ಕಡಿಮೆ ಸಂಬಳ ಆದರೂ, ಹೆಚ್ಚು ಸಂಬಳವಾದ್ರೂ (Salary) ಹೆಚ್ಚಿನವರು ನೋಡೋದೆ ಎಲ್ಲಿ ಹೂಡಿಕೆ ಮಾಡಿದ್ರೆ ಬೆಸ್ಟ್ ಅನ್ನೋದು. ಆದ್ರೆ ಕೆಲವರಿಗೆ ಹೂಡಿಕೆ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಎಲ್ಲೂ ಇನ್ವೆಸ್ಟ್ ಮಾಡದೆಯೇ ಸುಮ್ಮನಿದ್ದು ಬಿಡುತ್ತಾರೆ. ಆದರೆ ಸರ್ಕಾರದ ಕೆಲವು ಯೋಜನೆಗಳಿವೆ. ಈ ಯೋಜನೆಗಳ ಮೂಲಕ ಹೂಡಿಕೆ ಮಾಡುವುದರಿಂದ ಹಲವು ಉತ್ತಮ ಬಡ್ಡಿಯ ಜೊತೆಗೆ ಹಲವು ಪ್ರಯೋಜನಗಳನ್ನು ಸಹ ಪಡೆಯಬಹುದು. ಬಹುತೇಕರಿಗೆ ಉಳಿತಾಯ ಮತ್ತು ನಿವೃತ್ತಿ ಯೋಜನೆ (Savings-Retirement Plan) ಬಹಳ ಮುಖ್ಯವಾಗಿರುತ್ತೆ. ಭವಿಷ್ಯದ ದೃಷ್ಟಿಯಿಂದ ಬಹುತೇಕರು ಈ ರೀತಿ ಹೂಡಿಕೆ ಮಾಡುತ್ತಾರೆ. ಆದ್ದರಿಂದ ನೀವು ಕಷ್ಟ ಪಟ್ಟು ದುಡಿದ ಹಣದಿಂದ ಮತ್ತಷ್ಟು ಲಾಭ ಪಡೆಯಬೇಕೆಂದರೆ ಇಲ್ಲೆರಡು ಯೋಜನೆಗಳಿದೆ. ಅವುಗಳೆಂದರೆ ಇಪಿಎಫ್ ಮತ್ತು ಪಿಪಿಎಫ್ (EPF-PPF). ಇವರೆಡರಲ್ಲಿ ಯಾವುದು ಬೆಸ್ಟ್ ಎಂಬುದರ ಮಾಹಿತಿ ಇಲ್ಲಿದೆ ಓದಿ.

EPF ಎಂದರೇನು?
ಇಪಿಎಫ್ (EPF) ಎಂದರೆ ನೌಕರರ ಭವಿಷ್ಯ ನಿಧಿ (Employee Provident Fund). ಹಲವಾರು ಉದ್ಯೋಗಿಗಳು ಈಗಾಗಲೇ ಇಪಿಎಫ್ ಖಾತೆಯನ್ನು ಹೊಂದಿದ್ದಾರೆ. ಈ ಯೋಜನೆ ಮೂಲಕ 8.25% ದಷ್ಟು ಬಡ್ಡಿದರವನ್ನು ನೀವು ಪಡೆಯಬಹುದು. ಇನ್ನು ಈ ಯೋಜನೆಯನ್ನು ಯಾವುದೇ ಸಂಸ್ಥೆಯಲ್ಲಿ 20ಕ್ಕಿಂದ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಆರಂಭಿಸಬಹುದು. ಅಂತಹ ಸಂಸ್ಥೆಗಳಲ್ಲಿ ಉದ್ಯೋಗಿಗಳು ಕಡ್ಡಾಯವಾಗಿ ಇಪಿಎಫ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಪ್ರತಿ ತಿಂಗಳು, ಉದ್ಯೋಗಿ ಮತ್ತು ಉದ್ಯೋಗದಾತ (Employee-Employer) ಇಬ್ಬರೂ ತಮ್ಮ ಸಂಬಳದ 12% ಅನ್ನು ಇಪಿಎಫ್ ಖಾತೆಗೆ ತಮ್ಮ ಹಣವನ್ನು ಹೂಡಿಕೆ ಮಾಡುತ್ತಾರೆ. ವರ್ಷ ಹೋದಂತೆ ಈ ಖಾತೆಗೆ ಬಡ್ಡಿ ಹಣ ಕೂಡಾ ಸೇರುತ್ತಾ ಹೋಗುತ್ತದೆ. ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ನೀವು ಇದರಿಂದ ದೊಡ್ಡ ಮೊತ್ತವನ್ನು ಪಡೆಯಬಹುದು. ಅಲ್ಲದೇ ನಿಮ್ಮ ಅಗತ್ಯಕ್ಕೆ ತಕ್ಕಂತೆ ವಿಥ್‌ಡ್ರಾ ಕೂಡಾ ಮಾಡಬಹುದು.
PPF ಎಂದರೇನು?
ಪಿಪಿಎಫ್ ಎಂದರೆ ಸಾರ್ವಜನಿಕ ಭವಿಷ್ಯ ನಿಧಿ(Public Provident Fund). ಸರ್ಕಾರದ ಅಧೀನದಲ್ಲೇ ಇರುವ ಈ ಪಿಪಿಎಫ್ ಯೋಜನೆ ತುಂಬಾನೇ ಸುರಕ್ಷಿತ ಯೋಜನೆ ಎಂದರೆ ತಪ್ಪಾಗದು. ಇನ್ನು ಈ ಯೋಜನೆ ಮೂಲಕ 500 ರೂಪಾಯಿಯಿಂದ 1.5 ಲಕ್ಷದವರೆಗೆ ಮಾಸಿಕವಾಗಿ, ವಾರ್ಷಿಕವಾಗಿ ಹಣ ಡೆಪಾಸಿಟ್ ಇಡಬಹುದು. ನಿಮ್ಮ ಹೂಡಿಕೆಗೆ ತಕ್ಕಂತೆ ವಾರ್ಷಿಕವಾಗಿ 7.1% ಶೇ.ದಷ್ಟು ಬಡ್ಡಿದರವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ತೆರಿಗೆ ಉಳಿತಾಯ ಮತ್ತು ನಿವೃತ್ತಿ ಯೋಜನೆಗಾಗಿ ಬಳಸಲಾಗುತ್ತದೆ. ಪಿಪಿಎಫ್ ಯೋಜನೆಯ ಅವಧಿ ಒಟ್ಟು 15 ವರ್ಷಗಳು. 15 ವರ್ಷಗಳ ಅವಧಿ ಮುಗಿದ ನಂತರ ನಿಮ್ಮ ಹೂಡಿಕೆಯ ಹಣ ಮತ್ತು ಬಡ್ಡಿಯಲ್ಲಿ ಬಂದ ಹಣ ಎರಡನ್ನೂ ನೀವು ಹಿಂಪಡೆಯಬಹುದು.
ಈ ಯೋಜನೆಯ ಮತ್ತೊಂದು ವಿಶೇಷತೆಯೆಂದರೆ, ಪಿಪಿಎಫ್ ಯೋಜನೆಯಿಂದ ತೆರಿಗೆ ವಿನಾಯಿತಿಯನ್ನೂ ಸಹ ಪಡೆಯಬಹುದು (ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ).
EPF ಮತ್ತು PPF; ಯಾವುದು ಬೆಸ್ಟ್?
ಯಾವುದೇ ಉದ್ಯೋಗಕ್ಕೆ ಸೇರಿದಾಗ ಅಲ್ಲಿ ಇಪಿಎಫ್ ಆಯ್ಕೆ ಇದ್ದರೆ, ಆ ಯೋಜನೆಗೆ ಸೇರುವುದು ಕಡ್ಡಾಯವಾಗಿರುತ್ತೆ. ಇನ್ನು ಇಪಿಎಫ್ ಯೋಜನೆಗೆ ನಿಮ್ಮ ಹೂಡಿಕೆ ಹಣವನ್ನು ಕಂಪನಿ ನಿಮ್ಮ ಸಂಬಳದ ಆಧಾರದಲ್ಲಿ ನಿರ್ಧರಿಸುತ್ತೆ. ಅಲ್ಲದೇ ನಿಮ್ಮ ನಿವೃತ್ತಿಯ ಸಮಯದಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತದೆ. ಜೊತೆಗೆ ಹಣಕಾಸಿನ ಸಮಸ್ಯೆಗೆ ಒಂದು ರೀತಿಯಲ್ಲಿ ಪರಿಹಾರವಿದ್ದಂತೆ.
ಇನ್ನು ಪಿಪಿಎಫ್ ಖಾತೆ ಬಗ್ಗೆ ಹೇಳುವುದಾದರೆ, ಪಿಪಿಎಫ್ ಖಾತೆಗೆ ಸೇರುವುದು ಇಪಿಎಫ್‌ನಂತೆ ಕಡ್ಡಾಯವಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನೀವು ಈ ಯೋಜನೆ ಮೂಲಕ ಹೂಡಿಕೆ ಪ್ಲಾನ್ ಮಾಡಿಕೊಳ್ಳಬಹುದು. ಅಲ್ಲದೇ ತೆರಿಗೆ ಪ್ರಯೋಜನಗಳನ್ನು ಸಹ ಪಡೆಯಬಹುದು. ಇನ್ನು ನಿಮ್ಮ ಸಂಬಳದಲ್ಲಿ ಒಂದಿಷ್ಟು ಉಳಿತಾಯ ಮಾಡಬೇಕು, ನಿವೃತ್ತಿಯ ನಂತರ ನೀವು ತೆರಿಗೆ ಹೊರೆಯನ್ನು ಕಡಿಮೆ ಮಾಡಬೇಕೆಂದುಕೊಂಡಿದ್ದರೆ, ಪಿಪಿಎಫ್ ಮೂಲಕ ಹೂಡಿಕೆ ಮಾಡುವುದು ಉತ್ತಮ.
Disclaimer: The views and recommendations expressed are solely those of the individual analysts or entities and do not reflect the views of Goodreturns.in or Greynium Information Technologies Private Limited (together referred as "we"). We do not guarantee, endorse or take responsibility for the accuracy, completeness or reliability of any content, nor do we provide any investment advice or solicit the purchase or sale of securities. All information is provided for informational and educational purposes only and should be independently verified from licensed financial advisors before making any investment decisions.)
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications