ನವದೆಹಲಿ, ಮೇ 22: ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಜೀವ ವಿಮಾ ಕಂಪನಿಯಾದ ಎಲ್‌ಐಸಿ (ಎಲ್‌ಐಸಿ) ಗ್ರಾಹಕರು, ಪಾಲಿಸಿದಾರರು ವಿವಿಧ ಪ್ರಯೋಜನಗಳನ್ನು ಪಡೆಯಲು ಎಲ್‌ಐಸಿ ವಾಟ್ಸಾಪ್ ಸೇವೆಗಳನ್ನು ಬಳಸಿಕೊಳ್ಳಬಹುದು. ಅಧಿಕೃತ ಎಲ್‌ಐಸಿ ವಾಟ್ಸಾಪ್ ಚಾಟ್‌ಬಾಟ್, ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ.
ಸಾಲ ಪಡೆಯುವ ಅರ್ಹತೆ, ಮರುಪಾವತಿ ಮೌಲ್ಯಮಾಪನ, ಪಾಲಿಸಿಯ ಸ್ಥಿತಿ ಗತಿ, ಬೋನಸ್ ಮಾಹಿತಿ, ಸ್ಟೇಟ್ ಮೆಂಟ್ ಯೂನಿಟ್, LIC ಸೇವೆಗಳಿಗೆ ಲಿಂಕ್‌ಗಳು, ಪ್ರೀಮಿಯಂ ನ ಡ್ಯೂ ಡೇಟ್, ಸಾಲದ ಬಡ್ಡಿ,ಪಾವತಿಸಿದ ಪ್ರೀಮಿಯಂಗಳ ಪ್ರಮಾಣಪತ್ರಗಳು ಸೇರಿದಂತೆ 11 ಕ್ಕೂ ಹೆಚ್ಚು ಸೇವೆಗಳನ್ನು WhatsApp ನಲ್ಲಿ LIC ಸದಸ್ಯರಿಗೆ ನೀಡುತ್ತದೆ.

ಉದಾಹರಣೆಗೆ ನೀವು ಎಲ್‌ಐಸಿ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ಮತ್ತು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಪರಿಶೀಲಿಸಲು ಬಯಸಿದರೆ, ನೀವು WhatsApp ನಲ್ಲಿ ಸಂದೇಶ ಕಳುಹಿಸುವ ಮೂಲಕ ಸೇವೆ ಪಡೆಯಬಹುದು.
ವಾಟ್ಸಾಪ್ ಮೂಲಕ ನಿಮ್ಮ ಎಲ್ಐಸಿ ಪಾಲಿಸಿಯ ಸ್ಥಿತಿ ಹಾಗೂ ಇತರ ವಿವರಗಳನ್ನು ಪರಿಶೀಲಿಸುವುದು ಹೇಗೆ ಎಂಬುದು ಇಲ್ಲಿದೆ:
ನಿಮ್ಮ ಫೋನ್‌ನಲ್ಲಿ LIC ಯ ಅಧಿಕೃತ WhatsApp ಸಂಖ್ಯೆಯನ್ನು ಸೇವ್ ಮಾಡಿಸಿಕೊಳ್ಳಿ
- LIC WhatsApp ಸೇವೆಗಳ ದೂರವಾಣಿ ಸಂಖ್ಯೆ +91 8976862090 ಆಗಿದೆ.
- ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ +91 8976862090 ಗೆ ' 'Hi' ಕಳುಹಿಸಿ
- ನೀವು ಈಗ 11 ಸೇವೆಗಳಲ್ಲಿ ಒಂದನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ
- ಸೇವೆಗಳ ಆಯ್ಕೆಗಾಗಿ ನಿಮಗೆ ನೀಡಲಾದ ಆಯ್ಕೆ ಸಂಖ್ಯೆಯೊಂದಿಗೆ ಚಾಟ್‌ನಲ್ಲಿ ಪ್ರತ್ಯುತ್ತರಿಸಿ --ಉದಾಹರಣೆ 1 ಸಂಖ್ಯೆ ಪ್ರೀಮಿಯಂ ದಿನಾಂಕಕ್ಕಾಗಿ, 2 ರ ಆಯ್ಕೆ ಬೋನಸ್ ಮಾಹಿತಿಗಾಗಿ ಇತ್ಯಾದಿ
- LIC ನಿಮ್ಮ ಪ್ರಶ್ನೆಯ ವಿವರಗಳನ್ನು WhatsApp ಚಾಟ್‌ನಲ್ಲಿ ಹಂಚಿಕೊಳ್ಳುತ್ತದೆ.
ಈ ಸೇವೆಗಳನ್ನು ಪಡೆಯಲು, ಪಾಲಿಸಿದಾರರು ಮೊದಲು LIC ಯ ಅಧಿಕೃತ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಮೂರು-ಹಂತದ ಪ್ರಕ್ರಿಯೆಯನ್ನು ಫಾಲೋ ಮಾಡುವ ಮೂಲಕ ನೀವು ಪ್ರೀಮಿಯರ್ ಸೇವೆಗಳಿಗೆ ನೋಂದಾಯಿಸಿಕೊಳ್ಳಬಹುದು. LIC ಯ ವೆಬ್‌ಸೈಟ್ ಪ್ರಕಾರ, ಯಾವುದೇ ಗ್ರಾಹಕರು ತಮ್ಮ ಸ್ವಂತ ಅಥವಾ ಅಪ್ರಾಪ್ತ ಮಕ್ಕಳ ಪಾಲಿಸಿ ಇದ್ದರೆ ಈ ಸೇವೆ ಪಡೆಯಲು ಅರ್ಹರಾಗಿರುತ್ತಾರೆ.


Click it and Unblock the Notifications