಮ್ಮ ಸರಿಯಾದ ಹೆಸರನ್ನು ಬರೆಯಬೇಕು.
ಹಂತ 2: ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ ಅಥವಾ ವಿವಾಹ ಪ್ರಮಾಣಪತ್ರದಂತಹ ಯಾವುದೇ ದಾಖಲೆಗಳ ಪ್ರತಿಯನ್ನು ಅಲ್ಲಿ ನೀಡಬೇಕು.
ಹಂತ 3: ಆ ಬಳಿಕ ನೀವು ಭರ್ತಿ ಮಾಡಿದ ಫಾರ್ಮ್ ಅನ್ನು ಕೌಂಟರ್‌ನಲ್ಲಿ ನೀಡಬೇಕು ಮತ್ತು ಸೇವಾಶುಲ್ಕ 50 ರೂ. ಪಾವತಿ ಮಾಡಬೇಕು.
ಹಂತ 4: ಆ ನಂತರ ನಿಮ್ಮ ಬಯೋಮೆಟ್ರಿಕ್ ಅನ್ನು ತೆಗೆದುಕೊಳ್ಳಲಾಗುತ್ತದೆ.
ಹಂತ 5: ನಿಮ್ಮ ಆಧಾರ್ ಅಪ್‌ಡೇಟ್ ಸ್ಥಿತಿಯನ್ನು ಟ್ರ್ಯಾಕ್ ಮಾಡಲು URN ಸ್ಲಿಪ್ ಅನ್ನು ಸಂಗ್ರಹಿಸಿ.
ಹಂತ 6: ಈ ಎಲ್ಲಾ ಪ್ರಕ್ರಿಯೆ ಪೂರ್ಣವಾದ ಬಳಿಕ ನೀವು ಸ್ಥಳೀಯ ಕೇಂದ್ರದಿಂದಲೇ ಅಪ್ಡೇಟೆಡ್ ಆಧಾರ್ ಕಾರ್ಡ್ ಅನ್ನು ಪಡೆಯಬಹುದು.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications