ಉದ್ಯೋಗಿಗಳ ಭದ್ರತೆಗಾಗಿ ಪ್ರತೀ ಕಂಪನಿಗಳಲ್ಲಿ ಇರುವ ಒಂದೇ ಯೋಜನೆಯೆಂದರೆ ಅದು ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ (EPF). ಇದು ನಿವೃತ್ತಿ ನಂತರದ ಜೀವನಕ್ಕಾಗಿ ಆರ್ಥಿಕ ಭದ್ರತೆಗಾಗಿ, ಮರಣ ಸಂದರ್ಭದಲ್ಲಿ ಮತ್ತು ಇತರ ಅಗತ್ಯಗಳಿಗೆ ಉಪಯೋಗಕ್ಕೆ ಬರುತ್ತದೆ. ಭಾರತದಲ್ಲಿ ಖಾಸಗಿ ವಲಯದಲಿ ಕೆಲಸ ಮಾಡುವ ಬಹುತೇಕ ಉದ್ಯೋಗಿಗಳು ಈ ಪಿಎಫ್ ಖಾತೆಯನ್ನು (PF Account) ಹೊಂದಿರುತ್ತಾರೆ. ಆದ್ರೆ ಪಿಎಫ್ ಬಗ್ಗೆ ಇನ್ನೂ ಹಲವರಿಗೆ ಕೆಲವು ಮಾಹಿತಿಗಳು ತಿಳಿದಿಲ್ಲ.

ಅನೇಕ ಉದ್ಯೋಗಿಗಳು ಜಾಬ್ ಚೇಂಜ್ ಮಾಡುವಾಗ, ಒಂದಕ್ಕಿಂತ ಹೆಚ್ಚು ಪ್ರಾವಿಡೆಂಟ್ ಫಂಡ್ (PF) ಖಾತೆಗಳನ್ನು ಹೊಂದಿರುತ್ತಾರೆ. ಅಂದರೆ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಜಾಯಿನ್ ಆದಾಗ, ಹೆಚ್ಚಿನವರು ಹಿಂದಿನ ಪಿಎಫ್ ಖಾತೆಯಲ್ಲೇ ಮುಂದುವರೆಯುವುದಿಲ್ಲ. ಬದಲಾಗಿ ಹೊಸ ಪಿಎಫ್ ಖಾತೆಯನ್ನು ತೆರಯುತ್ತಾರೆ. ಆದ್ರೆ ಈ ರೀತಿ ಮಾಡುವುದರಿಂದ ಪಿಎಫ್ ಬ್ಯಾಲೆನ್ಸ್ ನೋಡುವುದು, ಬಡ್ಡಿ ಲಾಭ ಪಡೆಯುವುದು, ಹೀಗೆ ಹಲವು ಸಮಸ್ಯೆಗಳು ಬರುತ್ತದೆ. ಆದ್ರೆ ಇದಿಗ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (EPFO) ಇದನ್ನು ಪರಿಹರಿಸಲು ಸರಳ ಟಿಪ್ಸ್ ನೀಡಿದೆ. ಈ ಮೂಲಕ ಆನ್‌ಲೈನ್‌ನಲ್ಲೇ ನಿಮ್ಮ ಹಳೆಯ ಪಿಎಫ್ ಖಾತೆಗಳನ್ನು, ಪ್ರಸ್ತುತ ಆಕ್ಟಿವ್ ಇರುವ ಖಾತೆಯೊಂದಿಗೆ ವಿಲೀನಗೊಳಿಸಬಹುದು.
ವಿಲೀನಗೊಳಿಸಿದರೆ ಆಗುವ ಲಾಭಗಳೇನು?
ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿದ್ದರೆ ವಿಲೀನಗೊಳಿಸಬೇಕು ಎಂದು ಹಲವರು ಹೇಳುತ್ತಾರೆ. ಸಾಮಾನ್ಯವಾಗಿ ಪಿಎಫ್ ಖಾತೆಗೆ ವಾರ್ಷಿಕವಾಗಿ ಬಡ್ಡಿ ಜಮಾ ಆಗುತ್ತದೆ. ಆದ್ರೆ ಪ್ರತ್ಯೇಕ ಖಾತೆಗಳಿದ್ದರೆ, ಪ್ರತ್ಯೇಕ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಆದರೆ ನಿಮ್ಮ ಬೇರೆ ಬೇರೆ ಖಾತೆಗಳಲ್ಲಿ ಸಣ್ಣ ಮೊತ್ತಗಳಿದ್ದರೆ, ಬಡ್ಡಿ ಕಡಿಮೆ ಜಮಾ ಆಗಬಹುದು. ಆದ್ದರಿಂದ ವಿಲೀನಗೊಳಿಸಿದರೆ, ನಿಮ್ಮ ಎಲ್ಲಾ ಪಿಎಫ್ ಹಣ ಒಟ್ಟಿಗೆ ಇರುತ್ತದೆ. ಈ ಹಣ ಸೇರಿಸಿ ಬಡ್ಡಿ ಜಮಾ ಆಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಹಣ ವಿಥ್ ಡ್ರಾ ಮಾಡಲು, ಲೋನ್ ಪಡೆಯಲು ಸಹ ಸುಲಭವಾಗುತ್ತದೆ.
ಆನ್‌ಲೈನ್‌ನಲ್ಲಿ ಹೀಗೆ ಮರ್ಜ್ ಮಾಡಿ:
ವೆಬ್‌ಸೈಟ್ ಓಪನ್ ಮಾಡಿ:
EPFO ಪೋರ್ಟಲ್‌ಗೆ ಭೇಟಿ ನೀಡಿ. ಅಲ್ಲಿ ನೀವು ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಲಾಗಿನ್ ಮಾಡಿಕೊಳ್ಳಬಹುದು. ಒಂದು ವೇಳೆ ಪಾಸ್‌ವರ್ಡ್ ಮರೆತಿದ್ದರೆ ರೀಸೆಟ್ ಮಾಡುವ ಆಯ್ಕೆಯೂ ಇದೆ.
ಆನ್‌ಲೈನ್ ಸೇವೆಗಳ ವಿಭಾಗಕ್ಕೆ ಹೋಗಿ:
ಲಾಗಿನ್ ಆದ ನಂತರ ಮೆನುವಿನಲ್ಲಿ "Online Services" ಸೆಲೆಕ್ಟ್ ಮಾಡಬೇಕು. ಅಲ್ಲಿ ಕೆಳಗೆ ಸ್ಕ್ರಾಲ್ ಮಾಡಿದಾಗ "One Member-One EPF Account" ಅನ್ನು ಕ್ಲಿಕ್ ಮಾಡಬೇಕು. ನಂತರ ಅಲ್ಲಿ ತೋರಿಸಲಾಗುವ ಪರ್ಸನಲ್ ಡೀಟೇಲ್ಸ್ ಸರಿ ಇದೆಯೇ ಎಂದು ಚೆಕ್ ಮಾಡಿ. ತಪ್ಪುಗಳಿದ್ದರೆ ತಕ್ಷಣ ಅಪ್‌ಡೇಟ್ ಮಾಡಿಕೊಳ್ಳಿ.
ಹಳೆಯ ಪಿಎಫ್ ಖಾತೆಯನ್ನು ಸೆಲೆಕ್ಸ್ ಮಾಡಿ:
ನಂತರ Get Details ಅಥವಾ ಸರ್ವೀಸ್ ಹಿಸ್ಟರಿ ವಿಭಾಗದಲ್ಲಿ ನಿಮ್ಮ ಹಳೆಯ Member ID ಅಥವಾ PF ನಂಬರ್‌ಗಳು ಕಾಣಿಸುತ್ತವೆ. ಯಾವ ಅಕೌಂಟ್ ವರ್ಗಾಯಿಸಬೇಕೆಂದು ಮೊದಲು ಆಯ್ಕೆ ಮಾಡಿ. ನಂತರ ಕಂಪನಿ ಸೆಲೆಕ್ಟ್ ಮಾಡಬೇಕು.
ಓಟಿಪಿ ಮೂಲಕ ದೃಢೀಕರಿಸಿ:
ಆ ಪ್ರಕ್ರಿಯೆ ಮುಗಿದ ನಂತರ Get OTP ಕ್ಲಿಕ್ ಮಾಡಿ, ನೋಂದಾಯಿತ ಮೊಬೈಲ್‌ಗೆ ಓಟಿಪಿ ಬರುತ್ತದೆ. ಅದನ್ನು ನಮೂದಿಸಿ, ಸಬ್‌ಮಿಟ್ ಕೊಡಿ.
ಸಬ್‌ಮಿಟ್ ಕೊಟ್ಟ ನಂತರ ನಿಮಗೆ ಟ್ರ್ಯಾಕಿಂಗ್ ಐಡಿ ನೀಡಲಾಗುತ್ತದೆ. ಸಾಮಾನ್ಯವಾಗಿ 10-15 ದಿನಗಳಲ್ಲಿ ಇಪಿಎಫ್‌ಒ ಪ್ರಕ್ರಿಯೆ ಮುಗಿಸಿ, ಹಳೆಯ ಬ್ಯಾಲೆನ್ಸ್ ಅನ್ನು ಹೊಸ ಖಾತೆಗೆ ವರ್ಗಾಯಿಸುತ್ತದೆ. ಆದರೂ ಟ್ರ್ಯಾಕ್ ಮಾಡಬೇಕೆಂದರೆ ಪೋರ್ಟಲ್‌ನಲ್ಲಿ Track Claim Status ವಿಭಾಗದಲ್ಲಿ ಚೆಕ್ ಮಾಡಬಹುದು.


Click it and Unblock the Notifications