ಮಕ್ಕಳಿಗೂ ಇದೆ ಪ್ಯಾನ್ ಕಾರ್ಡ್: ಇದರ ಅಗತ್ಯವೇನು?

ಬೆಂಗಳೂರು, ಜುಲೈ 20: ಯಾವುದೇ ಹಣಕಾಸು ವ್ಯವಹಾರಕ್ಕೆ ಪ್ಯಾನ್​ ಕಾರ್ಡ್​​ ಕಡ್ಡಾಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಲ್ಲರ ಬಳಿಯೂ ಪ್ಯಾನ್​ ಕಾರ್ಡ್​ ಇರಲೇಬೇಕು ಎಂಬ ನಿಯಮವಿದೆ. ಎಲ್ಲ ಸರ್ಕಾರಿ ಯೋಜನೆ , ಹಣಕಾಸು ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತಿ ಮುಖ್ಯವಾಗಿರುತ್ತದೆ. ಭಾರತದಲ್ಲಿ, ಎಲ್ಲಾ ತೆರಿಗೆದಾರರಿಗೆ 10-ಅಂಕಿಯ ಗುರುತಿನ ಸಂಖ್ಯೆ ಅಥವಾ ಪ್ಯಾನ್ (PAN) ಸಂಖ್ಯೆಯನ್ನು ನೀಡಲಾಗುತ್ತದೆ. ಪ್ಯಾನ್ (PAN) ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಅಗತ್ಯವಾದ ಅಧಿಕೃತ ಡಾಕ್ಯುಮೆಂಟ್ ಆಗಿದೆ.

ಪ್ಯಾನ್ ಕಾರ್ಡ್ ಅನ್ನು ವಯಸ್ಕರಿಗೆ ಮಾತ್ರವಲ್ಲ. ಮಕ್ಕಳಿಗೂ ಮಾಡಿಸಬಹುದಾಗಿದೆ. ಆದಾಯ ತೆರಿಗೆ ವಿಭಾಗದ ಸೆಕ್ಷನ್ 160 ರ ಪ್ರಕಾರ, ಪ್ಯಾನ್ ಕಾರ್ಡ್ ನೀಡಲು ಕನಿಷ್ಠ ವಯಸ್ಸು ಇಲ್ಲ. ಆದ್ದರಿಂದ, ಅಪ್ರಾಪ್ತ ವಯಸ್ಕರು ಕೂಡಾ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇಷ್ಟೇ ಅಲ್ಲ, ಐದು ವರ್ಷದೊಳಗಿನ ಮಗು ಕೂಡ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅದ್ರೂ, ಅವರು ಸ್ವತಃ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಮಕ್ಕಳ ಪರವಾಗಿ ಅವರ ಪೋಷಕರು ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮಕ್ಕಳಿಗೂ ಇದೆ ಪ್ಯಾನ್ ಕಾರ್ಡ್: ಇದರ ಅಗತ್ಯವೇನು?

ಮಗುವಿನ ಪ್ಯಾನ್ ಕಾರ್ಡ್ ಯಾವಾಗ ಬೇಕು?

ಪೋಷಕರು ಮಗುವಿನ ಹೆಸರಿನಲ್ಲಿ ಹೂಡಿಕೆ ಮಾಡುವಾಗ ಯಾವುದೇ ಮಗುವಿಗೂ ಪ್ಯಾನ್ ಕಾರ್ಡ್ ಅಗತ್ಯವಿದೆ. ಇದರ ಹೊರತಾಗಿ, ನಿಮ್ಮ ಮಗುವನ್ನು ನಿಮ್ಮ ಹೂಡಿಕೆಯ ನಾಮಿನಿಯನ್ನಾಗಿ ಮಾಡಿದಾಗ, ಅಪ್ರಾಪ್ತ ವಯಸ್ಕರಿಗೆ ಸಹ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು, ಅಥವಾ ಅಪ್ರಾಪ್ತ ಮಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ (SSY) ಅನ್ನು ತೆರೆದಾಗ, ನೀವು ಮಗುವಿನ PAN ಕಾರ್ಡ್ ವಿವರಗಳನ್ನು ಒದಗಿಸಬೇಕಾಗುತ್ತದೆ. ಅಪ್ರಾಪ್ತ ವಯಸ್ಕನು ಕೆಲಸ ಮಾಡುತ್ತಿದ್ದರೆ ಮತ್ತು ITR ಅನ್ನು ಸಲ್ಲಿಸಬೇಕಾದರೆ ಅವನು PAN ಕಾರ್ಡ್ ಪಡೆಯಬಹುದು. ಐಟಿಆರ್ ಸಲ್ಲಿಸಲು ಪ್ಯಾನ್ ಕಾರ್ಡ್ ಹೊಂದಿರುವುದು ಸಹ ಅಗತ್ಯವಾಗಿದೆ.

ಅಪ್ರಾಪ್ತರ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಅಪ್ರಾಪ್ತ ವಯಸ್ಕರು ತಮ್ಮ ಸ್ವಂತ ಪಾನ್ ಕಾರ್ಡ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ಹೆತ್ತವರು ಅಥವಾ ಪೋಷಕರು ಮಾತ್ರ ಅವರಿಗೆ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಪ್ಯಾನ್ ಕಾರ್ಡ್‌ಗಾಗಿ ಅರ್ಜಿಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದು.

ಅಪ್ರಾಪ್ತ ವಯಸ್ಕರ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

1. ಪೋಷಕರ ವಿಳಾಸ ಮತ್ತು ಗುರುತಿನ ಪುರಾವೆ
2. ಅರ್ಜಿದಾರರ ಗುರುತಿನ ಪುರಾವೆ (ಆಧಾರ್ ಕಾರ್ಡ್ / ರೇಷನ್ ಕಾರ್ಡ್ / ಪಾಸ್‌ಪೋರ್ಟ್ / ಡ್ರೈವಿಂಗ್ ಲೈಸೆನ್ಸ್ / ಮತದಾರರ ಗುರುತಿನ ಚೀಟಿ)
3. ವಿಳಾಸದ ಪುರಾವೆ (ಆಧಾರ್ ) ಕಾರ್ಡ್ / ಪೋಸ್ಟ್ ಆಫೀಸ್ ಪಾಸ್‌ಬುಕ್ / ಆಸ್ತಿ ನೋಂದಣಿ ದಾಖಲೆ ಇತ್ಯಾದಿ)

ಅಪ್ರಾಪ್ತ ವಯಸ್ಕರಿಗೆ ನೀಡಲಾದ ಪ್ಯಾನ್ ಕಾರ್ಡ್‌ನಲ್ಲಿ ಅವರ ಭಾವಚಿತ್ರ ಅಥವಾ ಸಹಿ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಗುರುತಿನ ಸರಿಯಾದ ಪುರಾವೆಯಾಗಿ ಬಳಸಲಾಗುವುದಿಲ್ಲ. ಆದ್ದರಿಂದ, ಜನರು 18 ವರ್ಷ ವಯಸ್ಸಾದಾಗ, ಅವರು ತಮ್ಮ ಪ್ಯಾನ್ ಕಾರ್ಡ್ ಅನ್ನು ನವೀಕರಿಸಲು ಅರ್ಜಿ ಸಲ್ಲಿಸಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+