ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ! ಅಕ್ಟೋಬರ್ 23, 26 ಮತ್ತು ನವೆಂಬರ್ 15ರಂದು ನಿಮ್ಮ ಕಾರ್ಡ್‌ನಲ್ಲಿ ಏನೇನು ಬದಲಾಗಲಿದೆ?

ಇಂದು, ಅಂದರೆ ಅಕ್ಟೋಬರ್ 23ರಿಂದ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರುತ್ತಿವೆ. ಬ್ಯಾಂಕುಗಳು ಏರ್‌ಪೋರ್ಟ್ ಲಾಂಜ್ ಆಕ್ಸೆಸ್ ಕಡಿತಗೊಳಿಸುತ್ತಿದ್ದು, ಕ್ಯಾಶ್‌ಬ್ಯಾಕ್ ಮಿತಿಗಳನ್ನು ಇಳಿಸುತ್ತಿವೆ ಮತ್ತು ಶುಲ್ಕಗಳನ್ನು ಪರಿಷ್ಕರಿಸುತ್ತಿವೆ. ಇದಷ್ಟೇ ಅಲ್ಲ, ಅಕ್ಟೋಬರ್ 26 ಮತ್ತು ನವೆಂಬರ್ 15ರಂದೂ ಮತ್ತಷ್ಟು ಬದಲಾವಣೆಗಳು ಆಗಲಿವೆ. ನಿಮ್ಮ ರಿವಾರ್ಡ್ ಪಾಯಿಂಟ್ಸ್, ಲಾಂಜ್ ಆಕ್ಸೆಸ್ ಉಳಿಸಿಕೊಳ್ಳಲು ಮತ್ತು ಹೆಚ್ಚುವರಿ ವೆಚ್ಚ ತಪ್ಪಿಸಲು ಈ ಕೆಳಗಿನ ಚೆಕ್‌ಲಿಸ್ಟ್ ಗಮನಿಸಿ.

ಮೊದಲು ನಿಮ್ಮ ಬ್ಯಾಂಕ್‌ನ ಆ್ಯಪ್ ಅಥವಾ ಪೋರ್ಟಲ್‌ಗೆ ಲಾಗಿನ್ ಆಗಿ ಅರ್ಹತೆಗಳನ್ನು ಪರಿಶೀಲಿಸಿಕೊಳ್ಳಿ. ಲಾಂಜ್ ಬಳಕೆಯ ಮಿತಿ, ಕನಿಷ್ಠ ಖರ್ಚಿನ ಮೊತ್ತ (spend thresholds) ಮತ್ತು ತ್ರೈಮಾಸಿಕ ರಿಸೆಟ್ ನಿಯಮಗಳನ್ನು ಒಮ್ಮೆ ಚಾಚೂ ತಪ್ಪದೆ ಚೆಕ್ ಮಾಡಿ. ಮನೆ ಬಾಡಿಗೆ ಪಾವತಿ ಅಥವಾ ವ್ಯಾಲೆಟ್ ಮನಿ ಲೋಡ್‌ಗೆ ಈಗಲೂ ರಿವಾರ್ಡ್ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯುಪಿಐ (UPI) ಮತ್ತು ಕಾರ್ಡ್ ಇ-ಮ್ಯಾಂಡೇಟ್‌ಗಳನ್ನು ಮರುಪರಿಶೀಲಿಸಿ, ನಿಮ್ಮ ಬಿಲ್ಲಿಂಗ್ ಸೈಕಲ್ ಹಾಗೂ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಕ್ರೆಡಿಟ್ ಕಾರ್ಡ್ ನಿಯಮ ಬದಲಾವಣೆ: ನೀವು ತಿಳಿಯಲೇಬೇಕಾದ ಮಾಹಿತಿ

ಕ್ರೆಡಿಟ್ ಕಾರ್ಡ್ ರಿವಾರ್ಡ್ಸ್ ನಿಯಮ ಬದಲಾವಣೆ: ಇಂದು (ಅಕ್ಟೋಬರ್ 23), ಅಕ್ಟೋಬರ್ 26 ಮತ್ತು ನವೆಂಬರ್ 15ಕ್ಕೆ ಏನೇನು ಬದಲಾಗಲಿದೆ?

ಇನ್ಮುಂದೆ ಉಚಿತ ಲಾಂಜ್ ಆಕ್ಸೆಸ್ ಸಿಗಬೇಕೆಂದರೆ ಇತ್ತೀಚಿನ ಕಾರ್ಡ್ ಬಳಕೆಯ ಮೊತ್ತವೇ ಮಾನದಂಡವಾಗಲಿದೆ. ಕ್ಯಾಶ್‌ಬ್ಯಾಕ್ ಮಿತಿಗಳು ಕಡಿಮೆಯಾಗಬಹುದು ಅಥವಾ ಬಿಲ್ಲಿಂಗ್ ಸೈಕಲ್ ಮಿತಿಗೆ ಒಳಪಡಬಹುದು. ಬಾಡಿಗೆ ಕಟ್ಟಿದರೆ ಅಥವಾ ವ್ಯಾಲೆಟ್‌ಗೆ ಹಣ ಹಾಕಿದರೆ ರಿವಾರ್ಡ್ ಪಾಯಿಂಟ್ಸ್ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ವಾರ್ಷಿಕ ಶುಲ್ಕ ಮನ್ನಾ (Annual Fee Waiver) ಪಡೆಯಲು ಇನ್ಮುಂದೆ ಹೆಚ್ಚಿನ ಮೊತ್ತದ ವಹಿವಾಟು ನಡೆಸಬೇಕಾಗಬಹುದು. ಅಕ್ಟೋಬರ್ 26ರಿಂದ ನವೆಂಬರ್ 15ರ ಅವಧಿಯಲ್ಲಿ ಬ್ಯಾಂಕುಗಳು ಇಂತಹ ರಿವಾರ್ಡ್ ರಹಿತ ವಿಭಾಗಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಜೊತೆಗೆ ಫೋರೆಕ್ಸ್ ಶುಲ್ಕ ಮತ್ತು ಕ್ಯಾಶ್ ಅಡ್ವಾನ್ಸ್ ಚಾರ್ಜ್ ಕೂಡ ಏರಿಕೆಯಾಗಬಹುದು.

ದಿನಾಂಕಪ್ರಮುಖ ಬದಲಾವಣೆಗಳುಈ ದಿನಾಂಕಕ್ಕೂ ಮುನ್ನ ಏನು ಮಾಡಬೇಕು?
ಅಕ್ಟೋಬರ್ 23ಲಾಂಜ್ ಆಕ್ಸೆಸ್ ಕಾರ್ಡ್ ಬಳಕೆಗೆ ಲಿಂಕ್; ಕ್ಯಾಶ್‌ಬ್ಯಾಕ್ ಮಿತಿ ಇಳಿಕೆ; ರಿವಾರ್ಡ್ ಇಲ್ಲದ ಕೆಟಗರಿಗಳ ಹೆಚ್ಚಳ.ನಿಗದಿತ ಖರ್ಚಿನ ಮಿತಿ ತಲುಪಿ; ಬಾಡಿಗೆ/ವ್ಯಾಲೆಟ್ ಲೋಡ್ ತಡೆಯಿರಿ; ಇಂದೇ ಆ್ಯಪ್‌ನ ಹೊಸ ನಿಯಮಗಳನ್ನು ಪರಿಶೀಲಿಸಿ.
ಅಕ್ಟೋಬರ್ 26ರಿವಾರ್ಡ್ ರಹಿತ ವಹಿವಾಟುಗಳ ಹೆಚ್ಚಳ; ನಿರ್ದಿಷ್ಟ ವಿಭಾಗಗಳಲ್ಲಿ ಹೆಚ್ಚಿನ ಶುಲ್ಕ ಮತ್ತು ಮಾರ್ಕಪ್ ಚಾರ್ಜ್.ಯುಟಿಲಿಟಿ ಬಿಲ್, ಇನ್ಶೂರೆನ್ಸ್ ಪಾವತಿಸಿ; ದೊಡ್ಡ ಮೊತ್ತದ ದೇಶೀಯ ವಹಿವಾಟು ಪೂರ್ಣಗೊಳಿಸಿ; ಕಾರ್ಡ್ ಯೂಸೇಜ್ ಅಲರ್ಟ್ ಸೆಟ್ ಮಾಡಿ.
ನವೆಂಬರ್ 15ನಿಯಮ ಬದಲಾವಣೆಯ ಕೊನೆಯ ಹಂತ; ಶುಲ್ಕ ಮತ್ತು ಮೈಲ್‌ಸ್ಟೋನ್ ಆಫರ್‌ಗಳ ಪರಿಷ್ಕರಣೆ.ವಿದೇಶಿ ಪ್ರಯಾಣದ ಬುಕಿಂಗ್ ಮುಗಿಸಿ; ಕಡಿಮೆ ಫೋರೆಕ್ಸ್ ಶುಲ್ಕದ ಕಾರ್ಡ್ ಬಳಸಿ; ಹಳೆಯ ಪಾಯಿಂಟ್ಸ್‌ಗಳನ್ನು ತಕ್ಷಣ ರಿಡೀಮ್ ಮಾಡಿಕೊಳ್ಳಿ.

ಲಾಂಜ್ ಆಕ್ಸೆಸ್, ಕ್ಯಾಶ್‌ಬ್ಯಾಕ್ ಮತ್ತು ಫೀಸ್ ಪರಿಷ್ಕರಣೆ: ನಿಮ್ಮ ಕಾರ್ಡ್ ಮೌಲ್ಯ ಕಾಪಾಡಿಕೊಳ್ಳಲು ಹೀಗೆ ಮಾಡಿ

ಮುಕ್ತಾಯದ ಹಂತದಲ್ಲಿರುವ (Expiry) ಅಥವಾ ಮೌಲ್ಯ ಕಳೆದುಕೊಳ್ಳುತ್ತಿರುವ ರಿವಾರ್ಡ್ ಪಾಯಿಂಟ್‌ಗಳನ್ನು ತಕ್ಷಣ ರಿಡೀಮ್ ಮಾಡಿಕೊಳ್ಳಿ. ಅವಕಾಶವಿದ್ದರೆ, ನಿಯಮ ಬದಲಾಗುವ ಮುನ್ನವೇ ಪಾಯಿಂಟ್‌ಗಳನ್ನು ಪಾರ್ಟ್ನರ್ ಬ್ರ್ಯಾಂಡ್‌ಗಳಿಗೆ ಟ್ರಾನ್ಸ್‌ಫರ್ ಮಾಡಿ. ಇನ್ಶೂರೆನ್ಸ್ ಅಥವಾ ಶಾಲಾ-ಕಾಲೇಜು ಫೀಸ್‌ನಂತಹ ದೊಡ್ಡ ಪಾವತಿಗಳನ್ನು ಈಗಲೇ ಮಾಡಿ ಪ್ರಸ್ತುತ ಇರುವ ಆಫರ್ ಅಥವಾ ಲಿಮಿಟ್ ತಲುಪಿ. ವಿದೇಶಿ ಪ್ರವಾಸಗಳಿಗೆ ಕಡಿಮೆ ಮಾರ್ಕಪ್ ಶುಲ್ಕವಿರುವ ಕಾರ್ಡ್‌ಗಳನ್ನು ಬಳಸಿ ಅಥವಾ ರೂಪಾಯಿ ಬಿಲ್ಲಿಂಗ್ ಆಯ್ಕೆ ಮಾಡಿ. ವಾರ್ಷಿಕ ಶುಲ್ಕ ಮನ್ನಾ ಮಾಡಲು ಬ್ಯಾಂಕ್‌ಗೆ ವಿನಂತಿಸಿ ಅಥವಾ ಬೇರೆ ಅನುಕೂಲಕರ ಕಾರ್ಡ್‌ಗೆ ಡೌನ್‌ಗ್ರೇಡ್ ಮಾಡಿಕೊಳ್ಳಿ.

ನಿಮಗರಿವಿಲ್ಲದೇ ಆಗುವ ನಷ್ಟದ ಬಗ್ಗೆ ಎಚ್ಚರವಿರಲಿ. ಕಾರ್ಡ್ ಕ್ಲೋಸ್ ಮಾಡುವುದು ಅಥವಾ ದೀರ್ಘಕಾಲ ಬಳಸದಿರುವುದು ರಿವಾರ್ಡ್ ಪಾಯಿಂಟ್ಸ್ ರದ್ದತಿಗೆ ಕಾರಣವಾಗಬಹುದು. ಲಾಂಜ್ ಆಕ್ಸೆಸ್ ಟ್ರ್ಯಾಕರ್ ಪ್ರತಿ ಮೂರು ತಿಂಗಳಿಗೊಮ್ಮೆ ರಿಸೆಟ್ ಆಗುವುದರಿಂದ ಬಳಸದ ಲಾಂಜ್ ಎಂಟ್ರಿಗಳು ವ್ಯರ್ಥವಾಗುತ್ತವೆ. ಎಟಿಎಂ ಕ್ಯಾಶ್ ವಿತ್‌ಡ್ರಾ ಮತ್ತು ವಿದೇಶಿ ವಹಿವಾಟಿನ ಮೇಲಿನ ಹೆಚ್ಚಿನ ಶುಲ್ಕಗಳು ನಿಮ್ಮ ಒಟ್ಟಾರೆ ರಿವಾರ್ಡ್ ಲಾಭವನ್ನು ಕಡಿಮೆ ಮಾಡುತ್ತವೆ. ಇಎಂಐ (EMI) ಪರಿವರ್ತನೆಗೆ ಕೆಲವು ಕಾರ್ಡ್‌ಗಳಲ್ಲಿ ಇನ್ಮುಂದೆ ಪಾಯಿಂಟ್ಸ್ ಸಿಗುವುದಿಲ್ಲ. ನಿಮ್ಮ ಯುಪಿಐ ಲಿಂಕ್ ಮತ್ತು ಇ-ಮ್ಯಾಂಡೇಟ್‌ಗಳನ್ನು ಮತ್ತೆ ಪರಿಶೀಲಿಸಿ. ಆಟೋ ಪೇಮೆಂಟ್ಸ್‌ ಬಿಲ್ಲಿಂಗ್ ದಿನಾಂಕಕ್ಕೂ ಮುನ್ನ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

ಮುಂಬರುವ 48ರಿಂದ 72 ಗಂಟೆಗಳಲ್ಲಿ ಬ್ಯಾಂಕ್ ನೀಡುವ ಆ್ಯಪ್ ನೋಟಿಫಿಕೇಶನ್, ಎಸ್‌ಎಂಎಸ್ (SMS) ಮತ್ತು ಹೊಸ ಷರತ್ತುಗಳನ್ನು ಸೂಕ್ಷ್ಮವಾಗಿ ಗಮನಿಸಿ. ಪ್ರಮುಖ ಜಾಹೀರಾತುಗಳಿಗಿಂತ ಸಣ್ಣ ಅಕ್ಷರಗಳಲ್ಲಿ ಬರೆದಿರುವ ನಿಯಮಗಳೇ ನಿಮ್ಮ ಕಾರ್ಡ್ ಲಾಭದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಅಕ್ಟೋಬರ್ 23, ಅಕ್ಟೋಬರ್ 26 ಮತ್ತು ನವೆಂಬರ್ 15 - ಈ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಡಿ. ಸರಿಯಾದ ಸಮಯಕ್ಕೆ ನಿಯಮಗಳನ್ನು ಪರಿಶೀಲಿಸಿ, ಯೋಜನೆ ರೂಪಿಸಿ ಖರ್ಚು ಮಾಡುವ ಮೂಲಕ ನಿಮ್ಮ ಲಾಂಜ್ ಆಕ್ಸೆಸ್, ರಿವಾರ್ಡ್ ಪಾಯಿಂಟ್ಸ್ ಮತ್ತು ಹೆಚ್ಚುವರಿ ಶುಲ್ಕಗಳಿಂದ ಬಚಾವ್ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+