ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ 2020 ರಿಂದ, ಐವರು ಶ್ರೀಮಂತರ ಸಂಪತ್ತು ದ್ವಿಗುಣಗೊಂಡಿದೆ. ಹಣದುಬ್ಬರವಿದ್ದರೂ ಕೂಡಾ ಒಂದು ದಶಕದೊಳಗೆ ಜಗತ್ತು ತನ್ನ ವಿಶ್ವದ ಮೊದಲ ಟ್ರಿಲಿಯನೇರ್ ಅನ್ನು ಶೀಘ್ರದಲ್ಲೇ ಪಡೆಯಲಿದೆ. ಐದು ಬಿಲಿಯನೇರ್‌ಗಳ ನಿವ್ವಳ ಮೌಲ್ಯವು 2020 ರಿಂದ ಶೇಕಡ 114 ರಷ್ಟು ಏರಿಕೆಯಾಗಿದ್ದು, 869 ಬಿಲಿಯನ್ ಡಾಲರ್ ಗಳಿಸಿದ್ದಾರೆ.
ಆಕ್ಸ್‌ಫ್ಯಾಮ್‌ನ ವಾರ್ಷಿಕ ಅಸಮಾನತೆಯ ವರದಿಯು ಭಾನುವಾರ ಈ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಎಲಾನ್ ಮಸ್ಕ್ ಈ ಐದು ಬಿಲಿಯನೇರ್‌ಗಳಲ್ಲಿ ಒಬ್ಬರು, ಎಲಾನ್ ಮಸ್ಕ್ ನಿವ್ವಳ ಆದಾಯವು 2020ರಿಂದ ಶೇಕಡ 737ರಷ್ಟು ಏರಿಕೆಯಾಗಿದೆ.

ಎಲಾನ್ ಮಸ್ಕ್ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸೇರಿದಂತೆ ಹಲವಾರು ಕಂಪನಿಗಳನ್ನು ನಡೆಸುತ್ತಿದ್ದಾರೆ. 2024 ರ ಫೋರ್ಬ್ಸ್‌ನ ಟಾಪ್ 10 ಶ್ರೀಮಂತ ಪಟ್ಟಿಯ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2023 ರ ನವೆಂಬರ್ ಅಂತ್ಯದ ವೇಳೆಗೆ, ವ್ಯಾಪಾರ ಉದ್ಯಮಿ ಅವರ ಸಂಪತ್ತಿನಲ್ಲಿ 245.5 ಶತಕೋಟಿ ಡಾಲರ್ ಅಥವಾ 20.34 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ. ಇದು ಮಾರ್ಚ್ 2020 ರಿಂದ ಶೇಕಡ 737 ರಷ್ಟು ಹೆಚ್ಚಾಗಿದೆ.
ಎಲಾನ್ ಮಸ್ಕ್ ಜೊತೆಗೆ, ಬರ್ನಾರ್ಡ್ ಅರ್ನಾಲ್ಟ್ ಅವರ ನಿವ್ವಳ ಮೌಲ್ಯವು ಶೇಕಡ 111 ರಷ್ಟು ಏರಿಕೆಯಾಗಿದ್ದು, 191.3 ಶತಕೋಟಿ ಡಾಲರ್‌ಗಳಿಗೆ ಅಥವಾ 15.84 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಬರ್ನಾರ್ಡ್ ಅವರು ಫ್ರೆಂಚ್ ಐಷಾರಾಮಿ ಸರಕುಗಳ ಒಕ್ಕೂಟದ ಎಲ್‌ವಿಎಂಎಚ್‌ನ ಅಧ್ಯಕ್ಷರಾಗಿದ್ದಾರೆ.
ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಂಪತ್ತು ಶೇಕಡ 24 ರಷ್ಟು ಏರಿಕೆಯಾಗಿ 167.4 ಶತಕೋಟಿ ರೂಪಾಯಿ ಅಥವಾ 13.87 ಕೋಟಿ ರೂಪಾಯಿಗೆ ತಲುಪಿದೆ. ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ನಿವ್ವಳ ಮೌಲ್ಯದಲ್ಲಿ ಶೇಕಡಾ 107 ರಷ್ಟು ಹೆಚ್ಚಳವಾಗಿದೆ.
ಬರ್ಕ್‌ಷೈರ್ ಹಾಥ್‌ವೇ ಸಿಇಒ ವಾರೆನ್ ಬಫೆಟ್ ಅವರು ಅಗ್ರ ಐದು ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ. ಅವರ ನಿವ್ವಳ ಮೌಲ್ಯವು ಶೇಕಡಾ 48 ರಷ್ಟು ಏರಿಕೆಯಾಗಿ $119.2 ಶತಕೋಟಿ (ರೂ. 98,76,79 ಕೋಟಿ) ತಲುಪಿದೆ. ಕಂಪನಿಗಳಲ್ಲಿನ ಷೇರುಗಳ ಮೂಲಕ ಲಾಭ ಗಳಿಸುವ ಯುಎಸ್ ಬಿಲಿಯನೇರ್‌ಗಳ ಸಂಪತ್ತು $1.6 ಟ್ರಿಲಿಯನ್ ಹೆಚ್ಚಾಗಿದೆ.


Click it and Unblock the Notifications