ಯುವಕರಿಗೆ ಬೈಕ್ ಕ್ರೇಜ್ (Bike Craze) ಹೆಚ್ಚು. ಹೊಸ ಬೈಕ್ ಲಾಂಚ್ ಆದ್ರೆ ಸಾಕು, ಒಮ್ಮೆ ನೋಡೋದು ಪಕ್ಕಾ. ಇನ್ನೂ ಕೆಲವರಿದ್ದಾರೆ, ಮಾರುಕಟ್ಟೆಗೆ ಹೊಸ ಬೈಕ್ ಬಂದರೆ, ತಮ್ಮಲ್ಲಿದ್ದ ಹಳೆ ಬೈಕನ್ನು ಮಾರಿಯಾದ್ರೂ ಆ ಬೈಕನ್ನು ಖರೀದಿಸುತ್ತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳು ದಿನಕ್ಕೊಂದಾದರೂ ಬೈಕ್‌ಗಳು ಲಗ್ಗೆಯಿಡುತ್ತಿರುತ್ತದೆ. ಅನೇಕ ಜನರು ತಮ್ಮ ಹಳೆಯ ವಾಹನಗಳನ್ನು (Old Vehicles Sale) ಮಾರಿ ಹೊಸ ವಾಹನಗಳನ್ನು ಖರೀದಿಸಲು ಆತುರಪಡುತ್ತಾರೆ. ಆದರೆ ಈ ಸಂದರ್ಭದಲ್ಲಿ ಕೆಲವು ಪ್ರಮುಖ ಕಾನೂನು ಕ್ರಮಗಳನ್ನು ಫಾಲೋ ಮಾಡಲೇಬೇಕು. ಒಂದು ವೇಳೆ ಫಾಲೋ ಮಾಡದಿದ್ರೆ, ಇದು ಭವಿಷ್ಯದಲ್ಲಿ ದೊಡ್ಡ ಕಾನೂನು ಸಮಸ್ಯೆಗೆ ಎದುರಿಸಬೇಕಾಗಬಹುದು.

ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡುವ ಮುನ್ನ ಕೆಲವು ಕ್ರಮಗಳನ್ನು ಫಾಲೋ ಮಾಡಬೇಕು. ಈ ಕ್ರಮಗಳನ್ನು ಅನುಸರಿಸುವುದರಿಂದ ಭವಿಷ್ಯದಲ್ಲಾಗುವ ತೊಂದರೆಗಳನ್ನು ತಪ್ಪಿಸಬಹುದು. ಮುಖ್ಯವಾಗಿ, ಮಾರಾಟದ ನಂತರ ಎದುರಾಗಬಹುದಾದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್.
ವಾಹನ ಮಾರಾಟ ಮಾಡಿದ 14 ದಿನಗಳ ಒಳಗಾಗಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (RC) ಮಾಲೀಕತ್ವವನ್ನು ವರ್ಗಾಯಿಸುವುದು ಕಡ್ಡಾಯ. ಹೊಸ ಮಾಲೀಕರು ಮಾಲೀಕತ್ವ ವರ್ಗಾಯಿಸಲು ವಿಫಲವಾದರೆ, ವಾಹನದಿಂದ ಯಾವುದೇ ಅಪರಾಧ ಅಥವಾ ಅಪಘಾತ ಸಂಭವಿಸಿದರೆ, ಪೊಲೀಸರು ಮೊದಲು ಹಳೆಯ ಮಾಲೀಕರನ್ನು ಸಂಪರ್ಕಿಸುತ್ತಾರೆ. ಆದ್ದರಿಂದ, ವಾಹನ ಮಾರಾಟ ಮಾಡಿದ ನಂತರ ಈ ಕಾರ್ಯವನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ವಾಹನ ಮಾರಾಟ ಮಾಡುವಾಗ, ಮಾರಾಟಗಾರರು ಫಾರ್ಮ್ 29 (ವರ್ಗಾವಣೆ ಸೂಚನೆ) ಮತ್ತು ಫಾರ್ಮ್ 30 (ಮಾಲೀಕತ್ವದ ಮಾಹಿತಿ ಮತ್ತು ವರ್ಗಾವಣೆಗೆ ಅರ್ಜಿ) ಎಂಬ ಎರಡು ಫಾರ್ಮ್‌ಗಳನ್ನು ಭರ್ತಿ ಮಾಡಿ ಹೊಸ ಖರೀದಿದಾರರಿಗೆ ನೀಡಬೇಕು. ಈ ಫಾರ್ಮ್‌ಗಳನ್ನು ಖರೀದಿದಾರರು ಆರ್‌ಟಿಒ ಕಚೇರಿಯಲ್ಲಿ ಸಲ್ಲಿಸಬೇಕು. ನಿಮ್ಮ ಬಳಿಯೂ ಸಹಿ ಮಾಡಿದ ಪ್ರತಿಗಳನ್ನು ಇಟ್ಟುಕೊಂಡರೆ ಉತ್ತಮ.
ವಾಹನವನ್ನು ಹಸ್ತಾಂತರಿಸುವಾಗ, ಸ್ಟ್ಯಾಂಪ್ ಪೇಪರ್ ಮೇಲೆ ನೋಟರಿ ಮಾಡಿಸಿದ ಒಪ್ಪಂದ ಮಾಡಿಕೊಳ್ಳಬೇಕು. ಅಂದರೆ "ಈ ದಿನಾಂಕದಿಂದ, ನಾನು ನನ್ನ ವಾಹನವನ್ನು ಸಂಪೂರ್ಣವಾಗಿ ಈ ವ್ಯಕ್ತಿಗೆ ಹಸ್ತಾಂತರಿಸುತ್ತೇನೆ ಮತ್ತು ಇನ್ನು ಮುಂದೆ ಈ ವಾಹನದ ಎಲ್ಲಾ ಜವಾಬ್ದಾರಿಗಳು ಈ ವ್ಯಕ್ತಿಗೆ ಸೇರಿವೆ" ಎಂಬ ಅಂಶವನ್ನು ಒಪ್ಪಂದದಲ್ಲಿ ನಮೂದಿಸಲೇಬೇಕು. ಇಬ್ಬರೂ ವ್ಯಕ್ತಿಗಳು ಸಹಿ ಮಾಡಿ, ತಲಾ ಒಂದು ಪ್ರತಿಯನ್ನು ಇಟ್ಟುಕೊಂಡಿರಬೇಕು.
ನಿಮ್ಮ ವಾಹನವು ಬೇರೆ ರಾಜ್ಯದಲ್ಲಿ ನೋಂದಣಿಯಾಗಿ, ಗುಜರಾತ್‌ನಲ್ಲಿ ಮಾರಾಟವಾಗಿದ್ದರೆ, ನೀವು ಆ ರಾಜ್ಯದ ಆರ್‌ಟಿಒ ಕಚೇರಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯಬೇಕು. ಇಲ್ಲವಾದರೆ, ಹೊಸ ಮಾಲೀಕರು ಮರು-ನೋಂದಣಿ ಮಾಡಿಸಲು ಸಾಧ್ಯವಾಗುವುದಿಲ್ಲ. ಇದು ವಾಹನ ವರ್ಗಾವಣೆಯಲ್ಲಿ ಸಮಸ್ಯೆಯಾಗಬಹುದು.
ವಾಹನದ ಮೇಲೆ ಬ್ಯಾಂಕ್ ಅಥವಾ ಯಾವುದಾದರೂ ಹಣಕಾಸು ಸಂಸ್ಥೆಯೊಂದಿಗೆ ಸಾಲ ಬಾಕಿ ಇದ್ದರೆ, ಅದನ್ನು ಮೊದಲು ಪಾವತಿಸಿ, ಫಾರ್ಮ್ 35 ಮತ್ತು ಎನ್‌ಒಸಿ ಪಡೆಯಬೇಕು. ಇಲ್ಲವಾದರೆ, ಬ್ಯಾಂಕ್ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಮತ್ತು ಹೊಸ ಮಾಲೀಕರಿಗೆ ತೊಂದರೆಗಳಾಗಬಹುದು.
ವಾಹನವನ್ನು ಮಾರಾಟ ಮಾಡುವಾಗ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC) ಮಾನ್ಯವಾಗಿರುವುದು ಅಗತ್ಯ. ಅದು ಅವಧಿ ಮೀರಿದ್ದರೆ, ಹೊಸ ಖರೀದಿದಾರರು ವಾಹನ ವರ್ಗಾವಣೆ ಮಾಡುವಾಗ ಸಮಸ್ಯೆ ಎದುರಿಸಬೇಕಾಗಬಹುದು. ಆದ್ದರಿಂದ, ಪಿ.ಯು.ಸಿ. ಅಪ್ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ವಾಹನ ಮಾರಾಟ ಮಾಡುವ ಮೊದಲು, ವಿಮಾ ಕಂಪನಿಗೆ ತಿಳಿಸಿ ಪಾಲಿಸಿಯನ್ನು ಹೊಸ ಮಾಲೀಕರ ಹೆಸರಿಗೆ ವರ್ಗಾಯಿಸಿ ಅಥವಾ ರದ್ದುಪಡಿಸಿದರೆ ಉತ್ತಮ. ಇಲ್ಲವಾದರೆ, ಅಪಘಾತ ಸಂಭವಿಸಿದರೆ ವಿಮಾ ಕ್ಲೇಮ್ ನಿಮ್ಮ ಹೆಸರಿನಲ್ಲಿಯೇ ಬರುತ್ತದೆ, ಇದು ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.


Click it and Unblock the Notifications