ರೈತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದೇ ಕೇಂದ್ರ ಸರ್ಕಾರದ ಗುರಿ. ಅದಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದಲ್ಲೊಂದು ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತದೆ. ಅದರಲ್ಲೊಂದು ಪಿಎಂ ಕಿಸಾನ್ ಸಮ್ಮಾನ್ ಯೋಜನೆ (PM Kisan Samman Scheme). ಈ ಯೋಜನೆ ಮೂಲಕ ದೇಶದ ಕೋಟಿಗಟ್ಟಲೆ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಈಗಾಗಲೇ 20 ಕಂತುಗಳ ಹಣವನ್ನು ಪೂರೈಸಿರುವ ಕೇಂದ್ರ ಇದೀಗ 21ನೇ ಕಂತಿನ ಹಣವನ್ನು ನೀಡಲು ಮುಂದಾಗಿದೆ. ಈಗಾಗಲೇ ಹಲವು ರಾಜ್ಯಗಳ ರೈತರಿಗೆ 2000 ಹಣ ಖಾತೆಗೆ ಜಮಾ ಆಗಿದ್ದು, ಇನ್ನೇನು ಕೆಲವೇ ತಿಂಗಳಲ್ಲಿ ಎಲ್ಲಾ ರೈತರ ಖಾತೆಗೆ ಹಣ ಜಮಾ ಆಗಲಿದೆ. ಆದರೆ ಇನ್ನೂ ಈ ಬಗ್ಗೆ ಅಧಿಕೃತ ದಿನಾಂಕ ಘೋಷಣೆಯಾಗಿಲ್ಲ.

ಕೇಂದ್ರದಿಂದ ಹೊಸ ನಿರ್ಧಾರ!
ಇದುವರೆಗೆ ಪ್ರತಿಬಾರಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಹಣವನ್ನು ಒಂದೇ ಬಾರಿಗೆ ಜಮಾ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೇಂದ್ರ ಈ ನಿರ್ಧಾರದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಅಂದರೆ ಈ ವರ್ಷ ದೇಶದ ಹಲವು ಪ್ರದೇಶಗಳಲ್ಲಿ ಪ್ರಕೃತಿಯ ರೌದ್ರ ನರ್ತನದಿಂದ ಲಕ್ಷಗಟ್ಟಲೆ ರೈತರು ಲಕ್ಷಗಟ್ಟಲೆ ನಷ್ಟ ಅನುಭವಿಸಿದ್ದರು. ಇದೇ ಕಾರಣದಿಂದ ಈ ಬಾರಿ ಕೇಂದ್ರ ಸರ್ಕಾರ ನಷ್ಟ ಅನುಭವಿಸಿದ ರೈತರ ಖಾತೆಗೆ ಹಣ ಜಮಾ ಮಾಡಲು ಮುಂದಾಗಿದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಕ್ಟೋಬರ್ 7, 2025 ರಂದು ನವದೆಹಲಿಯ ಕೃಷಿ ಭವನದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭದಲ್ಲಿ ರೈತರ ಖಾತೆಗೆ 21ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ 85,000 ಕ್ಕೂ ಹೆಚ್ಚು ಮಹಿಳಾ ರೈತರು ಸೇರಿದಂತೆ ಒಟ್ಟು 8.55 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 171 ಕೋಟಿ ರೂ.ಗಳನ್ನು ಹಣ ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಿಎಂ ಕಿಸಾನ್ ಹಣ ಪಡೆಯಲು ಏನು ಮಾಡಬೇಕು?
1) ಮೊದಲು https://pmkisan.gov.in ಎಂಬ ಲಿಂಕ್ ಕ್ಲಿಕ್ ಮಾಡಿ
2) 'New Farmer Registration' ಮೇಲೆ ಕ್ಲಿಕ್ ಮಾಡಿ
3) ಅಲ್ಲಿ ನಿಮ್ಮ ಆಧಾರ್ ನಂಬರ್, ಬ್ಯಾಂಕ್ ವಿವರ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ.
4) ಡಾಕ್ಯುಮೆಂಟ್‌ಗಳನ್ನು ಭರ್ತಿ ಮಾಡಿದ ನಂತರ, 'Yes' ಕ್ಲಿಕ್ ಮಾಡಿ.
5) ಫಾರ್ಮ್ ಅನ್ನು ಭರ್ತಿ ಮಾಡಿ, Submit and Print ಮೇಲೆ ಕ್ಲಿಕ್ ಮಾಡಿ. ಆನಂತರ ನೀವು ಪಿಎಂ ಕಿಸಾನ್ ಹಣ ಪಡೆಯಲು ಅರ್ಹರಾಗುತ್ತೀರಿ.
ಪಿಎಂ ಕಿಸಾನ್‌ಗೆ ಯಾರು ಅರ್ಹರು?
ಪಿಎಂ ಕಿಸಾನ್ ಸಮ್ಮಾನ್ ಸಮ್ಮಾನ್ ಯೋಜನೆಯ 21ನೇ ಕಂತಿನ ಹಣ ಪಡೆಯಲು ಕೆಲವರು ಮಾತ್ರ ಅರ್ಹರಾಗಿರುತ್ತಾರೆ. ಹಾಗಿದ್ರೆ ಯಾರು?
1) ಭಾರತದ ಪ್ರಜೆಯಾಗಿರಬೇಕು.
2) ಸ್ವಂತ ಕೃಷಿಯೋಗ್ಯ ಭೂಮಿ ಹೊಂದಿರಬೇಕು.
3) ತಿಂಗಳಿಗೆ 10,000 ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುತ್ತಿರುವ
4) ಪಿಂಚಣಿದಾರರಾಗಿರಬಾರದು.
5) ಆದಾಯ ತೆರಿಗೆ ಸಲ್ಲಿಸಿರಬಾರದು.
6) ಸಾಂಸ್ಥಿಕ ಭೂಮಾಲೀಕರಾಗಿರಬಾರದು.
ಏನಿದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ?
2019 ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಅಂದಿನ ಹಣಕಾಸು ಸಚಿವರಾಗಿದ್ದ ಪಿಯೂಷ್ ಗೋಯಲ್ ಅವರು ತಮ್ಮ ಮಧ್ಯಂತರ ಬಜೆಟ್‌ನಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಘೋಷಣೆ ಮಾಡಿದರು. ಇನ್ನು ಈ ಯೋಜನೆಯಡಿಯಲ್ಲಿ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವಾರ್ಷಿಕವಾಗಿ 6 ಸಾವಿರ ಹಣಗಳನ್ನು ಪಡೆಯುತ್ತಾರೆ.
ನಿಮಗೆ ಪಿಎಂ ಕಿಸಾನ್ ಹಣ ಬರುತ್ತಾ ಎಂದು ನೋಡುವುದು ಹೇಗೆ?
1) ಮೊದಲಿಗೆ https://pmkisan.gov.in ವೆಬ್‌ಸೈಟ್ ಲಿಂಕ್ ಕ್ಲಿಕ್ ಮಾಡಿ.
2) ಅಲ್ಲಿ ನೀವು 'Know Your Status' ಮೇಲೆ ಕ್ಲಿಕ್ ಮಾಡಿ.
3) ಆ ನಂತರ ನೀವು ಅಲ್ಲಿ ನೋಂದಣಿ ಸಂಖ್ಯೆ ಅಥವಾ ಆಧಾರ್ ನಂಬರ್ ಅನ್ನು ಆಡ್ ಮಾಡಬೇಕು.
4) ಅದರ ಬಳಿಕ ನೀವು ಫಲಾನುಭವಿಗಳ ಪಟ್ಟಿಯಲ್ಲಿದ್ದೀರ ಎಂದು ಚೆಕ್ ಮಾಡಬೇಕು.
5) ಇನ್ನು ಪಿಎಂ ಕಿಸಾನ್ ಕಂತಿನ ಹಣ ಪಡೆಯಬೇಕೆಂದರೆ eKYC ಕಡ್ಡಾಯ. ಆದ್ದರಿಂದ eKYC ಲಿಂಕ್ ಮಾಡಿದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.
PM Kisan Samman Scheme ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ, ನೀವು PM-KISAN ಸಹಾಯವಾಣಿ ನಂಬರ್‌ಗಳಿಗೆ ಕರೆ ಮಾಡಿ, ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು- 155261 ಮತ್ತು 011-24300606.


Click it and Unblock the Notifications