ಬೆಂಗಳೂರು, ಜುಲೈ 19: ಹೋಂ ಲೋನ್ ಅಥವಾ ಗೃಹ ಸಾಲ ಎನ್ನುವುದು ನಮಗೆ ಎಲ್ಲರಿಗೂ ಗೊತ್ತು.ಸುಭದ್ರ ಮನೆ ನಿರ್ಮಾಣ ಇದರ ಆದ್ಯತೆ ಮತ್ತು ಉದ್ದೇಶ. ಆದರೆ ಜಾಗ ಖರೀದಿಗೂ ಸಾಲ ಸಿಗುತ್ತದೆ ಎನ್ನುವುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಹಾಗಿದ್ದರೆ ಈ ಸಾಲ ಪಡೆಯುವುದು ಹೇಗೆ ಮತ್ತು ಬಡ್ಡಿ ದರ ಎಷ್ಟಿರುತ್ತದೆ? ಹೋಮ್ ಲೋನ್‌ಗಿಂತ ಇದು ಹೇಗೆ ಭಿನ್ನ ಎನ್ನುವುದನ್ನು ತಿಳಿದುಕೊಳ್ಳೋಣ.
ಭೂಮಿಗಾಗಿ ಸಾಲವನ್ನು ತೆಗೆದುಕೊಳ್ಳುವುದಕ್ಕಿಂತ ಮನೆ ಅಥವಾ ಫ್ಲಾಟ್ ಖರೀದಿಗೆ ಗೃಹ ಸಾಲ ತೆಗೆದುಕೊಳ್ಳುವುದು ಸುಲಭವಾಗಿದೆ. ಯಾವ ರೀತಿಯ ಜಾಗ ಅನ್ನೋದು ತುಂಬಾ ಮುಖ್ಯ ಆಗುತ್ತದೆ. ಬಹುತೇಕ ಬ್ಯಾಂಕ್‌ಗಳು ಕೃಷಿ ಭೂಮಿ ಖರೀದಿ ಮಾಡುವುದಕ್ಕೆ ಸಾಲ ಕೊಡುವುದಿಲ್ಲ. ಕೆಲವು ಪಿಎಸ್‌ಯುಗಳು ಅಂದರೆ ಸರ್ಕಾರಿ ಬ್ಯಾಂಕ್‌ಗಳು ಸಾಲ ಕೊಡುತ್ತವೆ. ಇದನ್ನು ಎಲ್ಲ ಗ್ರಾಹಕರಿಗೂ ಅವು ಕೊಡುವುದಿಲ್ಲ ಸಣ್ಣ ರೈತರು ಅಥವಾ ಕೂಲಿ ಕಾರ್ಮಿಕರು ಕೃಷಿ ಭೂಮಿ ಖರೀದಿ ಮಾಡಲು ಸಾಲ ಪಡೆಯಬಹುದು. ಕೃಷಿಯೇತರ ಭೂಮಿ ಖರೀದಿ ಮಾಡುವುದಕ್ಕೆ ಸಾಲ ಪಡೆಯುವುದು ತುಂಬಾ ಸುಲಭ. ಆದರೆ ಈ ಪೈಕಿ ರೆಸಿಡೆನ್ಷಿಯಲ್ ಪ್ಲಾಟ್ ಖರೀದಿಗೆ ತುಂಬಾ ಸುಲಭದಲ್ಲಿ ಸಾಲ ಸಿಗುತ್ತದೆ. ಬಹುತೇಕ ಬ್ಯಾಂಕ್‌ಗಳಿಗೆ ಈ ರೆಸಿಡೆನ್ಷಿಯಲ್ ಫ್ಲಾಟ್ ಗಳು ಮುನ್ಸಿಪಲ್ ಕಾರ್ಪೊರೇಶನ್ ಅಥವಾ ನಗರ ಪ್ರದೇಶದ ಒಳಗೆ ಇರಬೇಕು ಎನ್ನುವ ನಿಯಮ ಇಟ್ಟುಕೊಂಡಿವೆ.

ನಗರದ ಹೊರಗೆ ಇರುವ ಫ್ಲಾಟ್ ಖರೀದಿಗೂ ಸಾಲ ಪಡೆಯಬಹುದು.. ಆದರೆ ಇದರಲ್ಲಿ ಒಂದು ಸಮಸ್ಯೆ ಇದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ರೆಸಿಡೆನ್ಷಿಯಲ್ ಫ್ಲ್ಯಾಟ್‌ಗಳಿಗೆ ಸಾಲ ನೀಡುತ್ತವೆ. ಈ ಫ್ಲ್ಯಾಟ್‌ಗಳನ್ನು ಅಭಿವೃದ್ಧಿ ಪ್ರಾಧಿಕಾರಗಳು ಮಾಡಿರಬೇಕು ಅಥವಾ ದೊಡ್ಡ ಡೆವಲಪರ್‌ಗಳು ಮಾಡಿರಬೇಕು. ಹೋಮ್ ಲೋನ್‌ಗಳು 30 ವರ್ಷಗಳವರೆಗೆ ಲಭ್ಯ ಇವೆ. ಆದರೆ, ಫ್ಲ್ಯಾಟ್ ಅಥವಾ ಭೂಮಿ ಸಾಲ ಅಷ್ಟು ದೀರ್ಘ ಅವಧಿಗೆ ಸಿಗೋದಿಲ್ಲ. ಬ್ಯಾಂಕ್‌ಗಳು ಸಾಮಾನ್ಯವಾಗಿ, 15 ವರ್ಷಗಳವರೆಗೆ ಜಾಗದ ಸಾಲ ಮರುಪಾವತಿಗೆ ಅವಕಾಶ ನೀಡುತ್ತವೆ, SBIನಲ್ಲಿ ಪ್ಲಾಟ್ ಲೋನ್ ಅವಧಿ 10 ವರ್ಷ.
ಪ್ಲಾಟ್ ಸಾಲದ LTV ಅಂದರೆ ಲೋನ್ ಟು ವ್ಯಾಲ್ಯೂ ರೇಶಿಯೋ ಸಾಮಾನ್ಯವಾಗಿ ಹೋಮ್ ಲೋನ್‌ಗಿಂತ ಕಡಿಮೆ ಇರುತ್ತದೆ. ಹೋಮ್ ಲೋನ್‌ನಲ್ಲಿ ಪ್ರಾಪರ್ಟಿ ವೆಚ್ಚದ ಶೇ. 90ರವರೆಗೆ ಇರುತ್ತದೆ. ಆದರೆ ಫ್ಲ್ಯಾಟ್ ಲೋನ್ ವಿಷಯದಲ್ಲಿ ಜಾಗದ 70 ರಿಂದ 75 ಪರ್ಸೆಂಟ್ ಮಾತ್ರ ಸಾಲ ಸಿಗುತ್ತದೆ. ಸುಮಾರು 25 ರಿಂದ 30 ಪರ್ಸೆಂಟ್ ಹಣವನ್ನು ಫ್ಲ್ಯಾಟ್ ಲೋನ್ ತೆಗೆದುಕೊಳ್ಳಲು ಮುಂದಾದವರೆ ಭರಿಸಬೇಕಾಗುತ್ತೆ.. ಹೋಮ್ ಲೋನ್‌ಗೆ ಹೋಲಿಸಿದರೆ ಫ್ಲ್ಯಾಟ್ ಲೋನ್ ಸ್ವಲ್ಪ ಅಪಾಯಕಾರಿ. ಏಕೆಂದರೆ ಪ್ಲಾಟ್ ಲೋನ್‌ನ ಬಡ್ಡಿ ದರವು ಹೋಮ್ ಲೋನ್‌ಗೆ ಹೋಲಿಸಿದರೆ 1.5 ಪಟ್ಟು ಹೆಚ್ಚಿರಬಹುದು. ಕಮರ್ಷಿಯಲ್ ಪ್ಲಾಟ್ ಅಥವಾ ಇಂಡಸ್ಟ್ರಿಯಲ್ ಫ್ಲ್ಯಾಟ್ ವಿಷಯದಲ್ಲಿ ಬಡ್ಡಿ ದರ ಇನ್ನೂ ಹೆಚ್ಚಾಗಬಹುದು.
80 ಸಿ ಅಡಿಯಲ್ಲಿ ಮನೆ ಸಾಲದ ಅಸಲಿನ ಮರುಪಾವತಿಯ ಮೇಲೆ 1.5 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದೆ. ಇನ್ನು ಬಡ್ಡಿ ಪಾವತಿ ಮಾಡಿದಾಗ 24ಬಿ ಅಡಿಯಲ್ಲಿ 2 ಲಕ್ಷದವರೆಗೆ ವಿನಾಯಿತಿ ಸಿಗುತ್ತದೆ. ಆದರೆ ಫ್ಲ್ಯಾಟ್ ಅಥವಾ ಜಾಗದ ಸಾಲಕ್ಕೆ ತೆರಿಗೆ ರಿಯಾಯಿತಿ ಇರುವುದಿಲ್ಲ. ಆದರೆ ಫ್ಲ್ಯಾಟ್ ಖರೀದಿ ಮತ್ತು ಮನೆ ನಿರ್ಮಾಣ ಸಾಲವನ್ನು ತಗೊಂಡರೆ, ನಿಮಗೆ ತೆರಿಗೆ ರಿಯಾಯಿತಿ ಸಿಗುತ್ತದೆ. ಏನೇ ಇದ್ದರೂ ಸಾಲ ನೀಡುವ ಸಂಸ್ಥೆ ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಸಾಲ ಮರುಪಾವತಿ ಶಕ್ತಿ ಪರಿಶೀಲಿಸಿಯೇ ಸಾಲ ನೀಡುತ್ತದೆ.


Click it and Unblock the Notifications