ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಚಿತ್ರವು ಭಾರತದಾದ್ಯಂತ ಜನಮೆಚ್ಚುಗೆ ಗಳಿಸಿದ್ದು ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡಿದೆ. ಈಗಾಗಲೇ ಚಿತ್ರ ಜಾಗತಿಕವಾಗಿ ರೂ 509.75 ಕೋಟಿ ಗಳಿಸಿದ್ದು, ಇನ್ನೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ . ಈ ಚಿತ್ರದ ಯಶಸ್ಸಿನ ಕಥೆಯಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರ ಅಭಿನಯದ ಜೊತೆಗೆ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರ ಪರಿಶ್ರಮವೂ ಅಡಗಿದೆ. ಮುಂಬೈನ ಬೀದಿಗಳಲ್ಲಿ ವಡಾ ಪಾವ್ ಮಾರಾಟ ಮಾಡುತ್ತಿದ್ದ ಉಟೇಕರ್, ಇಂದು ಬಾಲಿವುಡ್‌ನ ಅತಿದೊಡ್ಡ ಐತಿಹಾಸಿಕ ಚಿತ್ರಗಳಲ್ಲಿ ಒಂದನ್ನು ನಿರ್ದೇಶಿಸುವವರೆಗಿನ ಅವರ ಪ್ರಯಾಣವು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಲಕ್ಷ್ಮಣ್ ಉಟೇಕರ್ ಅವರ ಯಶಸ್ಸು ರಾತ್ರೋರಾತ್ರಿ ಸಿಕ್ಕಿದ್ದಲ್ಲ. ಹಂತಹಂತವಾಗಿ ಬೆಳೆದ ಕೆಲ ವರ್ಷಗಳ ಹಿಂದೆ ಮುಂಬೈನ ಬೀದಿಬದಿಗಳಲ್ಲಿ ವಡಾಪಾವ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಸಣ್ಣ ವಯಸ್ಸಿನಲ್ಲಿಯೇ ಜೀವನದಲ್ಲಿ ಸಂಕಷ್ಟ- ಸವಾಲನ್ನು ಎದುರಿಸ್ಕೊಂಡು ಇಂದು ಚಿತ್ರರಂಗದಲ್ಲಿ ಸೋಲಿಲ್ಲದ ನಿರ್ದೇಶನಕನಾಗಿ ಬೆಳೆದುನಿಂತಿದ್ದಾರೆ. ಛಾವಾ ಚಿತ್ರದಲ್ಲಿ ಉಟೇಕರ್ ಜೊತೆ ನಿಕಟವಾಗಿ ಕೆಲಸ ಮಾಡಿದ ನಟ ವಿಕ್ಕಿ ಕೌಶಲ್, ಅವರ ಪ್ರಯಾಣವನ್ನು "ಜೀವನ ಚರಿತ್ರೆಗೆ ಮಾಡಲು ಅರ್ಹ" ಎಂದು ವಿವರಿಸುತ್ತಾರೆ. ಉಟೇಕರ್ ಎಂದಿಗೂ ತಮ್ಮ ದೃಷ್ಟಿಕೋನವನ್ನು ಕಳೆದುಕೊಳ್ಳಲಿಲ್ಲ. ಛಾಯಾಗ್ರಹಣದಲ್ಲಿನ ಅವರ ಅನುಭವವು ಅವರಿಗೆ ಬಲವಾದ ಅಡಿಪಾಯವನ್ನು ಚಿತ್ರಕ್ಕೆ ಒದಗಿಸಿದೆ, ಪ್ರೇಕ್ಷಕರೊಂದಿಗೆ ಆಳವಾಗಿ ಪ್ರತಿಧ್ವನಿಸುವ ದೃಶ್ಯಾತ್ಮಕವಾಗಿ ಬೆರಗುಗೊಳಿಸುವ ಚಲನಚಿತ್ರಗಳನ್ನು ರಚಿಸಲು ಅವರಿಗೆ ಅವಕಾಶ

ಲಕ್ಷ್ಮಣ್ ಉಟೇಕರ್ ಹಿನ್ನಲೆ:
ವರದಿಗಳ ಪ್ರಕಾರ ಲಕ್ಷ್ಮಣ್ ಹುಟ್ಟಿದ್ದು ಮಹಾರಾಷ್ಟ್ರದ ಒಂದು ಪುಟ್ಟ ಹಳ್ಳಿಯಲ್ಲಿ. ಚಿಕ್ಕ ವಯಸ್ಸಿನಲ್ಲಿಯೇ ಲಕ್ಷ್ಮಣ್ ಉಟೇಕರ್ ತಮ್ಮ ಹಳ್ಳಿಯನ್ನು ತೊರೆದು ಮುಂಬೈಗೆ ಬಂದ ಅವರು ಬದುಕಿಗಾಗಿ ಶಿವಾಜಿ ಪಾರ್ಕ್ ಬಳಿ ವಡಾ ಪಾವ್ ಅಂಗಡಿಯನ್ನು ಪ್ರಾರಂಭಿಸಿದರು. ಆದರೆ, ಅವರ ಮನಸ್ಸು ಯಾವಾಗಲೂ ಸಿನಿಮಾ ರಂಗದಲ್ಲಿ ಕೆಲಸ ಮಾಡಬೇಕೆಂದು ಬಯಸುತ್ತಿತ್ತು. ಜೀವನ ಹೀಗೆ ಸಾಗುತ್ತಿರಬೇಕಾದ್ರೆ ಒಂದು ದಿನ, ಪುರಸಭೆಯ ಅಧಿಕಾರಿಗಳು ಅವರ ಗಾಡಿಯನ್ನು ಜಪ್ತಿ ಮಾಡಿದರು.ಮುಂದೇನು ಎಂದು ಚಿಂತಿಸತ್ತಿರಬೇಕಾದ್ರೆ ಅವರ ಜೀವನದಲ್ಲಿ ಮಹತ್ವದ ತಿರುವು ಸಿಕ್ಕಿತು.
ಅದೇ ಸಮಯದಲ್ಲಿ, ಅವರು ಒಂದು ಎಡಿಟಿಂಗ್ ಸ್ಟುಡಿಯೋದಲ್ಲಿ ಪ್ಯೂನ್ ಕೆಲಸಕ್ಕಾಗಿ ಪತ್ರಿಕೆಯಲ್ಲಿ ಜಾಹೀರಾತು ನೋಡಿದರು. ಅವರು ಅರ್ಜಿ ಸಲ್ಲಿಸಿ ಅಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ನೆಲ , ಶೌಚಾಲಯ ಓರೆಸುತ್ತಾ ಸ್ಟುಡಿಯೋ ವಾತಾವರಣವನ್ನು ಹತ್ತಿರದಿಂದ ನೋಡಲಾರಂಭಿಸಿದರು. ಈ ವೇಳೇ ಸಿನಿಮಾ ಎಡೆಟಿಂಗ್ ತಾಂತ್ರಿಕ ಕೆಲಸ ಎಲ್ಲವನ್ನು ಕುತೂಹಲ ಕಣ್ಣಿನಿಂದ ನೋಡುತ್ತಾ ಒಂದಷ್ಟು ವಿಚಾರ ಕಲಿಯತೊಡಗುತ್ತಾರೆ. ಜೊತೆಗೆ ಸಿನಿಮಾ ನಿರ್ಮಾಣದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಕ್ಯಾಮೆರಾ ಸಹಾಯಕನ ಕೊರತೆಯಿಂದಾಗಿ, ಸಿಬ್ಬಂದಿ ನಿಧಾನವಾಗಿ ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಿನಿಮಾ ತಯಾರಿಕೆಯ ಪ್ರತಿಯೊಂದು ಅಂಶವನ್ನು ಕಲಿಯುತ್ತಾ ಸೆಟ್‌ನಲ್ಲಿ ಸಹಾಯ ಮಾಡುತ್ತಿದ್ದರು. ಅಲ್ಲಿಂದ ಅವರು ಹಂತಹಂತವಾಗಿ ಬೆಳೆದು, ಸಹಾಯಕ DOP (ಛಾಯಾಗ್ರಹಣ ನಿರ್ದೇಶಕ) ಮತ್ತು ನಂತರ DOP ಆದರು ನಿರ್ದೇಶಕರಾಗುವ ಮೊದಲು ದೃಶ್ಯಗಳನ್ನು ಹೇಳುವ ಕಲೆ (ವಿಷುಯಲ್ ಸ್ಟೋರಿಟೆಲ್ಲಿಂಗ್) ಕರಗತ ಮಾಡಿಕೊಂಡರು.
2007ರಲ್ಲಿ, ಅವರು "ಖನ್ನಾ ಮತ್ತು ಅಯ್ಯರ್" ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. ನಂತರ "ಬ್ಲೂ" (2009), "ಇಂಗ್ಲಿಷ್ ವಿಂಗ್ಲಿಷ್" (2012), "ಡಿಯರ್ ಜಿಂದಗಿ", "ಹಿಂದಿ ಮೀಡಿಯಂ" ಮತ್ತು "102 ನಾಟ್ ಔಟ್" ನಂತಹ ಪ್ರಮುಖ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದರು. ಅವರ ನಿರ್ದೇಶನದ ಪಯಣವು 2013 ರಲ್ಲಿ ಮರಾಠಿ ಚಿತ್ರ "ತಪಾಲ್" ನೊಂದಿಗೆ ಪ್ರಾರಂಭವಾಯಿತು, ನಂತರ "ಲಾಲ್ಬಾಗ್ಚಿ ರಾಣಿ" (2016) ನಲ್ಲಿ ನಟಿಸಿದರು. 2019 ರಲ್ಲಿ, ಅವರು ತಮ್ಮ ಮೊದಲ ಹಿಂದಿ ಚಿತ್ರ "ಲುಕಾ ಚುಪ್ಪಿ" ನಿರ್ದೇಶಿಸಿದರು, ಇದು ಲಿವ್-ಇನ್ ಸಂಬಂಧಗಳನ್ನು ಆಧರಿಸಿದ ಪ್ರಣಯ ಹಾಸ್ಯ ಚಿತ್ರವಾಗಿದ್ದು, ಇದು ಭಾರಿ ಯಶಸ್ಸನ್ನು ಕಂಡಿತು, ₹128.86 ಕೋಟಿ ಗಳಿಸಿತು. 2021 ರಲ್ಲಿ, ಅವರು ರಾಷ್ಟ್ರೀಯ ಪ್ರಶಸ್ತಿ-ವಿಜೇತ ಮರಾಠಿ ಚಲನಚಿತ್ರ "ಮಾಲಾ ಆಯಿ ವ್ಹಯ್‌ಚಯ್" ನ ರೀಮೇಕ್ "ಮಿಮಿ" ಯನ್ನು ನಿರ್ದೇಶಿಸಿದರು, ನಂತರ 2023 ರಲ್ಲಿ "ಜರಾ ಹಟ್ಕೆ ಜರಾ ಬಚ್ಕೆ" ಚಿತ್ರವನ್ನು ನಿರ್ದೇಶಿಸಿದರು.2024 ರಲ್ಲಿ ಅವರು "ತೇರಿ ಬ್ಯಾಟನ್ ಮೇ ಐಸಾ ಉಲ್ಜಾ ಜಿಯಾ" ಅವರೊಂದಿಗೆ ನಿರ್ಮಾಪಕರ ಪಾತ್ರವನ್ನು ವಹಿಸಿಕೊಂಡರು.
2025ರಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸಿರುವ " ಛಾವಾ" ನಿರ್ದೇಶಿಸಿ ಇಂದು ಈ ಸಿನಿಮಾ 500 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆಯನ್ನು ತಂದುಕೊಟ್ಟಿದೆ.


Click it and Unblock the Notifications